ಲಕ್ಷಣ ರಹಿತ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಳಗಾವಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ವ್ಯವಸ್ಥೆ..!

ಲಕ್ಷಣ ರಹಿತರಿಗೆ ತಾಲೂಕು ಮಟ್ಟದಲ್ಲಿಯೇ ಸರ್ಕಾರದ ಮಾರ್ಗಸೂಚಿ ಪ್ರಕಾರ 10 ದಿನಗಳ ಕಾಲ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. 10 ಕೋವಿಡ್ ಕೇರ್ ಸೆಂಟರ್ ಪೈಕಿ 768 ಬೆಡ್ ಗಳು ಸಹ ಲಭ್ಯವಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ(ಜುಲೈ.20): ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಸಂಖ್ಯೆ ಒಂದು ವಾರದಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗಿದೆ. ಜತೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬೆಡ್ ಕೊರತೆಯಾಗಿದ್ದು, ಅನೇಕ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಜಿಲ್ಲಾಡಳಿತ ಜಿಲ್ಲೆಯ 10 ತಾಲೂಕು ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ, ಬೈಲಹೊಂಗಲ, ಗೋಕಾಕ್ ಹಾಗೂ ಸವದತ್ತಿಯಲ್ಲಿ ಈಗಾಗಲೇ ಕೋವಿಡ್ ಕೇರ್ ಸೆಂಟರ್ ಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಸೋಂಕಿನ ಲಕ್ಷಣ ರಹಿತ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ತಾಲೂಕಿನಲ್ಲಿ ಇರುವ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಹೊಂದಿರುವ 30 ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ, ಜಿ ಹಿರೇಮಠ ಹೇಳಿದ್ದಾರೆ.

ಲಕ್ಷಣ ರಹಿತರಿಗೆ ತಾಲೂಕು ಮಟ್ಟದಲ್ಲಿಯೇ ಸರ್ಕಾರದ ಮಾರ್ಗಸೂಚಿ ಪ್ರಕಾರ 10 ದಿನಗಳ ಕಾಲ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. 10 ಕೋವಿಡ್ ಕೇರ್ ಸೆಂಟರ್ ಪೈಕಿ 768 ಬೆಡ್ ಗಳು ಸಹ ಲಭ್ಯವಿವೆ. ಜತೆಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಹೆಚ್ಚಿನ ಬೆಡ್ ಕಲ್ಪಿಸಲು ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.

ಗಂಭೀರ ಪ್ರಕರಣ ಹಾಗೂ ತುರ್ತು ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಇನ್ನೂ ಬೆಳಗಾವಿ ಜಿಲ್ಲೆಗೆ 1 ಸಾವಿರ ರ್‍ಯಾಪಿಡ್ ಆ್ಯಂಟಿಜೆನ್ ಕಿಟ್ ಸಹ ಪೂರೈಕೆಯಾಗಿವೆ. ರೋಗಿಯ ಗಂಟಲು ಮಾದರಿ ಪ್ರರೀಕ್ಷಿಸಿದ 15 ನಿಮಿಷದಲ್ಲಿಯೇ ಫಲಿತಾಂಶ ದೊರೆಯಲಿದೆ.

ಬೆಳಗಾವಿಯ ಇಎಸ್ಐ ಆಸ್ಪತ್ರೆಯಲ್ಲಿ 25 ಹಾಗೂ ಕೆಎಲ್ಇ ಆಸ್ಪತ್ರೆಯಲ್ಲಿ 65 ಬೆಡ್ ವ್ಯವಸ್ಥೆ ಮಾಡಲಾಗಿದೆ. ಕೆಎಲ್ಇ ಆಸ್ಪತ್ರೆಯ ಆಡಳಿತ ಮಂಡಳಿಗೆ ಇನ್ನೂ 30 ಬೆಡ್ ಕಲ್ಪಿಸಲು ಕೋರಾಗಿದೆ. ಬಿಮ್ಸ್ ಆಸ್ಪತ್ರೆಯಲ್ಲಿ 200 ಬೆಡ್ ಹೊಂದಿದ್ದು, ಇನ್ನೂ 100 ಬೆಡ್ ಹೆಚ್ಚಳಕ್ಕೆ ಬೆಳಗಾವಿ ಜಿಲ್ಲಾಡಳಿತ ಕ್ರಮವನ್ನು ವಹಿಸಿದೆ.

ಇದನ್ನೂ ಓದಿ : ಮಲ್ಲಿಕಾರ್ಜುನ ಖರ್ಗೆಯಿಂದ 550 ಬೆಡ್ ಗಳ ದೇಣಿಗೆ ; ಹುಟ್ಟು ಹಬ್ಬ ಕೈಬಿಟ್ಟು ಸೋಂಕಿತರ ನೆರವಿಗೆ ಮುಂದಾದ ಕೈ ನಾಯಕ

ಬೆಳಗಾವಿ ಜಿಲ್ಲೆಯಲ್ಲಿ ಅನೇಕ ಕ್ವಾರಂಟೈನ್ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದವು, ಈ ಪೈಕಿನ 161 ಪ್ರಕರಣ ದಾಖಲಿಸಲಾಗಿದ್ದು, ಅನೇಕರಿಗೆ ಈ ಬಗ್ಗೆ ಕಟ್ಟು ನಿಟ್ಟಿನ ಸೂಚನೆ ಸಹ ನೀಡಲಾಗಿದೆ.

ಮಹಾಮಾರಿ ಕೊರೋನಾ ನಿನ್ನೆ ಸಹ ರಾಜ್ಯದಲ್ಲಿ ಅಬ್ಬರಿಸಿದ್ದು ಬರೋಬ್ಬರಿ 4,120 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 63,772ಕ್ಕೆ ಏರಿಕೆಯಾಗಿದೆ. ಒಂದೇ ದಿನ  91 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,331ಕ್ಕೆ ಏರಿಕೆಯಾಗಿದೆ.
Published by:G Hareeshkumar
First published: