Beltangdi Farmer Success Story: ವಿದೇಶಿ ಹಣ್ಣುಗಳನ್ನು ಬೆಳೆದು ಭರ್ಜರಿ ಲಾಭ ಗಳಿಸುತ್ತಿರುವ ಬೆಳ್ತಂಗಡಿ ರೈತ

ಬರ್ಮಾ, ಇಂಡೋನೇಷ್ಯಾ, ಶ್ರೀಲಂಕಾ, ಬ್ರೇಝಿಲ್, ಜಮೈಕಾ, ಹವಾಯಿ ದೇಶಗಳಲ್ಲಿ ಬೆಳೆಯುವ ಹಣ್ಣುಗಳನ್ನು ಇಲ್ಲೂ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ತೋಟದಲ್ಲಿ ರೈತ ಅನಿಲ್ ಬಳಂಜ

ತೋಟದಲ್ಲಿ ರೈತ ಅನಿಲ್ ಬಳಂಜ

  • Share this:
ದಕ್ಷಿಣಕನ್ನಡ: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಬಳಂಜ ಎಂಬ ಹಳ್ಳಿಪ್ರದೇಶ. ಆದ್ರೆ ಅದೇ ಪುಟ್ಟ ಹಳ್ಳಿಯಲ್ಲಿ ನಾನಾ ದೇಶದ ಹಣ್ಣುಗಳನ್ನು ಹೇಗೆ ಬೆಳೆಯಬಹುದು ಎಂಬುದನ್ನು ಕೃಷಿಕರೊಬ್ಬರು ತೋರಿಸಿಕೊಟ್ಟಿದ್ದಾರೆ. ಈ ವಿಶೇಷ ಸಾಧನೆಯನ್ನು ಮಾಡಿರುವ ಯುವ ಕೃಷಿಕ ಇವರೇ ಅನಿಲ್ ಬಳಂಜ. ಪಿಯುಸಿ ಓದು ಮುಗಿಸಿ ಕೃಷಿ ಕಾಯಕಕ್ಕೆ ಇಳಿದ ಈ ಅನಿಲ್ ಬಳಂಜ ಇಂದು ವಿದೇಶಿ ಹಣ್ಣುಗಳ ಕೃಷಿಯಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ.

ವಿದೇಶಿ ತಳಿ ತಂದ ಅದೃಷ್ಟ 

ವಿದೇಶಿ ಹಣ್ಣುಗಳ ಗಿಡ ಬೆಳೆಸುವುದನ್ನು ಅನಿಲ್ ಪ್ರಾರಂಭದಲ್ಲಿ ಹವ್ಯಾಸವಾಗಿ ಆರಂಭಿಸಿದ್ರು. ಆದ್ರೆ ಆ ನಂತರ ಈ ಹವ್ಯಾಸ ದುಬಾರಿ ಖರ್ಚನ್ನು ತಂದು ಬಿಡ್ತು. ಹೀಗಾಗಿ ಬೆಳೆದ ಗಿಡಗಳನ್ನು ಅಭಿವೃದ್ದಿ ಮಾಡಿ ಇಲ್ಲಿ ಅದರ ಮಾರಾಟ ಮಾಡಿ ಇತರ ರೈತರಿಗೂ ವಿದೇಶಿ ಹಣ್ಣಿನ ಗಿಡ ಸುಲಭವಾಗಿ ಸಿಗುವಂತೆ ಮಾಡಿದ್ರು. ಇದಕ್ಕಾಗಿ ಪ್ರಾರಂಭದಲ್ಲಿ ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿದ ನರ್ಸರಿ ಇವತ್ತು ದೊಡ್ಡ ಪ್ರಮಾಣದಲ್ಲಿ ಬೆಳೆದುನಿಂತಿದೆ. ಕೇರಳ, ತಿರುವನಂತಪುರ ಸೇರಿದಂತೆ ಹಲವು ರಾಜ್ಯಗಳಿಗೆ ಇಲ್ಲಿಂದ ಗಿಡಗಳು ಸಪ್ಪೈ ಆಗುತ್ತದೆ. ಇವರ ಈ ಕಾರ್ಯಕ್ಕೆ ಪತ್ನಿ, ತಂದೆ, ತಾಯಿ ಸಾಥ್ ನೀಡಿದ್ದಾರೆ. ಬರ್ಮಾ, ಇಂಡೋನೇಷ್ಯಾ, ಶ್ರೀಲಂಕಾ, ಬ್ರೇಝಿಲ್, ಜಮೈಕಾ, ಹವಾಯಿ ದೇಶಗಳಲ್ಲಿ ಬೆಳೆಯುವ ಹಣ್ಣುಗಳನ್ನು ಇಲ್ಲೂ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ದೇಶಾದ್ಯಂತ ಭರ್ಜರಿ ಡಿಮ್ಯಾಂಡ್​

ಆಸ್ಟ್ರೇಲಿಯಾದ ಸೆಡರ್ ಬಯ ಚೆರ್ರಿ, ಬೊಲಿವಿಯಾದ ಅಚಾಚಾ, ಶ್ರೀಲಂಕಾದ ನಮ್ ನಮ್ ಹಣ್ಣು, ಬರ್ಮಾದ ಮರ ದ್ರಾಕ್ಷಿ, ಜಮೈಕಾದ ಕೈಮಿತೋ, ಇಂಡೋನೇಷ್ಯಾದ ಮಕೊತಾದೇವ, ಬ್ರೇಝಿಲ್ನ ಬಾಕುಪಾರಿ, ರೊಲಿನಿಯಾ ಮುಕೊಸಾ, ರಷ್ಯನ್ ಪಪಿನೊ, ಗ್ಯಾಕ್, ಮೆಕ್ಸಿಕನ್ ಸಪೋಟಾ, ಜಬೋಟಿಕಾ, ಜ್ಯಾಮ್ ಫ್ರೂಟ್, ಮಲೇಷ್ಯನ್ ವಾಟರ್‌ಮೆಲನ್ ಹೀಗೆ ಕಂಡುಕೇಳರಿಯದ ಹಣ್ಣುಗಳನ್ನು ಬೆಳೆದಿದ್ದಾರೆ. ವಿದೇಶಿ ಹಣ್ಣುಗಳ ಗಿಡಗಳನ್ನು ತಮ್ಮ ನರ್ಸರಿಯಲ್ಲಿ ಅಭಿವೃದ್ಧಿ ಪಡಿಸಿ ತಿರುವನಂತಪುರಂ, ಮುಂಬೈ ಹೀಗೆ ಅನೇಕರಿಗೆ ಕೊಟ್ಟಿದ್ದಾರೆ. ಆ ಮೂಲಕ ವಿದೇಶಿ ಹಣ್ಣುಗಳನ್ನು ದೇಶೀ ಹಣ್ಣುಗಳನ್ನಾಗಿ ಮಾರ್ಪಡಿಸಿದ್ದಾರೆ.

ತಾಳ್ಮೆ ಇದ್ದರೆ ಫಲ ಗ್ಯಾರೆಂಟಿ

ಇನ್ನು ಪ್ರಮುಖವಾಗಿ ಇಲ್ಲಿ ಉಷ್ಣವಲಯದ ಹಣ್ಣಿನ ಗಿಡಗಳನಷ್ಟೇ ಬೆಳೆಯಲು ಸಾಧ್ಯ. ಇದಕ್ಕಾಗಿ ಮಲೇಷಿಯಾ, ಥೈಲ್ಯಾಂಡ್, ಕಂಬೋಡಿಯಾ, ವಿಯೆಟ್ನಾಂ, ಬ್ರೆಜಿಲ್ ಸೇರಿದಂತೆ ಉಷ್ಣವಲಯದ ಪ್ರದೇಶಗಳಿಂದಲೇ ಹೆಚ್ಚಿನ ಗಿಡಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಇವರು ನೆಟ್ಟ ಶೇಕಡಾ 40 ರಷ್ಟು ಗಿಡಗಳು ಫಲಕೊಟ್ಟಿವೆ. ಕೆಲವು ಗಿಡಗಳು ಫಲ ನೀಡಲು 8- 15 ವರ್ಷ ಬೇಕಾಗುತ್ತದೆ. ಹಣ್ಣಿನ ಗಿಡ ಬೆಳೆಯುವುದು ಒಂದು ತಾಳ್ಮೆಯ ಕೆಲಸವೆಂಬುದು ಅನಿಲ್ ಅವರ ಅಭಿಪ್ರಾಯ.

ಇದನ್ನೂ ಓದಿ: Hampi: ಪ್ರವಾಸಿಗರ ಸಂಖ್ಯೆ ಇಳಿಮುಖ: ಸಂಕಷ್ಟಕ್ಕೆ ತಲುಪಿದ ಹಂಪಿ ಪ್ರವಾಸಿ ಗೈಡ್​ಗಳು

ಹೊಸ ಹೊಸ ತಳಿ ಕೃಷಿ

ಇನ್ನು ಇವರ ಹಣ್ಣಿನ ಫಾರ್ಮ್‌ನಲ್ಲಿ ಬಾಯಿಗೆ ರುಚಿ ನೀಡುವ ಹಣ್ಣು ಮಾತ್ರವಲ್ಲದೇ ಔಷಧೀಯ ಗುಣವನ್ನು ಹೊಂದಿರುವ ಹಣ್ಣಿನ ಗಿಡಗಳನ್ನು ಸಹ ಬೆಳೆಸಿದ್ದಾರೆ. ಈ ಹಣ್ಣುಗಳ ವೈಜ್ಞಾನಿಕ ಹೆಸರು, ಅವುಗಳ ಔಷಧೀಯ ಗುಣಗಳನ್ನೂ ಅನಿಲ್ ಅರಿತಿದ್ದಾರೆ. ಒಟ್ಟಿನಲ್ಲಿ ಅನಿಲ್ ಅವರ ಈ ಹವ್ಯಾಸ ಸಂಶೋಧನೆಗೆ ಮತ್ತು ಹೊಸ ಹೊಸ ತಳಿಗಳನ್ನು ದೇಶದ ಕೃಷಿ ಪರಿಸರಕ್ಕೆ ಒಗ್ಗಿಸಿಕೊಳ್ಳುವ ಒಂದು ಜಾಣ ನಡೆ ಎಲ್ಲರು ಮೆಚ್ಚುವಂತದ್ದು.

ದೇಶದ, ರಾಜ್ಯದ ರೈತರು ಇನ್ನು ಸಾಂಪ್ರದಾಯ ಕೃಷಿ ವಿಧಾನಗಳನ್ನು ಅನುಸರಿಸುವ ಜೊತೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಜೊತೆ ಬೇರೆ ಬೇರೆ ರೀತಿಯ ಕೃಷಿಗೆ ಮುಂದಾಗಬೇಕು. ಮಣ್ಣಿನ ಫಲವತ್ತೆಯನ್ನು ಆಧರಿಸಿ ತರಹೇವಾರಿ ಬೆಳೆಗಳನ್ನು ಬೆಳಯುವುದು ಉತ್ತಮ.
Published by:Kavya V
First published: