HOME » NEWS » District » BENGALURU COLLEGE STUDENTS DEVELOP SEVERAL INNOVATIVE DEVICES ANLM SNVS

ಜಲರಕ್ಷಕ್, ರೋಲಿಂಗ್ ಥಂಡರ್…. ಬೆಂಗಳೂರಿನ ವಿದ್ಯಾರ್ಥಿಗಳಿಂದ ಹಲವು ಜನೋಪಯೋಗಿ ಸಾಧನಗಳ ಆವಿಷ್ಕಾರ

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನ ಹಾಗೂ ರಾಷ್ಟ್ರೀಯ ನಾವಿನ್ಯ ದಿನ (ನ್ಯಾಷನಲ್ ಇನೋವೇಷನ್ ಡೇ) ಹಾಗೂ ವಿಶ್ವ ವಿದ್ಯಾರ್ಥಿ ದಿನ ಅಂಗವಾಗಿ ವಿದ್ಯಾರ್ಥಿಗಳು ತಾವು ಅನ್ವೇಷಿಸಿರುವ ನವ ನಾವೀನ್ಯತೆಯ ತಂತ್ರಜ್ಞಾನ ಪ್ರದರ್ಶಿಸಿದರು.

news18-kannada
Updated:October 16, 2020, 7:20 AM IST
ಜಲರಕ್ಷಕ್, ರೋಲಿಂಗ್ ಥಂಡರ್…. ಬೆಂಗಳೂರಿನ ವಿದ್ಯಾರ್ಥಿಗಳಿಂದ ಹಲವು ಜನೋಪಯೋಗಿ ಸಾಧನಗಳ ಆವಿಷ್ಕಾರ
ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಆವಿಷ್ಕಾರ
  • Share this:
ಬೆಂಗಳೂರು: ಪ್ರವಾಹ, ಚಂಡಮಾರುತ, ಭಾರೀ ಮಳೆಯಿಂದ ಜೀವ ರಕ್ಷಿಸುವ ಜಲ ರಕ್ಷಕ್ ಸಾಧನ, ಕೋವಿಡ್ ಸೋಂಕು ನಿವಾರಕ ಸಾಧನ, ಮುಖಗವಸು, ನೀರಿನ ಗುಣಮಟ್ಟ ಅಳೆಯುವ ಸಾಧನ, ಹೀಗೆ ಹತ್ತು ಹಲವು ಜನೋಪಯೋಗಿ ತಂತ್ರಜ್ಞಾನ ಹೊಂದಿರುವ ಪರಿಕರಗಳನ್ನು ಬೆಂಗಳೂರಿನ ಜನಯಗರದ ಸಾಯಿ ರಾಮ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಇನೋವೇಷನ್ ಸೆಂಟರ್ ನ ವಿದ್ಯಾರ್ಥಿಗಳು ಅನಾವರಣಗೊಳಿಸಿದರು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನ ಹಾಗೂ ರಾಷ್ಟ್ರೀಯ ನಾವಿನ್ಯ ದಿನ (ನ್ಯಾಷನಲ್ ಇನೋವೇಷನ್ ಡೇ) ಹಾಗೂ ವಿಶ್ವ ವಿದ್ಯಾರ್ಥಿ ದಿನ ಅಂಗವಾಗಿ ವಿದ್ಯಾರ್ಥಿಗಳು ತಾವು ಅನ್ವೇಷಿಸಿರುವ ನವ ನಾವೀನ್ಯತೆಯ ತಂತ್ರಜ್ಞಾನ ಪ್ರದರ್ಶಿಸಿದರು. ರಾಷ್ಟ್ರ ನಿರ್ಮಾಣ ಮಾಡುವ ಭವಿಷ್ಯದ ತಂತ್ರಜ್ಞರು ತಾವು ಅಭಿವೃದ್ಧಿಪಡಿಸಿರುವ ವಸ್ತು ವಿಶೇಷತೆಗಳನ್ನು ಉತ್ಸಾಹದಿಂದ ವಿವರಿಸಿದರು. ಅಲ್ಲದೇ ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ರಾಷ್ಟ್ರನಿರ್ಮಾಣದಲ್ಲಿ ತೊಡುಗುವದಾಗಿ ಭವಿಷ್ಯದ ತಂತ್ರಜ್ಞರು ಇದೇ ಸಂದರ್ಭದಲ್ಲಿ ಪಣತೊಟ್ಟರು. 

ಸಮುದ್ರ, ನದಿ, ಸರೋವರಗಳು, ಪ್ರವಾಹ, ಚಂಡಮಾರುತ ಸಂದರ್ಭದಲ್ಲಿ ಜೀವ ರಕ್ಷಣೆಗಾಗಿ ನೆರವಾಗಬಲ್ಲ ಜಲ ರಕ್ಷಕ್ ಸಾಧನ ಗಮನ ಸೆಳೆಯುತ್ತಿದೆ. ಜೀವ ರಕ್ಷಿಸಲು ರಕ್ಷಣಾ ಪಡೆಗಳ ತಂಡಗಳಿಗೆ ಇದು ಹೆಚ್ಚಿನ ರೀತಿಯಲ್ಲಿ ಸಹಾಯವಾಗುತ್ತದೆ. ಜಲ ರಕ್ಷಕ್ ಸಾಧನವನ್ನು ರಿಮೋಟ್ ಕಂಟ್ರೋಲ್ ಮೂಲಕ ದೂರದಿಂದಲೇ ನಿಯಂತ್ರಿಸಬಹುದಾಗಿದೆ. ಯಾಂತ್ರಿಕೃತವಾಗಿ ತೇಲುವ ಈ ಸಾಧನ ತುರ್ತು ಪರಿಸ್ಥಿತಿಯಲ್ಲಿ ನೀರಿನಲ್ಲಿ ಸಿಲುಕಿದ ಜನರನ್ನು ಯಶಸ್ವಿಯಾಗಿ ರಕ್ಷಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ: ಮುಧೋಳ ಶ್ವಾನಕ್ಕೆ ಈಗ ಎಲ್ಲಿಲ್ಲದ ಡಿಮ್ಯಾಂಡ್​; ದೇಶದ ರಕ್ಷಣೆಯಿಂದ ಮನೆಯಲ್ಲಿ ಸಾಕಲು ಕೂಡ ದೇಸಿ ತಳಿಯೇ ಬೇಕು

ನೀರಿನ ಗುಣಮಟ್ಟ ಅಳೆಯುವ, ಮತ್ಸ್ಯ ಸಂಪತ್ತು ರಕ್ಷಿಸುವ, ರೈತರು, ಮೀನುಗಾರರ ಆದಾಯ ಹೆಚ್ಚಿಸುವ ‘ಮತ್ಸ್ಯ ಸ್ಮಾರ್ಟ್ ವಾಟರ್ ಸರ್ಫೆಸ್ ವೆಹಿಕಲ್’ ಅತ್ಯಂತ ಪ್ರಯೋಜನಕಾರಿ. ಕಲುಷಿತ ನೀರು ಮತ್ತು ರೋಗರುಜಿನಿಗಳಿಂದಾಗಿ ರೈತರು ಪ್ರತಿವರ್ಷ ತಮ್ಮ ಉತ್ಪನ್ನಗಳಲ್ಲಿ ಶೇ 60 ರಷ್ಟು ಹಾನಿಮಾಡಿಕೊಳ್ಳುತ್ತಾರೆ. ಈ ಸಾಧನ ರೈತರಿಗೆ ಸೂಕ್ತ ರೀತಿಯಲ್ಲಿ ನೆರವಾಗಲಿದೆ.

ಸೈನಿಕರು, ಪೊಲೀಸರು, ವೈದ್ಯರಿಗೆ ಸಹಕಾರಿಯಾಗಬಲ್ಲ ಪ್ಯಾರಾ ವರ್ಚುವಯಲೇಷನ್ ರೊಬೋಟ್ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಬಳಸಿಕೊಂಡು ವಿವಿಧ ಕಾರ್ಯಾಚರಣೆಗಳನ್ನು ನಡೆಸಬಹುದಾಗಿದೆ. ಎಂಬೆಡೆಡ್ ತಂತ್ರಜ್ಞಾನದ ಮೂಲಕ ಇದನ್ನು ನಿರ್ಮಿಸಿದ್ದು, ಇದು ಬಳಕೆದಾರ ಸ್ನೇಹಿಯಾಗಿದೆ. ಜತೆಗೆ ಸುಲಭವಾಗಿ ಬಳಸಬಹುದಾದ ಸಾಧನವಾಗಿದೆ.

ಸಮಾಜದಲ್ಲಿ ಅವಕಾಶ ವಂಚಿತರು ಎಂದರೆ ಕಿವುಡರು ಮತ್ತು ಮೂಗರು ಇತರೆ ಅಂಗವೈಕಲ್ಯವಿರುವರಿಗೆ ಬೇರೆ ಬೇರೆ ರೀತಿಯ ಕೆಲಸಗಳು ದೊರೆಯುತ್ತವೆ. ಆದರೆ ಈ ವರ್ಗಕ್ಕೆ ಅವಕಾಶಗಳು ಕಡಿಮೆ. ಇದಕ್ಕೆ ಸಂವಹನದ ಕೊರತೆಯೇ ಕಾರಣ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ‘ಕಲ್ಯಾ ಸಹಾಯ’ ಎಂಬ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಇದರಿಂದ ಕಿವುಡ ಮತ್ತು ಮೂಗರ ಜೀವನ ಶೈಲಿಯಲ್ಲೂ ಸುಧಾರಣೆ ಕಾಣಬಹುದಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶೂಟೌಟ್; ಬನ್ನಂಜೆ ರಾಜ, ರವಿ ಪೂಜಾರಿ ಸಹಚರ ಮನೀಶ್ ಶೆಟ್ಟಿ ಹತ್ಯೆಒಂದು ಮೀಟರ್ ದೂರದಿಂದಲೇ ಹೃದಯ ಮತ್ತು ನಾಡಿಯ ಬಡಿತ ಪತ್ತೆ ಮಾಡುವ ರೋಲಿಂಗ್ ಥಂಡರ್ ಹೊಸ ಸಾಧನವಾಗಿದೆ. ರೋಗಿಗಳಿಗೆ ಔಷಧಿ, ಆಹಾರ ಪೂರೈಸುವ, ವ್ಯಾಪಾರ ಮತ್ತು ಸೇವಾ ಕ್ಷೇತ್ರದಲ್ಲಿಯೂ ಬಳಸಬಹುದಾದ ಬಹುಪಯೋಗಿ ವಾಹನ ‘ನಂದಿ’ ಹಲವು ರೀತಿಯಲ್ಲಿ ಪ್ರಯೋಜನಕಾರಿ.

50 ಮೀಟರ್ ಎತ್ತರ ಮತ್ತು 600 ಮೀಟರ್ ದೂರದಲ್ಲಿ ಹಾರುವ ಸಾಮರ್ಥ್ಯ ಹೊಂದಿರುವ ಡ್ರೋನ್ ಅಭಿವೃದ್ಧಿಮಾಡಲಾಗಿದೆ. ಇದಕ್ಕೆ ವಿಆರ್ ಗ್ಲಾಸ್​ಗಳನ್ನು ಅಳವಡಿಸಿದ್ದು, ಮೊಬೈಲ್ ಮೂಲಕ ಡ್ರೋನ್ ಹಾರಾಟವನ್ನು ವೀಕ್ಷಿಸಬಹುದಾಗಿದೆ. ಶಾಲಾ, ಕಾಲೇಜುಗಳು ಆರಂಭವಾದರೆ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಹರಡದಂತೆ ನೋಡಿಕೊಳ್ಳುವ ಉದ್ದೇಶದಿಂದ ಫೂಟ್ ಆಪರೇಟೆಡ್ ಹ್ಯಾಂಡ್ಸ್ ಫ್ರೀ ಸ್ಯಾನಿಟೈಸರ್ ಡಿಸ್ಪೆನ್ಸರ್​ಗಳು, ಫೇಸ್ ಶೀಲ್ಡ್​ಗಳನ್ನು ಸಹ ವಿಭಿನ್ನವಾಗಿ ವಿದ್ಯಾರ್ಥಿಗಳು ಅಭಿವೃದ್ಧಿ ಮಾಡಿದ್ದಾರೆ.

ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
Published by: Vijayasarthy SN
First published: October 16, 2020, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories