ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ; ಅನುಕಂಪದ ಹಿನ್ನೆಲೆಯಲ್ಲಿ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್?

ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧೆ ವಿಚಾರ ಬಿಟ್ಟು ಸಹ ನಾವು ಪಕ್ಷ ಜತೆಗೆ ಇದ್ದೇವೆ. 20 ವರ್ಷಗಳಿಂದ ಪಕ್ಷ ಜತೆಗೆ ನಮ್ಮ ಕುಟುಂಬ ಕೆಲಸ ಮಾಡಿದೆ. ತಂದೆ ಇಲ್ಲದ ಸಂದರ್ಭದಲ್ಲಿಯೂ ಸಹ ಅನೇಕರು ನಮ್ಮ ಪರವಾಗಿ ಪಕ್ಷದಲ್ಲಿ ಟಿಕೆಟ್ ಗಾಗಿ ಮಾತನಾಡಿದ್ದಾರೆ. ಹೀಗೆ ನಮ್ಮ ಕುಟುಂಬಕ್ಕೆ ಸಹಕಾರ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಶ್ರದ್ಧಾ ಶೆಟ್ಟರ್ ಹೇಳಿದರು.

ದಿವಂಗತ ಸುರೇಶ ಅಂಗಡಿ   ಮಗಳು ಶ್ರದ್ಧಾ ಶೆಟ್ಟರ್

ದಿವಂಗತ ಸುರೇಶ ಅಂಗಡಿ ಮಗಳು ಶ್ರದ್ಧಾ ಶೆಟ್ಟರ್

  • Share this:
ಬೆಳಗಾವಿ (ಮಾರ್ಚ್ 25): ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ನಿಧಾನವಾಗಿ ರಂಗು ಪಡೆದುಕೊಳ್ಳುತ್ತಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಹೆಸರು ಘೋಷಣೆ ಮಾಡಿದೆ. ಮಾರ್ಚ್ 29ರಂದು ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಸಹ ಮಾಡಲಿದ್ದಾರೆ. ಇನ್ನೂ ಅಹಿಂದ ಮತಗಳ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳಿಗೆ ಟಿಕೆಟ್ ನೀಡಿದೆ. ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಸಹ ಅನುಕಂಪದ ಅಲೆ ಸಮರ್ಥವಾಗಿ ಬಳಸಿಕೊಳ್ಳಲು ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ನೀಡಲಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಪಕ್ಷದಿಂದ ದಿವಂಗತ ಸುರೇಶ ಅಂಗಡಿ ಪತ್ನಿ ಮಂಗಳ ಅಥವಾ ಮಗಳು ಶ್ರದ್ಧಾ ಶೆಟ್ಟರ್ ಅವರಿಗೆ ಟಿಕೆಟ್ ನೀಡಲು ಗಂಭೀರ ಚಿಂತನೆ ನಡೆಸಿದೆ. ಶ್ರದ್ಧಾ ಒಂದು ವೇಳೆ ಸ್ಪರ್ಧೆ ಮಾಡಿದ್ರೆ ಯುವ ಮತದಾರರ ಜತೆಗೆ ತಂದೆಯ ಕೆಲಸ ಅನುಕಂಪದ ಮತಗಳ ಜತೆಗೆ ಲಿಂಗಾಯತ ಸಮುದಾಯದ ಬೆಂಬಲ ಸಿಗಲಿವೆ ಎಂಬುದು ಬಿಜೆಪಿ ಲೆಕ್ಕಚಾರವಾಗಿದೆ. ಅಂಗಡಿ ಕುಬಂಸ್ಥರ ಜತೆಗೆ ಅನೇಕ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಟಿಕೆಟ್ ರೇಸ್ ನಲ್ಲಿ ಇದ್ದಾರೆ. ಆದರೆ ಬಿಜೆಪಿ ವರಿಷ್ಠರು ಯಾವ ಲೆಕ್ಕಾಚಾರ ಮಾಡಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.

ನ್ಯೂಸ್ 18 ಕನ್ನಡ ಜತೆಗೆ ಶ್ರದ್ಧಾ ಶೆಟ್ಟರ ಲೋಕಸಭೆ ಟಿಕೆಟ್ ವಿಚಾರವಾಗಿ ಮಾತನಾಡಿದ್ದರು. ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಲು ರಾಜ್ಯ ಕೋರ್ ಕಮಿಟಿಯಿಂದ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ನಮ್ಮ ಕುಟುಂಬದ ಜತೆಗೆ ಅನೇಕ ಕಾರ್ಯಕರ್ತರ ಹೆಸರಿನ ಪಟ್ಟಿ ಕಳುಹಿಸಲಾಗಿದೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರು ಬದ್ಧ. ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ತಂದೆ ಅನೇಕ ಕನಸ್ಸು ಕಂಡಿದ್ದರು. ಆ ಎಲ್ಲಾ ಯೋಜನೆಗಳು ಅರ್ಧಕ್ಕೆ ನಿಂತಿವೆ. ಎಲ್ಲಾ ಯೋಜನೆ ಪೂರ್ಣ ಮಾಡಬೇಕು ಎನ್ನುವುದು ನಮ್ಮ ಬಯಕೆ ಎಂದು ಹೇಳಿದ್ದಾರೆ.

ಇದನ್ನು ಓದಿ: Satish Jarkiholi: ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಸ್ಪರ್ಧೆ; ರಾಜಕೀಯ ಲೆಕ್ಕಾಚಾರಗಳೇನು?

ನಮ್ಮ ಕುಟುಂಬದಲ್ಲಿ ಟಿಕೆಟ್ ಸಿಕ್ಕರೆ ಯಾರು ಸ್ಪರ್ಧೆ ಮಾಡಬೇಕು ಎನ್ನುವುದು ಇನ್ನೂ ತೀರ್ಮಾನ ಆಗಿಲ್ಲ. ಯಾರಿಗೆ ಅವಕಾಶ ಕೊಟ್ಟರು ಸ್ಪರ್ಧೆ ಮಾಡಲು ಸಿದ್ಧರಿದ್ದೇವೆ. ದಿ. ಸುರೇಶ ಅಂಗಡಿ ರೈಲ್ವೆ ಸಚಿವರಾದ ಬಳಿಕ ರಾಜ್ಯಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಪ್ರಮುಖವಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಎಕ್ಸಪ್ರಸ್ ರೈಲು.  ಬೆಳಗಾವಿ- ಧಾರವಾಡಕ್ಕೆ ರೈಲ್ವೆ ಯೋಜನೆ ಮಂಜೂರು ಮಾಡಿಸಿದ್ದಾರೆ. ಈ ಎಲ್ಲಾ ಕೆಲಸಗಳು ಮುಂದಿನ ಚುನಾವಣೆಯಲ್ಲಿ ನಮಗೆ ಸಹಕಾರಿ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧೆ ವಿಚಾರ ಬಿಟ್ಟು ಸಹ ನಾವು ಪಕ್ಷ ಜತೆಗೆ ಇದ್ದೇವೆ. 20 ವರ್ಷಗಳಿಂದ ಪಕ್ಷ ಜತೆಗೆ ನಮ್ಮ ಕುಟುಂಬ ಕೆಲಸ ಮಾಡಿದೆ. ತಂದೆ ಇಲ್ಲದ ಸಂದರ್ಭದಲ್ಲಿಯೂ ಸಹ ಅನೇಕರು ನಮ್ಮ ಪರವಾಗಿ ಪಕ್ಷದಲ್ಲಿ ಟಿಕೆಟ್ ಗಾಗಿ ಮಾತನಾಡಿದ್ದಾರೆ. ಹೀಗೆ ನಮ್ಮ ಕುಟುಂಬಕ್ಕೆ ಸಹಕಾರ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಶ್ರದ್ಧಾ ಶೆಟ್ಟರ್ ಹೇಳಿದರು.
Published by:HR Ramesh
First published: