news18-kannada Updated:February 23, 2021, 6:12 AM IST
ಸಾಂದರ್ಭಿಕ ಚಿತ್ರ
ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ ಮತ್ತೆ ತನ್ನ ರುದ್ರ ನರ್ತನ ತೋರಲು ಮುಂದಾಗಿದೆ ಇನ್ನೇನು ಎಲ್ಲವೂ ಸರಿ ಹೋಯಿತು ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎನ್ನುವಷ್ಟರಲ್ಲಿ ಈಗ ಎರಡನೆ ಅಲೆ ಜೋರಾಗಿದ್ದು ಮಹಾರಾಷ್ಟ್ರದ ನಿದ್ದೆಗೆಡಿಸಿದೆ. ಈಗಾಗಲೇ ಮಹಾರಾಷ್ಟ್ರದ 4 ಜಿಲ್ಲೆಗಳಲ್ಲಿ ಲಾಕಡೌನ ಕೂಡ ಘೋಷಣೆ ಆಗಿದ್ದು ಮಹಾರಾಷ್ಟ್ರದಲ್ಲಿ ನಿತ್ಯ 6 ಸಾವಿರಕ್ಕೂ ಅಧಿಕ ಪ್ರಮಾಣದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನಲೆ ಕರ್ನಾಟಕ ರಾಜ್ಯದಲ್ಲೂ ಕೊರೋನಾ ಎರಡನೇ ಅಲೆಯ ಭೀತಿ ಶುರುವಾಗಿದ್ದು ಕೊರೊನಾ ನಿಯಂತ್ರಣಕ್ಕೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರು ಕೊರೋನಾ ನೆಗೆಟಿವ್ ವರದಿ ತಂದರೆ ಮಾತ್ರ ರಾಜ್ಯ ಪ್ರವೇಶ ಮಾಡುವಂತೆ ಆದೇಶ ನೀಡಿದ ಹಿನ್ನಲೆ ರಾಜ್ಯ ಸರ್ಕಾರದ ಆದೇಶದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಕೋವಿಡ್ ನೆಗೆಟಿವ್ ವರದಿ ಇಲ್ಲದೆ ರಾಜ್ಯ ಪ್ರವೇಶ ಮಾಡುವ ಖಾಸಗಿ ವಾಹನಗಳನ್ನು ಅಲ್ಲೆ ತಡೆಗಟ್ಟಿ ಕೋವಿಡ್ ವರದಿ ತೆಗೆದುಕೊಂಡು ಬನ್ನಿ ಎಂದು ಹೇಳಿ ವಾಪಸ್ ಕಳಿಸುತ್ತಿದ್ದಾರೆ.
ಇನ್ನು ಮಹಾರಾಷ್ಟ್ರದ ಮುಂಬೈ ಪುಣೆ ಯಂತಹ ಮಹಾನಗರ ಗಳಿಂದ ರಾಜ್ಯಕ್ಕೆ ಬರಲು ರಾಷ್ಟ್ರೀಯ ಹೆದ್ದಾರಿ 4 ಪ್ರಮುಖ ರಸ್ತೆಯಾಗಿದೆ ರಾಜ್ಯದ 20 ಕ್ಕೂ ಹೆಚ್ಚು ಜಿಲ್ಲೆಗಳಿಗೆ ತೆರಳಬೇಕು ಎಂದರೆ ಬೆಳಗಾವಿ ಜಿಲ್ಲೆಯನ್ನ ಪ್ರವೇಶ ಮಾಡಿಯೆ ಮುಂದೆ ಸಾಗಬೇಕು ಹಾಗಾಗಿ ಇದನ್ನ ರಾಜ್ಯದ ಹೆಬ್ಬಾಗಿಲು ಅಂತಾನೆ ಕರೆಯಲಾಗುತ್ತದೆ ನಿತ್ಯ ಮಹಾರಾಷ್ಟ್ರದಿಂದ ರಾಜ್ಯಕ್ಕೆ 12 ಸಾವಿರಕ್ಕೂ ಅದೀಕ ವಾಹನಗಳು ಸಂಚರಿಸುತ್ತವೆ.
ಹಾಗಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ಗಡಿಯಲ್ಲಿರುವ ಕುಗನೊಳ್ಳಿ ಟೋಲ್ ಬಳಿಯೆ ವಾಹನಗಳನ್ನ ತಡೆದು ಪೊಲೀಸರು ವಾಪಸ್ ಕಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕುಗನೊಳ್ಳಿ ಟೋಲ್ ಬಳಿ ಪೊಲೀಸರು ಬೀಡು ಬಿಟ್ಟಿದ್ದು ಪ್ರತಿಯೊಂದು ವಾಹನ ತಪಾಸನೆ ಮಾಡಿ ಬಳಿಕ ವರದಿ ಇದ್ದವರನ್ನು ಮಾತ್ರ ರಾಜ್ಯ ಪ್ರವೇಶ ಮಾಡಲು ಅನುವು ಮಾಡಿಕೊಡುತ್ತಿದ್ದಾರೆ.
ಬಸ್ ಹತ್ತಲು ವರದಿ ಕಡ್ಡಾಯ
ಇನ್ನು ಖಾಸಗಿ ವಾಹನಗಳ ತಪಾಸಣೆಗೆ ಮುಂದಾದ ಬೆನ್ನಲೆ ನೂರಾರು ಪ್ರಯಾಣಿಕರು ಸರ್ಕಾರಿ ಬಸ್ ಗಳ ಮೂಲಕ ರಾಜ್ಯ ಪ್ರವೇಶ ಮಾಡಲು ಶುರು ಮಾಡಿದ್ದಾರೆ ಪೊಲೀಸ ಇಲಾಖೆ ಬರಿ ಖಾಸಗಿ ವಾಹನಗಳನ್ನ ಮಾತ್ರ ತಡೆದು ತಪಾಸಣೆ ಮಾಡುತ್ತಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಾರಿಗೆ ವಾಹನಗಳಲ್ಲಿ ಬರುವವರನ್ನ ನೇರವಾಗಿ ಬಿಟ್ಟು ಕಳಿಸುತ್ತಿದ್ದಾರೆ ಇದರಿಂದ ಜನ ತಮ್ಮ ಖಾಸಗಿ ವಾಹನ ಬಿಟ್ಟು ಸಾರಿಗೆ ಬಸ್ ಗಳತ್ತ ಮುಖ ಮಾಡಿದ್ದರು.
ಆದರೆ, ಜಿಲ್ಲಾಡಳಿತ ಸಂಜೆ ಹೊತ್ತಿಗೆ ಸರಕಾರಿ ಬಸ್ ಹತ್ತಲು ಕೋವಿಡ್ ನೆಗೆಟಿವ್ ವರದಿಯನ್ನ ಕಡ್ಡಾಯ ಮಾಡಿದೆ. ಇವತ್ತು ಇಡಿ ದಿನ ರಾಜ್ಯಕ್ಕೆ ಬಂದ್ ಸರ್ಕಾರಿ ಬಸ್ ಗಳನ್ನ ತಡೆದ ಪೊಲೀಸರು ನಾಳೆಯಿಂದ ಕೋವಿಡ್ ನೆಗೆಟಿವ್ ವರದಿ ಇದ್ದವರನ್ನ ಮಾತ್ರ ಬಸ್ ನಲ್ಲಿ ಹತ್ತಿಸಿಕೊಂಡು ಬನ್ನಿ ಅಂತಹವರಿಗೆ ಮಾತ್ರ ಟಿಕೇಟ್ ನೀಡಬೇಕು ಇಲ್ಲವಾದಲ್ಲಿ ನಿರ್ವಾಹಕರ ಮೇಲೆ ಕೆಸ್ ದಾಖಲಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಜೆ.ಪಿ. ನಡ್ಡಾ ಭೇಟಿ ಮಾಡಿದ ಶಾಸಕ ಯತ್ನಾಳ್, ಪಕ್ಷದ ಶಿಸ್ತು ಕಾಪಾಡುವಂತೆ ಯತ್ನಾಳ್ಗೆ ಸೂಚನೆಅಡ್ಡದಾರಿ ಹಿಡಿದ ಸವಾರರು
ಇನ್ನು ಪ್ರಮುಖ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸರು ತಪಾಸಣೆಗೆ ಮುಂದಾದ ಬೆನ್ನಲೆ ಕೋವಿಡ್ ವರದಿ ಇಲ್ಲದೆ ಇರುವ ಕೆಲ ಸವಾರರು ಅಡ್ಡದಾರಿಗಳನ್ನ ಹಿಡಿದು ರಾಜ್ಯ ಪ್ರವೇಶ ಮಾಡುತ್ತಿದ್ದಾರೆ. ಕಾಗವಾಡ ತಾಲೂಕಿನ ಮಂಗಸುಳಿ ಮಾರ್ಗದಿಂದ ರಾಜ್ಯಕ್ಕೆ ಬಂದರೆ ಹುಕ್ಕೇರಿ ತಾಲೂಕಿನ ಸಂಕೇಶ್ವರ, ಹಿಟ್ನಿ ಗಡಿಯ ಮಾರ್ಗದ ಕಳ್ಳ ದಾರಿಗಳ ಮೂಲಕ ರಾಜ್ಯ ಪ್ರವೇಶವನ್ನ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರದ ಆದೇಶಕ್ಕೆ ಜನ ಹೈರಾನಾಗಿ ಹೋಗಿದ್ದಾರೆ. ದೂರದ ಊರುಗಳಿಗೆ ಪ್ರವಾಸಕ್ಕೆ ಅಂತ ತೆರಳಿದ ಜನ ಈಗ ರಾಜ್ಯ ಪ್ರವೇಶಕ್ಕೆ ಪರದಾಡುವಂತಾಗಿದೆ. ಈ ರೀತಿ ಏಕಾಏಕಿ ಕೋವಿಡ್ ವರದಿ ಕೇಳಿದ್ರೆ ನಾವು ಎಲ್ಲಿಂದ ತರೋನ ವಾಪಸ್ ಹೋಗಿ ಎಂದರೆ ನಾವು ಎಲ್ಲಿಗೆ ಹೋಗಬೇಕಿ ಎಂದು ಪ್ರಯಾಣಿಕರು ಪೊಲೀಸರ ಜೋತೆ ವಾಗ್ವಾದ ನಡೆಸುತ್ತಿದ್ದಾರೆ. ನಮಗೆ ಮಹಾರಾಷ್ಟ್ರದಲ್ಲಿ ವರದಿ ಸಿಗುವುದು ವಿಳಂಬ ವಾಗುತ್ತಿದೆ. ಹಾಗಾಗಿ ಗಡಿಯಲ್ಲೆ ನಮ್ಮ ಕೋವಿಡ್ ಟೆಸ್ಟ್ ನಡೆಸಬೇಕು ಇಲ್ಲಿ ರ್ಯಾಪಿಡ್ ಟೆಸ್ಟ್ ನಡೆಸುವ ವ್ಯವಸ್ಥೆಯನ್ನ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Published by:
MAshok Kumar
First published:
February 23, 2021, 6:12 AM IST