ಬೆಳಗಾವಿ ಲೋಕಸಭಾ ಉಪಚುನಾವಣೆ; ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ

ಒಲ್ಲದ ಮನಸ್ಸಿನಿಂದಲೇ ಸ್ಪರ್ಧೆಗೆ ಒಪ್ಪಿರುವ ಸತೀಶ್ ಜಾರಕಿಹೊಳಿ ಯಾವ ರೀತಿಯಲ್ಲಿ ಚುನಾವಣಾ ರಣತಂತ್ರ ಹೆಣೆಯಲಿದ್ದಾರೆ ಅನ್ನೋದುತೂ ಕುತುಹಲ ಮೂಡಿಸಿದೆ. ಬರುವ 29 ರಂದು ನಾಮಪತ್ರ ಸಲ್ಲಿಸಲು ಸಜ್ಜಾಗಿರುವ ಸತೀಶ್ ಯಾವುದೇ ಮೆರವಣಿಗೆ ಇಲ್ಲದೆ ಸಿಂಪಲ್ ಆಗಿ ಬರಿ ಐದು ಜನ ಮಾತ್ರ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ. 

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

  • Share this:
ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್​ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗಿ ಘೋಷಣೆಯಾದ ಹಿನ್ನಲೆಯಲ್ಲಿ ಸ್ವ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡ ಸಭೆ ಕರೆದು ಸತೀಶ್ ಜಾರಕಿಹೊಳಿ ಸಮಾಲೋಚನೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಶ್ರೀ ಗುರುಸಿದ್ದ ಸ್ವಾಮೀಜಿ ಸಭಾ ಭವನದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಕುರಿತು ಅಂತಿಮ ನಿರ್ಧಾರವನ್ನು ತಮ್ಮ ಬೆಂಬಲಿಗರ ಎದುರಲ್ಲೆ ಪ್ರಕಟಿಸಿದ್ದಾರೆ.

ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಸತೀಶ್ ಜಾರಕಿಹೊಳಿ ಹೆಸರು ಕೇಳಿ ಬರುತ್ತಿದ್ದಂತೆ ಒಲ್ಲದ ಮನಸ್ಸಿನಿಂದಲೇ ಸತೀಶ್ ಜಾರಕಿಹೊಳಿ ಒಪ್ಪಿಗೆ ಸೂಚಿಸಿದ್ದರು. ಇದನ್ನ ವಿರೋಧಿಸಿ ಸತೀಶ್ ಬೆಂಬಲಿಗರು ಪ್ರತಿಭಟನೆ ನಡೆಸಿ, ವಿರೋಧ ವ್ಯಕ್ತಪಡಿಸಿದರು. ಅಲ್ಲದೇ ಮುಂದಿನ ಮುಖ್ಯಮಂತ್ರಿ ರೇಸ್​ನಲ್ಲಿರುವ ನಮ್ಮ ನಾಯಕನ ವಿರುದ್ಧದ ಷಡ್ಯಂತ್ರ ನಡೆಸಲಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆದ ಗತಿಯೇ ಇವರಿಗೂ ಆಗುತ್ತಾ ಎಂಬ ಆತಂಕವನ್ನು ಬೆಂಬಲಿಗರು ವ್ಯಕ್ತಪಡಿಸಿದ್ದರು. ಆ ಹಿನ್ನಲೆಯಲ್ಲಿ ತಮ್ಮ ಬೆಂಬಲಿಗರ ಜೊತೆ ಸತೀಶ್ ಜಾರಕಿಹೊಳಿ ಚರ್ಚಿಸಿ ಬೆಂಬಲಿಗರನ್ನು ಸಮಾಧಾನಪಡಿದ್ದಾರೆ.

ಈಡಿ ದೇಶದಲ್ಲೇ ಪ್ರಚಾರ ನಡೆಸದಿದ್ದರು ನನ್ನನ್ನು ಗೆಲ್ಲಿಸಿ ಕಳಿಸಿದ್ದಿರಿ. ಪಕ್ಷ ನನ್ನನ್ನು ಗುರುತಿಸಿ ಶಾಸಕ, ಮಂತ್ರಿ ಮಾಡಿದೆ. ಈಗ ಪಕ್ಷ ಹೇಳಿದ ಹಾಗೆ ನಾನು ಬೆಳಗಾವಿ ಲೋಕಸಭೆಗೆ ಸ್ಪರ್ಧಿಸಲು ಸಿದ್ದನಾಗಿದ್ದೇನೆ. ಮೋದಿ ಅಲೆಯಲ್ಲೇ ನನ್ನನ್ನು ಇಲ್ಲಿನ ಜನ ಗೆಲ್ಲಿಸಿದ್ದು. ಲೋಕಸಭೆಯಲ್ಲಿ ಗೆಲ್ಲಿಸಲು ನೀವು ದುಡಿಯಬೇಕು. ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ನಮ್ಮ ವಿರುದ್ದ ಷಡ್ಯಂತ್ರ ನಡೆಯುತ್ತದೆ ಅನ್ನೊದನ್ನ ಕಾರ್ಯಕರ್ತರು ತಲೆಯಿಂದ ತೆಗೆದು ಹಾಕಬೇಕು. ನಮ್ಮ ವಿರುದ್ಧ ಷಡ್ಯಂತ್ರ ನಡೆಸಿದರೆ ನಾವೇನು ಸುಮ್ಮನೆ ಇರ್ತಿವಾ. ನಮಗೂ ಏನ್ ಮಾಡಬೇಕು ಅನ್ನೋದು ಗೊತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಇನ್ನು ಇದೇ ವೇಳೆ ಮಾಧ್ಯಮಗಳ ಜೊತೆ ಮಾಡಿರುವ ಸತೀಶ್ ಜಾರಕಿಹೊಳಿ, ಬೆಳಗಾವಿ ಲೋಕಸಭೆಯಿಂದ ನೂರಕ್ಕೆ ನೂರರಷ್ಟು ಗೆಲ್ಲುತ್ತೇನೆ. ಯಮಕನಮರಡಿ ಕ್ಷೇತ್ರದ ಜನ ಅಭಿಪ್ರಾಯ ಪಡೆಯಲು ಸಭೆ ನಡೆಸಿದ್ದೇನೆ. ಯಮಕನಮರಡಿ ಕ್ಷೇತ್ರದ ಜನ ಬೆಳಗಾವಿ ಲೋಕಸಭೆಯಿಂದ ಸ್ಪರ್ಧೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಪಕ್ಷದ ತೀರ್ಮಾನ ಹಾಗೂ ಆದೇಶಕ್ಕೆ ನಾವು ಬದ್ಧ ಇರಬೇಕು. ಜನರ ಒಪ್ಪಿಗೆಯ ಅಭಿಪ್ರಾಯವನ್ನು ಹೈ ಕಮಾಂಡ್ ಗೆ ತಿಳಿಸುತ್ತೇವೆ ಎಂದಿದ್ದಾರೆ. ಇನ್ನು ಬಿಜೆಪಿಯಿಂದ ದಿವಂಗತ ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ನೀಡಿದ ಹಿನ್ನಲೆ ಅನುಕಂಪದಿಂದ ನಿಮಗೆ ಹಿನ್ನಡೆಯಾಗುತ್ತಾ ಎಂಬ ಪ್ರಶ್ನೆಗೆ ಅನುಕಂಪ ಯಾವುದು ಇಲ್ಲಾ. ನಮ್ಮ ಬಳಿ ಸಾಕಷ್ಟು ವಿಚಾರಗಳು ಇವೆ. ಅವುಗಳನ್ನ ಮುಂದೆ ಇಟ್ಟುಕೊಂಡೆ ಚುನಾವಣಾ ಪ್ರಚಾರ ಮಾಡುತ್ತೇವೆ ಎಂದಿದ್ದಾರೆ.

ಇದನ್ನು ಓದಿ: Ramesh Jarkiholi CD Case: ರಮೇಶ್​ ಜಾರಕಿಹೊಳಿ ವಿರುದ್ಧ ವಕೀಲರ ಮೂಲಕ ದೂರು ದಾಖಲಿಸಿದ ಸಿಡಿ ಸಂತ್ರಸ್ತೆ

ಇನ್ನು ರಮೇಶ ಜಾರಕಿಹೊಳಿ ವಿರುದ್ದ ಸಿಡಿ ಯುವತಿ ದೂರು ನೀಡುವ ವಿಚಾರವಾಗಿ ಮಾತನಾಡಿದ ಸತೀಶ್, ಅದು ನನಗೆ ಸಂಬಂಧಪಟ್ಟ ವಿಚಾರವಲ್ಲ. ಇದರಿಂದ ಯಾರಿಗೆ ನೋವಾಗಿದೆಯೋ ಅವರು ಇದರ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ. ನಾನು ಬಹಳ ದಿನಗಳ ಹಿಂದೆಯೇ ದೂರು ನೀಡಬೇಕು ಎಂದು ಹೇಳಿದ್ದೇನೆ. ಅವರಿಗೆ ತೊಂದರೆಯಾಗಿದ್ದರೆ ದೂರು ನೀಡಬೇಕು ಎಂದಿದ್ದಾರೆ.

ಒಟ್ಟಿನಲ್ಲಿ ಒಲ್ಲದ ಮನಸ್ಸಿನಿಂದಲೇ ಸ್ಪರ್ಧೆಗೆ ಒಪ್ಪಿರುವ ಸತೀಶ್ ಜಾರಕಿಹೊಳಿ ಯಾವ ರೀತಿಯಲ್ಲಿ ಚುನಾವಣಾ ರಣತಂತ್ರ ಹೆಣೆಯಲಿದ್ದಾರೆ ಅನ್ನೋದುತೂ ಕುತುಹಲ ಮೂಡಿಸಿದೆ. ಬರುವ 29 ರಂದು ನಾಮಪತ್ರ ಸಲ್ಲಿಸಲು ಸಜ್ಜಾಗಿರುವ ಸತೀಶ್ ಯಾವುದೇ ಮೆರವಣಿಗೆ ಇಲ್ಲದೆ ಸಿಂಪಲ್ ಆಗಿ ಬರಿ ಐದು ಜನ ಮಾತ್ರ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ.
Published by:HR Ramesh
First published: