HOME » NEWS » District » BELGAUM A SUCCESSFUL FARMER GROWING A STRAWBERRY CROP IN A DRY LAND MAK

ಬೆಳಗಾವಿ: ಒಣ ಭೂಮಿ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆ ಬೆಳೆದು ಯಶಸ್ಸು ಕಂಡ ರೈತ

ರೈತ ರಮೇಶ ತನ್ನ ಜಮೀನಿನಲ್ಲಿ ಮಹಾಬಲೇಶ್ವರದಿಂದ ಸಸಿಗಳನ್ನ ತಂದು ನಾಟಿ ಮಾಡಿದ್ದು ಇಂದು ಸ್ಟ್ರಾಬೆರಿ ಹಣ್ಣುಗಳಾಗುತ್ತಿವೆ. ನಿತ್ಯ ನಲವತ್ತರಿಂದ ಐವತ್ತು ಕೆ.ಜಿ ಯಷ್ಟು ಹಣ್ಣು ಮಾರುಕಟ್ಟೆಗೆ ಹೊಗುತ್ತಿದೆ.

news18-kannada
Updated:February 16, 2021, 3:26 PM IST
ಬೆಳಗಾವಿ: ಒಣ ಭೂಮಿ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆ ಬೆಳೆದು ಯಶಸ್ಸು ಕಂಡ ರೈತ
ಸ್ಟ್ರಾಬೆರಿ ಬೆಳೆದಿರುವ ರೈತ.
  • Share this:
ಬೆಳಗಾವಿ: ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನ ಮಾಡಿ ಕೈ ಸುಟ್ಟುಕೊಂಡವರೆ ಹೆಚ್ಚು. ಆದರೆ ಇಲ್ಲೊಬ್ಬ ಯುವ ರೈತ ಕೇವಲ ತಂಪು ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ ಎನ್ನುವ ಸ್ಟ್ರಾಬೆರಿ  ಬೆಳೆಯನ್ನು ಬೆಳೆದು ಯಶಸ್ಸು ಕಂಡಿದ್ದಾನೆ. ಸ್ಟ್ರಾಬೆರಿ ಬೆಳೆಯ ಹೊಸ ಪ್ರಯೋಗದಲ್ಲಿ ಯಶಸ್ಸು ಕಂಡಿರುವ ರೈತ ಯಾರು ಅಂತಿರಾ ಹಾಗಾದರೇ ಈ ಸ್ಟೋರಿ ಓದಿ. ಒಣ ಪ್ರದೇಶದ ಕಪ್ಪು ಭೂಮಿಯಲ್ಲಿ ಕಲರಪುಲ್ ಆಗಿ ಕೆಂಪು ಹಣ್ಣುಗಳು, ಸಾಲು ಸಾಲು ಕಾಣುತ್ತಿರುವ ಸ್ಟ್ರಾಬೆರಿ ಬೆಳೆ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಸೋಶಿ ಗ್ರಾಮದ ರಮೇಶ ಖಾನಾಪುರೆ ಎಂಬ ರೈತನ ಹೊಲದಲ್ಲಿ. ಸ್ಟ್ರಾಬೆರಿ ಬೆಳೆ ಇದು ಕೇವಲ ಮಹಾಬಲೇಶ್ವರದಲ್ಲಿ ಬೆಳೆಯುವ ಮಾತ್ರ ಬೆಳೆಯುವ ಬೆಳೆ ಎಂದು ತಿಳಿದಿರುವ ರೈತರಿಗೆ ಇದು ಎಲ್ಲಿ ಬೇಕಾದರೂ ಬೆಳೆಯಬಹುದು ಎಂದು ಈ ರೈತ ತೋರಿಸಿ ಕೊಟ್ಟಿದ್ದಾನೆ.

ರೈತ ರಮೇಶ ತನ್ನ ಜಮೀನಿನಲ್ಲಿ ಮಹಾಬಲೇಶ್ವರದಿಂದ ಸಸಿಗಳನ್ನ ತಂದು ನಾಟಿ ಮಾಡಿದ್ದು ಇಂದು ಸ್ಟ್ರಾಬೆರಿ ಹಣ್ಣುಗಳಾಗುತ್ತಿವೆ. ನಿತ್ಯ ನಲವತ್ತರಿಂದ ಐವತ್ತು ಕೆ.ಜಿ ಯಷ್ಟು ಹಣ್ಣು ಮಾರುಕಟ್ಟೆಗೆ ಹೊಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಸ್ಟ್ರಾಬೆರಿ ಹಣ್ಣಿಗೆ ಬಾರಿ ಡಿಮಾಂಡ್ ಕೂಡ ಇದೆ ಸಧ್ಯ ಒಂದು ಕೆಜಿಗೆ ಕಡಿಮೆ ಎಂದು ಎರಡನೂರು ರೂಪಾಯಿ ಸಿಗುತ್ತದೆ ಎನ್ನುತ್ತಾರೆ ರೈತ ರಮೇಶ .

ಇನ್ನೂ ರಮೇಶನ ಈ ಸಾಧನೆಗೆ ಕುಟುಂಬಸ್ಥರು ಸಾಥ್ ನೀಡಿದ್ದು. ಜೊತೆಗೆ ನಾಲ್ಕು ಜನರಿಗೆ ಕೆಲಸನು ನೀಡುತ್ತಿದ್ದಾನೆ. ಸ್ಟ್ರಾಬೆರಿ ಹಣ್ಣುಗಳನ್ನು ಹರಿದು ಬಾಕ್ಸ್ ಮಾಡಲು ಕೆಲಸಗಾರರು ನಿತ್ಯದ ಕೆಲಸವಾಗಿದೆ. ಬರಿ ತಾನು ಮಾತ್ರ ಕೆಲಸ ಮಾಡದೆ ರಮೇಶ್ ಇತರ ನಾಲಕ್ಉ ಜನರಿಗೂ ಉದ್ಯೋಗ ಕಲ್ಪಿಸಿ ಸ್ಟ್ರಾಬೆರಿ ಬೆಳೆ ಬೆಳೆಯಲು ಇಚ್ಚಿರಿಸುವ ಯುವಕರಿಗೂ ತರಬೇತಿ ನೀಡಿ ಬೆಳೆಯ ಮಾಹಿತಿಯನ್ನು ನೀಡುತ್ತ ಬಂದಿದ್ದಾರೆ.

ಇದನ್ನೂ ಓದಿ : Gorilla Glue Challenge: ಮುಖಕ್ಕೆ ಕಪ್ ಅಂಟಿಸಿಕೊಂಡು ಎಡವಟ್ಟು ಮಾಡಿಕೊಂಡ ಭೂಪ..!

ಸಾಮಾನ್ಯವಾಗಿ ಕಾಡು ಅತಿ ಹೆಚ್ಚಿನ ಮಳೆ ಇರುವ ಪ್ರದೇಶಗಳಲ್ಲಿ ಮಾತ್ರ ಈ ಬೆಳೆಯನ್ನ ಬೆಳೆಯುತ್ತಾರೆ ಆದ್ರೆ ರಮೇಶ್ ಒನ ಭೂಮಿಯ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆ ಬೆಳೆದು ಎಲ್ಲರೂ ಇತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಸುಮಾರು ಹದಿನಾಲ್ಕು ಸಾವಿರ ಸಸಿಗಳನ್ನು ರಮೇಶ್ ತಮ್ಮ ಜಮೀನಿನಲ್ಲಿ ನೆಟ್ಟಿದ್ದಾರೆ.  ಇಲ್ಲಿ ಸ್ಟ್ರಾಬೆರಿ ಬೆಳೆಯಲ್ಲ ಎಂದು ಹೇಳತ್ತಿದ್ದರು ಆದರೆ ನನ್ನ ಮಗ ದೈರ್ಯದಿಂದ ಸ್ಟ್ರಾಬೆರಿ ಬೆಳೆದು ಯಶಸ್ಸು ಕಂಡಿದ್ದಾನೆ ಎಂದು ರಮೇಶನ ತಾಯಿ ಗಂಗವ್ವಾ ಸಂತಸ ವ್ಯಕ್ತ ಪಡಿಸಿದ್ದಾರೆ.

ಒಟ್ಟಿನಲ್ಲಿ ನೀಡಸೋಶಿಯ ರೈತ ರಮೇಶ ಖಾನಾಪುರೆ ಸಾಧನೆ ಇನ್ನುಳಿದ ರೈತರಿಗೆ ಮಾದರಿಯಾಗಿದೆ‌ . ಶ್ರಮ ಹಾಗೂ ಸತತ ಪ್ರಯತ್ನದಿಂದ ಕೃಷಿಯಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಈ ರೈತ ಸ್ಟ್ರಾಬೆರಿ ಎಂಬ ವಾಣಿಜ್ಯ ಬೆಳೆಯನ್ನ ಬೆಳೆಯುವ ಮೂಲಕ ತೋರಿಸಿಕೊಟ್ಟಿದ್ದು ಜೊತೆಗೆ ಸಾಧನೆ ಮಾಡುವದರ ಜೊತೆಗೆ ಬೇರೆ ಯುವಕರಿಗೂ ಮಾದರಿಯಾಗಿದ್ದಾನೆ.
Published by: MAshok Kumar
First published: February 16, 2021, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories