ಬೆಂಗಳೂರಿನಿಂದ ಬಂದು ವಿಜಯಪುರದಲ್ಲಿ ಗಾಂಜಾ ಮಾರಾಟ : 6 ಜನರ ಬಂಧನ

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಆಹೇರಿ ಕ್ರಾಸ್ ಬಳಿ ಆರು ಜನ ಆರೋಪಿಗಳನ್ನು ಬಂಧಿಸಿ ಅವರ ಬಳಿಯಿದ್ದ 25 ಸಾವಿರ ರೂಪಾಯಿ ಮೌಲ್ಯದ 2.30 ಕೆಜಿ ಗಾಂಜಾ, ಒಂದು ಸ್ವಿಫ್ಟ್ ಕಾರು ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ

news18-kannada
Updated:September 16, 2020, 10:54 PM IST
ಬೆಂಗಳೂರಿನಿಂದ ಬಂದು ವಿಜಯಪುರದಲ್ಲಿ ಗಾಂಜಾ ಮಾರಾಟ : 6 ಜನರ ಬಂಧನ
6 ಜನ ಆರೋಪಿಗಳು
  • Share this:
ವಿಜಯಪುರ(ಸೆಪ್ಟೆಂಬರ್​. 16): ಬೆಂಗಳೂರಿನಲ್ಲಿ ಸದ್ದು ಮಾಡಿದ ಗಾಂಜಾ ಮಾರಾಟ ಇಡೀ ರಾಜ್ಯದಲ್ಲಿ ಪೊಲೀಸರು ಗಾಂಜಾ ವಿರುದ್ಧ ಕಾರ್ಯಾಚರಣೆ ನಡೆಸಲು ಕಾರಣವಾಗಿದೆ. ಇದರ ನಡುವೆಯೇ ಬಸವನಾಡು ವಿಜಯಪುರ ಜಿಲ್ಲೆಯಲ್ಲಿಯೂ ಪೊಲೀಸರು ಗಾಂಜಾ ವಿರುದ್ಧ ಸಮರ ಸಾರಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಪೊಲೀಸರು ಗಾಂಜಾ ದಾಳಿ ಮುಂದುವರೆದಿದ್ದು, ಮತ್ತೆ ಎರಡು ಪ್ರಕರಣಗಳು ದಾಖಲಾಗಿವೆ.  ಅಲ್ಲದೇ, ಅಪಾರ ಪ್ರಮಾಣದ ಗಾಂಜಾ ಜಪ್ತಿ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ಮೂಲದ ಮೂರು ಜನ ಸೇರಿದಂತೆ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಿಂದ ಆಗಮಿಸಿ ವಿಜಯಪುರ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆರು ಜನರನ್ನು ಬಂಧಿಸಿದ್ದಾರೆ.  ಬೆಂಗಳೂರು ಮೂಲದ ಮೂರು ಜನ ಸೇರಿದಂತೆ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದ ಸುರೇಶ ಹೊನಗುಡೆಪ್ಪ ನಾಟಿಕಾರ, ಕಲಬುರಗಿ ಜಿಲ್ಲೆಯ ಅಫಝಲಪುರ ತಾಲೂಕಿನ ಬಡದಾಳ ಗ್ರಾಮದ ಮಡಿವಾಳಪ್ಪ ಕಲ್ಯಾಣಪ್ಪ ಪರೀಟ್, ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಬಾಬು ಉರ್ಫ ಬಾಬುರಾವ್ ಮಲಾರಿ ಅಲಿಯಾಸ್ ಮಲ್ಲಾರಾವ್ ಲಾವಟೆ ಮತ್ತು ಬೆಂಗಳೂರಿನ ಮೂಡಲಪಾಳ್ಯದ ವಿಜಯ ಬ್ಯಾಂಕ್ ಬಳಿಯ ನಿವಾಸಿ ಶರತ್ ಶ್ರೀನಿವಾಸ್, ಮಾಗಡಿ ಮುಖ್ಯ ರಸ್ತೆಯ ಜಟ್ಟಿಪಾಳ್ಯದ ಗಗನ ಕೆ ಕೃಷ್ಣಮೂರ್ತಿ, ಮೂಡಲಪಾಳ್ಯ 2ನೇ ಮುಖ್ಯ ರಸ್ತೆಯ ನಿವಾಸಿ ಮನೋಜ್ ಎಸ್ ಸುರೇಶ ಎಂಬುವರನ್ನು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಆಹೇರಿ ಕ್ರಾಸ್ ಬಳಿ ಆರು ಜನ ಆರೋಪಿಗಳನ್ನು ಬಂಧಿಸಿ ಅವರ ಬಳಿಯಿದ್ದ 25 ಸಾವಿರ ರೂಪಾಯಿ ಮೌಲ್ಯದ 2.30 ಕೆಜಿ ಗಾಂಜಾ, ಒಂದು ಸ್ವಿಫ್ಟ್ ಕಾರು ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಖಾಸಗಿ ಶಾಲೆಗಳ ಆರ್.ಆರ್. ನವೀಕರಣ, ಶುಲ್ಕ ಸಂಗ್ರಹಕ್ಕೆ ಅನುಮತಿ: ಸಚಿವ ಸುರೇಶ್‌ ಕುಮಾರ್‌

ಮತ್ತೊಂದು ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ದೇಗಿನಾಳ ಗ್ರಾಮದಲ್ಲಿ ಗಾಂಜಾ ಜಪ್ತಿ ಮಾಡಿದ್ದಾರೆ.  ಈ ಸಂಬಂಧ ರೇವಣಸಿದ್ಧ ರಾಠೋಡ ಎಂಬಾತನನ್ನು ಬಂಧಿಸಿದ್ದು, 750 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದು ವಾರದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ :

ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ವಿಜಯಪುರ ನಗರದ ಗೋಲಗುಂಬಜ ಸರ್ಕಲ್ ವ್ಯಾಪ್ತಿಯ ಪೊಲೀಸರು ಐನಾತಿ ಕಳ್ಳನಿಗೆ ಕೈಕೊಳ ತೊಡಿಸಿದ್ದಾರೆ. ಆರೋಪಿ ರಾಜು ಶಿವಾನಂದ ಹೊಸಮನಿ ಎಂಬಾತನನ್ನು ಬಂಧಿಸಿದ್ದು, ಆತನ ಬಳಿಯಿದ್ದ 12. 38 ಲಕ್ಷ ರೂ ಮೌಲ್ಯದ 233 ಗ್ರಾಂ ಚಿನ್ನಾಭರಣ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಈತ ವಿಜಯಪುರ ನಗರದ ಆದರ್ಶ ನಗರ, ಜಲನಗರ ಮತ್ತು ಗಾಂಧಿಚೌಕ್ ಪೊಲೀಸಾ ಠಾಣೆಗಳ ವ್ಯಾಪ್ತಿಯಲ್ಲಿ 4 ಮನೆಗಳಲ್ಲಿ ಕಳ್ಳತನ ನಡೆಸಿದ್ದಾನೆ. ಜಲನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸ್ವರೂಪ, ಸತೀಶ ಮತ್ತು ಅಪ್ರಾಪ್ತ ಬಾಲಕನೊಬ್ಬನ್ನು ಬಂಧಿಸಿ ಮೂರು ಕಳ್ಳತನ ಪ್ರಕರಣ ಪತ್ತೆ ಮಾಡಿದ್ದಾರೆ.  ಅಲ್ಲದೇ, ಆರೋಪಿಗಳ ಬಳಿಯಿದ್ದ ಸುಮಾರು  10 ಲಕ್ಷ ರೂ ಮೌಲ್ಯದ 190 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳೂ ಕೂಡ ಆದರ್ಶ ನಗರ, ಜಲನಗರ, ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಿದ್ದರು. ಕಳೆದ ಒಂದು ವಾರದಲ್ಲಿ ನಿಡಗುಂದಿ, ಸಿಇಎನ್, ಗಾಂಧಿಚೌಕ್ ಮತ್ತು ಕೊಲ್ಹಾರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 7 ಗಾಂಜಾ ಮಾರಾಟ ಪ್ರಕರಣ ಪತ್ತೆ ಮಾಡಿದ್ದಾರೆ. ಅಲ್ಲದೇ, ಆರೋಪಿಗಳ ಬಳಿಯದ್ದ 10 ಲಕ್ಷ ರೂ ಮೌಲ್ಯದ 150 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
Published by: G Hareeshkumar
First published: September 16, 2020, 10:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading