ದೇವನಹಳ್ಳಿ: ಮಾರಾಠ ಅಭಿವೃದ್ಧಿ ನಿಗಮಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಇಂದು ಕರೆ ನೀಡಿದ ಕರ್ನಾಟಕ ಬಂದ್ನ ಬಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಂದಿನಂತೆ ವಿಮಾನ ನಿಲ್ದಾಣದ ಟ್ಯಾಕ್ಸಿ ಸೇರಿದಂತೆ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ಗಳು ಓಡಾಡುತ್ತಿವೆ. ಏರ್ಪೋರ್ಟ್ ಟ್ಯಾಕ್ಸಿ , ಓಲಾ, ಊಬರ್ ಸಹ ಸಂಚರಿಸುತ್ತಿವೆ.
ಬಂದ್ನಿಂದ ಸಾರಿಗೆ ವ್ಯವಸ್ಥೆ ಇರುತ್ತೋ ಇಲ್ಲವೋ ಅನ್ನೋ ಭಯದಲ್ಲಿ ಪ್ರಯಾಣಿಕರು ಬೆಳ್ಳಂಬೆಳಗ್ಗೆಯೇ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾರೆ. ಮಧ್ಯಾಹ್ನದ ಸಮಯಕ್ಕೆ ವಿಮಾನ ಇರುವವರೂ ಕೂಡ ಈಗಾಗಲೇ ವಿಮಾನ ನಿಲ್ದಾಣಕ್ಕೆ ಬಂದಿದ್ದು ಏರ್ಪೋರ್ಟ್ ಟರ್ಮಿನಲ್ನಲ್ಲಿ ತಮ್ಮ ವಿಮಾನಕ್ಕಾಗಿ ಕಾಯುತ್ತಿದ್ದಾರೆ.
ವಿದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೂ ಸಹ ಯಾವುದೇ ತೊಂದರೆಯಾಗಿಲ್ಲ. ಏರ್ಪೋರ್ಟ್ನಿಂದ ಟ್ಯಾಕ್ಸಿ ಸೇವೆ ಮತ್ತು ಕೆಎಸ್ ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಗಳು ಸೇವೆಗೆ ಸಿದ್ದವಾಗಿದ್ದು ಪ್ರಯಾಣಿಕರನ್ನ ತಮ್ಮ ಸ್ಥಳಗಳಿಗೆ ತಲುಪಿಸುತ್ತಿವೆ.
ಇದನ್ನೂ ಓದಿ: Karnataka Bandh Updates – ಬೆಂಗಳೂರಿನಲ್ಲಿ ಕಾವೇರಿದ ಬಂದ್; ಪ್ರತಿಭಟನಾಕಾರರು ಪೊಲೀಸರ ವಶಕ್ಕೆ
ಬಂದ್ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ವಿಮಾನ ನಿಲ್ದಾಣದ ಪ್ರವೇಶದಲ್ಲಿ ವಾಹನಗಳ ತಪಾಸಣೆಯನ್ನ ಪೊಲೀಸರು ಮಾಡುತ್ತಿದ್ದಾರೆ. ಬೋರ್ಡಿಂಗ್ ಪಾಸ್ ಇದ್ದವರಿಗೆ ಮಾತ್ರ ವಿಮಾನ ನಿಲ್ದಾಣದ ಒಳಗೆ ಪ್ರವೇಶ ನೀಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಎಂದಿನಂತೆ ವಾಹನಗಳ ಸಂಚಾರ ಇದ್ದು, ಬಂದ್ ಹಿನ್ನೆಲೆ ರಜೆ ಇರುವುದರಿಂದ ಯುವ ಜನತೆ ಜಾಲಿ ರೈಡ್ ಹೊರಟ್ಟಿದ್ದಾರೆ.
ವರದಿ: ನವೀನ್ ಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ