HOME » NEWS » District » BELAGAVI NEWS NATIONAL FLAG HOISTING IN BELGAUM AFTER 8 MONTHS HK

ಎಂಟು ತಿಂಗಳ ಬಳಿಕ ಬೆಳಗಾವಿಯಲ್ಲಿ ಮತ್ತೆ ಅತಿ ಎತ್ತರದ ರಾಷ್ಟ್ರ ಧ್ವಜದ ವೈಭವ..!

ಬೆಳಗಾವಿಯ ಕೋಟೆ ಕೆರೆ ಆವರಣದಲ್ಲಿ ರಾಷ್ಟ್ರಧ್ವಜ ಸ್ಥಂಭ ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಹಾರಾಡುವ ರಾಷ್ಟ್ರ ಧ್ವಜ ಬೆಳಗಾವಿಯ ಯಾವ ಭಾಗದಲ್ಲಿ ನಿಂತು ನೋಡಿದರು ಕಾಣುತ್ತದೆ.

news18-kannada
Updated:June 26, 2020, 6:32 PM IST
ಎಂಟು ತಿಂಗಳ ಬಳಿಕ ಬೆಳಗಾವಿಯಲ್ಲಿ ಮತ್ತೆ ಅತಿ ಎತ್ತರದ ರಾಷ್ಟ್ರ ಧ್ವಜದ ವೈಭವ..!
ರಾಷ್ಟ್ರಧ್ವಜ
  • Share this:
ಬೆಳಗಾವಿ(26): ದೇಶದಲ್ಲಿ ಅತಿ ಎತ್ತರ ರಾಷ್ಟ್ರ ಧ್ವಜ ಬೆಳಗಾವಿಯಲ್ಲಿದೆ. 2018ರಲ್ಲಿ ಈ ಧ್ವಜಸ್ಥಂಭ ನಿರ್ಮಾಣ ಮಾಡಲಾಗಿತ್ತು. ಕಳೆದ 8 ತಿಂಗಳಿಂದ ತಾಂತ್ರಿಕ ಸಮಸ್ಯೆಯಿಂದ ರಾಷ್ಟ್ರ ಧ್ವಜ ಹಾರಾಟ ಸ್ಥಗಿತಗೊಂಡಿತ್ತು. ಆದರೆ, ಮತ್ತೆ ಬೆಳಗಾವಿಯಲ್ಲಿ ರಾಷ್ಟ್ರ ಧ್ವಜ ವೈಭವ ಮರಳಿದೆ.

ಬೆಳಗಾವಿಯ ಕೋಟೆ ಕೆರೆ ಆವರಣದಲ್ಲಿ ರಾಷ್ಟ್ರಧ್ವಜ ಸ್ಥಂಭ ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಹಾರಾಡುವ ರಾಷ್ಟ್ರ ಧ್ವಜ ಬೆಳಗಾವಿಯ ಯಾವ ಭಾಗದಲ್ಲಿ ನಿಂತು ನೋಡಿದರು ಕಾಣುತ್ತದೆ. ಈ ರಾಷ್ಟ್ರಧ್ವಜ ಬೆಳಗಾವಿಯ ಮೊತ್ತೊಂದು ಪ್ರೇಕ್ಷಣಿಯ ಸ್ಥಳವಾಗಿ ಮಾರ್ಪಟ್ಟಿದೆ . ಧ್ವಜ ಸ್ಥಂಭದ ಮೇಲೆ ತ್ರೀವರ್ಣ ಧ್ವಜ ನೋಡಲು ಆಕರ್ಷಣಿಯ ಮತ್ತು ಹೆಮ್ಮೆ.

110 ಮೀಟರ್ ಎತ್ತರ ಧ್ವಜ ಸ್ಥಂಭದ ಮೇಲೆ ರಾಷ್ಟ್ರ ಧ್ವಜದ ಹಾರಾಟ ಕಳೆದ 8 ತಿಂಗಳಿಂದ ಸ್ಥಗಿತಗೊಂಡಿತ್ತು. ಕೆಲ ತಾಂತ್ರಿಕ ಸಮಸ್ಯೆಗಳಿಂದ ರಾಷ್ಟ್ರಧ್ವಜ ಹಾರಾಟ ಸಾಧ್ಯವಾಗಿರಲಿಲ್ಲ. ಬೆಳಗಾವಿಯಲ್ಲಿ ಮಳೆ, ಗಾಳಿಗೆ ಪದೇ ಪದೇ ಧ್ವಜಕ್ಕೆ ಹಾನಿಯಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಅನೇಕ ಸಲ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮತ್ತೆ ರಾಷ್ಟ್ರ ಧ್ವಜ ಹಾರಾಟ ಆರಂಭಿಸುವಂತೆ ಮನವಿ ಮಾಡಿದ್ರು. ಸದ್ಯ ಮತ್ತೆ ಹಳೇಯ ವೈಭವ ಮರುಕಳಿಸಿದ್ದು ರಾಷ್ಟ್ರ ಧ್ವಜ ಆಗಸದಲ್ಲಿ ಹಾರಾಡುತ್ತಿದೆ.

ಮುಖ್ಯಮಂತ್ರಿಗಳ ವಿಶೇಷ ಅನುದಾನ ಅಡಿಯಲ್ಲಿ 1.63 ಕೋಟಿ ವೆಚ್ಚದಲ್ಲಿ ಇದಕ್ಕಾಗಿ ಯೋಜನೆ ರೂಪಿಸಲಾಗಿತ್ತು. ಮಾಜಿ ಶಾಸಕ ಫಿರೋಜ್ ಸೇಠ್ ಈ ಎತ್ತರ ಧ್ವಜ ಹಾರಾಟದ ಬಗ್ಗೆ ಯೋಜನೆಯನ್ನು ರೂಪಿಸಿದ್ದು, ಅವರ ಅವಧಿಯಲ್ಲಿ ಇದು ಉದ್ಘಾಟನೆಗೊಂಡಿತ್ತು.
ಬೆಳಗಾವಿಯಲ್ಲಿ ಐತಿಹಾಸ ಕಾಂಗ್ರೆಸ್ ಸಮಾವೇಶ ನಡೆದ ಸ್ಥಳ ಸೇರಿ ಎತ್ತರ ರಾಷ್ಟ್ರ ಧ್ವಜ ಹೊಂದಿ ಕೋಟೆ ಕೆರೆ ಸಹ ಜನರ ಆಕರ್ಷಣೆಯ ಕೇಂದ್ರವಾಗಿದೆ. ಧ್ವಜ ಸ್ಥಂಭ ಇರುವ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಸಹ ಮಾಡಲಾಗಿತ್ತು. ಇದು ಬೆಳಗಾವಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.

ಇದನ್ನೂ ಓದಿ :  ಸರ್ಕಾರದ ಅನುದಾನವಿಲ್ಲದೇ ಸಹಕಾರ ತತ್ವದಡಿ ಕೆರೆ ಅಭಿವೃದ್ಧಿ ಮಾಡಿದ ಗ್ರಾಮಸ್ಥರು

ಭಾರತ ಮತ್ತು ಪಾಕ್ ಗಡಿ ವಾಘಾ ಪ್ರದೇಶದಲ್ಲಿ ಇದೇ ರೀತಿಯ ಎತ್ತರ ಧ್ವಜ ದಿನ 24 ಗಂಟೆ ಹಾಗೂ ವರ್ಷ 365 ದಿನ ಹಾರಾಡುತ್ತದೆ. ಆದರೆ, ಬೆಳಗಾವಿಯಲ್ಲಿ ಮಳೆ, ಗಾಳಿ ಬೀಸಿದ್ರೆ ಧ್ವಜಕ್ಕೆ ಹಾನಿಯಾಗುತ್ತಿದೆ. ಅಲ್ಲಿನ ಬಟ್ಟೆಯನ್ನು ಇಲ್ಲಿಯೂ ಬಳಸುವ ಬಗ್ಗೆ ಅಧಿಕಾರಿಗಳಿಗೆ ಸ್ಥಳೀಯ ಶಾಸಕ ಅನಿಲ್ ಬೆನಕೆ ಸೂಚನೆ ನೀಡಿದ್ದಾರೆ.

ಬೆಳಗಾವಿಯ ಸುವರ್ಣ, ಅತಿ ಎತ್ತರ ರಾಷ್ಟ್ರಧ್ವಜ ಹಾಗೂ ಪಕ್ಕದಲ್ಲಿ ಇರುವ ಕೆರೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ಹೋಗು ಜನರಿಗೆ ಸೆಳೆಯುತ್ತಿದೆ. ಇನ್ನೂ ಮುಂದೆ ನಿರಂತರವಾಗಿ ರಾಷ್ಟ್ರ ಧ್ವಜ ಹಾರಾಟ ನಡೆಸುವ ಜವಾಬ್ದಾರಿ ಪಾಲಿಕೆ ಅಧಿಕಾರಿಗಳ ಮೇಲಿದೆ.
First published: June 26, 2020, 6:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories