ಬೆಳಗಾವಿ(ಜುಲೈ. 15): ತಾವು ಮಾಡುತ್ತಿರುವ ವೃತ್ತಿಯ ಬಗ್ಗೆ ಎಲ್ಲರಿಗೂ ಗೌರವ, ಹೆಮ್ಮ ಇರಲೇಬೇಕು. ವೃತ್ತಿಯ ಬಗ್ಗೆ ಇರುವ ಗೌರವನ್ನು ಮನೆಯ ಆಕಾರದಲ್ಲಿ ಬೆಳಗಾವಿಯಲ್ಲಿ ನಿರ್ಮಾಣವಾಗಿದೆ. ಈ ಮನೆಯನ್ನು ನೋಡುವುದೇ ಒಂದು ಅದ್ಬುತ. ಜತೆಗೆ ಮಕ್ಕಳಿಗೆ ಸಹ ಪ್ರಸಿದ್ಧ ಕ್ಯಾಮೆರಾಗಳ ಹೆಸರನ್ನು ಇಡುವ ಮೂಲಕ ಫೋಟೋಗ್ರಾಫರ್ ಒಬ್ಬರು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಬೆಳಗಾವಿ ನಗರದ ಶಾಸ್ತ್ರೀ ನಗರದಲ್ಲಿ ಕ್ಯಾಮೆರಾ ಆಕಾರದಲ್ಲಿ ಇರುವ ಮನೆ ಸದ್ಯ ಎಲ್ಲರ ಆಕರ್ಷಣೆಯ ಕೇಂದ್ರ ಸ್ಥಳವಾಗಿದೆ. ಇದು ಫೋಟೋಗ್ರಾಫರ್ ರವಿ ಹೊಂಗಲ್ ಅವರ ನಿವಾಸ. ಕ್ಯಾಮರಾ ಲೆನ್ಸ್, ಫ್ಲ್ಯಾಶ್ ಲೈಟ್, ಮೆಮೋರಿ ಕಾರ್ಡ್ ಆಕಾರದಲ್ಲಿಯೇ ಮನೆಯನ್ನು ನಿರ್ಮಾಣ ಮಾಡಲಾಗಿದೆ. ಈ ಕ್ಯಾಮೆರಾ ಮನೆಯ ಹೆಸರು ಕ್ಲಿಕ್ ಕ್ಯಾಮೆರಾ ಅಂಥ ಸಹ ಇಟ್ಟಿದ್ದಾರೆ.
ಕ್ಯಾಮೆರಾ ಆಕಾರದಲ್ಲಿ ಇರುವ ಮನೆ ಸದ್ಯ ಬೆಳಗಾವಿಯಲ್ಲಿ ಫುಲ್ ಫೇಮಸ್ ಆಗಿದೆ. ಕೇವಲ ಹೊರಗೆ ಮಾತ್ರ ಕ್ಯಾಮೆರಾ ಆಕಾರದಲ್ಲಿ ಮನೆಯಿಲ್ಲ. ಒಳಗೆ ಸಹ ಕ್ಯಾಮೆರಾಕ್ಕೆ ಬಳಸುವ ಅನೇಕ ವಸ್ತುಗಳ ಆಕಾರದ ಡಿಸೈನ್ ಮಾಡಲಾಗಿದೆ. ಸಂಪೂರ್ಣ ಮನೆ ಕ್ಯಾಮೆರಾ ಹಾಗೂ ಅದರ ಬಿಡಿಭಾಗದ ವಸ್ತುಗಳ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಈ ಮನೆಯನ್ನು ರವಿ ಹೊಂಗಲ್ ಎನ್ನುವ ಕ್ಯಾಮೆರಾಮನ್ ಅದ್ಬುತ ಕಲ್ಪನೆಯಲ್ಲಿ ಮೂಡಿ ಬಂದಿದೆ. ಇವರು ಕಪಿಲೇಶ್ವರ ದೇವಸ್ಥಾನದ ಬಳಿಯಲ್ಲಿ ಅನೇಕ ವರ್ಷಗಳಿಂದ ರಾಣಿ ಫೋಟೋ ಸ್ಟೂಡಿಯೋ ಇಟ್ಟುಕೊಂಡಿದ್ದಾರೆ. ವೃತ್ತಿಯ ಬಗ್ಗೆ ಆಸಕ್ತಿಯನ್ನು ತಮ್ಮ ಮನೆ ನಿರ್ಮಾಣದಲ್ಲಿ ತೋರಿಸಿಕೊಟ್ಟಿದ್ದಾರೆ.
ರವಿ ಹೊಂಗಲ್ ಅವರು ಕೇವಲ ಮನೆಯನ್ನು ಕ್ಯಾಮೆರಾ ಆಕಾರದಲ್ಲಿ ನಿರ್ಮಾಣ ಮಾಡಿಲ್ಲ. ಬದಲಾಗಿ ತಮ್ಮ ಮಕ್ಕಳಿಗೆ ಅದೇ ಹೆಸರಗಳನ್ನು ಇಟ್ಟಿದ್ದಾರೆ. ಹೌದು ತಮ್ಮ ಮೂರು ಜನ ಮಕ್ಕಳಿಗೆ ಕ್ಯಾನನ್, ನಿಕಾನ್, ಹೆಕ್ಸಾನ್ ಹೆಸರನ್ನು ಇಟ್ಟಿದ್ದಾರೆ. ಶಾಲಾ ದಾಖಲಾತಿಗಳಲ್ಲಿ ಇದೇ ಹೆಸರನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ : 2nd PUC Results 2020 - ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ ; ಫಲಿತಾಂಶ ವೀಕ್ಷಿಸಲು ಆತನೇ ಇಲ್ಲ
ಪ್ರತಿಯೊಬ್ಬರ ಬಳಿ ಸದ್ಯ ಸ್ಮಾರ್ಟ್ ಫೋನ್ ಇವೆ ದಿನಕ್ಕೂ ಹತ್ತಾರು ಸಹ ಸೆಲ್ಪಿ ತೆಗೆದುಕೊಳ್ಳುವ ಕಾಲದಲ್ಲಿ ರವಿ ಹೊಂಗಲ್ ತಮ್ಮ ಕ್ಯಾಮೆರಾ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಕನಸಿನ ಮನೆಗೆ ಬದಕು ಕಟ್ಟಿಕೊಳ್ಳಲು ನೆರವಾದ ಕ್ಯಾಮೆರಾ ಮಾದರಿಯನ್ನು ಅನುಕರಣೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ