ಯಡಿಯೂರಪ್ಪ ಸರ್ಕಾರ 6 ತಿಂಗಳಲ್ಲಿ ಪತನ: ಬೇಳೂರು ಗೋಪಾಲಕೃಷ್ಣ ಭವಿಷ್ಯ

ಬಿಜೆಪಿಯೊಳಗೆ ಅಸಮಾಧಾನದ ಹೊಗೆಯಾಡುತ್ತಿದೆ. ಕೊರೋನಾ ಬಿಕ್ಕಟ್ಟು ವಿಧಾನಪರಿಷತ್ ಚುನಾವಣೆ ಆಗಲಿ ಎಂದು ಕಾಯುತ್ತಿದ್ಧಾರೆ. ಆರು ತಿಂಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಅಲುಗಾಟವಾಗುತ್ತದೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಬೇಳೂರು ಗೋಪಾಲಕೃಷ್ಣ

ಬೇಳೂರು ಗೋಪಾಲಕೃಷ್ಣ

  • Share this:
ಶಿವಮೊಗ್ಗ(ಜೂನ್ 20): ರಾಜ್ಯ ಸರ್ಕಾರದಲ್ಲಿ ಇನ್ನಾರು ತಿಂಗಳಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಯಡಿಯೂರಪ್ಪ ಸಿಎಂ ಕುರ್ಚಿಯಲ್ಲಿ ಕೂರುವ ಪರಿಸ್ಥಿತಿಯಲ್ಲಿ ಇರಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ, ಬಿಜೆಪಿಯೊಳಗೆ ಬಹಳಷ್ಟು ಅಸಮಾಧಾನದ ಹೊಗೆಯಾಡುತ್ತಿದೆ ಎಂದು ಹೇಳಿದರು.

ರಾಜಕೀಯದಲ್ಲಿ ಬದಲಾವಣೆ ಆಗುವ ಸೂಚನೆ ಕಾಣುತ್ತಿದ್ದೇವೆ. ಯಡಿಯೂರಪ್ಪ ಅವರದ್ದು ಮುಳ್ಳಿನ ಖುರ್ಚಿ. ಆರು ತಿಂಗಳ ನಂತರ ಅವರು ಸಿಎಂ ಆಗಿ ಮುಂದುವರಿಯುವುದು ಅನುಮಾನ. ನಾವು ಖಂಡಿತ ಯಡಿಯೂರಪ್ಪರನ್ನು ಇಳಿಸುವುದಿಲ್ಲ. ಅವರ ಮಾನಸ ಪುತ್ರರೇ ಆ ಕೆಲಸ ಮಾಡುತ್ತಾರೆ. ನಾನು ಭವಿಷ್ಯ ಹೇಳಲು ಕೋಡಿಮಠದ ಸ್ವಾಮಿ ಅಲ್ಲ. ಆದರೆ, ಸ್ವಾಮೀಜಿಯೇ ಯಡಿಯೂರಪ್ಪರ ಭವಿಷ್ಯ ಹೇಳಬೇಕಿತ್ತು. ಅವರಿಗೂ ಆ ಬಗ್ಗೆ ಆಸಕ್ತಿ ಇಲ್ಲ ಅನಿಸುತ್ತೆ ಎಂದು ಬೇಳೂರು ತಿಳಿಸಿದರು.

ಬಹಳಷ್ಟು ಜನರು ತಮ್ಮ ತಮ್ಮಲ್ಲೇ ಅಸಮಾಧಾನ ಇಟ್ಟುಕೊಂಡು ಕುಳಿತಿದ್ದಾರೆ. ವಲಸೆ ಹೋದ ಶಾಸಕರು ಯಾವಾಗ ವಾಪಸ್ ಬರುತ್ತಾರೋ ಗೊತ್ತಿಲ್ಲ. ಬಿಜೆಪಿಯಲ್ಲಿ ಮೂವರು ಸಿಎಂ ರೇಸ್​ನಲ್ಲಿದ್ಧಾರೆ. ಯಡಿಯೂರಪ್ಪ ಕೈಯಲ್ಲಿ ಆಡಳಿತ ಇಲ್ಲ. ಎಲ್ಲವೂ ವಿಜಯೇಂದ್ರ ಮತ್ತು ಶೋಭಾ ಕರಂದ್ಲಾಜೆ ಹಿಡಿತದಲ್ಲಿದೆ. ಉಪ್ಪಾರಪೇಟೆ ಠಾಣೆ ಇನ್ಸ್​ಪೆಕ್ಟರ್ ವರ್ಗಾವಣೆಗೆ ವಿಜಯೇಂದ್ರ 50 ಲಕ್ಷ ರೂ ಲಂಚ ಪಡೆದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರ ಅಧಿಕಾರಾವಧಿ ಮುಕ್ತಾಯ ಆಗಬಹುದು ಎಂದು ಬೇಳೂರು ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಸಿಎಂ ತವರು ಜಿಲ್ಲೆಯಲ್ಲೇ ರೈತರ ವಿರೋಧವಿಶ್ವನಾಥ್ ವಿರುದ್ಧ ವಾಗ್ದಾಳಿ:

ಹುಣಸೂರಿನ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಬಗ್ಗೆ ಬೇಳೂರು ವ್ಯಂಗ್ಯದ ದಾಳಿ ನಡೆಸಿದರು. ವಿಶ್ವನಾಥ್ ಯಾವ ಹಳ್ಳಿಹಕ್ಕಿಯೂ ಅಲ್ಲ. ಅವರಿಗೆ ಬಿಜೆಪಿ ಸರಿಯಾದ ಪಾಠ ಕಲಿಸಿದೆ. ಎಲ್ಲಾ ಕಳೆದುಕೊಂಡಿದ್ದ ವಿಶ್ವನಾಥ್​ಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಟಿಕೆಟ್ ಕೊಟ್ಟು ಗೆಲ್ಲಿಸಿದರು. ಆದರೆ, ಗೆದ್ದ ನಂತರ ರಾಜೀನಾಮೆ ಕೊಟ್ಟು ಬಿಜೆಪಿ ಹೋದರು. ಈಗ ಅವರಿಗೆ ತಕ್ಕ ಪಾಠ ಸಿಕ್ಕಿದೆ ಎಂದು ಕಾಂಗ್ರೆಸ್ ನಾಯಕ ಟೀಕಿಸಿದರು.
First published: