ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ಕೊರೋನಾ ಕೇಸ್​ಗಿಂತ ಗುಣಮುಖರಾದವರೇ ಹೆಚ್ಚು

ಕಳೆದೊಂದು ವಾರದಲ್ಲಿ 16060 ಕೊರೊನಾ ಕೇಸ್ ದಾಖಲಾಗಿದ್ದು, ಅದಕ್ಕಿಂತ ಹೆಚ್ಚು ಅಂದರೆ 18207 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ ಐದು ದಿನದಲ್ಲಿ ಪಾಸಿಟಿವ್ ಕೇಸ್​ಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

news18-kannada
Updated:August 8, 2020, 11:09 AM IST
ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ ಕೊರೋನಾ ಕೇಸ್​ಗಿಂತ ಗುಣಮುಖರಾದವರೇ ಹೆಚ್ಚು
ಕೊರೋನಾ ವೈರಸ್ ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು: ರಾಜಧಾನಿಯಲ್ಲಿ ಪ್ರತಿದಿನ ಸರಾಸರಿ ಎರಡು ಸಾವಿರ ಕೇಸ್ ದಾಖಲಾಗುತ್ತಿವೆ. ಇದರಿಂದ ಮೆಟ್ರೋ ಸಿಟಿಗಳಲ್ಲಿ ಬೆಂಗಳೂರು ಸಹ ಕೇಸ್ ಹೆಚ್ಚಳದಿಂದ ಜನರು ತಮ್ಮೂರಿಗೆ ತೆರಳುತ್ತಿದ್ದಾರೆ. ಎಗ್ಗಿಲ್ಲದೆ ಏರುತ್ತಿರುವ ಕೊರೋನಾ ಪ್ರಕರಣಗಳ ಮಧ್ಯೆ ಬೆಂಗಳೂರಿಗರಿಗೆ ಸ್ವಲ್ಪ ನಿರಾಳದ ಸುದ್ದಿ ಇದು. ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಕೊರೋನಾ‌ ಕೇಸ್​ಗಳಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿದೆ.

ಕೊರೋನಾ ಪ್ರಕರಣಗಳ ಬಗ್ಗೆ ಕಳೆದೊಂದು ವಾರ ಆರೋಗ್ಯ ಇಲಾಖೆ ಬಿಡುಗಡೆ‌ ಮಾಡಿದ‌ ಮಾಹಿತಿ ನೋಡಿದರೆ ಬೆಂಗಳೂರಿಗರು ಸಮಾಧಾನ ಮಾಡಿಕೊಳ್ಳಬಹುದು. ಕಳೆದೊಂದು ವಾರದಿಂದ ಕೊರೊನಾ ಕೇಸ್ ದಾಖಲಾಗುವವರಿಗಿಂತ ಗುಣಮುಖರಾಗಿ ಹೊರಬರುವವರೇ ಹೆಚ್ಚಾಗಿದ್ದಾರೆ. ಮೂರು ದಿನಗಳ‌ ಹಿಂದೆ ಕೊರೋನಾ‌ ಕೇಸ್‌ಗಿಂತ ಗುಣಮುಖರಾದವರ ಸಂಖ್ಯೆ ಡಬಲ್ ಆಗಿದೆ. ಕೊರೊನಾ‌ ಪಾಸಿಟಿವ್ 1848 ಇದ್ದರೆ, ಗುಣಮುಖರಾದವರ ಸಂಖ್ಯೆ 3083 ಇದೆ. ನಿನ್ನೆ ಮಾತ್ರ ಗುಣಮುಖರಾದವರ ಸಂಖ್ಯೆ ಹೊಸ ಪ್ರಕರಣಗಳಿಗಿಂತ ಕಡಿಮೆ ಇದೆ. ಇದು ಹೊರತುಪಡಿಸಿದರೆ ಈ ವಾರದಲ್ಲಿ ಉಳಿದ ದಿನಗಳು ಕೊರೋನಾ ಕೇಸ್​ಗಳಿಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

ಇದನ್ನೂ ಓದಿ: ನಿಜವಾದ ರಾಹುಲ್ ಗಾಂಧಿ ಭವಿಷ್ಯ : 20 ಲಕ್ಷ ದಾಟಿದ ದೇಶದ ಕೊರೋನಾ ಸೋಂಕಿತರ ಸಂಖ್ಯೆ

ಕಳೆದೊಂದು ವಾರದಲ್ಲಿ 16060 ಕೊರೊನಾ ಕೇಸ್ ದಾಖಲಾಗಿದ್ದು, ಅದಕ್ಕಿಂತ‌ ಹೆಚ್ಚು ಅಂದರೆ 18207 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ ಐದು ದಿನದಲ್ಲಿ ಪಾಸಿಟಿವ್ ಕೇಸ್​ಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪಾಸಿಟಿವ್ ಕೇಸ್ ಪ್ರತಿದಿನ ಕ್ರಮವಾಗಿ ಕಳೆದ ಐದು ದಿನ 2105, 1497, 2035, 1848, 2147 ದಾಖಲಾದ್ರೆ, ಗುಣಮುಖರಾದವರು ಕ್ರಮವಾಗಿ 2331, 2693, 4274, 3083, 1231 ಇದ್ದಾರೆ.

coronavirus cases in bengaluru
ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು


ಇದುವರೆಗೆ ಬೆಂಗಳೂರಿನಲ್ಲಿ 69,572 ಕೇಸ್ ದಾಖಲಾಗಿದೆ. ಇಲ್ಲಿಯವರೆಗೆ ಅರ್ಧದಷ್ಟು ಅಂದರೆ 35,063 ಜನ ಗುಣಮುಖರಾಗಿದ್ದಾರೆ. ಇನ್ನೂ ಬಹುತೇಕ ಅರ್ಧದಷ್ಟು, ಅಂದರೆ 33,308 ಸಕ್ರಿಯ ಪ್ರಕರಣಗಳಿದ್ದು ಗುಣಮುಖರಾಗಬೇಕಿದೆ. ಸಾವಿನ ಸಂಖ್ಯೆ 1200 ಇದೆ.

ಇದನ್ನೂ ಓದಿ: ಕ್ವಾರಂಟೈನ್ ನಿಯಮ ಪಾಲಿಸಿದರೂ ದಂಡ ತಪ್ಪಿಲ್ಲ; ಬೆಂಗಳೂರಿನವರಿಗೆ ಹೊಸ ಸಮಸ್ಯೆರಾಜ್ಯದಾದ್ಯಂತ ಗಮನಿಸಿದರೆ 1,64,924 ಕೇಸ್ ದಾಖಲಾಗಿದ್ದು, ಇದರಲ್ಲಿ 84,232 ಗುಣಮುಖರಾಗಿದ್ದಾರೆ. ಈಗಲೂ 77,686 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 2,998 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ‌ ಕೇಸ್‌ಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಕೊರೋನಾ ಕೇಸ್‌ ಕಡಿಮೆಯಾಗಬೇಕಿದೆ. ಅನ್​ಲಾಕ್ ಆದ್ರೂ ಕೊರೋನಾ ಆತಂಕಕ್ಕೆ ಜನರು ಹೊರಗೆ ಬರದಂತಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗೆ ದೊಡ್ಡ ಹೊಡೆತ ಕೊಟ್ಟಿದೆ.
Published by: Vijayasarthy SN
First published: August 8, 2020, 11:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading