ಗದಗ ಜಿಲ್ಲೆಯಲ್ಲಿ ಬೆಣ್ಣೆ ಹಳ್ಳದ ಆರ್ಭಟಕ್ಕೆ ಸೇತುವೆಗಳು ಜಲಾವೃತ; ಜಲಾಸುರನ ಅಬ್ಬರಕ್ಕೆ ಜನರು ಕಂಗಾಲು!

ಬೆಣ್ಣೆ ಹಳ್ಳ ಪ್ರವಾಹದಿಂದ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿಯ ರೋಣ ಹಾಗೂ ನರಗುಂದ ಮಾರ್ಗದ ಸೇತುವೆ ಭಾಗಶಃ ಜಲಾವೃತಗೊಂಡಿದೆ. ಹಾಗಾಗಿ ಯಾವಗಲ್ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಸಿಇಓ ಡಾ. ಆನಂದ ಕೆ, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದರು.

ಬೆಣ್ಣೆ ಹಳ್ಳದ ಸೇತುವೆ ಜಲಾವೃತಗೊಂಡಿರುವುದು.

ಬೆಣ್ಣೆ ಹಳ್ಳದ ಸೇತುವೆ ಜಲಾವೃತಗೊಂಡಿರುವುದು.

  • Share this:
ಗದಗ: ಕಳೆದ ವರ್ಷವಷ್ಟೇ ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವು ಗ್ರಾಮಗಳು ಮಳೆ ಆರ್ಭಟದಿಂದ ಪ್ರವಾಹ ಸಿಲುಕಿ ಸಾಕಷ್ಟು ತತ್ತರಿಸಿ ಹೋಗಿತ್ತು. ನಂತರ ಕೊರೋನಾ‌ ಅನ್ನೋ ಮಾಯಾವಿ ಎಲ್ಲವನ್ನೂ ನುಂಗಿ‌ ನೀರು ಕುಡಿದಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೆ ಪ್ರವಾಹದ ರಣಭೀತಿ ಎದುರಾಗಿದೆ.

ಧಾರವಾಡ ಭಾಗದಲ್ಲಿ ಕಳೆದ ನಲವತ್ತೆಂಟು ಗಂಟೆಗಳಿಂದ ನಿರಂತರ‌ ಮಳೆ ಆರ್ಭಟ ಜೋರಾಗಿದೆ. ಇದರಿಂದ ಬೃಹತ್ ಬೆಣ್ಣೆಹಳ್ಳ ತುಂಬಿ ನದಿ ದಡದಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುತ್ತಿದೆ. ಹೀಗಾಗಿ ಗ್ರಾಮದ ಜನರೆಲ್ಲ ಬೇರೆಡೆಗೆ ಸ್ಥಳಾಂತರವಾಗಲು‌ ಸಿದ್ಧರಾಗಿದ್ದಾರೆ. ನಿರಂತರ ಮಳೆಯಿಂದಾಗಿ ಕೆರೆ, ಹಳ್ಳ, ‌ಕಟ್ಟೆಗಳು ತುಂಬಿ ಹರಿಯುತ್ತಿವೆ. ಪರಿಣಾಮ ಜಮೀನಿಗೆ ನೀರು ನುಗ್ಗಿ ಬೆಳೆಗಳೆಲ್ಲಾ ಹಾಳಾಗಿದೆ. ಯಾವ ಕ್ಷಣದಲ್ಲಾದರೂ ನೀರು ಮನೆಗೆ ನುಗ್ಗುವ ಆತಂಕದಲ್ಲೇ ಗ್ರಾಮದ ಜನರು ಪ್ರತಿ ನಿಮಿಷ ಕಳೆಯುತ್ತಿದ್ದಾರೆ.

ವರುಣ ಆರ್ಭಟಕ್ಕೆ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿ ತುಂಬಿಹರಿಯುತ್ತಿರುವ ಹಿನ್ನೆಲೆಯಲ್ಲಿ  ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಬಳಿಯ ಸೇತುವೆ ಮುಳುಗಡೆಯಾಗಿದ್ದು ಹೊಳೆಆಲೂರ-ಬದಾಮಿ ಸಂಪರ್ಕ ರಸ್ತೆ ಕಡಿತಗೊಂಡಿದೆ. ಈಗಾಗಲೇ ಮಲಪ್ರಭಾ ನದಿಗೆ ಸೇರಿದ ಬೆಣ್ಣೆ ಹಳ್ಳ ಪ್ರವಾಹದಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಅಷ್ಟೇ ಅಲ್ಲದೇ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿ ಇರುವ ಬೆಣ್ಣೆ ಹಳ್ಳದ ಸೇತುವೆಯು ಭಾಗಶಃ ಜಲಾವೃತಗೊಂಡಿದೆ. ಹೀಗಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಇನ್ನು ಬೆಣ್ಣೆ ಹಳ್ಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ ಹೆಸರು, ಹತ್ತಿ, ಗೋವಿನ ಜೋಳ ಸೇರಿದಂತೆ ಅನೇಕ ಬೆಳೆಗಳು ನೀರಿನ ಪಾಲಾಗಿದೆ. ಕಷ್ಟಪಟ್ಟು ರೈತರು ಬೆಳೆ ಬೆಳೆದಿದ್ದರು. ಆದರೆ ಜಲಾಸುರನ ಆರ್ಭಟಕ್ಕೆ ಎಲ್ಲಾ ಬೆಳೆ ಕೊಚ್ಚಿಹೋಗಿದೆ. ರೈತರಿಗೆ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದರು. ಆದರೆ ಅತೀಯಾದ ಮಳೆಯಿಂದ ಬೆಣ್ಣೆಹಳ್ಳ ತುಂಬಿದ್ದರಿಂದ ಬೆಳೆ ಎಲ್ಲವೂ ನಾಶವಾಗಿದೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಇದನ್ನು ಓದಿ: ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ - ಸಿಎಂ ಯಡಿಯೂರಪ್ಪ ಘೋಷಣೆ

ಬೆಣ್ಣೆ ಹಳ್ಳ ಪ್ರವಾಹದಿಂದ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿಯ ರೋಣ ಹಾಗೂ ನರಗುಂದ ಮಾರ್ಗದ ಸೇತುವೆ ಭಾಗಶಃ ಜಲಾವೃತಗೊಂಡಿದೆ. ಹಾಗಾಗಿ ಯಾವಗಲ್ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಸಿಇಓ ಡಾ. ಆನಂದ ಕೆ, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದರು. ಕಳೆದ ವರ್ಷ ಪ್ರವಾಹಕ್ಕೆ ತುತ್ತಾಗಿದ್ದ ಯಾವಗಲ್ ಗ್ರಾಮ ಮುನ್ನೆಚ್ಚರಿಕೆ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡದೆ.
Published by:HR Ramesh
First published: