ಬೆಳಗಾವಿ (ಮೇ, 28); ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಸದ್ಯ ಗ್ರಾಮೀಣ ಪ್ರದೇಶದ ಜನರನ್ನು ಹೆಚ್ಚಾಗಿ ಕಾಡುತ್ತಿದೆ. ಈ ನಡುವೆ ಗ್ರಾಮೀಣ ಪ್ರದೇಶದಲ್ಲಿವೈದ್ಯಕೀಯ ಸೌಲಭ್ಯ ಇಲ್ಲದೇ ನಗರದಲ್ಲಿ ಇರೋ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಜನ ದಾಖಲಾಗುತ್ತಿದ್ದಾರೆ. ಈ ನಡುವೆ ಕಬ್ಬು ಬೆಳಗಾರರ ನೆರವಿಗೆ ಬರಬೇಕಿದ್ದ ಕಾರ್ಖಾನೆಗಳು ಮೌನ ವಹಿಸಿದ್ದು ಆಕ್ರೊಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 64 ಸಕ್ಕರೆ ಕಾರ್ಖಾನೆಗಳು ಕೋಟಿ ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿವೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಈ ವರ್ಷ ಮಾರ್ಚ್ ನಲ್ಲಿ ಕಬ್ಬು ನುರಿಸುವ ಹಂಗಾಮು ಮುಕ್ತಾಯಗೊಂಡಿದೆ. ರೈತ ಕಾರ್ಖಾನೆಗೆ ಕಬ್ಬು ಬಳುಹಿಸಿದ 14 ದಿನಲ್ಲಿ ಬಿಲ್ ಪಾವತಿ ಮಾಡಬೇಕು ಎನ್ನುವ ನಿಯಮ ಇದೆ.
ಆದರೇ ರಾಜ್ಯದ ಯಾವುದೇ ಕಾರ್ಖಾನೆಗಳು ಈ ನಿಯಮವನ್ನು ಪಾಲನೆ ಮಾಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಹ ಪ್ರಭಾವಿ ಸಚಿವರು ಹಾಗೂ ಶಾಸಕರು ಎನ್ನುವುದು ಆಗಿದೆ. ಇನ್ನೂ ಸದ್ಯ ರೈತರು ಕೋವಿಡ್ ಕಾರಣದಿಂದ ಸಂಕಷ್ಟದಲ್ಲಿ ಇದ್ದಾರೆ ಇಂತಹ ಸಂದರ್ಭದಲ್ಲಿ ಕಾರ್ಖಾನೆ ಮಾಲೀಕರು ನೇರವಿಗೆ ಬರಬೇಕಿತ್ತು. ಆದರೇ ಯಾವೊಬ್ಬ ಕಾರ್ಖಾನೆ ಮಾಲೀಕರು ರೈತರ ಬಾಕಿ ಹಣ ನೀಡಲ್ಲ. ಸರ್ಕಾರ ಅನೇಕ ಸಂದರ್ಭದಲ್ಲಿ ಈ ಬಗ್ಗೆ ಸೂಚನೆ ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ.
ರಾಜ್ಯದಲ್ಲಿ 64 ಸಕ್ಕರೆ ಕಾರ್ಖಾನೆಗಳು 4.40ಕೋಟಿ ಮೆಟ್ರಿಕ್ ಟನ್ ಕಬ್ಬು ಕ್ರಶಿಂಗ್ ಮಾಡಿದ್ದು. ಕಾರ್ಖಾನೆಗಳು 42.94 ಲಕ್ಷ ಮೆಟ್ರಿಕ್ ಟನ್ ರಾಜ್ಯದಲ್ಲಿ ಸಕ್ಕರೆ ಉತ್ಪಾದನೆ ಮಾಡಿವೆ. ಕಾರ್ಖಾನೆಗಳು ರೈತರು 1324 ಕೋಟಿ ರೂಪಾಯಿ ಕಬ್ಬಿನ ಬಾಕಿ ಉಳಿಸಿಕೊಂಡಿವೆ. 2019-20ನೇ ಸಾಲಿನ ಕಬ್ಬಿನ 2ನೇ ಕಂತಿನ ಹಣ ಸಹ ಕಾರ್ಖಾನೆಗಳು ಇನ್ನೂ ನೀಡಿಲ್ಲ. ಈ ಬಗ್ಗೆ ಅನೇಕರು ರೈತರು ಕಾರ್ಖಾನೆಗಳು ಹಣ ನೀಡಿಲ್ಲ ಎಂದು ದೂರಿವೆ.
ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕ ಸಂದರ್ಭದಲ್ಲಿ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಸಚಿವರು, ಶಾಸಕರು ಹಾಗೂ ಪ್ರಭಾವಿಗಳ ಮಾಲೀಕತ್ವದ ಕಾರ್ಖಾನೆಗಳಿಂದಲೇ 491 ಕೋಟಿ ರೂಪಾಯಿ ಹಣ ಬಾಕಿ ಉಳಿದಿದೆ. ರೈತ ಮುಖಂಡ ಚುನ್ನಪ್ಪ ಪೂಜಾರಿ ಈ ಬಗ್ಗೆ ಮಾತನಾಡಿದ್ದು. ತಕ್ಷಣ ಕಾರ್ಖಾನೆ ಮಾಲೀಕರು ಬಾಕಿ ಹಣವನ್ನು ಪಾವತಿ ಮಾಡಬೇಕು. ರೈತರ ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಈ ಸಲ ಸೋಂಕಿನ ಭೀತಿ ಹೆಚ್ಚಾಗಿ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರೈತರ ಬಾಕಿ ಹಣ ಪಾವತಿ ಬಗ್ಗೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಕಾರ್ಖಾನೆಗಳು ತಕ್ಷಣ ರೈತರ ಬಾಕಿ ಹಣವನ್ನು ಪಾವತಿ ಮಾಡಬೇಕು. ತಕ್ಷಣಕ್ಕೆ ಈ ಎಲ್ಲಾ ಕಾರ್ಖಾನೆ ಗಳಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ