ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ​ ಐವರು ಆರೋಪಿಗಳನ್ನು ಬಂಧಿಸಿದ ಬೆಳಗಾವಿ ಪೊಲೀಸರು

ಪ್ರಕರಣ ದಾಖಲಿಸಿಕೊಂಡಿರುವ ಮಾಳಮಾರುತಿ ಪೋಲಿಸರು ಬಂಧಿತರಿಂದ ಪ್ರೈಮ್ ನ್ಯೂಸ್ ಕನ್ನಡ ಹೆಸರಿನ ಯುಟ್ಯೂಬ್ ಚಾನಲ್ ಐಡಿ ಕಾರ್ಡ್ ಹಾಗೂ ಮೊಬೈಲ್ ಗಳನ್ನ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ

news18-kannada
Updated:July 30, 2020, 2:36 PM IST
ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ​ ಐವರು ಆರೋಪಿಗಳನ್ನು ಬಂಧಿಸಿದ ಬೆಳಗಾವಿ ಪೊಲೀಸರು
ಆರೋಪಿಗಳು
  • Share this:
ಬೆಳಗಾವಿ(ಜುಲೈ. 30): ಮಹಿಳೆಯರನ್ನ ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖದೀಮರು ಬೆಳಗಾವಿ ಪೋಲಿಸರ ಬಲೆಗೆ ಬಿದ್ದಿದ್ದಾರೆ.  ವ್ಯಕ್ತಿಯೋರ್ವನನ್ನ ವೈದ್ಯನೆಂದು ಭಾವಿಸಿದ ಖದೀಮರು ವೈದ್ಯನನ್ನ ಖಾಸಗಿ ಲಾಡ್ಜ್ ವೊಂದಕ್ಕೆ ಕರೆಸಿಕೊಂಡು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾಗ ಪೋಲಿಸರು ಬಂಧಿಸಿದ್ದಾರೆ.

ಶ್ರೀಮಂತ ಕುಳಗಳನ್ನ ಹುಡುಕಿ, ಅವರ ಮೊಬೈಲ್ ಸಂಖ್ಯೆಯನ್ನ ಕಲೆಕ್ಟ್ ಮಾಡಿ, ಅವರನ್ನ ಪುಸಲಾಯಿಸಿ, ಬೆದರಿಸಿ ನಂತರ ಹಣಕ್ಕಾಗಿ ಬೇಡಿಕೆ ಇಡುವುದೇ ಈ ಗ್ಯಾಂಗ್ ನ ಪ್ರಮುಖ ಉದ್ದೇಶ. ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಕಾರ್ಯಚರಿಸುತ್ತಿದ್ದ ತಂಡ ಬೆಳಗಾವಿ ಪೋಲಿಸರ ಬಲೆಗೆ ಬಿದ್ದಿದೆ. ಜಮಖಂಡಿ ಮೂಲದ ಬಸವರಾಜ್ ಕಾನಗೊಂಡ ಎಂಬ ವ್ಯಕ್ತಿಯನ್ನ ವೈದ್ಯನೆಂದು ಭಾವಿಸಿದ ಈ ವಂಚಕ ತಂಡದ ಮಹಿಳೆ ಗೌರಿ ಲಮಾಣಿ ಎಂಬಾಕೆ ಬಸವರಾಜನ ಜೊತೆ ಚಾಟಿಂಗ್ ನಡೆಸಿ ತನಗೆ ಮೂರು ಹೆಣ್ಣು ಮಕ್ಕಳಿದ್ದು ಮತ್ತೆ ಈಗ ಗರ್ಭ ಧರಿಸಿದ್ದೇನೆ ನನಗೆ ಭ್ರೂಣಲಿಂಗ ಪತ್ತೆ ಮಾಡಿ ಎಂದಿದ್ದಾಳೆ. ಮಹಿಳೆಯ ಮಾತುಗಳಿಂದ ಅನುಮಾನಗೊಂಡ ಬಸವರಾಜ್ ಖಾನಗೊಂಡ ಸದ್ಯ ನಾನು ಬೆಳಗಾವಿಗೆ ಬಂದಿದ್ದೇನೆ ಎಂದಿದ್ದಾನೆ.

ಈತನನ್ನ ಹುಡುಕಿಕೊಂಡು ಬೆಳಗಾವಿಗೆ ಬಂದ ವಂಚಕ ಮಹಿಳೆ ಮೇಲಿಂದ ಮೇಲೆ ಕರೆ ಮಾಡಿ 5 ನಿಮಿಷ ನಿಮಗೆ ಭೇಟಿಯಾಗಬೇಕು, ಮೊದಲೇ ಅನುಮಾನಗೊಂಡಿದ್ದ ಬಸವರಾಜ್ ಸದ್ಯ ನಾನು ಕೊಲ್ಲಾಪುರ ಸರ್ಕಲ್ ಬಳಿಯ ಖಾಸಗಿ ಲಾಡ್ಜನಲ್ಲಿದ್ದು ಇಲ್ಲಿಗೆ ಬನ್ನಿ ಎಂದು ಕರೆದಿದ್ದಾನೆ, ಕೂಡಲೇ ಈ ಕುರಿತು ಮಾಳಮಾರುತಿ ಪೋಲಿಸರಿಗೆ ಮಾಹಿತಿ ನೀಡಿದ್ದಾನೆ.

ಒಂದು ದಿನ ಮುಂಚಿತವಾಗಿಯೇ ತನ್ನ ಗ್ಯಾಂಗ್ ನೊಂದಿಗೆ ಪ್ಲ್ಯಾನ್ ರೂಪಿಸಿದ್ದ ಗೌರಿ ಲಮಾಣಿ ಹೇಗೆಲ್ಲ ಕಾರ್ಯಾಚರಣೆ ನಡೆಸಬೇಕು, ಹೇಗೆ ಬೆದರಿಸಬೇಕು ಎಷ್ಟು ಡಿಮ್ಯಾಂಡ್ ಮಾಡಬೇಕು ಎಂಬುದನ್ನ ಚರ್ಚಿಸಿದಂತೆ ನೇರವಾಗಿ ತನ್ನ ನಾಲ್ಕು ಜನ ಸಂಗಡಿಗರೊಂದಿಗೆ ರೂಂಗೆ ಎಂಟ್ರಿಕೊಟ್ಟ ಇವಳು, ನಾವು ಪತ್ರಕರ್ತರು ನಿನ್ನ ಮಾನ ಹರಾಜು ಹಾಕುತ್ತೇವೆಂದು ಬಸವರಾಜನಿಗೆ ಬೆದರಿಸಿ 10 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ.

ಇದನ್ನೂ ಓದಿ : Karnataka Rain - ಕರಾವಳಿಯಲ್ಲಿ ಮತ್ತೆ ಚುರುಕುಗೊಂಡ ಮಳೆ : ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ

ಇದೇ ಸಂದರ್ಭದಲ್ಲಿ ಸಕಾಲಕ್ಕೆ ಎಂಟ್ರಿ ಕೊಟ್ಟ ಮಾಳ ಮಾರುತಿ ಪೋಲಿಸರು ಮೂವರು ಮಹಿಳೆಯರು ಸೇರಿದಂತೆ ಐವರನ್ನ ಬಂಧಿಸಿದ್ಧಾರೆ. ಬಂಧಿತರನ್ನ ಗೌರಿ ಲಮಾಣಿ, ಮಂಜುಳಾ ಜೆಟ್ಟೆಣ್ಣವರ, ಸಂಗೀತಾ ಕಣಕಿಕೊಪ್ಪ, ರಘುನಾಥ್ ದುಮಾಳೆ, ಸದಾಶಿವ ಚಿಪ್ಪಲಕಟ್ಟಿ ಎಂದು ಗುರುತಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಮಾಳಮಾರುತಿ ಪೋಲಿಸರು ಬಂಧಿತರಿಂದ ಪ್ರೈಮ್ ನ್ಯೂಸ್ ಕನ್ನಡ ಹೆಸರಿನ ಯುಟ್ಯೂಬ್ ಚಾನಲ್ ಐಡಿ ಕಾರ್ಡ್, ಹಾಗೂ ಮೊಬೈಲ್ ಗಳನ್ನ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
Published by: G Hareeshkumar
First published: July 30, 2020, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading