Bellary: ಮನೆಯವರು ಬೇಗ ಮದುವೆ ಮಾಡದಿದ್ದಕ್ಕೆ ಟವರ್​ ಏರಿ ಕುಳಿತ ಭೂಪ...!

ಘಟನೆ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಜೆಸ್ಕಾಂ ಗೆ ಕರೆ ಮಾಡಿ ಟವರ್ ಕಂಬಕ್ಕೆ ಇದ್ದ ವಿದ್ಯುತ್ ಸಂಪರ್ಕ ಕಟ್ ಮಾಡಿಸಿದ್ದಾರೆ. ತದನಂತರ ಹುಡುಗನೊಂದಿಗೆ ಮಾತನಾಡಿ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟವರ್ ಹೇರಿ ಕುಳಿತಿರುವ ಭೂಪ

ಟವರ್ ಹೇರಿ ಕುಳಿತಿರುವ ಭೂಪ

 • Share this:
  ಬಳ್ಳಾರಿ(ಜೂ.15): ಹುಡುಗಿ ಫಿಕ್ಸ್​ ಆಗಿ ಆಗಿ ತಿಂಗಳುಗಳೇ ಕಳೆದರೂ ಮನೆಯಲ್ಲಿ ಬೇಗ ಮದುವೆ ಮಾಡದಿದ್ದಕ್ಕೆ ಯುವಕನೊಬ್ಬ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಷಕರಿಗೆ ಬೆದರಿಕೆ ಹಾಕಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಚಿರಂಜೀವಿ (23) ಎಂಬ ಯುವಕ ಯಾರು ಇಲ್ಲದ ಸಮಯದಲ್ಲಿ ಸಿನಿಮಾ ಟಾಕೀಸ್ ರಸ್ತೆಯಲ್ಲಿರುವ ಟವರ್ ಏರಿ ಕುಳಿತು, ನನಗ ಬೇಗ ಮದುವೆ ಮಾಡಿಸಿ, ಇಲ್ಲವಾದಲ್ಲಿ ನಾನು ಇಲ್ಲಿಂದ ಹಾರಿ ಪ್ರಾಣ ಬಿಡುತ್ತೆನೆ ಎಂದು ಬೆದರಿಕೆ ಹಾಕಿದ್ದಾನೆ.

  ಈಗಾಗಲೇ ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಪೋಷಕರೊಂದಿಗೆ ಮಾತುಕತೆ ಕೂಡ ಮುಗಿದಿದೆ‌. ಆದರೆ ಈ ಯುವಕನಿಗೆ ಒಬ್ಬ ಅಣ್ಣನಿದ್ದಾನೆ, ಅವನಿಗೂ ಹುಡುಗಿ ಫಿಕ್ಸ್ ಮಾಡಿಕೊಂಡು ಇಬ್ಬರಿಗೂ ಒಟ್ಟಿಗೆ ಮದುವೆ ಮಾಡುವ ನಿರೀಕ್ಷೆಯಲ್ಲಿ ಕುಟುಂಬವಿದೆ. ಆದರೆ ಈತನ ಅಣ್ಣನಿಗೆ ಬೇಗ ಹುಡುಗಿ ಸಿಗುತ್ತಿಲ್ಲ. ಹೀಗಾಗಿ ಮದುವೆ ತಡ ಆಗುತ್ತಿದೆ. ಆದರೆ ಈತ ಮಾತ್ರ ನನಗೆ ಬೇಗ ಮದುವೆ ಮಾಡಿಸಿ ಎಂದು ಹಠ ಹಿಡಿದಿದ್ದಾನೆ. ಈ ಹಿಂದೆಯು ಕೂಡ ಈತ ಮದುವೆಗಾಗಿ ಹಠ ಮಾಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

  ಇದನ್ನೂ ಓದಿ:Sanchari Vijay: ಹುಟ್ಟೂರಿನಲ್ಲಿ ನಡೆಯಲಿದೆ ಸಂಚಾರಿ ವಿಜಯ್ ಅಂತ್ಯಸಂಸ್ಕಾರ..!

  ಇನ್ನೂ ಘಟನೆ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಜೆಸ್ಕಾಂ ಗೆ ಕರೆ ಮಾಡಿ ಟವರ್ ಕಂಬಕ್ಕೆ ಇದ್ದ ವಿದ್ಯುತ್ ಸಂಪರ್ಕ  ಕಟ್ ಮಾಡಿಸಿದ್ದಾರೆ. ತದನಂತರ ಹುಡುಗನೊಂದಿಗೆ ಮಾತನಾಡಿ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
  ಇನ್ನೂ ಕೆಳಗಿಳಿಯುವ ಮುನ್ನ ಆ ಯುವಕ ಒಂದು ಷರತ್ತು ಹೇಳಿ ಕೆಳಗಿಳಿದಿದ್ದಾನೆ. ನಾನು ಕೆಳಗಿಳಿದು ಬಂದ ಮೇಲೆ ನನಗೆ ಯಾರು ಹೊಡೆಯುವ ಹಾಗಿಲ್ಲ, ಬೈಯುವ ಹಾಗಿಲ್ಲ. ಹೀಗಿದ್ದರೆ ಮಾತ್ರ ನಾನು ಕೆಳಗೆ ಇಳಿದು ಬರುತ್ತೇನೆ ಎಂದಿದ್ದಾನೆ. ಅವನ ಮಾತಿಗೆ ಎಲ್ಲರೂ ಒಪ್ಪಿಗೆ ಕೊಟ್ಟ ಮೇಲೆ ಕೆಳಗಿಳಿದು ಬಂದಿದ್ದಾನೆ.

  ಅವನ ತಂದೆ, ತಾಯಿ, ಅಣ್ಣ ಎಲ್ಲರೂ ನಿನಗೇ ಮೊದಲು ಮದುವೆ ಮಾಡುತ್ತೇವೆ. ನಿಮ್ಮ ಅಣ್ಣನಿಗೆ ಇನ್ನೂ ಸಮಯ ತೆಗೆದುಕೊಂಡರೂ ಪರವಾಗಿಲ್ಲ ಆದ್ರೆ ನಿನ್ನ ಮದುವೆ ಮಾತ್ರ ಈ ತಿಂಗಳಿನಲ್ಲಿ ಮಾಡಿ ಮುಗಿಸುತ್ತೆವೆ ಬಾ ಎಂದು ಮಾತು ಕೊಟ್ಟಿದ್ದಾರೆ. ತದ ನಂತರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಕೆಳಗಿಳಿದು ಬಂದಿದ್ದಾನೆ.

  ಇದನ್ನೂ ಓದಿ:Taj Mahal: 2 ತಿಂಗಳ ನಂತರ ತಾಜ್ ಮಹಲ್ ದರ್ಶನ; ಆನ್​​ಲೈನ್​​ನಲ್ಲೇ ಟಿಕೆಟ್ ಪಡೆಯಬೇಕು..!

  ಈಗಿನ ಕಾಲದ ಯುವಕ ಯುವತಿಯರಲ್ಲಿ ಈ ಪ್ರೀತಿ, ಪ್ರೇಮ, ಮದುವೆ ಒಂದು ರೀತಿಯ ಹುಚ್ಚು ಕಲ್ಪನೆಯಾಗಿ ಬಿಟ್ಟಿದೆ. ಒಂದು ಕಡೆ ಹುಡುಗಿ ಸಿಕ್ಕಿಲ್ಲ ಅಂತಾ ಹುಡುಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇಳಿದ್ದೇವೆ. ಇವತ್ತಿನ ಘಟನೆ ಕೂಡ ಹಾಗೆ ಆಗಿದೆ. ಮದುವೆ ಫಿಕ್ಸ್ ಆಗಿ ಮದುವೆ ಲೇಟ್ ಆಗಿದ್ದಕ್ಕೆ ಟವರ್ ಕಂಬ ಏರಿ ಆತ್ಮಹತ್ಯೆ ಗೆ ಯತ್ನಿಸಿದ್ದಾನೆ. ಈ ರೀತಿಯಾಗಿ ಪದೆ ಪದೆ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಅನಿವಾರ್ಯ ಇದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹರಡದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  ವರದಿ: ವಿನಾಯಕ ಬಡಿಗೇರ 
  Published by:Latha CG
  First published: