HOME » NEWS » District » BED SHORTAGE IN CHAMARAJANAGAR THE DISTRICT HOSPITAL WILL BECOME A FULL FLEDGED COVID CENTER NCHM MAK

CoronaVirus: ಚಾಮರಾಜನಗರದಲ್ಲಿ ಬೆಡ್ ಕೊರತೆ; ಸಂಪೂರ್ಣ ಕೋವಿಡ್ ಸೆಂಟರ್​ ಆಗಲಿದೆ ಜಿಲ್ಲಾಸ್ಪತ್ರೆ

ಶೇ.70 ರಿಂದ ಶೇ.80 ಮಂದಿ ರೋಗ ಲಕ್ಷಣರಹಿತವಾಗಿದ್ದು, ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಜಿಲ್ಲೆಯಲ್ಲಿ ಸದ್ಯ 500ಕ್ಕೂ ಸಕ್ರೀಯ ಪ್ರಕರಣ ಇದ್ದು ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

news18-kannada
Updated:April 20, 2021, 7:32 AM IST
CoronaVirus: ಚಾಮರಾಜನಗರದಲ್ಲಿ ಬೆಡ್ ಕೊರತೆ; ಸಂಪೂರ್ಣ ಕೋವಿಡ್ ಸೆಂಟರ್​ ಆಗಲಿದೆ ಜಿಲ್ಲಾಸ್ಪತ್ರೆ
ಚಾಮರಾಜನಗರ ಜಿಲ್ಲಾ ಆಸ್ಪತ್ರೆ.
  • Share this:
ಚಾಮರಾಜನಗರ (ಏಪ್ರಿಲ್ . 19); ಚಾಮರಾಜನಗರ ಜಿಲ್ಲೆಯಲ್ಲಿ  ದಿನೇದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೆಡ್ ಕೊರತೆ ಎದುರಾಗುವ ಸಾಧ್ಯತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಬೆಡ್ ಕೊರತೆ ನೀಗಿಸಲು ಕ್ರಮ ವಹಿಸಿರುವ ಜಿಲ್ಲಾಡಳಿತ ಚಾಮರಾಜನಗರ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆ ಯಾಗಿ ಪರಿವರ್ತಿಸಲು ನಿರ್ದರಿಸಿದೆ. ಅಲ್ಲದೆ ನಗರದಲ್ಲಿರುವ  ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಅಧ್ಯಯನ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಸಿದ್ದತೆ ನಡೆಸಲಾಗಿದೆ. ಹಾಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 100 ಬೆಡ್ ಗಳಿದ್ದು ಇಲ್ಲಿಗೆ ಕೇವಲ ಗಂಭೀರ ಸ್ವರೂಪದ ಕೇಸ್ ಗಳ ದಾಖಲು ಮಾಡಿಕೊಳ್ಳಲಾಗುತ್ತಿದ್ದು ಉಳಿದ ಸೋಂಕಿತರಿಗೆ ತಾಲೋಕು ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಶೇ.70 ರಿಂದ ಶೇ.80 ಮಂದಿ ರೋಗ ಲಕ್ಷಣರಹಿತವಾಗಿದ್ದು, ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಜಿಲ್ಲೆಯಲ್ಲಿ ಸದ್ಯ 500ಕ್ಕೂ ಸಕ್ರೀಯ ಪ್ರಕರಣ ಇದ್ದು ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕೋವಿಡ್ ಆಸ್ಪತ್ರೆ ಮಾಡಲಾಗುವುದು ಇದರಿಂದ ಹೆಚ್ಚುವರಿಯಾಗಿ 150ಕ್ಕೂ ಹೆಚ್ಚು ಬೆಡ್ ಗಳು ಸಿಗಲಿವೆ  ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಗೆ ಬರುವ  ನಾನ್ ಕೋವಿಡ್  ರೋಗಿಗಳಿಗೆ ಖಾಸಗಿ ಜೆ.ಎಸ್‌ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು, ಇದಕ್ಕಾಗಿ ಕಳೆದ ಬಾರಿಯಂತೆ ಈ ಬಾರಿಯು ಜೆ.ಎಸ್.ಎಸ್. ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸದ್ಯಕ್ಕೆ ಜಿಲ್ಲೆಯಲ್ಲಿ ಬೆಡ್ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು ಕೊಳ್ಳೇಗಾಲ, ಯಳಂದೂರು ಗುಂಡ್ಲುಪೇಟೆ ತಾಲೋಕು ಆಸ್ಪತ್ರೆಗಳಲ್ಲು ಐಸಿಯು ಬೆಡ್ ಗಳಿವೆ, ಇದಲ್ಲದೆ ನಗರದಲ್ಲಿರುವ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಅಧ್ಯಯನ ಕೇಂದ್ರ ದಲ್ಲಿ 85 ಹಾಸಿಗೆ ಸಾಮರ್ಥ್ಯ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಿಗಧಿತ ಗುರಿಗಿಂತ ಹೆಚ್ಚು ಕೋವಿಡ್ ಟೆಸ್ಟ್ ಗಳನ್ನು ಮಾಡಲಾಗುತ್ತಿದೆ. ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿರುವ ಆರ್.ಟಿ.ಪಿ.ಸಿ.ಆರ್ ಲ್ಯಾಬ್ ನಲ್ಲಿ  ಪ್ರತಿದಿನ 1400 ಕ್ಕೂ ಹೆಚ್ಚು ಟೆಸ್ಟ್ ಗಳನ್ನು ಮಾಡಲಾಗುತ್ತಿದೆ. ಕೇವಲ 15 ದಿನಗಳ ಹಿಂದೆ ಶೇಕಡಾ 1 ಅಥವಾ 2 ರ ಆಸುಪಾಸಿನಲ್ಲಿದ್ದ ಪಾಸಿಟಿವಿಟಿ ದರ ಪ್ರಸ್ತುತ ಶೇಕಡಾ 6 ಕ್ಕಿಂತ ಹೆಚ್ಚಾಗಿದೆ.

ಇದನ್ನೂ ಓದಿ: Remdesivir ಪೂರೈಕೆ ವಿವಾದ; ಕೊರೋನಾ ಸಿಕ್ರೆ ಅದನ್ನ ಫಡ್ನವೀಸ್ ಬಾಯೊಳಗೆ ತುರುಕುತ್ತೇನೆ’ ಎಂದ ಶಿವಸೇನಾ ಶಾಸಕ!

ಸರ್ಕಾರ ಪ್ರತಿ ದಿನ 1000 ಗಂಟಲು ಮಾದರಿ ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲು ಗುರಿ ನೀಡಿದೆ. ಆದರೆ ಜಿಲ್ಲೆಯಲ್ಲಿ ಅದಕ್ಕಿಂತಲೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.  ಎಂದು ಚಾಮರಾಜನಗರ ಡಿ.ಎಚ್.ಓ.  ಡಾ.ಎಂ.ಸಿ.ರವಿ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿರುವ  ಎಲ್ಲಾ 48 ಐಸಿಯು ಬೆಡ್ ಗಳು  ಭರ್ತಿಯಾಗಿವೆ. ಈ ಪೈಕಿ  35 ಕೋವಿಡ್ ರೋಗಿಗಳು ಹಾಗು   ಕೋವಿಡ್ ಅಲ್ಲದ ಆದರೆ ಕೋವಿಡ್ ರೋಗ ಲಕ್ಷಣವುಳ್ಳ 13 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಸ್ಪತ್ರೆಯ ಕೋವಿಡ್ ನೂಡಲ್ ಅಧಿಕಾರಿ ಡಾ.ಮಹೇಶ್ ನ್ಯೂಸ್ 18 ಗೆ ತಿಳಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಲಿಕ್ವಿಡ್  ಮೆಡಿಕಲ್ ಆಕ್ಸಿಜನ್ಪ್ಲಾಂಟ್ ಸಿದ್ದಗೊಂಡಿದ್ದು ಅದು ಶೀಘ್ರದಲ್ಲೇ ಕಾರ್ಯಾರಂಭಮಾಡಲಿದೆ. ಇದರಿಂದ ಇನ್ನೂ 50 ಐಸಿಯು ಬೆಡ್ ಗಳನ್ನು ಅಳವಡಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

(ಎಸ್.ಎಂ.ನಂದೀಶ್ ಚಾಮರಾಜನಗರ) 
Published by: MAshok Kumar
First published: April 20, 2021, 7:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories