By Election: ಬೆಳಗಾವಿ ಉಪ ಚುನಾವಣೆ; ಸಿಡಿ ಪ್ರಕರಣದಿಂದಾಗಿ ದೂರವಾದ ರಮೇಶ್, ನಾಯಕತ್ವದ ಗೊಂದಲದಲ್ಲಿ ಬಿಜೆಪಿ!

ರಮೇಶ್ ಜಾರಕಿಹೊಳಿ ಉಪ ಚುನಾವಣೆ ಗುರಿಯಾಗಿಸಿಕೊಂಡೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಒಂದು ಹಂತದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಹೈಜಾಕ ಕೂಡ ನಡೆದಿತ್ತು. ಆದರೆ ಈಗ ಉಪ ಚುನಾವಣೆ ಆಖಾಡದಿಂದಲೆ ರಮೇಶ್ ಜಾರಕಿಹೋಳಿ ದೂರ ಉಳಿದಿದ್ದಾರೆ.

ರಮೇಶ್ ಜಾರಕಿಹೊಳಿ.

ರಮೇಶ್ ಜಾರಕಿಹೊಳಿ.

  • Share this:
ಬೆಳಗಾವಿ: ಒಂದು ಪಕ್ಷ ಅಂದ್ರೆ ಪ್ರತಿಯೊಂದು ಹಂತದಲ್ಲಿ ಅದಕ್ಕೆ ಒಬ್ಬೊಬ್ಬರ ನಾಯಕತ್ವ ಇರುತ್ತದೆ. ರಾಷ್ಟ್ರೀಯ, ರಾಜ್ಯ, ಜಿಲ್ಲೆ ಮಟ್ಟದಲ್ಲಿ ನಾಯಕತ್ವ ಇರೋದು ಸಾಮಾನ್ಯ ಆದ್ರೆ ಸದ್ಯ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ನಾಯಕತ್ವ ವಹಿಸಿದ್ದ ರಮೇಶ್ ಜಾರಕಿಹೋಳಿ ಸದ್ಯ ಸಿ ಡಿ ಪ್ರಕರಣದಿಂದಾಗಿ ದೂರ ಉಳಿದಿದ್ದಾರೆ. ಜಿಲ್ಲೆಯಲ್ಲಿ ತಮ್ನದೆ ಹಿಡಿತ ಹೊಂದಿರುವ ನಾಯಕ ಇಲ್ಲದೆ ಈಗ ಬಿಜೆಪಿ ಮುಂದೆನು ಮಾಡಬೇಕು ಅನ್ನುವ ಸ್ಥಿತಿಗೆ ಬಂದು ನಿಂತಿದೆ. ಹೌದು ಬೆಳಗಾವಿಯಲ್ಲಿ ವಿಧಾನಸಭೆ ಉಪ ಚುನಾವಣೆಯಿಂದ ಹಿಡಿದು ಡಿಸಿಸಿ ಬ್ಯಾಂಕ್, ಗ್ರಾಮ ಪಂಚಾಯತಿ ಚುನಾವಣೆ ವರೆಗೂ ಮುಂದೆ ನಿಂತು ಹೆಚ್ಚು ಸ್ಥಾನಗಳನ್ನ ಗೆಲ್ಲಿಸಿದ್ದ ಮಾಜಿ ಸಚಿವ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದ ರಮೇಶ್ ಜಾರಕಿಹೋಳಿ ಬೆಳಗಾವಿ ಲೋಕಸಭಾ ಉಪ ಚುನಾವಣೆಯಂತಹ ಪ್ರಮುಖ ಚುನಾವಣೆ ವೇಳೆಗೆ ಸಿಡಿ ಪ್ರಕರಣದ ಆರೋಪದಿಂದಾಗಿ ಮನೆ ಸೇರಿದ್ದಾರೆ. ಇದರಿಂದ ಮುಂದಿನ ಚುನಾವಣೆಯ ನಾಯಕತ್ವ ಯಾರದ್ದು ಎನ್ನುವ ಪ್ರಶ್ನೆ ಈಗ ಬಿಜೆಪಿಗೆ ಕಾಡತೋಡಗಿದೆ.

ಕೈ ಪಾಳಯದಲ್ಲಿ ಇದ್ದಾಗಿನಿಂದಲು ಬೆಳಗಾವಿ ಜಿಲ್ಲೆಯ ತಮ್ಮದೇ ಪ್ರಭುತ್ವ ಹಿಡಿತ ಹೊಂದಿದ್ದರು. ಸರ್ಕಾರವನ್ನೆ ಕೆಡವಿ ಬಿಜೆಪಿ ಸೇರಿದ ಬಳಿಕ ರಮೇಶ್ ಜಾರಕಿಹೋಳಿ ಹಂತ ಹಂತವಾಗಿ ಬಿಜೆಪಿ ಸಿದ್ದಾಂತಗಳಿಗೆ ಹೊಂದಿಕೊಳ್ಳುತ್ತ ಜಿಲ್ಲೆಯ ನಾಯಕತ್ವದಲ್ಲಿ ಉತ್ತಮ ಹಿಡಿತ ಸಾಧಿಸಿದ್ದರು. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಹಿಡಿತಕ್ಕೆ ಪಡೆಯುವ ಹಠದೊಂದಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೆ ಪ್ರಭಾವ ಸಾಧಿಸಿದ್ದರು.

ಅವರ ನಾಯಕತ್ವ ವೇಗಕ್ಕೆ ಜಿಲ್ಲೆಯ ಪ್ರಮುಖ ನಾಯಕರು ಕೂಡ ತಮ್ಮ ಕ್ಷೇತ್ರ ಬಿಟ್ಟಿದ್ದರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಮತ್ತು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಮನಿಸುವ ಸಲುವಾಗಿ ಬೆಳಗಾವಿ ಲೋಕಸಭೆ ಉಪ ಚುನಾವಣೆಯನ್ನ ಪ್ರತಿಷ್ಠೆಯಾಗಿ ಪರಿಗಣಿಸಿದ್ದರು.

ಆ ನಡುವೆ ಕಾಂಗ್ರೇಸ್ ನ ಸತೀಶ್ ಜಾರಕಿಹೊಳಿ ಅವರನ್ನೆ ಕಣಕ್ಕೆ ಇಳಿಸುವ ಅಭಿಪ್ರಾಯ ಹೊಂದಿದ್ದರಿಂದ ಈ ಉಪ ಚುನಾವಣೆ ಸಹೋದರ ಸವಾಲ ಎನ್ನುವ ರೀತಿಯಾಗಿತ್ತು. ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೋಳಿ ನಡುವಿನ ಬಿಗ್ ಪೈಟ ಎಂದೆ ಪರಿಗಣಿಸಲಾಗಿತ್ತು. ಆದ್ರೆ ಈಗ ಲೆಕ್ಕಾಚಾರ ಎಲ್ಲವೂ ಬದಲಾಗಿ ಹೋಗಿದೆ.

ನೇತೃತ್ವ ಯಾರದ್ದು..?

ರಮೇಶ್ ಜಾರಕಿಹೊಳಿ ಉಪ ಚುನಾವಣೆ ಗುರಿಯಾಗಿಸಿಕೊಂಡೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಒಂದು ಹಂತದಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಹೈಜಾಕ ಕೂಡ ನಡೆದಿತ್ತು. ಆದರೆ ಈಗ ಉಪ ಚುನಾವಣೆ ಆಖಾಡದಿಂದಲೆ ರಮೇಶ್ ಜಾರಕಿಹೋಳಿ ದೂರ ಉಳಿದಿದ್ದಾರೆ.

ಇದನ್ನೂ ಓದಿ: Farmers Protest: ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರುವ ನಾಯಕರೇ ಭಯೋತ್ಪಾದಕರು; ನಟ ಚೇತನ್ ಕಿಡಿ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆಹಾರ ಸಚಿವ ಉಮೇಶ್ ಕತ್ತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೋಲ್ಲೆ. ಜವಳಿ ಸಚಿವ ಶ್ರೀಮಂತ ಪಾಟೀಲ್ ಅಂತಹ ನಾಲ್ಕು ಜನ ಸಚಿವರು ಬೆಳಗಾವಿ ಜಿಲ್ಲೆಯಲ್ಲೆ ಇದ್ದರು ರಮೇಶ ಜಾರಕಿಹೊಳಿ ಅವರ ಸ್ಥಾನವನ್ನು ಇನ್ನು ಖಾಲಿ ಇಡಲಾಗಿದೆ.

ಸಿಡಿ. ಪ್ರಕರಣದಲ್ಲಿ ಜಾರಕಿಹೋಳಿ ಕುಟುಂಬದ ಉಪ ನಾಯಕನಂತೆ ಮುಂದೆ ನಿಂತು ಎಲ್ಲವನ್ನು ನಿಭಾಯಿಸುತ್ತಿರುವ ಕೆ.ಎಂ.ಎಪ್. ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಕೂಡ ಜಿಲ್ಲೆಯ ಕ್ಯಾಪ್ಟನ್ಸಿ ವಹಿಸಿಕೊಳ್ಳುವ ಸಾಹಸ ಮಾಡಿಲ್ಲ. ಅಸಲಿಗೆ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸೇರಿದ ಬಳಿಕ ಈ ಯಾವುದೆ ನಾಯಕರು ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಪ್ರಾಬಲ್ಯ ಸಾಧಿಸುವ ಪ್ರಯತ್ನವೆ ಮಾಡಿಲ್ಲ. ಬೆಂಗಳೂರು ಕೇಂದ್ರಿತವಾಗಿಯೆ ಉಳಿದುಕೊಂಡಿದ್ದರು. ಒಟ್ಟಿನಲ್ಲಿ ರಮೇಶ್‌ ಜಾರಕಿಹೋಳಿ ಅವರು ಏಕಾ ಏಕಿ ರಾಜಕೀಯ ಬಹಿರಂಗ ಚಟುವಟಿಕೆಯಿಂದ ದೂರ ಉಳಿದಿದ್ದರಿಂದ ಚುನಾವಣಾ ಮೈದಾನದಲ್ಲಿ ಈಗ ಜೋಶ್ ಕಳೆಗುಂದಿದೆ.
Published by:MAshok Kumar
First published: