ಅರಿಶಿಣ ಕದಿಯಲು ಸುಪಾರಿ ಕೊಟ್ಟು ಸಿಕ್ಕಿಬಿದ್ದ ಗ್ಯಾಂಗ್; 1 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿ

ಬಂಧಿತರಿಂದ ದರೋಡೆಯಾದ ಹಾಗೂ ದರೋಡೆಗೆ ಉಪಯೋಗಿಸಿದ  ಮೂರು ಲಾರಿ, ಒಂದು ಟ್ರಾಕ್ಟರ್ ಎರಡು ಕಾರು, ಒಂದು ಬೈಕ್ ಹಾಗೂ 23 ಟನ್ ಅರಿಶಿಣ ಸೇರಿ ಅಂದಾಜು 1.3 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಬೆಳಗಾವಿ ಪೊಲೀಸ್

ಬೆಳಗಾವಿ ಪೊಲೀಸ್

  • Share this:
ಬೆಳಗಾವಿ (ಜೂ. 16): ಬೆಳಗಾವಿ ಜಿಲ್ಲೆಯ ಗೋಕಾಕ್, ಮೂಡಲಗಿ, ಹುಕ್ಕೇರಿ ಹಾಗೂ ರಾಯಭಾಗ ತಾಲೂಕಿನಲ್ಲಿ ಅತಿ ಹೆಚ್ಚು ಅರಿಶಿಣ ಬೆಳೆಯಲಾಗುತ್ತದೆ. ಬೆಳೆದ ಅರಿಶಿಣವನ್ನು ಪಕ್ಕದ ಮಹಾರಾಷ್ಟ್ರಕ್ಕೆ ಮಾರಾಟ ಮಾಡಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ದರೋಡೆಕೋರ ಗ್ಯಾಂಗ್ ಒಂದು ಲಾರಿ ಸಮೇತ ಅರಿಶಿಣ ಕದ್ದು ಬೇರೆಡೆಗೆ ಮಾರಾಟ ಮಾಡಲು ಯತ್ನಿಸಿತ್ತು ಅವರನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಜೂನ್ 6ರಂದು ತಮಿಳುನಾಡು ಮೂಲದ ಲಾರಿ ಹಾಗೂ ಚಾಲಕ ಎಂ. ಚಿನ್ನಸ್ವಾಮಿ ಎನ್ನುವವರು ಗೋಕಾಕ್ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಅರಿಶಿಣ ತುಂಬಿಸಿಕೊಂಡು ರಾತ್ರಿ 3.30ಕ್ಕೆ ನಿಪ್ಪಾಣಿ ಮುಧೋಳ ಹೈವೇ ಮೂಲಕ ಮಹಾರಾಷ್ಟ್ರದ ಸಾಂಗ್ಲಿಗೆ ಹೋಗುವಾಗ ಚಿಕ್ಕೋಡಿ ತಾಲೂಕಿನ ಕಬ್ಬುರ ಗ್ರಾಮದ ಬಳಿ ಲಾರಿ ಅಡ್ಡಗಟ್ಟಿದ 4 ಜನರ ಗ್ಯಾಂಗ್ ಅರಿಶಿಣ ತುಂಬಿದ ಲಾರಿ ಸಮೇತ ಚಾಲಕ ಹಾಗೂ ಕ್ಲೀನರ್​ನನ್ನು ಕಿಡ್ನಾಪ್ ಮಾಡಿ ಲಾರಿ ಚಾಲಕ ಹಾಗೂ ಕ್ಲೀನರ್​ನನ್ನು ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ಬಿಟ್ಟು ಲಾರಿ ತೆಗೆದುಕೊಂಡು ದರೋಡೆಕೋರರು ಪರಾರಿಯಾಗಿದ್ದರು.

ಇದನ್ನೂ ಓದಿ: ಕೊರೋನಾ ಭಯಕ್ಕೆ ಲಾಕ್​ಡೌನ್ ಅವಧಿಯಲ್ಲಿ ಬೆಂಗಳೂರಿಗರು ಹೆಚ್ಚುವರಿಯಾಗಿ ಬಳಸಿದ ನೀರೆಷ್ಟು ಗೊತ್ತಾ?

ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರಿಗೆ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಒಟ್ಟು 7 ಜನ ದರೋಡೆಕೋರರು ಮೊದಲೆ ಪ್ಲಾನ್ ಮಾಡಿಕೊಂಡು ದರೋಡೆ ನಡೆಸುತ್ತಿದ್ದರು. ಪಾಂಡುರಂಗ ಹಳ್ಳೂರ ಎಂಬಾತ ಆರೋಪಿ ಗೋಕಾಕ್ ಹಾಗೂ ರಾಯಬಾಗ ತಾಲೂಕಿನ ಸುತ್ತ ಅರಿಶಿಣ ತುಂಬಿಸುವ ಕೆಲಸ ಮಾಡಿಸುತ್ತಿದ್ದ ತಾನು ತುಂಬಿಸಿದ ಲಾರಿಗಳ ಮಾಹಿತಿಯನ್ನು  ಹೊರಡುವ ಸಮಯ ಎಲ್ಲವನ್ನೂ ತನ್ನ ಸಹಚರರಿಗೆ ಕೊಟ್ಟು ತಾನೆ ದರೋಡೆ ಮಾಡಿಸಲು ಸುಪಾರಿ ಕೊಡುತ್ತಿದ್ದ.

ಇದನ್ನೂ ಓದಿ: ಮುಳಬಾಗಿಲು ಪೊಲೀಸ್ ಠಾಣೆ ಆರೋಪಿಗೆ ಕೊರೋನಾ; ಡಿವೈಎಸ್​ಪಿ ಸೇರಿ 22 ಸಿಬ್ಬಂದಿಗೆ ಹೋಂ ಕ್ವಾರಂಟೈನ್

ರಾತ್ರಿ ಸಮಯದಲ್ಲಿ ಲಾರಿ ದರೋಡೆ ಮಾಡಿದ ಬಳಿಕ ಕದ್ದ ಅರಿಶಿಣ ಮಾಲನ್ನು ಮತ್ತೆ  ತನ್ನ  ಮನೆಗೆ ತಂದು ಪಾಲಿಶ್ ಮಾಡಿಸಿ ಮತ್ತೆ ಅದನ್ನೇ ಬೇರೆಡೆಗೆ ಮಾರಾಟದ ಮಾಡುತ್ತಿದ್ದ ಕದ್ದ ಮಾಲು ಮಾರಾಟ ಮಾಡಿ ಬಳಿಕ ಬಂದ ಹಣವನ್ನು ಎಲ್ಲರೂ ಸೇರಿ ಹಂಚಿಕೊಳ್ಳುತ್ತಿದ್ದರು.  ಮೊದಲು ಒಬ್ಬನೇ ಆರೋಪಿಯನ್ನು ಬಂಧಿಸಿದ್ದ ಚಿಕ್ಕೋಡಿ ಪೊಲೀಸರು ವಿಚಾರಣೆ ನಡೆಸುತ್ತ ಹೋದಂತೆ  ಇಡೀ  ಗ್ಯಾಂಗ್ ಬಗ್ಗೆ ಮಾಹಿತಿ ಹೊರಬಿದ್ದಿದೆ. ಹಲವು ದರೋಡೆಗಳನ್ನು ಸಹ ಈ ಗ್ಯಾಂಗ್ ಮಾಡಿದೆ. ಸದ್ಯ ದರೋಡೆಯಲ್ಲಿ ಭಾಗಿಯಾದ ಸಹಾಯ ಮಾಡಿದ ಒಟ್ಟು 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ಧು, ಇನ್ನು ಮೂರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಬಂಧಿತರಿಂದ ದರೋಡೆಯಾದ ಹಾಗೂ ದರೋಡೆಗೆ ಉಪಯೋಗಿಸಿದ  ಮೂರು ಲಾರಿ, ಒಂದು ಟ್ರಾಕ್ಟರ್ ಎರಡು ಕಾರು, ಒಂದು ಬೈಕ್ ಹಾಗೂ 23 ಟನ್ ಅರಿಶಿಣ ಸೇರಿ ಅಂದಾಜು 1.3 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಕಾರ್ಯಾಚರಣೆ ತಂಡದಲ್ಲಿ ಭಾಗವಹಿಸಿದ್ದ ಡಿಎಸ್​ಪಿ ಮನೋಜ್ ಕುಮಾರ್ ನಾಯಕ್, ಸಿಪಿಐ ಆರ್.ಆರ್. ಪಾಟೀಲ, ಪಿಎಸ್​ಐಗಳಾದ ರಾಕೇಶ್ ಬಗಲಿ, ಎಲ್.ಎಮ್‌. ಆರಿ, ಎಸ್.ಸಿ. ಮಂಟೂರ ಅವರಿಗೆ ಬೆಳಗಾವಿ ಎಸ್.ಪಿ ಲಕ್ಷ್ಮಣ ನಿಂಬರಗಿ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರಿಗೂ ಬಹುಮಾನ ಘೋಷಣೆ ಮಾಡಿದ್ದಾರೆ.
First published: