Belagavi Election| ಬೆಳಗಾವಿ ಪಾಲಿಕೆ ಫೈಟ್; ಪ್ರಚಾರದ ಅಖಾಡಕ್ಕೆ ಧುಮುಕಿದ ಘಟಾನುಘಟಿಗಳ ಏಟು-ತಿರುಗೇಟು

ಬಿಜೆಪಿ ಕೂಡ ಬಿರುಸಿನ ಪ್ರಚಾರ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಇಂದು ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.

ಬೆಳಗಾವಿ ಪಾಲಿಕೆ ಚುನಾವಣೆ ಪ್ರಚಾರ.

ಬೆಳಗಾವಿ ಪಾಲಿಕೆ ಚುನಾವಣೆ ಪ್ರಚಾರ.

  • Share this:
ಬೆಳಗಾವಿ (ಆಗಸ್ಟ್​ 30); ಸೆಪ್ಟೆಂಬರ್ 3ರಂದು ಬೆಳಗಾವಿ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಪ್ರಚಾರದ ಅಖಾಡಕ್ಕೆ ಎಂಟ್ರಿಕೊ ಟ್ಟಿದ್ದು ಪರಸ್ಪರ ಕೆಸೆರೆರಚಾಟದಲ್ಲಿ ತೊಡಗಿದ್ದಾರೆ. ಈ ಮಧ್ಯೆ AIMIM ನಾಯಕ ಓವೈಸಿ ಕೂಡ ಬೆಳಗಾವಿಗೆ ಬಂದಿದ್ದು ಚುನಾವಣೆ ಕಣ ಮತ್ತಷ್ಟು ರಂಗೇರುವಂತೆ ಮಾಡಿದೆ. ಪ್ರಚಾರದ ಅಖಾಡದಲ್ಲಿ ಏಟು, ಏದುರೇಟು ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರ ಕೈ ನಾಯಕರಾದ ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ. ಪಾಟೀಲ್ ಬಿರುಸಿನ ಪ್ರಚಾರ ನಡೆಸಿದ್ದರು. ವಾರ್ಡ್​ ನಂಬರ್ 32 ಅಭ್ಯರ್ಥಿ ಅನಂತಕುಮಾರ ಬ್ಯಾಕೂಡ ಪರ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಮಾಡಿದ್ದೇವೆ. ಪಕ್ಷದ ಅಧ್ಯಕ್ಷರು ಜನಪರ ಘೋಷಣೆ ಮಾಡಿದ್ದಾರೆ.

ವ್ಯಾಪಾರಸ್ಥರು, ತೆರಿಗೆ ರಿಯಾಯಿತಿ, ಕೋವಿಡ್ ಸಂದರ್ಭದಲ್ಲಿ ಪರಿಹಾರ ಒದಗಿಸುವುದು, ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸೇಠ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗ ಳನ್ನ ಜನರಿಗೆ ಹೇಳ್ತಿದಿವಿ ಎಂದರು. ಇನ್ನೂ 70 ವರ್ಷದಲ್ಲಿ ಕಾಂಗ್ರೆಸ್ ಏನೇ ಮಾಡಿದೆ ಎಂಬ ಕಾರಜೋಳ ಹೇಳಿಕೆಗೆ ಟಾಂಗ್ ನೀಡಿದ ಅವರು, ನಾವು ಗರಿಬೀ ಹಠಾವೋ ಮಾಡಿದ್ದೇವೆ. ಮೋದಿಯವರು ಕಾರ್ಖಾನೆಗಳನ್ನು ಹಠಾವೋ ಮಾಡಿದ್ದಾರೆ. ಏಳು ವರ್ಷದಲ್ಲಿ ಮೋದಿ  ಏನು ಮಾಡಿದ್ದಾರೆ ಎಂದು ಅವರ ಬಗ್ಗೆ ಪಕ್ಷದವರೇ ಟ್ವಿಟ್ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದರು.

ಇತ್ತ ಬಿಜೆಪಿ ಕೂಡ ಬಿರುಸಿನ ಪ್ರಚಾರ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಇಂದು ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.

ಇದನ್ನೂ ಓದಿ: Rakesh Tikait| ರೈತರ ಮೇಲೆ ಲಾಠಿಚಾರ್ಚ್ ಮಾಡಿದ ಅಧಿಕಾರಿ ಆಯುಷ್ ಸಿನ್ಹಾ ಸರ್ಕಾರಿ ತಾಲಿಬಾನ್​; ರಾಕೇಶ್ ಟಿಕಾಯತ್​ ಕಿಡಿ

ಇದೇ ವೇಳೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬೆಳಗಾವಿಯಲ್ಲಿ ಬಿಜೆಪಿ ಪರವಾದ ಅಲೆಯಿದ್ದು 45 ಸೀಟ್​ಗಳನ್ನ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕಟೀಲ್ ಕಾಂಗ್ರೆಸ್ ಜೀವಂತ ಇದ್ದವರನ್ನು ಬದುಕಲಿಕ್ಕೆ ಬಿಟ್ಟಿಲ್ಲ, ಸತ್ತವರನ್ನ ಶವ ಸಂಸ್ಕಾರ ಮಾಡಲು ಬಿಟ್ಟಿಲ್ಲ. ಸಂವಿಧಾನ ಶಿಲ್ಪಿ ಡಾ:ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಂತಿಮ ಸಂಸ್ಕಾರಕ್ಕೆ ದೆಹಲಿಯಲ್ಲೂ ಜಾಗ ಕೊಡಲಿಲ್ಲ, ಮುಂಬೈನಲ್ಲು ಜಾಗ ಕೊಡಲಿಲ್ಲ ಈ ಕುರಿತು ಮಾತನಾಡಲು ಕಾಂಗ್ರೆಸ್ ಗೆ ಮಾತನಾಡುವ ನೈತಿಕತೆಯಿಲ್ಲ ಎಂದರು.

ಇದನ್ನೂ ಓದಿ: Jacqueline Fernandez| ಮನಿ ಲಾಂಡರಿಂಗ್ ಪ್ರಕರಣ; ನಟಿ ಜಾಕ್ವೆಲಿನ್ ಫರ್ನಾಂಡೀಸ್​ರನ್ನು ಸಾಕ್ಷಿಯಾಗಿ ವಿಚಾರಣೆ

ಸುರೇಶ್ ಅಂಗಡಿ ಅಂತ್ಯಕ್ರಿಯೆಯಲ್ಲಿ ಸರಕಾರ ಅವಮಾನ ಮಾಡಿತು ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡದ ಅವರು ಡಿ.ಕೆ.ಶಿವಕುಮಾರ್ ಗೆ ಕಾನೂನಿನ ಬಗ್ಗೆ ಗೌರವವಿಲ್ಲ, ಹೀಗಾಗಿಯೇ ಅವರು ತಿಹಾರ ಜೈಲಿಗೆ ಹೋಗಿ ಬಂದರು ಎಂದಿದ್ದಾರೆ. ಕಾಂಗ್ರೆಸ್-ಬಿಜೆಪಿ ಹಾಗೂ ಎಂಇಎಸ್ ಗೆ ಸೆಡ್ಡು ಹೊಡೆದಿರುವ MIM ಅಭ್ಯರ್ಥಿಗಳ ಪರವಾಗಿ  ಅಸಾದುದ್ದಿನ್ ಓವೈಸಿ ಪ್ರಚಾರ ನಡೆಸಿದರು. 6 ವಾರ್ಡ್ ನಲ್ಲಿ ಎಂಐಎಂ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಓವೈಸಿಗೆ ಎಲ್ಲಾ ಕಡೆಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳು ನೂರಾರು ಜನ ಸೇರಿದ್ದರಿಂದ ನುಕುನುಗ್ಗಲು ಉಂಟಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: