HOME » NEWS » District » BENGALURU WITH POPULATION OVER CRORE HAVE JUST 500 VENTILATORS AND 1000 OXYGEN BEDS TO FIGHT CORONAVIRUS SNVS

ಜನಸಂಖ್ಯೆ ಕೋಟಿಗೂ ಹೆಚ್ಚು; ವೆಂಟಿಲೇಟರ್ಸ್ 500, ಆಕ್ಸಿಜನ್ ಬೆಡ್ ಸಾವಿರ; ಇದು ಬೆಂಗಳೂರು ದುರವಸ್ಥೆ

ಬೆಂಗಳೂರಿನಲ್ಲಿ ಹತ್ತಾರು ಸರ್ಕಾರಿ ಆಸ್ಪತ್ರೆಗಳಿವೆ, ಸಾವಿರಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ. ಆದರೆ, ಕೋವಿಡ್ ರೋಗಿಗಳಿಗೆಂದು ಇರುವುದು 500 ವೆಂಟಿಲೇಟರ್ಸ್, 1 ಸಾವಿರ ಆಕ್ಸಿಜನ್ ಬೆಡ್​ಗಳು ಮಾತ್ರವೇ. ಇದು ನಗರದ ಒಟ್ಟಾರೆ ಆರೋಗ್ಯ ಕಾಳಜಿ ವ್ಯವಸ್ಥೆಯ ದ್ಯೋತಕವಾಗಿದೆ.

news18-kannada
Updated:July 17, 2020, 4:37 PM IST
ಜನಸಂಖ್ಯೆ ಕೋಟಿಗೂ ಹೆಚ್ಚು; ವೆಂಟಿಲೇಟರ್ಸ್ 500, ಆಕ್ಸಿಜನ್ ಬೆಡ್ ಸಾವಿರ; ಇದು ಬೆಂಗಳೂರು ದುರವಸ್ಥೆ
ವಿಕ್ಟೋರಿಯಾ ಆಸ್ಪತ್ರೆ
  • Share this:
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸಾವುಗಳಿಗೆ ಅದೇಕೊ ಕಡಿವಾಣ ಬೀಳುತ್ತಿಲ್ಲ. ಸಾವುಗಳ ನಿಯಂತ್ರಣ ಅಸಾಧ್ಯವಾಗುತ್ತಿರುವುದಕ್ಕೆ ಸಾಕಷ್ಟು ರೀತಿಯ ಸಮಸ್ಯೆಗಳು ಕಾರಣವಾಗುತ್ತಿವೆ. ಅದರಲ್ಲಿ ಪ್ರಮುಖವಾದದ್ದು ವೆಂಟಿಲೇಟರ್ ಹಾಗೂ ಆಕ್ಸಿಜನ್ ಬೆಡ್​ಗಳ ಕೊರತೆ. ಆಸ್ಪತ್ರೆಗೆ ಬರುವ ಸೋಂಕಿತರಿಗೆ ಈ ಎರಡೂ ಸೌಲಭ್ಯಗಳು ಸಿಗದೇ ಇರುವ ಕಾರಣ ಮರಣಮೃದಂಗವಾಗುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸುತ್ತಿರುವ ಬಹುತೇಕ ಕೊರೋನಾ ಸಾವಿನ ಪ್ರಕರಣಗಳಿಗೆ ಪ್ರಮುಖ ಕಾರಣವೇ ಆಸ್ಪತ್ರೆಗಳಲ್ಲಿ ಅಲಭ್ಯವಾಗಿರುವ ವೆಂಟಿಲೇಟರ್​ಗಳು ಹಾಗೂ ಆಕ್ಸಿಜನ್ ಹಾಸಿಗೆಗಳ ಕೊರತೆ. ಆಸ್ಪತ್ರೆಗಳು ಕೂಡ ಈ ಸತ್ಯವನ್ನು ಒಪ್ಪಿಕೊಳ್ಳುತ್ತವೆ. ಉಸಿರಾಟದ ಸಮಸ್ಯೆಯನ್ನಿಟ್ಟುಕೊಂಡು ಆಸ್ಪತ್ರೆಗಳಿಗೆ ಹೋದರೆ ರೋಗಿಗಳು ಬದುಕುಳಿಯುವ ಸಾಧ್ಯತೆಗಳು ತೀರಾ ಕ್ಷೀಣ ಎನ್ನುವುದು ವೆಂಟಿಲೇಟರ್ಸ್ ಸಮಸ್ಯೆ ಎದುರಿಸುತ್ತಿರುವ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಸಾವಿನ ಪ್ರಕರಣಗಳೇ ಸಾರಿ ಹೇಳುತ್ತವೆ.

ಬೆಂಗಳೂರಿನಲ್ಲಿ ಹೇಳಿಕೊಳ್ಳಲು ಹತ್ತಾರು ಸರ್ಕಾರಿ ಆಸ್ಪತ್ರೆಗಳು, ಸಾವಿರಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ. ಆದರೆ ದುರಾದೃಷ್ಟಕ್ಕೆ ಉಸಿರಾಟದ ಸಮಸ್ಯೆ ಇಟ್ಟುಕೊಂಡು ಈ ಆಸ್ಪತ್ರೆಗಳಿಗೆ ದಾಖಲಾಗುವ ಪೇಷೆಂಟ್​ಗಳಿಗೆ ವೆಂಟಿಲೇಟರ್ ಹಾಗು ಆಕ್ಸಿಜನ್ ಬೆಡ್ಡುಗಳು ಸಿಗುತ್ತಿಲ್ಲ. ಇರುವ ವೆಂಟಿಲೇಟರ್ಸ್ ಹಾಗೂ ಆಕ್ಸಿಜನ್ ಬೆಡ್​ಗಳು ಭರ್ತಿಯಾಗಿದೆ ಎಂಬ ಉತ್ತರ ಸಿಗುತ್ತದೆ. ರಾಜಧಾನಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಾಲಿ ಲಭ್ಯ ಇರುವುದು ಕೇವಲ 500 ವೆಂಟಿಲೇಟರ್ಸ್ ಎನ್ನುವುದು ವಾಸ್ತವ ಸ್ಥಿತಿ. ಅದೆಲ್ಲಕ್ಕಿಂತ ಹೆಚ್ಚಾಗಿ ಆಕ್ಸಿಜನ್ ಆಸ್ಪತ್ರೆಗಳು ಲಭ್ಯ ಇರುವುದು ಕೇವಲ 1000 ಮಾತ್ರವೇ. ಹೀಗೆ ಇರುವಂಥ ವೆಂಟಿಲೇಟರ್ಸ್ ಹಾಗೂ ಆಕ್ಸಿಜನ್ ಹಾಸಿಗೆ ಗಳೆಲ್ಲವೂ ಕೂಡ ಭರ್ತಿಯಾಗಿ ತಿಂಗಳೇ ಕಳೆದಿವೆ. ಹೊಸದಾಗಿ ಬರುವ ರೋಗಿಗಳಿಗೆ ವೆಂಟಿಲೇಟರ್ಸ್ ಇಲ್ಲ. ಆಕ್ಸಿಜನ್ ಬೆಡ್ಸ್ ಕೂಡ ಲಭ್ಯವಾಗುತ್ತಿಲ್ಲ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಲಾಕ್​ಡೌನ್​ ಇಲ್ಲ, ಪದೇಪದೇ ಪ್ರಸ್ತಾಪ ಮಾಡ್ಬೇಡಿ: ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಸೂಚನೆ

ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಎಷ್ಟಿವೆ ವೆಂಟಿಲೇಟರ್ಸ್?
ವಿಕ್ಟೋರಿಯಾ: 36:
ಟ್ರೌಮಾ ಸೆಂಟರ್: 18ರಾಜೀವ್ ಗಾಂಧಿ ಆಸ್ಪತ್ರೆ: 15
ಕೆಸಿ ಜನರಲ್: 5
ಸಿವಿ ರಾಮನ್ ನಗರ ಆಸ್ಪತ್ರೆ : 5
ಜಯನಗರ ಆಸ್ಪತ್ರೆ: 5

ಆಕ್ಸಿಜನ್ ಬೆಡ್​ಗಳ ಪ್ರಮಾಣ:
ವಿಕ್ಟೋರಿಯಾ ಆಸ್ಪತ್ರೆ: 100
ಬೌರಿಂಗ್ ಆಸ್ಪತ್ರೆ: 75
ರಾಜೀವ್ ಗಾಂಧಿ ಆಸ್ಪತ್ರೆ: 70
ಟ್ರೌಮಾ ಸೆಂಟರ್: 50
ಕೆಸಿ ಜನರಲ್: 50
ಸಿವಿ ರಾಮನ್ ನಗರ ಆಸ್ಪತ್ರೆ: 50
ಜಯನಗರ ಆಸ್ಪತ್ರೆ: 50

ಇವಿಷ್ಟರಲ್ಲೇ ಕೊರೋನಾ ಪ್ರಕರಣಗಳನ್ನ ನಿಭಾಯಿಸಬೇಕಾದ ಪರಿಸ್ಥಿತಿ ಇದೆ. ಕೊರೋನಾ ಸೋಂಕಿನ ಪ್ರಕರಣಗಳಲ್ಲಿ ಬಹುತೇಕ ಅಂತಿಮ ಹಂತದಲ್ಲಿರುವ  ರೋಗಿಗಳು ಬಂದರೆ ಅವರಿಗೆ ಬೇಕಾಗಿರುವ ವೆಂಟಿಲೇಟರ್​ಗಳು ಮತ್ತು ಆಕ್ಸಿಜನ್ ಪೂರೈಸಲಾಗದ ಸ್ಥಿತಿಯಲ್ಲಿ ಆಸ್ಪತ್ರೆಗಳಿವೆ.

ಇದನ್ನೂ ಓದಿ: Monsoon 2020: ದೇಶಾದ್ಯಂತ ಭರ್ಜರಿ ಮುಂಗಾರು, ಕೊರೋನಾದಿಂದ ಕೈಗೆಟುಕಿದ ಕಾರ್ಮಿಕರು; ಮಳೆಯಿಂದ ಉತ್ತಮ ಬೆಳೆ ನಿರೀಕ್ಷೆ

ಇನ್ನು, ಸರ್ಕಾರಿ ಆಸ್ಪತ್ರೆಗಳಿಗೆ 1,500 ವೆಂಟಿಲೇಟರ್ಸ್ ನೀಡುವ ಭರವಸೆ ನೀಡಿದ್ದರೂ ಈವರೆಗೆ ಪೂರೈಕೆಯಾಗಿರುವುದು ಬೆರಳೆಣಿಕೆಯಷ್ಟು ವೆಂಟಿಲೇಟರ್ ಮಾತ್ರ. ಮೈಸೂರಿನ ಟ್ರೈನರ್ ಪೂರೈಸಬೇಕಾಗಿದ್ದ 1500 ವೆಂಟಿಲೇಟರ್​ಗಳಲ್ಲಿ ಪೂರೈಕೆಯಾಗಿರುವುದು ಕೇವಲ 700 ವೆಂಟಿಲೇಟರ್ಸ್ ಮಾತ್ರವೇ. ಹಾಗೆಯೇ ಆರ್​ಕೆ ಸಂಸ್ಥೆ ಪೂರೈಸಬೇಕಿದ್ದ 800  ವೆಂಟಿಲೇಟರ್ಸ್ ಪೈಕಿ ಬಂದಿರುವುದು ಕೇವಲ 430. ಇಂಥ ವ್ಯವಸ್ಥೆಯನ್ನಿಟ್ಟುಕೊಂಡು ಹೇಗೆ ಕೆಲಸ ಮಾಡೋದು  ಎಂದು ಪ್ರಶ್ನಿಸುತ್ತಾರೆ ಸರ್ಕಾರಿ ಆಸ್ಪತ್ರೆಗಳ ಮುಖ್ಯ ವೈದ್ಯಾಧಿಕಾರಿಗಳು.ಈಗಲೇ ಇಂಥ ಪರಿಸ್ಥಿತಿ ಇರುವಾಗ ಇನ್ನೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಅಂಥ ಪರಿಸ್ಥಿತಿಯಲ್ಲಿ ಇಷ್ಟು ಕಡಿಮೆ ಸಂಖ್ಯೆಯ ವೆಂಟಿಲೇಟರ್ ಮತ್ತು ಆಕ್ಸಿಜನ್ ಬೆಡ್​ಗಳನ್ನಿಟ್ಟುಕೊಂಡು ವ್ಯವಸ್ಥೆ ನಿಭಾಯಿಸುವುದು ಕಷ್ಟವಾಗುತ್ತದೆ. ಯಾವುದ್ಯಾವುದಕ್ಕೋ ಖರ್ಚುಮಾಡುವ, ಯಾವ್ಯಾವುದೋ ವಿಷಯದಲ್ಲಿ ಭ್ರಷ್ಟಾಚಾರ ಮಾಡುವ ಸರ್ಕಾರ, ಕೊರೋನಾ ರೋಗಿಗಳ ವಿಷಯದಲ್ಲಿ ಒಂದಷ್ಟು ಕಾಳಜಿ, ಮಾನವೀಯತೆ ಪ್ರದರ್ಶಿಸಬೇಕಿದೆ.
Published by: Vijayasarthy SN
First published: July 17, 2020, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading