ಕರ್ನಾಟಕ- ಮಹಾರಾಷ್ಟ್ರ ಬಸ್ ಸಂಚಾರ ಪುನರಾರಂಭ; 3 ದಿನ ಬಸ್​ ಸ್ಥಗಿತದಿಂದ ಕೋಟ್ಯಾಂತರ ರೂ. ‌ನಷ್ಟ

ಮೂರು ದಿನಗಳ ಬಸ್ ಸಂಚಾರ ಸ್ಥಗಿತದಿಂದ ಬೆಳಗಾವಿ ವಾಯುವ್ಯ ಸಾರಿಗೆ ವಿಭಾಗಕ್ಕೆ 50 ಲಕ್ಷ ನಷ್ಟ ಆಗಿದೆ. ಚಿಕ್ಕೋಡಿ ವಿಭಾಗಕ್ಕೆ 1 ಕೋಟಿ ರೂ. ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ.

ಕನ್ನಡ ಕ್ರಿಯಾ ಸಮಿತಿಯಿಂದ ಅರ್ಜಿ

ಕನ್ನಡ ಕ್ರಿಯಾ ಸಮಿತಿಯಿಂದ ಅರ್ಜಿ

  • Share this:
ಬೆಳಗಾವಿ (ಮಾ. 16): ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡಾಟ ಹಿನ್ನೆಲೆಯಲ್ಲಿ ಅಂತರಾಜ್ಯ ಬಸ್ ಸಂಚಾರ 3 ದಿನಗಳಿಂದ ಸ್ಥಗಿತಗೊಂಡಿತ್ತು. ಇದೀಗ ಉಭಯ ರಾಜ್ಯ ಅಧಿಕಾರಿಗಳು ಮಾತುಕತೆ ನಡೆಸಿ ನಿನ್ನೆಯಿಂದ  ಬಸ್ ಸಂಚಾರ ಆರಂಭಿಸಿದ್ದಾರೆ. ಮೂರು ದಿನಗಳ ಬಸ್ ಸಂಚಾರದ ಸ್ಥಗಿತದಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದ್ದು, ಮತ್ತೊಂದು ಕಡೆ ವಾಯುವ್ಯ ಸಾರಿಗೆ ಇಲಾಖೆಗೆ ಕೋಟ್ಯಾಂತರ ರೂ. ನಷ್ಟ ಆಗಿದೆ.

ಬೆಳಗಾವಿ ಗಡಿ ವಿಚಾರವಾಗಿ ಶಿವಸೇನೆ ಪುಂಡಾಟಕ್ಕೆ ಕೊನೆಯೇ ಇಲ್ಲದಂತೆ ಆಗಿದೆ. ಒಂದಲ್ಲ ಒಂದು ಕಾರಣಕ್ಕೆ ಪ್ರತಿದಿನ ಕರ್ನಾಟಕ, ಕನ್ನಡಿಗರ ಜತೆಗೆ ಜಗಳಕ್ಕೆ ಶಿವಸೇನೆ ಬರುತ್ತಿದೆ. ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವ ಕೆಲಸ ಮಾಡುತ್ತದೆ. ಮಹಾರಾಷ್ಟ್ರ ಇತ್ತೀಚೆಗೆ ಕನ್ನಡ ಭಾಷೆಯ ಬೋರ್ಡ್ ಹೊಂದಿರುವ ಅಂಗಡಿಗಳ ಮೇಲೆ ದಾಳಿ‌ ನಡೆಸಿ ಪುಂಡಾಟ ಪ್ರದರ್ಶನ ಮಾಡಿತ್ತು. ಇದಕ್ಕೆ ಉತ್ತರವಾಗಿ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ಮರಾಠಿ ಬೋರ್ಡ್​ಗಳಿಗೆ ಮಸಿ ಬಳಿದಿದ್ದರು. ನಂತರ ಸಾರಿಗೆ ಬಸ್ ಗಳನ್ನು ಗುರಿಯಾಗಿ ಇಟ್ಟುಕೊಂಡು ದಾಳಿ ಮಾಡಲು ಶಿವಸೇನೆ ಮುಂದಾಗಿತ್ತು.

ಕರ್ನಾಟಕ- ಮಹಾರಾಷ್ಟ್ರ ನಡುವಿನ ಸಾರಿಗೆ ಸಂಚಾರವನ್ನು 4 ದಿನಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು. ವಾಯುವ್ಯ ಸಾರಿಗೆ ಬಸ್ ಗಳು ಗಡಿ ಭಾಗದವರೆಗೆ ಮಾತ್ರ ಸಂಚಾರ ನಡೆಸಿದ್ದವು. ಇದರಿಂದ ಪ್ರಯಾಣಿಕರು ಪರದಾಟ ಅನುಭವಿಸಿದ್ದರು. ಬೆಳಗಾವಿಯಿಂದ ನಿತ್ಯ ‌ಮಹಾರಾಷ್ಟ್ರಕ್ಕೆ 300 ಬಸ್ ಸಂಚಾರ ನಡೆಯುತ್ತದೆ.‌ ಅದೇ ರೀತಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ‌58 ಬಸ್ ಗಳ ಆಗಮನ ಆಗುತ್ತವೆ. ಇದೆಲ್ಲ ನಿಂತು ಹೋಗಿತ್ತು. ನಿನ್ನೆಯಿಂದ ಎರಡು ರಾಜ್ಯದ ಅಧಿಕಾರಿಗಳು ಮಾತುಕತೆ ನಡೆಸಿ ಮತ್ತೆ ಬಸ್ ಸಂಚಾರ ಆರಂಭಿಸಲಾಗಿದೆ.

ಇದನ್ನೂ ಓದಿ: ಸಿ.ಡಿ ಕೇಸ್​ನಲ್ಲಿ ಡಿಕೆ ಶಿವಕುಮಾರ್ ತಮ್ಮ ಹೆಸರನ್ನು ತಾವೇ ತಳುಕು ಹಾಕಿಕೊಳ್ಳುತ್ತಿದ್ದಾರೆ; ಸಿ.ಟಿ ರವಿ

ಮೂರು ದಿನಗಳ ಬಸ್ ಸಂಚಾರ ಸ್ಥಗಿತದಿಂದ ಬೆಳಗಾವಿ ವಾಯುವ್ಯ ಸಾರಿಗೆ ವಿಭಾಗಕ್ಕೆ 50 ಲಕ್ಷ ನಷ್ಟ ಆಗಿದೆ. ಚಿಕ್ಕೋಡಿ ವಿಭಾಗಕ್ಕೆ 1 ಕೋಟಿ ರೂ. ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ‌ಕೊವೀಡ್ ಕಾರಣದಿಂದ ಮೊದಲೇ ಸಾರಿಗೆ ಇಲಾಖೆ ನಷ್ಟ ಅನುಭವಿಸುತ್ತಿದ್ದು. ಇದೀಗ ಶಿವಸೇನೆ ಪುಂಡಾಟ ಗಾಯದ ಮೇಲೆ ಬರೆ ಎಳೆದಿದೆ. ಶಿವಸೇನೆ, ಎಂಇಎಸ್ ಪುಂಡಾಟ ಗಡಿಭಾಗದಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ತಕ್ಕ ಪಾಠ ಕಲಿಸಬೇಕು ಎನ್ನುವುದು ಹೋರಾಟಗಾರರ ಆಗ್ರಹವಾಗಿದೆ.

ಈ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ಶಿವಸೇನೆ ಕಚೇರಿ ಬಂದ್ ಮಾಡಬೇಕು. ಶಿವಸೇನೆ ಬೋರ್ಡ್ ಹಾಕಕೊಂಡು ಓಡಾಡುವ ವಾಹನ ಜಪ್ತಿ‌ ಮಾಡಬೇಕು ಎನ್ನುವ ಆಗ್ರಹ ಮಾಡಲಾಗಿದೆ. ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ನಿನ್ನೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಭೇಟಿಯಾಗಿ ಮನವಿ ಸಲ್ಲಿಕೆ ಮಾಡಿದ್ದಾರೆ. ಶಿವಸೇನೆ ಕಚೇರಿ ಬಂದ್ ಆದರೆ ಮಾತ್ರ ಬೆಳಗಾವಿಯಲ್ಲಿ ಶಾಂತಿ‌ ನೆಲೆಸಲಿದೆ ಎಂದು ಹೋರಾಟಗಾರರು ಹೇಳಿದ್ದಾರೆ.
Published by:Sushma Chakre
First published: