ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ : 13 ಅವಿರೋಧ, 3 ನಿರ್ದೇಶಕ ಸ್ಥಾನಕ್ಕೆ ಚುನಾವಣೆ

ಬೆಳಗಾವಿ ಡಿಸಿಸಿ ಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಮೂರು ಜನ ಪ್ರಮುಖ ರಾಜಕಾರಣಿಗಳು ಇನ್ನಿಲ್ಲದ ಕಸರತ್ತು ಆರಂಭಿಸಿದ್ದರು. ಕಳೆದ 1 ವರ್ಷದಿಂದ ತೆರೆ ಮರೆಯಲ್ಲಿ ಎಲ್ಲರೂ ತಯಾರಿಯನ್ನು ಆರಂಭಿಸಿದ್ದರು. ಆದರೇ ಬಿಜೆಪಿ ಪಕ್ಷದ ಮುಖಂಡರು, ಆರ್ ಎಸ್ ಎಸ್ ನಾಯಕರ ಖಡಕ್ ಸೂಚನೆ  ಹಿನ್ನೆಲೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದರು

ಡಿಸಿಎಂ ಲಕ್ಷ್ಮಣ ಸವದಿ ಮತ್ತು ಸಚಿವ ರಮೇಶ್ ಜಾರಕಿಹೊಳಿ

ಡಿಸಿಎಂ ಲಕ್ಷ್ಮಣ ಸವದಿ ಮತ್ತು ಸಚಿವ ರಮೇಶ್ ಜಾರಕಿಹೊಳಿ

  • Share this:
ಬೆಳಗಾವಿ(ಅಕ್ಟೋಬರ್.31): ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ನಾಮಪತ್ರ ವಾಪಸ್ ಪಡೆಯುವ ಅಂತಿಮ ದಿನ ಇಂದು ಮುಕ್ತಾಯಗೊಂಡಿದೆ. ಜಾರಕಿಹೊಳಿ ಸಹೋದರರು, ಕತ್ತಿ ಸಹೋದರರು ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಒಗ್ಗಟ್ಟಿನ ಫಲವಾಗಿ ಒಟ್ಟು 16 ನಿರ್ದೇಶಕ ಸ್ಥಾನಗಳ ಪೈಕಿ 13 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ 3 ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಬಹುತೇಕ ಅಂತಿಮವಾಗಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಮೂರು ಜನ ಪ್ರಮುಖ ರಾಜಕಾರಣಿಗಳು ಇನ್ನಿಲ್ಲದ ಕಸರತ್ತು ಆರಂಭಿಸಿದ್ದರು. ಕಳೆದ 1 ವರ್ಷದಿಂದ ತೆರೆ ಮರೆಯಲ್ಲಿ ಎಲ್ಲರೂ ತಯಾರಿಯನ್ನು ಆರಂಭಿಸಿದ್ದರು. ಆದರೇ ಬಿಜೆಪಿ ಪಕ್ಷದ ಮುಖಂಡರು, ಆರ್ ಎಸ್ ಎಸ್ ನಾಯಕರ ಖಡಕ್ ಸೂಚನೆ  ಹಿನ್ನೆಲೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದ್ದರು. ಎಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆಗೆ ಕರಸತ್ತು ನಡೆಸಿದ್ದರು. ಇದರ ಫಲವಾಗಿ 16 ನಿರ್ದೇಶಕ ಸ್ಥಾನಗಳ ಪೈಕಿ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಾನಾಪುರ, ರಾಮದುರ್ಗ ಹಾಗೂ ನೇಕಾರ ಸಹಕಾರ ಸಂಘಗಳ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಖಾನಾಪುರದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ್ ನಡುವೆ ಪೈಪೋಟಿ ನಡೆಯಲಿದೆ. ರಾಮದುರ್ಗದಲ್ಲಿ ಭೀಮಣ್ಣ ಬೆಳವಣಕಿ ಹಾಗೂ ಶ್ರಿಕಾಂತ್ ಢವಳ ನಡುವೆ ಸ್ಪರ್ಧೆ ಇದೆ. ಇನ್ನೂ ನೇಕಾರ ಸಹಕಾರ ಸಂಘಗಳ ನಿರ್ದೇಶಕ ಸ್ಥಾನಕ್ಕೆ ಕೃಷ್ಣ ಅನಗೋಳಕರ್, ಗಜಾನನ ಕ್ವಳ್ಳಿ ಸ್ಪರ್ಧೆ ನಡೆಯಲಿದೆ. ನವೆಂಬರ್ 6 ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಕೊನೆಯ ಘಳಿಗೆಯಲ್ಲಿ ಅಭ್ಯರ್ಥಿಗಳ ಮನವೊಲಿಕೆ ಕಾರ್ಯ ಮಾಡಲು ಇಂದು ಡಿಸಿಸಿ ಬ್ಯಾಂಕ್ ಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸಚಿವ ರಮೇಶ್ ಜಾರಕಿಹೊಳಿ ಆಗಮಿಸಿದ್ದರು. ಬಹುದಿನಗಳ ಬಳಿಕ ಇಬ್ಬರು ಒಟ್ಟಿಗೆ ಕಾಣಿಸಿಕೊಂಡರು.

ಇದನ್ನೂ ಓದಿ : ಕೊಟ್ಟ ಮಾತಿನಂತೆ ದಿಟ್ಟತನ ತೋರುತ್ತಿರುವ ರಾಜಾಹುಲಿ ಸಿಎಂ ಯಡಿಯೂರಪ್ಪ: ಸಚಿವ ಕೆ ಗೋಪಾಲಯ್ಯ

ಬಳಿಕ ಪ್ರವಾಸಿ ಮಂದರಿದಲ್ಲಿ ಸುದ್ದಿಗೋಷ್ಠಿ ನಡೆಸಿ ಖಾನಾಪುರದಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ್, ರಾಮದುರ್ಗದಲ್ಲಿ ಶ್ರೀಕಾಂತ ಢವಳಿ ಹಾಗೂ ಸಹಕಾರ ಸಂಘಗಳ ನಿರ್ದೇಶಕ ಸ್ಥಾನಕ್ಕೆ ನಮ್ಮ ಅಭ್ಯರ್ಥಿ ಗಜಾನನ ಕ್ವಳ್ಳಿ ಎಂದು ಘೋಷಣೆ ಮಾಡಿದ್ದರು.

ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪಕ್ಷದ ನಾಯಕರು, ಸಂಘದ ಸೂಚನೆ ಹಿನ್ನೆಲೆಯಲ್ಲಿ ಒಗ್ಗಟ್ಟಾಗಿ ಸಹಕಾರಿ ಕ್ಷೇತ್ರ ಚುನಾವಣೆಯನ್ನು ಮಾಡಿದ್ದೇವೆ. 3 ನಿರ್ದೇಶಕ ಸ್ಥಾನಕ್ಕೆ ಅನಿವಾರ್ಯವಾಗಿ ಚುನಾವಣೆ ನಡೆಯಲಿದೆ. ಅಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಮುಂಬರು ವಿಧಾನಸಭೆ ಚುನಾವಣೆಯಲ್ಲಿಯೂ ಜಾರಕಿಹೊಳಿ ಸಹೋದರರು, ಕತ್ತಿ ಸಹೋದರರು ಹಾಗೂ ನಾನು ಎಲ್ಲರೂ ಸೇರಿ ಪಕ್ಷದ ಗೆಲುವಿಗೆ ಶ್ರಮೀಸುತ್ತೇವೆ. ಜಿಲ್ಲಾ ರಾಜಕಾರಣದಲ್ಲಿ ಹೊಸ ಪರ್ವ ಆರಂಭವಾಗಿದೆ ಎಂದರು.
Published by:G Hareeshkumar
First published: