HOME » NEWS » District » BEEDI INDUSTRY IS IN TROUBLE MANGALORE BEEDI LABOR IS WAITING FOR AN ALTERNATIVE SYSTEM AKP SESR

ಸಂಕಷ್ಟದಲ್ಲಿದೆ ಬೀಡಿ ಉದ್ಯಮ, ಪರ್ಯಾಯ ವ್ಯವಸ್ಥೆಗಾಗಿ ಕಾಯುತ್ತಿದ್ದಾರೆ ಕಾರ್ಮಿಕರು

ಒಂದೆಡೆ ಸರಕಾರದಿಂದ ದೊರೆಯದ ಪ್ರೋತ್ಸಾಹ, ಇನ್ನೊಂದೆಡೆ ಕುಸಿಯುತ್ತಿರುವ ಉದ್ಯಮ ಬೀಡಿ ಕಾರ್ಮಿಕರನ್ನು ಕಂಗೆಡಿಸಿದೆ. 

news18-kannada
Updated:February 28, 2021, 7:14 AM IST
ಸಂಕಷ್ಟದಲ್ಲಿದೆ ಬೀಡಿ ಉದ್ಯಮ, ಪರ್ಯಾಯ ವ್ಯವಸ್ಥೆಗಾಗಿ ಕಾಯುತ್ತಿದ್ದಾರೆ ಕಾರ್ಮಿಕರು
ಬೀಡಿ ತಯಾರಿಕೆ
  • Share this:
ಮಂಗಳೂರು (ಫೆ. 28):  ಕೋಟ್ಯಾಂತರ ಕುಟುಂಬಗಳಿಗೆ ಅನ್ನ ನೀಡುತಿದ್ದ ಬೀಡಿ ಉದ್ಯಮ ದಿನದಿಂದ ದಿನಕ್ಕೆ ಅವಸಾನದತ್ತ ಸಾಗುತ್ತಿದೆ. ಒಂದೆಡೆ ಕಾರ್ಮಿಕರಿಲ್ಲದೆ ಇನ್ನೊಂದೆಡೆ ಸರಕಾರದ ನೂರೂರು ಷರತ್ತುಗಳು ಈ ಉದ್ಯಮವನ್ನು ಅವಸಾನದೆಡೆಗೆ ಸಾಗಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಜೊತೆ ಮಾಡಿಕೊಂಡ ಒಡಂಬಡಿಕೆಯಂತೆ ತಂಬಾಕುಯುಕ್ತ ಬೀಡಿಯನ್ನು ನಿಷೇಧಿಸುವ ಮೊದಲು ಈ ಉದ್ಯಮದಲ್ಲಿ ತೊಡಗಿಕೊಂಡ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಪ್ರಯತ್ನ ಈವರೆಗೂ ನಡೆದಿಲ್ಲ. ಈ ಕಾರಣಕ್ಕಾಗಿ ಇತ್ತ ಕೆಲಸವೂ ಇಲ್ಲದೆ, ಆದಾಯವೂ ಇಲ್ಲದೆ ಲಕ್ಷಾಂತರ ಕುಟುಂಬಗಳ ಬದುಕು ಡೋಲಾಯಮಾನವಾಗಿದೆ.  ಹಿಂದೊಮ್ಮೆ  ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದ ಬೀಡಿ ಉದ್ಯಮ ಇದೀಗ ಅವಸಾನದ ಹಂತಕ್ಕೆ ತಲುಪಿದೆ.

ಬೀಡಿ ಕೈಗಾರಿಕೆಯಿಂದಾಗಿ ಒಂದು ಹಂತದಲ್ಲಿ ಲಕ್ಷಾಂತರ ಕಾರ್ಮಿಕರು ಉದ್ಯೋಗ ಪಡೆದುಕೊಂಡು ಕೊಟ್ಯಾಂತರ ಕುಟುಂಬಗಳಿಗೆ ರಕ್ಷಣೆಯಾಗಿದ್ದವು.   ರಾಜ್ಯದಲ್ಲಿ ಒಟ್ಟು 8 ಲಕ್ಷ ಬೀಡಿ ಕಾರ್ಮಿಕರಿದ್ದರು. ಅದರಲ್ಲೂ ಉಡುಪಿ ಸೇರಿದಂತೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದೊಮ್ಮೆ 5 ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ಆದರೆ ಈ ಸಂಖ್ಯೆ ಇದೀಗ ದಿನದಿಂದ ದಿನಕ್ಕೆ  ಕುಸಿಯುವುದರ ಜೊತೆಗೆ ಪ್ರಸ್ತುತ ಈ ಉದ್ಯಮದಲ್ಲಿ ತೊಡಗಿಕೊಂಡ ಕಾರ್ಮಿಕರಲ್ಲಿ ಉದ್ಯೋಗವೂ ಅಸ್ತಿರದಲ್ಲಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಆರ್ಥಿಕ ಸ್ಥಿತಿ ನಿಯಂತ್ರಣ ಮಾಡುತ್ತಿದ್ದ ಬೀಡಿ ಉದ್ಯಮವು ಸರಕಾರದ ಹಲವು ಷರತ್ತುಗಳ ಸುಳಿಗೆ ಸಿಲುಕಿ ನಶಿಸುವ ಹಂತದಲ್ಲಿದೆ.

ಭಾರತ ವಿಶ್ವ ತಂಬಾಕು ಮುಕ್ತ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ದೇಶದಲ್ಲಿ ತಂಬಾಕುಮುಕ್ತ ವ್ಯವಸ್ಥೆಗೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಬೀಡಿಯೂ ತಂಬಾಕು ಯುಕ್ತ ಉತ್ಪನ್ನವಾಗಿರುವ ಕಾರಣಕ್ಕೆ ಬೀಡಿ ಮಾರಾಟಕ್ಕೆ ಹಲವು ಷರತ್ತುಗಳನ್ನು ವಿಧಿಸಿ, ಬೀಡಿ ಮಾರಾಟವನ್ನೇ ನಿಷೇಧಿಸುವ ಹಂತಕ್ಕೆ ತಲುಪಿದೆ. ದೇಶದಲ್ಲಿ ಸುಮಾರು 1 ಕೋಟಿಯಷ್ಟು ನೇರ ಬೀಡಿ ಕಾರ್ಮಿಕರಿದ್ದು, ಇವರ ಜೊತೆಗೆ ಕೃಷಿಕರು, ಎಲೆ ಸಂಗ್ರಹಗಾರರು ಸೇರಿ 3 ಕೋಟಿಯಷ್ಟು ಕಾರ್ಮಿಕರು ಬೀಡಿ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನು ಓದಿ: ಬೆಳಗಾವಿಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ; ಪ್ರಮೋದ ಮುತಾಲಿಕ್

ಬೀಡಿ ಕಾರ್ಮಿಕರು ಅತ್ಯಂತ ಕೆಳಸ್ತರದಲ್ಲಿ ದುಡಿಯುತ್ತಿದ್ದು, ದೈನಂದಿನ ಬಳಕೆಯ ಸಾಮಾಗ್ರಿಗಳಿಗೆ ದರ ಏರಿಕೆಯಿಂದಾಗಿ ಬದುಕು ದುಸ್ಥರವಾಗಿದೆ. 1 ಸಾವಿರ ಬೀಡಿ ಸುತ್ತಿದರೆ ಕಾರ್ಮಿಕರು ಸಿಗುವುದು 200 ರೂಪಾಯಿ, ವಾರಕ್ಕೆ 1500 ಬೀಡಿ ಸುತ್ತುವ ಕಾರ್ಮಿಕರಿಗೆ ತಿಂಗಳಿಗೆ ದೊರೆಯುವುದು ಸುಮಾರು 700-800  ರೂಪಾಯಿ. ಇದೇ ಹಣದಲ್ಲಿ ಇಡೀ ಕುಟುಂಬವನ್ನು ಸಾಕಿ, ವಿದ್ಯಾವಂತರನ್ನಾಗಿ ಮಾಡುವ ಲಕ್ಷಾಂತರ ಕುಟುಂಬಗಳಿದ್ದು, ಬೀಡಿ ಕೆಲಸವಲ್ಲದೆ, ಪರ್ಯಾಯ ಕೆಲಸವೂ ಇಲ್ಲದ ಕಾರಣ ಈ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿಯೂ ನಿರ್ಮಾಣಗೊಳ್ಳಲಿದೆ.

ವಿಶ್ವ ಆರೋಗ್ಯ ಸಂಸ್ಥೆ 2020 ರ ಒಳಗಾಗಿ ತಂಬಾಕು ಮುಕ್ತ ವಿಶ್ವ ಮಾಡುವ ಲಕ್ಷ್ಯ ಇರಿಸಿಕೊಂಡಿದ್ದರೂ, ಗುರಿ ತಲುಪಲಾಗಿಲ್ಲ. ಈ ನಿಟ್ಟಿನಲ್ಲಿ ಕಾರ್ಯಾಚರಣೆಗಳು ಸರಾಗವಾಗಿ ನಡೆಯುತ್ತಿದೆ. ಇನ್ನೊಂದೆಡೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಧೂಮಪಾನವನ್ನು ನಿಷೇಧಿಸಿ ಕಾನೂನು ಜಾರಿ ಮಾಡಿವೆ. ಒಂದೆಡೆ ಸರಕಾರದಿಂದ ದೊರೆಯದ ಪ್ರೋತ್ಸಾಹ, ಇನ್ನೊಂದೆಡೆ ಕುಸಿಯುತ್ತಿರುವ ಉದ್ಯಮ ಬೀಡಿ ಕಾರ್ಮಿಕರನ್ನು ಕಂಗೆಡಿಸಿದೆ.
Published by: Seema R
First published: February 28, 2021, 7:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories