ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬೆಳಗಾವಿಯ ವಿದ್ವಾಂಸರಿಂದ ಮೂಹೂರ್ತ ನಿಗದಿ

ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆದರೆ ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ನಾನು ಹೋಗುತ್ತಿಲ್ಲ. ಆಗಸ್ಟ್​ 5ರಂದು ರಾಘವೇಂದ್ರ ನವ ವೃಂದಾವನದಲ್ಲಿಯೇ ಅನುಷ್ಠಾನ ಮಾಡುವ ಮೂಲಕ ಶುಭ ಕೋರುತ್ತೇನೆ ಎಂದು ವಿದ್ವಾಂಸ ಶರ್ಮಾ ಹೇಳಿದ್ದಾರೆ.

news18-kannada
Updated:July 28, 2020, 2:56 PM IST
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬೆಳಗಾವಿಯ ವಿದ್ವಾಂಸರಿಂದ ಮೂಹೂರ್ತ ನಿಗದಿ
ವಿದ್ವಾಂಸರು
  • Share this:
ಬೆಳಗಾವಿ(ಜು.28): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎನ್ನವುದು ಶತಮಾನಗಳ ಹೋರಾಟವಾಗಿದೆ. ಇದೀಗ ಎಲ್ಲಾ ಅಡೆತಡೆಗಳು ಕೊನೆಗಂಡು ರಾಮಮಂದಿರ ಶಿಲಾನ್ಯಾಸಕ್ಕೆ ದಿನಾಂಕ ಸಹ ನಿಗದಿಯಾಗಿದೆ. ಇದೇ ಮೂಹೂರ್ತದಲ್ಲಿ ಶಿಲಾನ್ಯಾಸ ಮಾಡಬೇಕು ಎಂದು ಬೆಳಗಾವಿಯ ವಿದ್ವಾಂಸರೊಬ್ಬರು ಮೂಹೂರ್ತ ನಿಗದಿಪಡಿಸಿದ್ದಾರೆ.

ಆಗಸ್ಟ್​ 5ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ದೇಶದ ರಾಜಕೀಯ, ಧಾರ್ಮಿಕ ಗಣ್ಯರು ಹಾಗೂ ರಾಮನ ಭಕ್ತರು ಸಹ ಪಾಲ್ಗೊಳ್ಳಲಿದ್ದಾರೆ. ಶಿಲಾನ್ಯಾಸ ಕಾರ್ಯಕ್ರಮ ಇದೇ ಸಮಯದಲ್ಲಿ ನಡೆಯಬೇಕು ಎಂದು ಬೆಳಗಾವಿಯ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿ ಹಾಗೂ ರಾಘವೇಂದ್ರ ಸ್ವಾಮಿಗಳ ನವ ವೃಂದಾವನದ ವಿದ್ವಾಂಸ ಎನ್ ಆರ್ ವಿಜಯೇಂದ್ರ ಶರ್ಮಾ ದಿನಾಂಕವನ್ನು ಸೂಚನೆ ಮಾಡಿದ್ದಾರೆ.

Rajasthan Political Crisis: ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ಗೆ ಪಾಠ ಕಲಿಸಲು ಬಿಎಸ್‌ಪಿಗೆ ಇದು ಸಕಾಲ; ಮಾಯಾವತಿ ಆಕ್ರೋಶ

ಹರಿದ್ವಾರದ ಭಾರತಮಾತಾ ಮಂದಿರದ ಗೋವಿಂದದೇವಗಿರಿ ಮಹಾರಾಜರ ಮೂಲಕ ರಾಮ ಮಂದರಿ ಟ್ರಸ್ಟ್  ಎನ್ ಆರ್ ವಿಜಯೇಂದ್ರ ಶರ್ಮಾ ಅವರನ್ನು ಸಂಪರ್ಕ ಮಾಡಿದೆ. ಒಟ್ಟು ನಾಲ್ಕು ಶುಭ ದಿನಾಂಕಗಳನ್ನು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ  ಶರ್ಮಾ ಅವರು ಸೂಚಿಸಿದ್ದಾರೆ. ಈ ಪೈಕಿ ಆಗಸ್ಟ್​​ ತಿಂಗಳ 5 ನೇ ತಾರೀಖನ್ನು ಟ್ರಸ್ಟ್ ಆಯ್ಕೆ ಮಾಡಿಕೊಂಡು ಇದಕ್ಕಾಗಿ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡದ ಜತೆಗೆ ಬೆಳಗಾವಿಯಲ್ಲಿ ಮಾತನಾಡಿದ ವಿದ್ವಾಂಸ ಎನ್ ಆರ್ ವಿಜಯೇಂದ್ರ ಶರ್ಮಾ, ನಮ್ಮ ಶಾಸ್ತ್ರಗಳಲ್ಲಿ ದೀಪಾವಳಿ, ಯುಗಾದಿ, ವಿಜಯ ದಶಮಿ ಶೇಷ್ಠವಾಗಿದೆ. ಮೂಹೂರ್ತ ನಿಗದಿ ಮಾಡುವ ಬಗ್ಗೆ ಅನೇಕ ನಿಬಂಧನೆಗಳು ಇವೆ. ನಾನು ಕೊಟ್ಟ ದಿನಾಂಕವನ್ನು ಪರಿಗಣನೆ ಮಾಡಿದ್ದು ಹೆಮ್ಮೆ. ರಾಮ ಮಂದಿರ ನಿರ್ಮಾಣದ ಹಿಂದೆ ದೊಡ್ಡ ಇತಿಹಾಸವಿದೆ ಎಂದರು.

ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆದರೆ ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ನಾನು ಹೋಗುತ್ತಿಲ್ಲ. ಆಗಸ್ಟ್​ 5ರಂದು ರಾಘವೇಂದ್ರ ನವ ವೃಂದಾವನದಲ್ಲಿಯೇ ಅನುಷ್ಠಾನ ಮಾಡುವ ಮೂಲಕ ಶುಭ ಕೋರುತ್ತೇನೆ ಎಂದು ವಿದ್ವಾಂಸ ಶರ್ಮಾ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸದ ದಿನಾಂಕ ಅಷ್ಟೇ ಅಲ್ಲ, ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪ್ರಮಾಣ ವಚನ ಸ್ವೀಕಾರಕ್ಕೂ ಶರ್ಮಾ ದಿನಾಂಕ ನಿಗದಿ ಮಾಡಿದ್ದರು. ನಾನು ಕೊಟ್ಟಿದ್ದ ದಿನಾಂಕವನ್ನು ಅಂದಿನ ಪ್ರಧಾನಿಗಳು ಪರಿಗಣನೆ ಮಾಡಿದ್ದರು ಎಂದು ಹೇಳಿದರು.
Published by: Latha CG
First published: July 28, 2020, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading