Belagavi By Election: ಬೆಳಗಾವಿ ಲೋಕಸಭಾ ಉಪ ಚುನಾವಣೆ; ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಂದ ಮತಬೇಟೆ!

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮತ ಭೇಟೆ ನಡೆಸಿದರು. ಯಳ್ಳೂರು, ಪೀರನವಾಡಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮೂರ್ತಿ, ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಪ್ರಚಾರ ಕಾರ್ಯ ಆರಂಭಿಸಿದರು.

ಸತೀಶ್ ಜಾರಕಿಹೊಳಿ ಅವರಿಂದ ಚುನಾವಣಾ ಪ್ರಚಾರ.

ಸತೀಶ್ ಜಾರಕಿಹೊಳಿ ಅವರಿಂದ ಚುನಾವಣಾ ಪ್ರಚಾರ.

  • Share this:
ಬೆಳಗಾವಿ: ಇದೇ ತಿಂಗಳ 17ರಂದು ಬೆಳಗಾವಿ ಲೋಕಸಭಾ ಉಪಚುನಾವಣೆ ಮತದಾನ ನಡೆಯಲಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಇಂದು ಸತೀಶ ಜಾರಕಿಹೊಳಿ ಬಿರುಸಿನ ಮತಯಾಚನೆ ಮಾಡಿದ್ರು. ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಪ್ರಚಾರ ಸಭೆಯನ್ನು ನಡೆಸಿದ್ರು. ಕಾಂಗ್ರೆಸ್ ಬೆಲೆ ಏರಿಕೆ ಪ್ರಸ್ತಾಪ ಮಾಡಿದ್ರೆ, ಬಿಜೆಪಿ ಕೇಂದ್ರ, ರಾಜ್ಯದ ಸಾಧನೆಯನ್ನು ಜನರ ಬಳಿ ಹೇಳುತ್ತಿದೆ.

ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಬೆಳಗಾವಿ ಉತ್ತರ ಮತಕ್ಷೇತ್ರದ ಧರ್ಮನಾಥ ಭವನದಲ್ಲಿ ಪ್ರಚಾರ ಕಾರ್ಯ ನಡೆಸಿದ್ರು. ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ, ಶ್ರೀಮಂತ ಪಾಟೀಲ್ ಸೇರಿ ಅನೇಕರು ಶಾಸಕರು, ಸಂಸದರು ಪಾಲ್ಗೊಂಡಿದ್ದರು. ಪ್ರಚಾರದ ವೇಳೆಯಲ್ಲಿ ಮಾತನಾಡಿದ ಜಗದೀಶ ಶೆಟ್ಟರ್, ಕಾಂಗ್ರೆಸ್ ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಾರೆ.

ಬೆಳಗಾವಿಗೆ ಕಾಂಗ್ರೆಸ್ ನೀಡಿದ ಕೊಡುಗೆ ಏನು ಪ್ರಶ್ನೆ ಮಾಡಿದ್ರು. ದಿ. ಸುರೇಶ ಅಂಗಡಿ ಬೆಳಗಾವಿಗೆ ಅನೇಕ ಯೋಜನೆಯನ್ನು ಕೊಟ್ಟಿದ್ದಾರೆ ಎಂದು ಸ್ಮರಿಸಿದರು. ಆದರೇ ಕಾಂಗ್ರೆಸ್ ನಲ್ಲಿ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಿಎಂ ಖುರ್ಚಿಗಾಗಿ ಫೈಟ್ ಆರಂಭವಾಗಿದೆ ಎಂದು ವ್ಯಂಗ್ಯ ಮಾಡಿದರು.

ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಮಾತನಾಡಿ, ಕಳೆದ ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ದಿ. ಸುರೇಶ ಅಂಗಡಿ ಒಂದು ದಿನವು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಜಿಲ್ಲೆಯ ಜನರ ಸಂಕಷ್ಟಕ್ಕೆ ಅವರು ಸ್ಪಂಧನೆ ಮಾಡಿದ್ರು. ಮುನ್ನೆಚ್ಚರಿಕೆ ವಹಿಸುವಂತೆ ನಾವು ಅನೇಕ ಸಂದರ್ಭದಲ್ಲಿ ಹೇಳಿದ್ರು ಅವರು ಕೇಳಿಲ್ಲ. ಇಲ್ಲಿಯೇ ಇದ್ದು ಕೊವೀಡ್ ಪರೀಕ್ಷೆ ಮಾಡಿಸಿಕೊಂಡಿದ್ದರೇ ಅವರು ಬದುಕುತ್ತಿದ್ದರು ಎಂದು ಕಣ್ಣಿರು ಹಾಕಿದರು. ಪತಿ ಯೋಜನೆ ಪೂರ್ಣ ಮಾಡಲು ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಅನುದಾನ ನೀಡದಿದ್ದಕ್ಕೆ ಸಿಎಂ ವಿರುದ್ಧ ಮೈಸೂರಿನ ಕೈ ಶಾಸಕರ ಆಕ್ರೋಶ!

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮತ ಭೇಟೆ ನಡೆಸಿದರು. ಯಳ್ಳೂರು, ಪೀರನವಾಡಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮೂರ್ತಿ, ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಪ್ರಚಾರ ಕಾರ್ಯ ಆರಂಭಿಸಿದರು. ಪ್ರಚಾರದ ವೇಳೆಯಲ್ಲಿ ಬೆಲೆ ಏರಿಕೆ ವಿಚಾರವನ್ನು ಮುಖ್ಯವಾಗಿ ಸತೀಶ ಜಾರಕಿಹೊಳಿ ಪ್ರಸ್ತಾಪಿಸಿದರು.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಮುತಗಾ ಗ್ರಾಮದಲ್ಲಿ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ್ ಭಾವಹಿಸಿದ್ದರು. ಈ ವೇಳೆಯಲ್ಲಿ ಮಾತನಾಡಿದ ಶಾಸಕಿ ಹೆಬ್ಬಾಳ್ಕರ್ ಮುರುಗೇಶ ನಿರಾಣಿ ಯಾವಾಗಿಂದ ಜೋತಿಷ್ಯ ಹೇಳಲು ಆರಂಭಿಸಿದ್ದಾರೆ ಎಂದು ಟಾಂಗ್ ಕೊಟ್ಟರು. ನಿನ್ನೆ ನಿರಾಣಿ ಬಿಜೆಪಿ ಅಭ್ಯರ್ಥಿ 5 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಹೇಳಿದರು.
Published by:MAshok Kumar
First published: