ಕುಖ್ಯಾತ ಮಟ್ಕಾ ಬುಕ್ಕಿ ಸೇರಿ 23 ಜನರ ಬಂಧನ ; ಬೆಳಗಾವಿ ಡಿಸಿಪಿ ನೇತೃತ್ವದಲ್ಲಿ ನಡೆದ ಮಿಂಚಿನ ಕಾರ್ಯಾಚರಣೆ

ಬೆಳಗಾವಿ ನಗರದಲ್ಲಿ ಮಟ್ಕಾ, ಜೂಜು ಹಾಗೂ ಮಾದಕ ವಸ್ತುಗಳ ಬಗ್ಗೆ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ. ಬೆಳಗಾವಿ ಮಹಾರಾಷ್ಟ್ರ, ಗೋವಾ ಗಡಿಗೆ ಹೊಂದಿಕೊಂಡಿದ್ದು, ಅನೇಕ ಸಲ ದೊಡ್ಡ ಪ್ರಮಾಣದಲ್ಲಿ ದಾಳಿಗಳು ನಡೆದಿವೆ

news18-kannada
Updated:September 23, 2020, 8:57 PM IST
ಕುಖ್ಯಾತ ಮಟ್ಕಾ ಬುಕ್ಕಿ ಸೇರಿ 23 ಜನರ ಬಂಧನ ; ಬೆಳಗಾವಿ ಡಿಸಿಪಿ ನೇತೃತ್ವದಲ್ಲಿ ನಡೆದ ಮಿಂಚಿನ ಕಾರ್ಯಾಚರಣೆ
ಮಟಕಾ ಬುಕ್ಕಿ ಹಾಗೂ ಪೋನ್​​ಗಳನ್ನು ವಶಪಡಿಸಿಕೊಂಡ ಪೊಲೀಸರು
  • Share this:
ಬೆಳಗಾವಿ(ಸೆಪ್ಟೆಂಬರ್. 23): ಬೆಳಗಾವಿಯಲ್ಲಿ ಡಿಸಿಪಿ ವಿಕ್ರಮ ಅಮಟೆ ನೇತೃತ್ವದಲ್ಲಿ ಪೊಲೀಸರು ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆಯಲ್ಲಿ ಕುಖ್ಯಾತ ಮಟ್ಕಾ ಬುಕ್ಕಿ ಸೇರಿ 23 ಜನರನ್ನು ಬಂಧಿಸಿದ್ದಾರೆ. ಡಿಸಿಪಿಯಾಗಿ ವಿಕ್ರಮ ಅಮಟೆ ಅಧಿಕಾರ ವಹಿಸಿಕೊಂಡ ಬಳಿಕ ದೊಡ್ಡ ಮಟ್ಟದಲ್ಲಿ ದಾಳಿಯನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಖಂಜರ್ ಗಲ್ಲಿಯಲ್ಲಿ ಮಹಮ್ಮದ್ ಶಫಿ ತಹಶೀಲ್ದಾರ್ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು. ಮಟ್ಕಾ ಅಂಕಿ ಸಂಖ್ಯೆಗಳ ಬಗ್ಗೆ ಸಾರ್ವಜನಿಕರಿಂದ ಬರೆಸಿಕೊಂಡ ಚೀಟಿಗಳು, ಇದಕ್ಕೆ ಉಪಯೋಗಿಸಿದ್ದ ಮೊಬೈಲ್ ಸೇರಿ ಅನೇಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದ ಮಹಮ್ಮದ್ ಶಫಿ ತಹಶೀಲ್ದಾರ್ ಜೊತೆಗೆ ಗುರುತಿಸಿಕೊಂಡು ನಗರದ ಅನೇಕ ಕಡೆಗಳಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ 22 ಜನರನ್ನು ಸಹ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಿಂದ 2.11 ಲಕ್ಷ ರೂ ಹಣ, 15 ಮೊಬೈಲ್ ಹಾಗೂ ಮಟ್ಕಾ ಚೀಟಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಬಗ್ಗೆ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣ ಬೆನ್ನತ್ತಿದ್ದ ಪೊಲೀಸರು ಅನೇಕ ಮಹತ್ವದ ಸುಳಿವು ಹಿಡಿದು ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದಾರೆ. ಬೆಳಗಾವಿ ನಗರಕ್ಕೆ ನೂತನವಾಗಿ ಡಿಸಿಪಿಯಾಗಿ ಅಧಿಕಾರ ವಹಿಸಿಕೊಂಡ ವಿಕ್ರಮ ಅಮಟೆ ನೇತೃತ್ವದಲ್ಲಿ ಮೊದಲ ದಾಳಿಯಾಗಿದೆ.

ಬೆಳಗಾವಿ ನಗರದಲ್ಲಿ ಮಟ್ಕಾ, ಜೂಜು ಹಾಗೂ ಮಾದಕ ವಸ್ತುಗಳ ಬಗ್ಗೆ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ. ಬೆಳಗಾವಿ ಮಹಾರಾಷ್ಟ್ರ, ಗೋವಾ ಗಡಿಗೆ ಹೊಂದಿಕೊಂಡಿದ್ದು, ಅನೇಕ ಸಲ ದೊಡ್ಡ ಪ್ರಮಾಣದಲ್ಲಿ ದಾಳಿಗಳು ನಡೆದಿವೆ. ಪೊಲೀಸರು ಇದೀಗ ಅಂತರಾಜ್ಯ ಅಕ್ರಮ ಚಟುವಟಿಕೆಯ ಮೇಲೆ ಹೆಚ್ಚಿನ ನಿಗಾವನ್ನು ವಹಿಸಿದ್ದಾರೆ.

ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ ಕಾಕತಿ ಪೊಲೀಸರು

ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಜೂನ್ 6ರಂದು ಯಲ್ಲಪಪ್ ಗೌಡನ್ನವರ್ ಎಂಬ ವ್ಯಕ್ತಿಯ ಮನೆ ಕಳ್ಳತನವಾಗಿತ್ತು. ಮನೆಯಲ್ಲಿ ಇದ್ದ ಆಭರಣ, ನಗದು ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಹಣವನ್ನು ಕಳ್ಳತನವನ್ನು ಮಾಡಲಾಗಿತ್ತು. ಈ ಬಗ್ಗೆ ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ : ಕೊನೆಗೂ ಬಗೆಹರಿದ ಬಂದ್ ಹೋರಾಟದ ಗೊಂದಲ : ಸಂಜೆ ವೇಳೆಗೆ ಎರಡು ಬಣದ ರೈತ ಸಂಘಗಳು ಒಮ್ಮತ ನಿರ್ಧಾರ

ಪ್ರಕರಣ ಬೆನ್ನತ್ತಿದ್ದ ಕಾಕತಿ ಪೊಲೀಸರು ಯಲ್ಲಪ್ಪಾ ನಾಯಕಿ(27) ಎಂಬ ಆರೋಪಿಯನ್ನು ಬಂಧಿಸಿದ್ದರು. ಆರೋಪಿಯಿಂದ 2.71 ಲಕ್ಷ ಮೌಲ್ಯದ ಆಭರಣ, ನಗದು ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಲಾಕ್ ಡೌನ್ ‌ನಿಂದ ಬೆಳಗಾವಿ ನಗರದಲ್ಲಿ ಮನೆಗಳ್ಳತನ ಪ್ರಕರಣ ಹೆಚ್ಚಾಗಿವೆ. ಇದರಿಂದ ಮನೆ ಮಾಲೀಕರು, ಪೊಲೀಸರಿಗೆ ದೊಡ್ಡ ತಲೆನೋವು ಆಗಿದೆ. ಹೀಗಾಗಿ ಪೊಲೀಸರು ಎಲ್ಲಾ ಕಡೆಗಳಲ್ಲಿ ಹದ್ದಿನ ಕಣ್ಣು ಇಟ್ಟಿದ್ದಾರೆ.‌ ಜತೆಗೆ ನಗರದಲ್ಲಿ ರಾತ್ರಿ ಗಸ್ತು ಸಂದರ್ಭದಲ್ಲಿ ಜಾಗೃತಿಯನ್ನು‌ ವಹಿಸಿದ್ದಾರೆ.
Published by: G Hareeshkumar
First published: September 23, 2020, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading