ಅಫ್ಘಾನ್ ಪ್ರಜೆ ವಿವಾಹವಾಗಿ ಗಂಡನ ಜೊತೆ ತವರಿಗೆ ಬಂದಿರುವ ಕನ್ನಡತಿಗೆ ಈಗ ಹೊಸ ಸಮಸ್ಯೆ

ಅಫ್ಘಾನಿಸ್ತಾನದಲ್ಲಿ (Afghanistan) ಸಿಲುಕಿಕೊಂಡ ಕನ್ನಡಿಗರನ್ನ ದೇಶಕ್ಕೆ ಕರೆತರಲು ಸರ್ಕಾರ ಹರಸಾಹಸ ಪಡುತ್ತಿದೆ. ಆದ್ರೆ ಇದೆಲ್ಲದರ ಮಧ್ಯೆ ಈಗ ಬಳ್ಳಾರಿಯ ದಂಪತಿ ವಿಷಯದಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿದೆ.

ತನ್ವೀನ್ ಮತ್ತು ಸಯದ್ ಜಲಾಲ್ ದಂಪತಿ

ತನ್ವೀನ್ ಮತ್ತು ಸಯದ್ ಜಲಾಲ್ ದಂಪತಿ

 • Share this:
  ಬಳ್ಳಾರಿ: ಕಳೆದ ಎರಡು ವಾರಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು (Taliban Power) ಕ್ರೌರ್ಯ ಮೆರೆಯುತಿದ್ದಾರೆ. ಸಿಕ್ಕ ಸಿಕ್ಕವರನ್ನು ಹಾದಿಬೀದಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡ್ತಿದ್ದಾರೆ. ಅಫಘಾನಿಸ್ತಾನ್ ದೇಶದಲ್ಲಿ ಅರಾಜಕತೆ ಸೃಷ್ಠಿ ಆಗಿ ತಾಲಿಬಾನಿಗಳ ಕೈವಶವಾದ ಮೇಲೆ ಅಲ್ಲಿ ನೆಲೆಸಿದ ದೇಶ ತೋರೆಯೋಕೆ ಮುಂದಾಗಿದ್ದಾರೆ. ಈ ನಡುವೆ ಉದ್ಯೋಗ ಅರಿಸಿ ಭಾರತದಿಂದ ಹೋಗಿದ್ದ ಜನರನ್ನ ಕರೆತರಲು ಸರ್ಕಾರ ಪ್ರಯತ್ನ ಮಾಡ್ತಿದೆ.  ಆಫ್ಘಾನ್‌ನಲ್ಲಿ ಸಿಲುಕಿದ ಸಂಡೂರಿನ ಯುವತಿ (Sandur Woman) ತನ್ವೀನ್ ಕೂಡ ಒಬ್ಬರು. ವಾರದಿಂದ ಮಗಳು ಹೇಗಿದ್ದಾಳೆ ಏನು ಅಂತ ಕುಟುಂಬಸ್ಥರು ದುಃಖದಲ್ಲಿದ್ರು. ಮೊನ್ನೆಷ್ಟೇ ಯುವತಿಯ ಕುಟುಂಬಸ್ಥರಿಗೆ ರಾಯಭಾರಿ ಕಚೇರಿಯಿಂದ ಫೋನ್ ಬಂದಾಗ ನಿರಾಳರಾಗಿದ್ದಾರೆ. ನಿಮ್ಮ ಮಗಳು ಸೇಫ್, ಇಂದು ದೆಹಲಿಗೆ ಬರ್ತಾರೆ. ನೀವು ಬಂದು ಕರ್ಕೊಂಡು ಹೋಗಿ ಅಂತ ಹೇಳಲಾಗಿದೆ. ಮಗಳು ಬರ್ತಾಳೆ ಅಂತ ಕುಟುಂಬಸ್ಥರು ಸಂತಸ ಪಡ್ತಿದ್ದಾರೆ. ಇತ್ತ ತನ್ವೀನ್ ಹಾಗೂ ಆಕೆಯ ಗಂಡ ಆಫ್ಘಾನ್ ಪ್ರಜೆ ಸೈಯದ್ ಜಲಾಲ್ ಕೂಡ ಭಾರತಕ್ಕೆ ಬಂದಿದ್ದಾರೆ ಎಂದು ಯುವತಿಯ ಕುಟುಂಬ ಮೂಲಗಳು ತಿಳಿಸಿವೆ. ಆದ್ರೆ ಇಂಜಿನಿಯರ್ ಆಗಿ ಯುವತಿ ಕೆಲಸಕ್ಕೆ ಸೇರಿದಾಗ ಆಫ್ಘಾನ್ ಪ್ರಜೆ ಸೈಯದ್​ವೊಂದಿಗೆ ಸಂಡೂರಿನ ಯುವತಿ ತನ್ವೀನ್ ಪ್ರೇಮ ವಿವಾಹ ಮಾಡ್ಕೊಂಡಿದ್ದಾಳೆ. ಪತ್ನಿಯ ಜೊತೆಗೆ ಅವರೂ ಕೂಡ ಭಾರತಕ್ಕೆ ನಿನ್ನೆ ಬಂದಿದ್ದಾರೆ.

  ಅಂದಹಾಗೆ ಮಗಳು ಮನೆಗೆ ಬರುತ್ತಿದ್ದಾರೆ ಅಂತ ಕುಟುಂಬಸ್ಥರು ಸಂತಸ ಒಂದು ಕಡೆಯಾದರೆ, ಅಳಿಯ ಆಫ್ಘಾನ್ ಪ್ರಜೆ ಅನ್ನೋದು ಈಗ ಸವಾಲಾಗಿದೆ. ಆಫ್ಘಾನ್ ದೇಶದ ಪ್ರಜೆಗಳನ್ನ ಜಗತ್ತಿನಾದ್ಯಂತ ಅನುಮಾನದಿಂದ ನೋಡುವಂತಾಗಿದೆ. ಈ ನಡುವೆ ಅಫ್ಘಾನ್ ಪ್ರಜೆಯೊಬ್ಬ ಭಾರತೀಯ ಯುವತಿ ಜೊತೆಗೆ ಭಾರತಕ್ಕೆ ಬಂದಿರುವುದು ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿದೆ. ಮಾನವೀಯತೆಯ ದೃಷ್ಟಿಯಿಂದ ಭಾರತ ಪತ್ನಿಯ ಜೊತೆಗೆ ಪತಿಯನ್ನು ಕೂಡ ಕರೆ ತಂದಿದೆ. ಒಂದು ವೇಳೆ ಭಾರತ ಆತನಿಗೆ ಇಲ್ಲೇ ಇರೋಕೆ ಅನುಮತಿ ನೀಡಿದರೂ ಸದ್ಯ ಭಾರತದಲ್ಲಿ ಜಾರಿಯಿರುವ ಸಿಎಎ, ಎನ್ಆರ್​ಸಿ ಕಾಯ್ದೆಗಳು ತೊಡಕಾಗಬಹುದು.

  ಇದನ್ನೂ ಓದಿ: ಅಮಿತಾಭ್ ಬಚ್ಚನ್ ಹೆಸರಲ್ಲಿದ್ದ ರೋಲ್ಸ್ ರಾಯ್ಸ್ ಸೇರಿ ದೊಡ್ಡೋರ ಲಕ್ಸುರಿ ಕಾರುಗಳು ಬೆಂಗಳೂರು ಪೊಲೀಸರ ವಶಕ್ಕೆ

  ಉದ್ಯೋಗದಲ್ಲಿ ಇರಬೇಕಾದ್ರೆ ಕುಟುಂಬಸ್ಥರ ಒಪ್ಪಿಗೆ ಪಡೆದು ಸಯ್ಯದ್ ಜಲಾಲ್ ಜೊತೆ ತನ್ವೀನ್ ವಿವಾಹ ಆಗಿದ್ದಾರೆ. ಆದ್ರೆ ಇದೀಗ ಭಾರತಕ್ಕೆ ಬಂದಿರುವ ಆತನಿಗೆ ಇಲ್ಲೇ ಇರಲು ಅವಕಾಶ ಸಿಗುತ್ತಾ ಅನ್ನೋದು ಪ್ರಶ್ನೆಯಾಗಿದೆ. ಇನ್ನು, ಆಫ್ಘಾನ್ ‌ನಿಂದ ಬಂದ ಪ್ರಜೆಯನ್ನ ಸಂಡೂರಿನ ಜನರು ಒಪ್ಪಿಕೊಳ್ಳುತ್ತಾರಾ ಅನ್ನೋ ಪ್ರಶ್ನೆ ಕೂಡ ಈಗ ಬಳ್ಳಾರಿ ಜಿಲ್ಲಾಡಳಿತಕ್ಕೆ ಎದುರಾಗಿದೆ.

  ಒಟ್ಟಿನಲ್ಲಿ ಪ್ರೇಮ ವಿವಾಹ ಮಾಡಿಕೊಂಡು ತನ್ವೀರ್ ಆಫ್ಘಾನ್ ದೇಶದಲ್ಲಿ ಇಂಜಿನಿಯರ್ ವೃತ್ತಿಯಲ್ಲಿ ಇದ್ರು. ಸದ್ಯ ಇಬ್ಬರೂ ಈಗ ಭಾರತಕ್ಕೆ ಬಂದಿದ್ದಾರೆ. ಅಫ್ಘಾನಿಸ್ತಾನ ದೇಶದ ಪ್ರಜೆ ಭಾರತಕ್ಕೆ ಆಗಮಿಸಿರುವುದು ಸದ್ಯಕ್ಕಂತೂ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿದೆ‌. ಮುಂದೆ ಕೇಂದ್ರ ಸರ್ಕಾರ ಯಾವ ನಿರ್ಣಯ ಕೈಗೊಳ್ಳದ ಅನ್ನೋದರ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  ವರದಿ: ವಿನಾಯಕ ಬಡಿಗೇರ
  Published by:Vijayasarthy SN
  First published: