ಫೇಸ್​ಬುಕ್​ನಲ್ಲಿದ್ದ ಫೋಟೊ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯ ಬಂಧನ

ಬೆಂಗಳೂರಿನಲ್ಲಿ ಕೋಳಿಫಾರಂ ಇಟ್ಟಿದ್ದ ಅಸ್ಸಾಮ್ ಮೂಲದ ವಿಶ್ವಾಸ್, ಫೇಸ್​ಬುಕ್​ನಿಂದ ವಿವಿಧ ಮಂದಿಯ ಫೋಟೋ ಪಡೆದು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಸುಲಿಗೆ ಮಾಡುತ್ತಿದ್ದ. ಅದಕ್ಕಾಗಿ ಆತ ಪ್ರೊಫೆಷನಲ್ ಎಡಿಟರ್ಗಳ ತಂಡವನ್ನೇ ಇಟ್ಟಿದ್ದನೆನ್ನಲಾಗಿದೆ.

news18-kannada
Updated:October 10, 2020, 8:16 PM IST
ಫೇಸ್​ಬುಕ್​ನಲ್ಲಿದ್ದ ಫೋಟೊ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯ ಬಂಧನ
ಫೋಟೋ ಮಾರ್ಫ್ ಮಾಡಿ ಸುಲಿಗೆ ಮಾಡುತ್ತಿದ್ದ ಅಸ್ಸಾಮ್ ಮೂಲದ ವಿಶ್ವಾಸ್​ನನ್ನು ಹಿಡಿದ ಬೆಂಗಳೂರು ಪೊಲೀಸ್
  • Share this:
ಬೆಂಗಳೂರು(ಅ. 10): ಯುವತಿಯರು ಮತ್ತು ಹಿರಿಯ ನಾಗರಿಕರ ಪೋಟೊಗಳನ್ನ  ಮಾರ್ಫಿಂಗ್ ಮಾಡಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನ ವೈಟ್ ಫೀಲ್ಡ್​ನ ಸೆನ್ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ವಿಶ್ವಾಸ್ ಬಂಧಿತ ಆರೋಪಿ. ಈತ ಫೇಸ್​ಬುಕ್​ನಲ್ಲಿ ಹಿರಿಯ ನಾಗರೀಕರು ಮತ್ತು ಯುವತಿಯರ ಪೋಟೊಗಳನ್ನ ಡೌನ್​ಲೋಡ್ ಮಾಡಿ ಆ ಬಳಿಕ ಪೋಟೊಗಳನ್ನ ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದನಂತೆ.

ಇತ್ತೀಚೆಗೆ ವೈಟ್ ಫೀಲ್ಡ್ ನ ಹಿರಿಯ ನಾಗರೀಕರೊಬ್ಬರ ಪೋಟೊವನ್ನ ಆಶ್ಲೀಲವಾಗಿ ಮಾರ್ಫಿಂಗ್ ಮಾಡಿದ ಆರೋಪಿ, ವಾಟ್ಸಪ್ ಮೂಲಕ ಪೋಟೊ ಕಳಿಸಿ ಬೆದರಿಕೆ ಹಾಕಿದ್ದನಂತೆ. ವೃದ್ದ ವ್ಯಕ್ತಿಗೆ ಪುನಃ ಕರೆ ಮಾಡಿದ ಆರೋಪಿ, ನಿಮಗೆ ಪೋಟೊ ಕಳಿಸಿದ್ದೇನೆ ನೋಡಿ ಎಂದು ಹೇಳಿ 70 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದನಂತೆ. ಹಣ ನೀಡದಿದ್ದಲ್ಲಿ ಫೋಟೋ ವೈರಲ್ ಮಾಡುವುದಾಗಿಯೂ ಆತ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.

ಈ ಬಗ್ಗೆ ವೃದ್ದ ವ್ಯಕ್ತಿ ವೈಟ್ ಫೀಲ್ಡ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ವೈಟ್ ಫೀಲ್ಡ್ ಸೆನ್ ಠಾಣೆ ಪೊಲೀಸರು ಆರೋಪಿ ವಿಶ್ವಾಸ್​ನನ್ನು ಬಂಧಿಸಿದ್ದಾರೆ. ಇನ್ನು, ಆರೋಪಿ ವಿಶ್ವಾಸ್ ಅಸ್ಸಾಂ ಮೂಲದವನಾಗಿದ್ದು ನಗರದ ಚಿಕ್ಕಜಾಲ ಬಳಿ‌ ಕೋಳಿ ಫಾರಂ ನಡೆಸ್ತಿದ್ದನಂತೆ. ತನ್ನದೇ ಗ್ಯಾಂಗ್ ಕಟ್ಟಿಕೊಂಡು ಯುವತಿಯರು ಮತ್ತು ಹಿರಿಯ ನಾಗರೀಕರ ಪೋಟೊಗಳನ್ನ ಫೇಸ್​ಬುಕ್ ಮೂಲಕ ತೆಗೆದುಕೊಂಡು ಮಾರ್ಫಿಂಗ್ ಮಾಡಿ ಹಣಕ್ಕೆ ಡಿಮಾಂಡ್ ಮಾಡ್ತಿದ್ದ ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಬೆಂಗಳೂರಿನ ವಿವಿಧೆಡೆ ಕಮಿಷನರ್ ನೇತೃತ್ವದಲ್ಲಿ ಪೊಲೀಸರಿಂದ ಕೊರೋನಾ ಬಗ್ಗೆ ಜನಜಾಗೃತಿ

ಅಲ್ಲದೆ, ಪೊಲೀಸರ ತನಿಖೆ ವೇಳೆ ಸಾವಿರಾರು ಅಶ್ಲೀಲ ಪೋಟೊಗಳು ಪತ್ತೆಯಾಗಿದ್ದು, ಹಲವಾರು ಮಂದಿಯ ಪೋಟೊ ಮಾರ್ಫಿಂಗ್ ಮಾಡಿದ್ದು ಬಯಲಿಗೆ ಬಂದಿದೆ. ಪೋಟೊ ಮಾರ್ಫಿಂಗ್ ಮಾಡುವ ಸಲುವಾಗಿಯೇ ಪ್ರೊಫೆಷನಲ್ ಎಡಿಟರ್​ಗಳನ್ನ ಈತ ಇಟ್ಟುಕೊಂಡಿದ್ದ ಸಂಗತಿ ತನಿಖೆ ವೇಳೆ ಗೊತ್ತಾಗಿದೆ. ಹಾಗೂ ವಾಟ್ಸಪ್ ಗ್ರೂಪ್ ಮಾಡ್ಕೊಂಡು ಅಮಾಯಕರನ್ನ ತನ್ನ ಬುಟ್ಟಿಗೆ ಹಾಕಿಕೊಳ್ತಿದ್ದ ಎನ್ನಲಾಗಿದೆ. ಹಾಗೂ 'ಡ್ಯಾಡಿ ಅಬೌವ್ 50' ಎಂಬ ವಾಟ್ಸಪ್ ಗ್ರೂಪ್ ಮಾಡ್ಕೊಂಡು ಹಿರಿಯ ನಾಗರೀಕರ ಸುಲಿಗೆಯ ಕೆಲಸವನ್ನೂ ಈತ ಮಾಡಿದ್ದನಂತೆ. ಸದ್ಯ ಆರೋಪಿ ವಿಶ್ವಾಸ್ ಬಂಧಿಸಿರುವ ವೈಟ್ ಫೀಲ್ಡ್ ಸೆನ್ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ವರದಿ: ಮುನಿರಾಜು ಹೊಸಕೋಟೆ
Published by: Vijayasarthy SN
First published: October 10, 2020, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading