ಸಿಲಿಕಾನ್ ಸಿಟಿ ಮಲಿನ: ಬೆಂಗಳೂರಿನಲ್ಲಿ ಅತಿಹೆಚ್ಚು ವಾಯು ಮಾಲಿನ್ಯ ಇರುವ ಪ್ರದೇಶಗಳ ಪಟ್ಟಿ

ಗಂಧಕ ಡೈಆಕ್ಸೈಡ್, ನೈಟ್ರೇಟ್, ಅಮೋನಿಯಾ. ಸೀಸ ಮೊದಲಾದ ಮಾಲಿನ್ಯಕಾರಕ ಕಣಗಳು ಬೆಂಗಳೂರಿನ ವಾತಾವರಣವನ್ನು ಕಲುಷಿತಗೊಳಿಸಿದೆ. ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಟ್ಟ ಮುಟ್ಟಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಡಿ. 28): ಸಿಲಿಕಾನ್ ಸಿಟಿಯ ಮಂದಿಗೆ ಇದು ಪಕ್ಕಾ ಶಾಕಿಂಗ್ ನ್ಯೂಸ್. ಬೆಂಗಳೂರಿಗರು ಬೆಂಗಳೂರಿನಲ್ಲಿ ಎಷ್ಟು ಸೇಫ್ ಆಗಿದ್ದಾರೆ ಅನ್ನೋದೇ ಪ್ರಶ್ನೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಒಂದು ವರದಿ ಈ ಪ್ರಶ್ನೆ ಮತ್ತು ಆತಂಕವನ್ನು ಸೃಷ್ಟಿಸಿದೆ. ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಕುಸಿತ ಕಂಡಿದೆ. ಬೆಂಗಳೂರಿನ 20 ಪ್ರದೇಶಗಳು ಡೇಂಜರ್ ಜೋನ್​ನಲ್ಲಿವೆ ಎಂಬ ಸಂಗತಿಗಳು 2019-20 ರ ವಾರ್ಷಿಕ ವರದಿಯಲ್ಲಿ ಬಯಲಾಗಿವೆ.

  ಗಾಳಿಯಲ್ಲಿ ಮಾಲಿನ್ಯಕಾರಕ ವಸ್ತುಗಳು ಹೆಚ್ಚಾಗಿರೋದೇ ಗುಣಮಟ್ಟ ಕುಸಿಯೋದಕ್ಕೆ ಪ್ರಮುಖ ಕಾರಣ. ವಾತಾವರಣದಲ್ಲಿರುವ ಗಂಧಕದ ಡೈಆಕ್ಸೈಡ್ (Sulphur di-oxide), ನೈಟ್ರೇಟ್​ಗಳು, ಮಾಲಿನ್ಯಕಾರಕ ಕಣಗಳು, ಅಮೋನಿಯಾ, ಹಾಗೂ ಸೀಸದ (Lead) ಪ್ರಮಾಣದ ಆಧಾರದಲ್ಲಿ ಗುಣಮಟ್ಟ ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ಆದರೆ ಮಾಲಿನ್ಯಕಾರಕ ಕಣಗಳು ಅಂದರೆ, ವಾಹನಗಳ ಹೊಗೆ, ಕಾಮಗಾರಿಗಳಿಂದ ಉಂಟಾಗುವ ಧೂಳು ಹಾಗೂ ಇತರೆ ಮಾದರಿಯ ಧೂಳು ಹೆಚ್ಚಾಗಿದೆ.

  ಇದು ಹಲವು ರೋಗಗಳಿಗೆ ಆದಿ ಆಡಲಿದೆ. ಅದರಲ್ಲೂ ಮುಖ್ಯವಾಗಿ ಶ್ವಾಸಕೋಶ ಸಂಬಂಧಿ ರೋಗಿಗಳಿಗೆ ಹೆಚ್ಚಿನ ಸಮಸ್ಯೆ, ಹೃದಯ ಸಂಬಂಧಿ‌ ಕಾಯಿಲೆಯವರಿಗೆ ಮತ್ತಷ್ಟು ತೊಂದರೆ, ಮಕ್ಕಳಿಗೆ ಉಸಿರಾಟದ ಸಮಸ್ಯೆ ಉಂಟಾಗುವ ಸಾಧ್ಯತೆ, ಚರ್ಮಕ್ಕೆ ಸಂಬಂಧಿಸಿದ‌ ಖಾಯಿಲೆ‌ ಹೆಚ್ಚಾಗುವುದು, ಮುಖದ ಕಾಂತಿ ಕಳೆದುಕೊಳ್ಳುವುದು ಹೀಗೆ ಹಲವು ಬಗೆಯ ಸಮಸ್ಯೆಗಳು ಬೆಂಗಳೂರು ‌ಮಂದಿ‌ ಎದುರಿಸಬೇಕಾಗುತ್ತದೆ.

  ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ನಿರ್ಧಾರ; ವಿರೋಧಕ್ಕೆ ಸಚಿವ ಮಾಧುಸ್ವಾಮಿ ಅಚ್ಚರಿ

  ಹೀಗಾಗಿ ಇದನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಗರದ 20 ಕಡೆ PM10 ಎನ್ನುವ ಮಾಪಕಗಳನ್ನು‌ ಅಳವಡಿಸಿದ್ದು, ಗಾಳಿಯ ಗುಣಮಟ್ಟವನ್ನು ಅಳೆಯಲಿದೆ. ಅಲ್ಲದೆ ಈ ಬಗ್ಗೆ ಗಂಭೀರ ಚಿಂತನೆಗಳನ್ನು ನಡೆಸುತ್ತಿದೆ.

  ಮಾಲಿನ್ಯ ನಿಯಂತ್ರಣ ಮಂಡಳಿ ಈ ಕೆಳಗಿನ 6 ಮಾಪನಗಳ ಪ್ರಕಾರ ವಿಭಾಗಿಸುತ್ತಿದೆ:
  • ಉತ್ತಮ
  • ಸಮಾಧಾನಕರ
  • ಮಧ್ಯಮ/ಸಾಧಾರಣ
  • ಕಳಪೆ
  • ತೀರ ಕಳಪೆ
  • ಆತಂಕಕಾರಿ/ಗಂಭೀರ

  ವಾಯುಗುಣ ಮಟ್ಟ‌ ಕುಸಿದ ನಗರದ ಟಾಪ್ 10 ಏರಿಯಾಗಳು: 
  • ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶ
  • ಯಲಹಂಕ - ರೈಲ್ ವೀಲ್ ಫ್ಯಾಕ್ಟ್ರಿ
  • ಸೆಂಟ್ರಲ್ ಸಿಲ್ಕ್ ಬೋರ್ಡ್
  • ಹೊಸೂರು ರಸ್ತೆ
  • ಪೀಣ್ಯ ಕೈಗಾರಿಕಾ ಪ್ರದೇಶ
  • ನಗರ ರೈಲು ನಿಲ್ದಾಣ - ಮೆಜೆಸ್ಟಿಕ್
  • ದೊಮ್ಮಲೂರು• ಮೈಸೂರು ರಸ್ತೆ
  • ಯುವಿಸಿಇ - ಕೆ.ಆರ್ ಸರ್ಕಲ್
  • ವಿಕ್ಟೋರಿಯಾ ಆಸ್ಪತ್ರೆ - ಕೆಆರ್ ಮಾರುಕಟ್ಟೆ

  ಇದನ್ನೂ ಓದಿ: ಕಾಂಗ್ರೆಸ್​​ಗೆ ಹಿನ್ನಡೆಯಾದ್ರೆ ಬಡವರಿಗೆ ಹಿನ್ನಡೆ; ಗಟ್ಟಿಯಾಗಿ ಧ್ವನಿ ಎತ್ತಿ: ಕಾರ್ಯಕರ್ತರಿಗೆ ಸಿದ್ಧರಾಮಯ್ಯ ಕರೆ

  ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ವಿಜಯ್ ನಿಶಾಂತ್, “ಮಾಲಿನ್ಯ ತಡೆಗಟ್ಟಲು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ತಂತ್ರ ರೂಪಿಸಬೇಕು. ವರ್ಷದಿಂದ ವರ್ಷಕ್ಕೆ ಬೆಂಗಳೂರಿನ ವಾಯುಗುಣ ಮಟ್ಟ ಕುಸಿಯುತ್ತಲೇ ಬರುತ್ತಿದೆ. ಇದೊಂದು ಗಂಬೀರ ವಿಚಾರ, ನಿರ್ಲಕ್ಷ್ಯ ಮಾಡಬಾರದು. ಹೀಗಾದರೆ ಮುಂದೊಂದು ದಿನ ಗಾಳಿಗೂ ದುಡ್ಡು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು" ಎಂದು ಆತಂಕ ವ್ಯಕ್ತಪಡಿಸಿದರು.

  ಇದನ್ನೂ ಓದಿ: ಸಂಕ್ರಾಂತಿ ನಂತರ ಅಧಿಕಾರ ಬದಲಾವಣೆ ಆಗುತ್ತಾ? ಸಿ.ಟಿ. ರವಿ, ಬೇಳೂರು ಹೇಳಿಕೆ ಮೂಡಿಸಿದೆ ಕುತೂಹಲ

  ಬೆಂಗಳೂರಿನ ಈ ಆತಂಕಕಾರಿ ಪರಿಸ್ಥಿತಿಯಿಂದ ಹೊರಬರಲು ಸರ್ಕಾರದ ಪ್ರಯತ್ನಕ್ಕೆ ಸಾರ್ವಜನಿಕರೂ ಕೈಜೋಡಿಸುವ ಅಗತ್ಯತೆ ಇದೆ. ನಗರದಲ್ಲಿ ಜನಸಂಖ್ಯೆಯಷ್ಟೇ ಮಿತಿ ಮೀರಿದ ಸಂಖ್ಯೆಯಲ್ಲಿ ವಾಹನಗಳಿವೆ. ಸಾಧ್ಯವಾದಷ್ಟೂ ಜನರು ತಮ್ಮ ಸ್ವಂತ ವಾಹನ ಬಳಕೆ ಬಿಟ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುವುದೂ ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಿದೆ.

  ವರದಿ: ಅಬ್ದುಲ್ ಆಶಿಕ್ ಮುಲ್ಕಿ
  Published by:Vijayasarthy SN
  First published: