HOME » NEWS » District » BELAGAVI SUVARNA SOUDHA COLOUR TURNED GREEN HK

ಹಸಿರು ಬಣ್ಣಕ್ಕೆ ತಿರುಗಿದ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ; ನಿರ್ವಹಣೆ ಇಲ್ಲದೇ ಸೊರಗಿದ ಸುವರ್ಣಸೌಧ

ನಗರದಲ್ಲಿರುವ 23 ಜಿಲ್ಲಾ ಕಚೇರಿಗಳು ಸುವರ್ಣ ಸೌಧಕ್ಕೆ ಸ್ಥಳಾತರಿಸಬೇಕಿದೆ. ಮುಖ್ಯ ಇಲಾಖೆ ಸ್ಥಳಾಂತರಕ್ಕೆ ಸರಕಾರ ಅನುಮತಿ ನೀಡಿದೆ ಕೊವೀಡ್ ನಿಯಂತ್ರಣದಿಂದ ಜಿಲ್ಲಾಮಟ್ಟದ ಕಚೇರಿಗಳ ಸ್ಥಳಾಂತರಗೊಳ್ಳದೆ ನೆನಗುದಿಗೆ ಬಿದ್ದಿವೆ.

news18-kannada
Updated:September 6, 2020, 3:17 PM IST
ಹಸಿರು ಬಣ್ಣಕ್ಕೆ ತಿರುಗಿದ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ; ನಿರ್ವಹಣೆ ಇಲ್ಲದೇ ಸೊರಗಿದ ಸುವರ್ಣಸೌಧ
ಬೆಳಗಾವಿ ಸುವರ್ಣ ಸೌಧ
  • Share this:
ಬೆಳಗಾವಿ(ಸೆಪ್ಟೆಂಬರ್.06): ಬೆಳಗಾವಿಯಲ್ಲಿ ನಿರ್ಮಾಣವಾಗಿರುವ ಭವ್ಯ ಸೌಧ, ಉತ್ತರ ಕರ್ನಾಟಕದ ಜನರ ಆಶೋತ್ತರಗಳಿಗೆ ಸ್ಪಂಧಿಸುವ ಶಕ್ತಿ ಕೇಂದ್ರವಾಗಬೇಕಿತ್ತು. ಆದರೆ, ನಿರ್ಮಾಣವಾಗಿ ಒಂದು ದಶಕ ಕಳೆದರು ಇದು ಸಾಧ್ಯವಾಗಿಲ್ಲ. ಇದೀಗ ಸೌಧದ ನಿರ್ವಹಣೆಯೂ ಸಾಧ್ಯವಾಗುತ್ತಿಲ್ಲ. ಸೌಧ  ಮಳೆಯಿಂದ ಪಾಚಿಕಟ್ಟಿದ್ದು, ಹಸಿರು ಬಣಕ್ಕೆ ತಿರುಗಿದೆ. ನಿರ್ವಹಣೆ ಬಗ್ಗೆ ಗಮನ ಹರಿಸದ ಸರ್ಕಾರದ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುವರ್ಣ ಸೌಧ ಸಂಪೂರ್ಣವಾಗಿ ಕಂದು ಬಣ್ಣಕ್ಕೆ ತಿರುಗಿದೆ. ನಿರಂತರ ಮಳೆಯಿಂದ ಸೌಧದ ಕಂಬಗಳು, ಹೊರಗೊಡೆ, ಧ್ವಜಸ್ತಂಭಗಳಲ್ಲಿ ಪಾಚಿ ಬೆಳೆದಿದೆ. ಇದರಿಂದ ಸುವರ್ಣ ಸೌಧ ಸೌಂದರ್ಯ ಕಳೆದುಕೊಂಡಿದೆ. ಐದನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡು, ಕನ್ನಡಿಗರ ಕೇಂದ್ರ ಬಿಂದುವಾಗಿರುವ ಸೌಧದ ಆಕೃತಿ ಸದ್ಯ ಬದಲಾಗಿದೆ. ವರ್ಷದಲ್ಲಿ ಒಂದು ಬಾರಿಯಾದರೂ ಅಧಿವೇಶನ ನಡೆಬೇಕೆಂಬ ಉತ್ತರ ಕರ್ನಾಟಕ ರೈತರ ಕೂಗು ಇದೆ. ಸರಕಾರ ವಿವಿಧ ಕಾರಣಾತರಗಳಿಂದ ರಾಜದಾನಿಯಲ್ಲಿ ಅಧಿವೇಶನ ನಡೆಸಲಾಗುತ್ತಿದೆ. ವಿವಿಧ ಚಟುವಟಿಕೆಗಳ ಇಲ್ಲದೇ ಸಧ್ಯ ಸುವರ್ಣ ಸೌಧ ಭೂತ ಭಂಗಲೆಯಂತಾಗಿದೆ.

ಸೌಧದ ನಿರ್ವಹಣೆಯಲ್ಲಿ ಸರಕಾರ ಹಿನ್ನಡೆ ಸಾಧಿಸಿದರೇ ಉತ್ತರ ಕರ್ನಾಟಕ ಅಭಿವೃದ್ಧಿಯನ್ನು ಹೇಗೆ ಮಾಡಲು ಸಾಧ್ಯ ಎಂದು ನಾಗರೀಕರ ಪ್ರಶ್ನೆಯಾಗಿದೆ. ಸೌಧ ಶುಚಿತ್ವ ಇಲ್ಲದೇ ಮೇಲ್ಮಹಡಿಗಳಂತೂ ಧೂಳಿನಿಂದ ಕೂಡಿದೆ. ಜನರ ಚಲನ-ವಲನ ಇಲ್ಲದರಿಂದ ಮೇಲ್ಮಹಡಿಯಲ್ಲಿ ಕೀಟಗಳು ಆಕೃತಿಯೇ ಬದಲಾಗುತ್ತಿವೆ. ಪ್ರತಿ ಮೂಲೆಗಳೆಲ್ಲ ಜೇಡನ ತಾಣವಾಗುತ್ತಿವೆ.  ಕೋಟ್ಯಾಂತರ ಸೌದಕ್ಕೆ ಈಗಾಗಲೇ ಎರಡು ಬಾರಿ ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ನಿರ್ವಹಣೆಗಾಗಿ 3 ಕೋಟಿ ರೂಪಾಯಿ ಖರ್ಚು ಮಾಡಿದೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸೌಧ ಕಳೆಗುಂದಿದೆ ಎನ್ನಲಾಗಿದೆ.

ನಗರದಲ್ಲಿರುವ 23 ಜಿಲ್ಲಾ ಕಚೇರಿಗಳು ಸೌಧಕ್ಕೆ ಸ್ಥಳಾತರಿಸಬೇಕಿದೆ. ಮುಖ್ಯ ಇಲಾಖೆ ಸ್ಥಳಾಂತರಕ್ಕೆ ಸರಕಾರ ಅನುಮತಿ ನೀಡಿದೆ ಕೊವೀಡ್ ನಿಯಂತ್ರಣದಿಂದ ಜಿಲ್ಲಾಮಟ್ಟದ ಕಚೇರಿಗಳ ಸ್ಥಳಾಂತರಗೊಳ್ಳದೆ ನೆನಗುದಿಗೆ ಬಿದ್ದಿವೆ.

ಇದನ್ನೂ ಓದಿ : ಡ್ರಗ್ಸ್ ಮೂಲ ಎಲ್ಲಿ ಎಂದು ನನಗೆ ಗೊತ್ತಿದೆ - ಶಾಸಕ ಶಿವಲಿಂಗೇಗೌಡ ಸ್ಪೋಟಕ ಹೇಳಿಕೆ

ಕಳೆದ ಎರಡು ವರ್ಷಗಳಿಂದ ಸುವರ್ಣಸೌಧದಲ್ಲಿ ಅಧಿವೇಶನ ಕೈಗೊಂಡಿಲ್ಲ, 15 ದಿನಕ್ಕೊಮ್ಮೆ ಹಾಗೂ ತಿಂಗಳಿಗೊಮ್ಮೆ ಸಂಪುಟ ಸಭೆ ನಡೆಯಬೇಕಿದೆ. ರಾಜ್ಯ, ಜಿಲ್ಲಾ ಇಲಾಖೆಗಳ ಕಾರ್ಯಚಟುವಟಿಕೆಗಳು ನಿತ್ಯವೂ ಇದ್ದರೆ ಸೌಧದ ರಾಜವೈಭದಂತೆ ಕಂಗೋಳಿಸುತ್ತಿತ್ತು ಅಧಿಕಾರಿಗಳು ಹಾಗೂ ಸರಕಾರ  ನಿರ್ಲಕ್ಷ್ಯದಿಂದ ಸೌಧ ಈ ಸ್ಥಿತಿಯಲ್ಲಿ ಇದೆ.

ಪ್ರವಾಹ, ಕೊರೋನಾ ವೈರಸ್ ಹಾವಳಿ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯಬೇಕಿದ್ದ ಅಧಿವೇಶನವನ್ನು ಬೆಂಗಳೂರಿಗೆ ಶೀಫ್ಟ್ ಮಾಡಲಾಗಿದೆ. ಆದರೆ, ಸುವರ್ಣ ಸೌಧವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು, ಜತೆಗೆ ಸುವರ್ಣ ಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
Published by: G Hareeshkumar
First published: September 6, 2020, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories