ಬೆಳಗಾವಿ ಪಾಲಿಕೆ ಚುನಾವಣೆ; ಬಿಜೆಪಿ, ಜೆಡಿಎಸ್, ಎಎಪಿ, ಎಂಐಎಂ ಸ್ಪರ್ಧೆ ಬಗ್ಗೆ ಘೋಷಣೆ, ಗೊಂದಲದಲ್ಲಿ ಕಾಂಗ್ರೆಸ್!

ಭಾಷೆ ಆಧಾರದ ಮೇಲೆ ಚುನಾವಣೆ ನಡೆಯುವ ಏಕೈಕ ಮಹಾನಗರ ಪಾಲಿಕೆ ಬೆಳಗಾವಿ. ಕಳೆದ 25 ವರ್ಷಗಳಿಂದ ಯಾವುದೇ ರಾಜಕೀಯ ಪಕ್ಷಗಳು ಇಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಕೇವಲ ಮರಾಠಿ, ಕನ್ನಡ ಮತ್ತು ಉರ್ದು ಭಾಷೆಯ ಹೆಸರಿನಲ್ಲಿ ಚುನಾವಣೆ ನಡೆದಿದೆ.

ಬೆಳಗಾವಿ ಮಹಾನಗರ ಪಾಲಿಕೆ.

ಬೆಳಗಾವಿ ಮಹಾನಗರ ಪಾಲಿಕೆ.

  • Share this:
ಬೆಳಗಾವಿ (ಅಗಸ್ಟ್​ 19); ಕುಂದಾನಗರಿ ಬೆಳಗಾವಿ ‌ಮಹಾನಗರ ಪಾಲಿಕೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆ ರಂಗೇರಿದೆ. ಕೋವಿಡ್ ಮೂರನೇ ಅಲೆಯ ಭೀತಿಯ ನಡುವೆ ರಾಜಕೀಯ ಪಕ್ಷಗಳು ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿವೆ. ಮೂವತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ರಾಜಕೀಯ ಪಕ್ಷಗಳು ಸಿದ್ಧವಾಗಿವೆ. ಈಗಾಗಲೇ ಬಿಜೆಪಿ, ಜೆಡಿಎಸ್, ಎಎಪಿ ಹಾಗೂ ಎಂಐಎಂ ಪಕ್ಷಗಳು ಸ್ಪರ್ಧೆಯ ಬಗ್ಗೆ ನಿರ್ಧಾರ ಪ್ರಕಟ ಮಾಡಿವೆ. ಇನ್ನೂ ಎಂಇಎಸ್ ಸಹ ತಮ್ಮ ಅಭ್ಯರ್ಥಿಗಳನ್ನು ಪಕ್ಷೇತರರು ಎಂದು ಸ್ಪರ್ಧೆಗೆ ಇಳಿಸಲಿದೆ. ಆದರೇ ಕಾಂಗ್ರೆಸ್ ಪಕ್ಷ ಈವರೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕೆ ಬೇಡವೇ ಎನ್ನುವ ಗೊಂದಲದಲ್ಲಿ ಮುಳುಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸೆಪ್ಟೆಂಬರ್ ಮೂರಕ್ಕೆ ನಿಗಿದಿಯಾಗಿದೆ. ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲು ಆ,23 ಕೊನೆಯ‌ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರಕಾಗಿ ನಡೆಯುತ್ತಿದೆ. 58 ವಾರ್ಡ್ ಗಳಲ್ಲಿ ಆಕಾಂಕ್ಷಿಗಳು ಅನೇಕ ಲೆಕ್ಕಾಚಾರ ಹಾಕಿದ್ದಾರೆ. ಸ್ಥಳೀಯ ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ ನೇತೃತ್ವದಲ್ಲಿ  ಬಿಜೆಪಿ ಚುನಾವಣೆ ಎದುಸಲಿದೆ. ಬಹುತೇಕ ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದು, ನಾಳೆ, ನಾಡಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ.

ಹೊಸ ಹುಮ್ಮಸಿನಲ್ಲಿ ಇರೋ ಎಎಪಿ ಪಾರ್ಟಿ ದೆಹಲಿ ಬದಲಾ ಹೈ, ಬೆಳಗಾವಿ ಬದಲೇಂಗೆ ಎಂಬ ಘೋಷ ವ್ಯಾಕದೊಂದಿಗೆ ಚುನಾವಣೆಗೆ ಇಳಿದಿದೆ. ಈಗಾಗಲೇ 20 ವಾರ್ಡ್ ಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ನಡುವೆ ಬೆಳಗಾವಿಯಲ್ಲಿ ಇದೇ ತಿಂಗಳು 30ರಂದು ಸಭೆ ನಡೆಸಲು ಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಬೆಳಗಾವಿಗೆ ಆಗಮಿಸಲಿದ್ದಾರೆ. ಜೆಡಿಎಸ್ ಸಹ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ ಎಂದು ಘೋಷಣೆ ಮಾಡಿದೆ.‌

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮತ್ತೋರ್ವ ರಾಜಕೀಯ ಮುಖಂಡನ ಹತ್ಯೆ; ಕಳೆದ 12 ದಿನಗಳಲ್ಲಿ ಇದು 4 ನೇ ರಾಜಕೀಯ ಕೊಲೆ!

ಆದರೆ, ಕಾಂಗ್ರೆಸ್ ಪಕ್ಷ‌ ಮಾತ್ರ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇದ್ರು ಯಾವುದೇ ನಿರ್ಧಾರಕ್ಕೆ ಬಂದಿಲ್ಲ‌. ಇನ್ನೂ ಅಭ್ಯರ್ಥಿಗಳ ಆಯ್ಕೆ ಯಾವಾಗ, ಪ್ರಚಾರ ನಡೆಸುವುದು‌ ಹೇಗೆ ಎಂಬದ ಗೊಂದಲದಲ್ಲಿ ಕಾರ್ಯಕರ್ತರು ಇದ್ದಾರೆ.

ಭಾಷೆ ಆಧಾರದ ಮೇಲೆ ಚುನಾವಣೆ ನಡೆಯುವ ಏಕೈಕ ಮಹಾನಗರ ಪಾಲಿಕೆ ಬೆಳಗಾವಿ. ಕಳೆದ 25 ವರ್ಷಗಳಿಂದ ಯಾವುದೇ ರಾಜಕೀಯ ಪಕ್ಷಗಳು ಇಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. ಕೇವಲ ಮರಾಠಿ, ಕನ್ನಡ ಮತ್ತು ಉರ್ದು ಭಾಷೆಯ ಹೆಸರಿನಲ್ಲಿ ಚುನಾವಣೆ ನಡೆದಿದೆ. ಈ ಸಲ ಭಾಷೆ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ರಾಜಕೀಯ ಪಕ್ಷಗಳ ನಿರ್ಧಾರ ಮಾಡಿವೆ.

ಇದನ್ನೂ ಓದಿ: Afghanistan Crisis| ಹಾರುವ ವಿಮಾನದಿಂದ ಕೆಳಗೆ ಬಿದ್ದವರ ಶವ; ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆ!

ಬೆಳಗಾವಿ ಮಹಾನಗರ ಪಾಲಿಕೆ ನಗರಸಭೆಯಿಂದ ಮೇಲ್ದೆರ್ಜೆಗೆ ಏರಿದ್ದು 1984ರಲ್ಲಿ ಇದೇ ವೇಳೆಯಲ್ಲಿ ಕಾಂಗ್ರೆಸ್, ಜತನಾ ದಳ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕೆ ಆದರೇ ಕಾಂಗ್ರೆಸ್ ಒಬ್ಬರೇ ಪಾಲಿಕೆ ಸದಸ್ಯರು ಆಯ್ಕೆಯಾಗಿದ್ದರು. ವೈಯಕ್ತಿಕ ಪ್ರಭಾವದ ಮೇಲೆ ಸಿದ್ದನಗೌ ಪಾಟೀಲ್ ಒಬ್ಬರೇ ಆಯ್ಕೆಯಾಗಿದ್ದರು. ನಂತರ ಮತ್ತೊಮ್ಮೆ ಬಿಜೆಪಿ 52 ವಾರ್ಡ್ ನಲ್ಲಿ ಸ್ಪರ್ಧೆ ಮಾಡಿ ಮುಖಭಂಗ ಅನುಭವಿಸಿತ್ತು. ಕಾಂಗ್ರೆಸ್, ಬಿಜೆಪಿ ಜಗಳದಲ್ಲಿ ಎಂಇಎಸ್, ಶಿವಸೇನೆ ಅನಕೂಲ ಆಗೋ ಆತಂಕ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: