ಭಿಕ್ಷೆ ಬೇಡುತ್ತಿದ್ದ ವೃದ್ಧನನ್ನು ಮನೆ ಸೇರಿಸಿತು ಕೊರೋನಾ!; ಮೈಸೂರಿನಲ್ಲೊಂದು ಅಪರೂಪದ ಘಟನೆ

Mysore News: ಉತ್ತರ ಪ್ರದೇಶದಿಂದ ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕರಮ್ ಸಿಂಗ್ ಅವರನ್ನು ಮರಳಿ ತಮ್ಮ ಮಕ್ಕಳ ಬಳಿ ಸೇರಿಸಿದ್ದು ಕೊರೋನಾ ಲಾಕ್​ಡೌನ್. ಮೈಸೂರಿನ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಅವರು ಕೊನೆಗೂ ತಮ್ಮವರನ್ನು ಸೇರಕೊಂಡಿದ್ದಾರೆ.

news18-kannada
Updated:June 6, 2020, 7:22 AM IST
ಭಿಕ್ಷೆ ಬೇಡುತ್ತಿದ್ದ ವೃದ್ಧನನ್ನು ಮನೆ ಸೇರಿಸಿತು ಕೊರೋನಾ!; ಮೈಸೂರಿನಲ್ಲೊಂದು ಅಪರೂಪದ ಘಟನೆ
ಈಗ ಹೀಗಾಗಿದ್ದಾರೆ ಕರಮ್ ಸಿಂಗ್
  • Share this:
ಮೈಸೂರು (ಜೂ. 5): ಕೊರೋನಾ ಲಾಕ್​ಡೌನ್​ನಿಂದಾಗಿ  ಮೈಸೂರಿನಲ್ಲಿ ನಡೆದಿದ್ದ ಅಪರೂಪದ ಪ್ರಕರಣವೊಂದಕ್ಕೆ‌ ಇಂದು ಅಂತ್ಯ ಸಿಕ್ಕಿದೆ. ದೇಶಕ್ಕೆ ಮಾರಕವಾದ ಲಾಕ್‌ಡೌನ್‌ ಮೈಸೂರಿನಲ್ಲಿ ವೃದ್ದರೊಬ್ಬರಿಗೆ ವರದಾನವಾಗಿತ್ತು. ಸಾಮಾನ್ಯ ಸ್ಥಿತಿಯಲ್ಲಿ ಬೀದಿಗೆ ಬಂದಿದ್ದ ಬದುಕು, ಲಾಕ್‌ಡೌನ್‌ನಿಂದಾಗಿ ಸರಿಹೋಗಿದೆ. ಕಳೆದುಕೊಂಡಿದ್ದ ಕುಟುಂಬ ಮತ್ತೆ ಸಿಕ್ಕಿದೆ. ಅಪ್ಪ ಸತ್ತೇ ಹೋಗಿದ್ದಾರೆ ಅಂದುಕೊಂಡಿದ್ದ ಮಕ್ಕಳು ಆ ವೃದ್ದನನ್ನು ಮತ್ತೆ ನೋಡಿ ಸಂತಸ ಪಟ್ಟಿದ್ದಾರೆ. ಬೀದಿಯಲ್ಲಿ ಭಿಕ್ಷುಕನಾಗಿದ್ದ ಆ ವೃದ್ದನ ಬದುಕಿಗೆ ಲಾಕ್‌ಡೌನ್‌ ಮತ್ತೆ ಮನೆ ದಾರಿ ತೋರಿದೆ.

ಹೌದು, ಸತ್ತೇ ಹೋಗಿದ್ದಾರೆ ಅಂದುಕೊಂಡಿದ್ದ ತಂದೆ ಮತ್ತೆ ಬದುಕಿ ಬಂದಿದ್ದಾರೆ. ನಾಲ್ಕು ವರ್ಷಗಳಿಂದ ಕಾಣೆಯಾಗಿದ್ದ ತಂದೆಯನ್ನು ಕಾಣಲು ಮಕ್ಕಳು ಕಾತುರದಿಂದ ಕಾಯುತ್ತಿದ್ದಾರೆ. ಮಕ್ಕಳಿಂದ ದೂರಾಗಿ ಮಂಕಾಗಿದ್ದ ಆ ಹಿರಿಯ ಜೀವ, ಮೈಸೂರಿಗೆ ಧನ್ಯವಾದ ಅರ್ಪಿಸಿ ರೈಲು ಹತ್ತಿ ತನ್ನೂರಿಗೆ ತೆರಳಿದ್ದಾರೆ. ಕೊರೋನಾ ಲಾಕ್‌ಡೌನ್‌ ಎಲ್ಲರಿಗೂ ಶಾಪವಾಗಿದ್ದರೆ ಈ ವೃದ್ದನಿಗೆ ಮಾತ್ರ ವರದಾನವಾಗಿದೆ.

Mysuru Lockdown: because of Corona Lockdown Uttar Pradesh Man who Begging in Mysore returned back to his Home.
ಹೀಗೆ ಮೈಸೂರಿನಲ್ಲಿ ಅಲೆಯುತ್ತಿದ್ದರು ಕರಮ್ ಸಿಂಗ್


ಹೊಸ ಬಟ್ಟೆ, ರೈಲು ಹತ್ತುವಾಗ ಹೊಸ ಚಪ್ಪಲಿಯೂ ಬಂತು, ನಾಳೆ ನಿದ್ರೆಯಿಂದ ಏಳುವ ಹೊತ್ತಿಗೆ ಹೊಸ ಜೀವನವೂ ಸಿಗಲಿದೆ. ಇದು ರೈಲು ಬೋಗಿಯ ಮೇಲೆ ಕುಳಿತು ಆರ್ದ್ರ ಹೃದಯ ಹೊತ್ತು ಸಾಗುತ್ತಿರುವ ಇವರು ಕರಮ್ ಸಿಂಗ್ ಅಂತ. ಮೂಲತಃ ಉತ್ತರ ಪ್ರದೇಶ ರಾಜ್ಯದವರು. ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕರಮ್ ಸಿಂಗ್ ಅವರನ್ನು ಮರಳಿ ತಮ್ಮ ಮಕ್ಕಳ ಆಸರೆಗೆ ಸೇರಿಸಿದ್ದು ಕೊರೊನಾ. ಈ ಬಗ್ಗೆ ನ್ಯೂಸ್18 ವರದಿ ಕೂಡ ಪ್ರಸಾರ ಮಾಡಿತ್ತು. ಇದೀಗ ಕರಮ್ ಸಿಂಗ್ ನಾಲ್ಕು ವರ್ಷಗಳ ಅಜ್ಞಾತವಾಸ ಮುಗಿಸಿ ಹುಟ್ಟೂರಿನತ್ತ ಹೊರಟಿದ್ದಾರೆ.

ಇದನ್ನೂ ಓದಿ: Dawood Ibrahim: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಕೊರೋನಾ ಸೋಂಕು; ಪಾಕಿಸ್ತಾನದ ಕರಾಚಿಯಲ್ಲಿ ಚಿಕಿತ್ಸೆ

ಕರಮ್‌ಸಿಂಗ್ ಹಿರಿಯ ಮಗನಿಗೆ ಮದುವೆ ಮಾಡಲು ನಿರ್ಧಾರ ಮಾಡಿ, ಮಗನ ಮದುವೆಗೆ ಬೇಕಾದ ಹಣ ದುಡಿಯೋಕೆ ಅಂತ ಮನೆಬಿಟ್ಟು ಬಂದಿದ್ದರು. ಕರಮ್‌ ಸಿಂಗ್‌ ದಾರಿ ತಪ್ಪಿ ಉತ್ತರಪ್ರದೇಶದಿಂದ ಹರಿದ್ವಾರದ ರೈಲು ಹತ್ತಿದ್ದರು.  ಹರಿದ್ವಾರದಲ್ಲಿ ದಾರಿ ತಪ್ಪಿದ್ದೆನೆಂದು ತಿಳಿದಾಗ ವಾಪಾಸ್‌ ಉತ್ತರಪ್ರದೇಶಕ್ಕೆ ಹೋಗಲು ಮತ್ತೊಂದು ರೈಲು ಹತ್ತಿದ್ದಾಗ ಆತ ಮತ್ತೊಮ್ಮೆ ದಾರಿ ತಪ್ಪಿ ಬೆಂಗಳೂರಿಗೆ ಬಂದಿದ್ದರು. ಕರ್ನಾಟಕದಲ್ಲಿನ ಭಾಷೆ, ಜನ, ಜಾಗ ಎಲ್ಲವನ್ನು ನೋಡಿದ ಇವರಿಗೆ ಬುದ್ದಿಭ್ರಮಣೆಯಾದಂತಾಗಿತ್ತು. ಏನೂ ತೋಚದಂತಾಗಿ ನಂತರ ನಡೆದುಕೊಂಡು ಬರುವಾಗ ಕಾರೊಂದರ ಸಹಾಯದಿಂದ ಮೈಸೂರಿಗೆ ತಲುಪಿದ್ದರು.

Mysuru Lockdown: because of Corona Lockdown Uttar Pradesh Man who Begging in Mysore returned back to his Home.
ಹೀಗೆ ಮೈಸೂರಿನಲ್ಲಿ ಅಲೆಯುತ್ತಿದ್ದರು ಕರಮ್ ಸಿಂಗ್
ಇನ್ನು ಲಾಕ್​ಡೌನ್ ಸಂದರ್ಭದಲ್ಲಿ ನಿರಾಶ್ರಿತರ ಕೇಂದ್ರ ಸೇರಿದ್ದ ಕರಮ್ ಸಿಂಗ್, ಎರಡು ತಿಂಗಳಿಂದಲೂ ಮಹಾನಗರ ಪಾಲಿಕೆ ಸುಪರ್ದಿಯಲ್ಲಿದ್ದರು.ಈ ಕೇಂದ್ರದಲ್ಲಿ ಎಲ್ಲರ ಆರೋಗ್ಯ ವೃದ್ದಿ ಹಾಗೂ ಅವರ ಆತ್ಮಸ್ಥೈರ್ಯ ಹೆಚ್ಚಿಸಿಲು ಮಾಡಿದ ಸಾಮಾಜಿಕ ಹಾಗೂ ದೈಹಿಕ ಕಾರ್ಯಕ್ರಮಗಳು ಕರಮ್‌ಸಿಂಗ್‌ರನ್ನು ಮತ್ತೆ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿತು. ಅದೊಂದು ದಿನ ಹಾಡು ಹೇಳುತ್ತಿದ್ದ ಕರಮ್ ‌ಸಿಂಗ್‌ರನ್ನ ಗಮನಿಸಿ ಅವರ ಕೈಗೆ ಮೈಕ್‌ ಕೊಟ್ಟಾಗ ಎಲ್ಲರಿಗಿಂತ ಚೆನ್ನಾಗಿಯೆ ಹಾಡು ಹೇಳಿದರು. ಕೊನೆಗೆ ಅವರನ್ನ ಸಂಪೂರ್ಣ ಶುಚಿಗೊಳಿಸಿ ಮಾಹಿತಿ ಕೇಳಿದಾಗ ತನ್ನ ಹಿನ್ನೆಲೆ ಹೇಳಿದ್ದಾರೆ.

ಇದನ್ನೂ ಓದಿ: Kerala Elephant Death: 14 ದಿನ ಉಪವಾಸದಿಂದ ನರಳಿ ಸಾವನ್ನಪ್ಪಿತ್ತು ಕೇರಳದ ಗರ್ಭಿಣಿ ಕಾಡಾನೆ

ತಕ್ಷಣ ಪೊಲೀಸರ ಸಹಾಯದಿಂದ ಉತ್ತರಪ್ರದೇಶದಲ್ಲಿನ ಅವರ ಮಕ್ಕಳ ಸಂಪರ್ಕ ಹುಡುಕಿ ಅವರನ್ನ ವಿಡಿಯೋ ಕಾಲ್‌ನಲ್ಲಿ ಮಾತನಾಡಿಸಿದ್ದಾರೆ. ನಮ್ಮಪ್ಪ ಸತ್ತೆ ಹೋಗಿದ್ದಾರೆ ಅಂದುಕೊಂಡಿದ್ದ ಮಕ್ಕಳಿಗೆ ತಂದೆಯನ್ನು ನೋಡಿ ಅಚ್ಚರಿಯಾಗಿತ್ತು. ಇದೀಗ ಅವರ ಹಿನ್ನೆಲೆ ತಿಳಿದುಕೊಂಡು, ಕುಟುಂಬಸ್ಥರನ್ನು ಹುಡುಕಿಸಿ ವಾಪಸ್ ಕಳುಹಿಸಿಕೊಟ್ಟಿದ್ದು ಚಿತ್ತಧಾಮ ಮತ್ತು ಕ್ರೆಡಿಟ್ ಐ ಸಂಸ್ಥೆಗಳು. ರೈಲು ಹತ್ತುವ ಕೊನೆ ಗಳಿಗೆಯಲ್ಲಿ ಕೆಲ ಸ್ವಯಂ ಸೇವಕರು ಹೊಸ ಚಪ್ಪಲಿ ತೊಡಿಸಿ ಸಂಭ್ರಮದಿಂದ ಬೀಳ್ಕೊಟ್ಟ ಸಂದರ್ಭ, ಇಡೀ ಮೈಸೂರಿಗೇ ಸಾರ್ಥಕತೆ ತಂದುಕೊಟ್ಟಿದೆ.

Mysuru Lockdown: because of Corona Lockdown Uttar Pradesh Man who Begging in Mysore returned back to his Home.
ಈಗ ಹೀಗಾಗಿದ್ದಾರೆ ಕರಮ್ ಸಿಂಗ್


ಒಟ್ಟಾರೆ, ಮೈಸೂರಿನಿಂದ ರೈಲಿನಲ್ಲಿ ಹೊರಟ ಕರಮ್ ಸಿಂಗ್, ಬೆಂಗಳೂರಿನಲ್ಲಿ ರಾಜಧಾನಿ ಎಕ್ಸ್​ಪ್ರೆಸ್​ ಹತ್ತಿದ್ದಾರೆ. ನಾಳೆ ಬೆಳಗ್ಗೆ 5 ಗಂಟೆ ಸುಮಾರಿಗೆ ದೆಹಲಿ ತಲುಪಲಿದ್ದಾರೆ. ಅಪ್ಪ ಸತ್ತೇ ಹೋಗಿದ್ದಾರೆ ಎಂದು ಭಾವಿಸಿ ತಿಥಿ ಮಾಡಿದ್ದ ಮಗ, ಇದೀಗ ಅಪ್ಪನನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಅಪ್ಪ- ಮಗನ ಸಮಾಗಮದ ಕ್ಷಣ ನೆನಪಿಸಿಕೊಂಡರೆ ಎಂಥವರಿಗೂ ರೋಮಾಂಚನವಾಗೋದಂತು‌ ಸುಳ್ಳಲ್ಲ.
First published: June 6, 2020, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading