ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಣೆ; ಕೃಷಿ ಇಲಾಖೆ ನಿರ್ಲಕ್ಷ್ಯಕ್ಕೆ ಬೆಳಗಾವಿ ರೈತರು ಕಂಗಾಲು

ಕೊರೋನಾ ಆಘಾತದಿಂದ ಚೇತರಿಸಿಕೊಳ್ಳದ ರೈತಾಪಿ ವರ್ಗಕ್ಕೆ ಸೋಯಾಬಿನ್ ಬೀಜ ಮೊಳಕೆಯೊಡೆಯದೆ ಆತಂಕಕ್ಕೆ ಕಾರಣವಾಗಿದೆ . ಕೃಷಿ ಇಲಾಖೆ ಈ ಬಗ್ಗೆ ಗಮನಹರಿಸಿ ಈ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಉಪಾಯಗಳನ್ನ ಕಂಡುಕೊಳ್ಳಬೇಕಿದೆ .

ರೈತರಿಗೆ ನೀಡಲಾಗಿರುವ ಕಳಪೆ ಬಿತ್ತನೆ ಬೀಜ.

ರೈತರಿಗೆ ನೀಡಲಾಗಿರುವ ಕಳಪೆ ಬಿತ್ತನೆ ಬೀಜ.

  • Share this:
ಬೆಳಗಾವಿ; ಜಿಲ್ಲೆಯ ಹುಕ್ಕೇರಿ ಕೃಷಿ ಇಲಾಖೆ ಮುಂಗಾರು ಬಿತ್ತನೆಗೆ ಬೀಜ ವಿತರಣೆ ಮಾಡುತ್ತಿದೆ. ಆದರೆ, ರೈತರು ಕೃಷಿ ಇಲಾಖೆ ಕೇಂದ್ರದಿಂದ ರಿಯಾಯಿತಿ ದರದಲ್ಲಿ ಪಡೆದ ಸೋಯಾಬಿನ್ ಬೀಜ ಬಿತ್ತನೆ ಮಾಡಿ ಏಳು ದಿನಗಳು ಕಳೆದರು ಮೊಳಕೆಯೊಡೆಯದೆ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ .. ಮೇ ಕೊನೆಯ ವಾರದಲ್ಲಿ ಬೀತನೆ ಕಾರ್ಯ ಮಾಡಿರುವ ರೈತರು ಈಗ ಆತಂಕ ಎದುರಿಸುತ್ತಿದ್ದು , ಹುಕ್ಕೇರಿ ತಾಲೂಕಿನ ಬಹುತೇಕ ಗ್ರಾಮದ ರೈತರು ಕೃಷಿ ಇಲಾಖೆಯ ವಿತರಿಸಿರುವ ಸೋಯಾ ಬೀಜದ ಬಗ್ಗೆ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತ ಪಡೆಸುತ್ತಿದ್ದಾರೆ .

ಮುಂಗಾರು ಮಳೆಗೆ ಕೃಷಿ ಚಟುವಟಿಕೆಯಲ್ಲಿ ತೋಡಗಿದ ರೈತರು ರಿಯಾಯಿತಿ ದರದಲ್ಲಿ ಕೃಷಿ ಇಲಾಖೆ ವಿತರಿಸಿದ್ದ ಸೋಯಾ ಬೀಜವನ್ನ  ಮೂವತ್ತು ಕೆ.ಜಿಗೆ 1270 ರೂಪಾಯಿ ನೀಡಿ ಖರೀದಿಸಿ ಬಿತ್ತನೆ ಮಾಡಿದ್ದಾರೆ . ಆದರೆ ಸೋಯಾ ಬೀಜ ಮೊಳಕೆಯೊಡಿಯದೆ ರೈತರಿಗೆ ದಿಕ್ಕು ತೋಚದಂತಾಗಿದೆ . ಹುಕ್ಕೇರಿ ತಾಲೂಕಿನ ಬಹುತೇಕ ರೈತರಿಗೆ ಈ ಸೋಯಾ ಬೀಜದ  ಸಮಸ್ಯೆಯಾಗಿದೆ .ಕೆಲವು ರೈತರು ಈ ಬೀಜವನ್ನು ಕೃಷಿ ಇಲಾಖೆ ಕೇಂದ್ರಕ್ಕೆ  ವಾಪಸ್ ನೀಡುತ್ತಿದ್ದಾರೆ .

ಕಳೆದ ಬಾರಿ ಪ್ರವಾಹ ಹಾಗೂ ಅತಿಯಾದ ಮಳೆಗೆ ಸೋಯಾಬಿನ್ ಬೆಳೆ ಸಂಪೂರ್ಣ ಹಾಳಾಗಿ ಹೋಗಿತ್ತು , ಈ ಬಾರಿ ಕೊರೋನಾ ಲಾಕ್‌ಡೌನ್‌ನಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದ ರೈತರು ಈಗ ಮುಂಗಾರು ಆರಂಭದಲ್ಲಿ ಸೋಯಾಬಿನ್ ಹತ್ತಾರು ಕೂಲಿಯವರನ್ನ ಹೇಳಿ ಬೀಜ ಖರಿದಿಸಿ ಸೂಮಾರು ಪ್ರತಿ ಎಕರೆಗೆ 20 ಸಾವಿರ ಹಣ ಖರ್ಚು ಮಾಡಿ ಬೆಳೆ ಬಿತ್ತನೆ ಮಾಡಿದ್ದು, ಸೋಯಾಬಿನ್ ಬಿಜ ಕಳೆಪ ಗುಣಮಟ್ಟದ ಪೂರೈಕೆಯಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ .

ಒಟ್ಟಿನಲ್ಲಿ ಕೊರೋನಾ ಆಘಾತದಿಂದ ಚೇತರಿಸಿಕೊಳ್ಳದ ರೈತಾಪಿ ವರ್ಗಕ್ಕೆ ಸೋಯಾಬಿನ್ ಬೀಜ ಮೊಳಕೆಯೊಡೆಯದೆ ಆತಂಕಕ್ಕೆ ಕಾರಣವಾಗಿದೆ . ಕೃಷಿ ಇಲಾಖೆ ಈ ಬಗ್ಗೆ ಗಮನಹರಿಸಿ ಈ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಉಪಾಯಗಳನ್ನ ಕಂಡುಕೊಳ್ಳಬೇಕಿದೆ .

ಇದನ್ನೂ ಓದಿ : ಸಂಸದರ ನಿಧಿಯನ್ನು ವಲಸೆ ಕಾರ್ಮಿಕರ ಖಾತೆಗಳಿಗೆ ವರ್ಗಾಯಿಸಿ, ಆಂಫಾನ್ ಪರಿಹಾರ ನೀಡಿ; ಕೇಂದ್ರಕ್ಕೆ ಬಂಗಾಳದ ಒತ್ತಾಯ
First published: