ಎಮ್ಮೆಗಳಿಗೂ ಇಲ್ಲಿದೆ ಬ್ಯೂಟಿ ಪಾರ್ಲರ್; ಉಚಿತ ಸ್ನಾನ, ಹೇರ್ ಕಟ್, ಆಯಿಲ್ ಮಸಾಜ್!

ಒಟ್ಟಿನಲ್ಲಿ ಎಲ್ಲವನ್ನೂ ಈ ಪಾರ್ಲರ್​ನಲ್ಲಿ ಉಚಿತವಾಗಿ ಮಾಡುವ ವಿಜಯ ಅವರು ರೈತರಿಂದ ನಯಾಪೈಸೆ ಪಡೆಯುತ್ತಿಲ್ಲ. ಬದಲಾಗಿ ಎಮ್ಮೆಗಳು ಹಾಕುವ ಸಗಣಿ ಅವುಗಳ ಸ್ನಾನಕ್ಕೆ ಬಳಸುವ ನೀರನ್ನೂ ಸಹ ಹೊಲ ಗದ್ದೆಗಳಿಗೆ ಬಳಕೆ ಮಾಡಲಾಗ್ತಿದೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ವಿಜಯ್ ಅವರಿಗೆ ಲಾಭವಾಗುತ್ತಿದೆ.

ಎಮ್ಮೆಗಳ ಸ್ನಾನದ ಗೃಹ.

ಎಮ್ಮೆಗಳ ಸ್ನಾನದ ಗೃಹ.

  • Share this:
ಹುಕ್ಕೇರಿ; ಮಹಿಳೆಯರು, ಕಾಲೇಜು ಯುವತಿಯವರು ಹಾಗೂ ಸಿನಿಮಾ ನಟ- ನಟಿಯರು ತಮ್ಮ ಸೌಂದರ್ಯವರ್ದನೆಗೋಸ್ಕರ ಬ್ಯೂಟಿ ಪಾರ್ಲರ್​ಗಳ ಮೊರೆ ಹೋಗೋದು ಸಾಮಾನ್ಯ. ಆದರೆ ಇಲ್ಲೊಂದು ಊರಲ್ಲಿ ಎಮ್ಮೆಗಳಿಗಾಗೇ ಒಂದು ವಿಶೇಷ ಬ್ಯೂಟಿ ಪಾರ್ಲರ್ ಶುರುವಾಗಿದೆ. ಅಷ್ಟಕ್ಕೂ ಎಲ್ಲಿದೆ ಆ ಪಾರ್ಲರ್ ಎನದರ ವಿಶೇಷ ಅಂತೀರಾ? ಈ ಸ್ಟೋರಿ ಓದಿ.

ಹೌದು, ಅಧುನಿಕ ಜಗತ್ತಿನಲ್ಲಿ ಸೌಕರ್ಯಕ್ಕಿರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಕಟ್ಟುಮಸ್ತಾದ ದೇಹದ ಜತೆ ಮುಖದ ಸೌಂದರ್ಯ ಅಂದ ಚಂದಕ್ಕೆ ನಮ್ಮ ಗೃಹಣಿಯರೂ ಸೇರಿದಂತೆ ಕಾಲೇಜು ಯುವಕ- ಯುವತಿಯರು ಬ್ಯೂಟಿ ಪಾರ್ಲರ್​ಗಳ ಮೊರೆ ಹೋಗುವುದನ್ನು ನೋಡಿದ್ದೇವೆ. ಆದರೆ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದಲ್ಲಿ ಎಮ್ಮೆಗಳಿಗಾಗಿಯೇ ಒಂದು ಪಾರ್ಲರ್ ಶುರುವಾಗಿದೆ‌. ಎಮ್ಮೆಗಳಿಗೆ ಹೇರ್ ಕಟ್ ಮಾಡಿಸಿ ಅವುಗಳಿಗೆ ಸ್ನಾನವನ್ನೂ ಮಾಡಿಸಿ, ಎಣ್ಣೆ ಮಸಾಜ್ ಮಾಡಲಾಗುತ್ತದೆ. ದಿನವೊಂದಕ್ಕೆ 25 ರಿಂದ 30 ಎಮ್ಮೆಗಳಿಗೆ ಈ ರೀತಿ ಪಾರ್ಲರ್ ಸೇವೆ ಸಿಗುತ್ತಿದೆ.

ಅಂದಹಾಗೆ ಇದನ್ನೆಲ್ಲ ಮಾಡುತ್ತಿರುವುದು ಸ್ಥಳೀಯ ನಿವಾಸಿ ವಿಜಯ್ ಸೂರ್ಯವಂಶಿ.  ನದಿಗಳಲ್ಲಿ ಎಮ್ಮೆಗಳನ್ನು ತೊಳೆಯುವುದರಿಂದ ನದಿ ನೀರು ಕಲುಷಿತವಾಗುತ್ತೆ. ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತೆ. ಹೀಗಾಗಿ ನಾನು ಸರ್ಕಾರದಿಂದ ಅನುದಾನ ಪಡೆದು ಈ ಪಾರ್ಲರ್ ಓಪನ್ ಮಾಡಿದ್ದೇನೆ. ಸದ್ಯ ನಮ್ಮಲ್ಲಿ ದಿನಕ್ಕೆ 25 ರಿಂದ 30 ಎಮ್ಮೆಗಳು ಬರುತ್ತಿವೆ. ನಾವು ರೈತರಿಂದ ದುಡ್ಡು ಪಡೆಯುವುದಿಲ್ಲ. ಬದಲಾಗಿ ಎಮ್ಮೆಗಳು ಇಲ್ಲಿಗೆ ಬಂದಾಗ ಅವುಗಳು ಹಾಕುವ ಸಗಣಿ ಹಾಗೂ ಮೈ ತೊಳೆದ ನೀರನ್ನು ನಮ್ಮ ಗದ್ದೆಗೆ ಬಳಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ ವಿಜಯ.

ಇದನ್ನು ಓದಿ: ಹೊಸ ಪ್ರಭೇದದ ಕೊರೋನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಈ ಪಾರ್ಲರ್ ಮಾಡೋಕೆ ಒಂದು ಒಳ್ಳೆಯ ಕಾರಣವಿದೆ‌. ಕೊಲ್ಹಾಪುರ ಜಿಲ್ಲೆಯಲ್ಲಿ ಹರಿಯುವ ಮುಖ್ಯ ನದಿ ಎಂದರೇ ಅದು ಪಂಚಗಂಗಾ ನದಿ. ಈಗಾಗಲೇ ಕೊಲ್ಹಾಪುರದ ಅನೇಕ ಕಾರ್ಖಾನೆಗಳ ತ್ಯಾಜ್ಯ ನದಿಗೆ ಮಿಶ್ರಿತವಾಗಿ ನದಿ ನೀರು ಹಾಳಾಗುತ್ತಿದೆ. ಇದರ ಜತೆಗೆ ಎಮ್ಮೆ ಸಾಕಾಣಿಕೆಗೆ ಎತ್ತಿದ ಕೈಯಾಗಿರುವ ಕೊಲ್ಹಾಪುರ ಹೈನೋದ್ಯಮಿಗಳೂ ಸಹ ಎಮ್ಮೆಗಳನ್ನು ಹೊಳೆಯಲ್ಲಿ ತೊಳೆಯುವುದರಿಂದ ನೀರು ಮತ್ತಷ್ಟು ಕಲುಷಿತ ಆಗಬಾರದು ಅನ್ನೋ ಕಾರಣಕ್ಕೆ ವಿಜಯ್ ಈ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರದಿಂದ 15 ಲಕ್ಷ ಸಹಾಯ ಪಡೆದು ಈ ಕೆಲಸ ಪ್ರಾರಂಭಿಸಿದ್ದಾರೆ. ಈ ಸೇವೆ ಈಗ ಕರ್ನಾಟಕದ ಗಡಿ ಭಾಗದ ರೈತರು ಗಮನ ಸೆಳೆದಿದ್ದು, ಇಂತಹ ವ್ಯವಸ್ಥೆ ನಮ್ಮ ಭಾಗಕ್ಕೂ ಬರಲಿ ಅಂತಿದ್ದಾರೆ ಕನ್ನಡಿಗರು.

ಒಟ್ಟಿನಲ್ಲಿ ಎಲ್ಲವನ್ನೂ ಈ ಪಾರ್ಲರ್​ನಲ್ಲಿ ಉಚಿತವಾಗಿ ಮಾಡುವ ವಿಜಯ ಅವರು ರೈತರಿಂದ ನಯಾಪೈಸೆ ಪಡೆಯುತ್ತಿಲ್ಲ. ಬದಲಾಗಿ ಎಮ್ಮೆಗಳು ಹಾಕುವ ಸಗಣಿ ಅವುಗಳ ಸ್ನಾನಕ್ಕೆ ಬಳಸುವ ನೀರನ್ನೂ ಸಹ ಹೊಲ ಗದ್ದೆಗಳಿಗೆ ಬಳಕೆ ಮಾಡಲಾಗ್ತಿದೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ವಿಜಯ್ ಅವರಿಗೆ ಲಾಭವಾಗುತ್ತಿದೆ. ಒಟ್ಟಿನಲ್ಲಿ ಎಮ್ಮೆ ಪಾರ್ಲರ್​ನಿಂದ ಸಾಕಷ್ಟು ಲಾಭಗಳನ್ನು ಕೊಲ್ಹಾಪುರದ ಜನ ಪಡೆಯುತ್ತಿದ್ದು ರಾಜ್ಯಕ್ಕೂ ಈ ರೀತಿಯ ಯೋಜನೆ ಬರಲಿ ಅನ್ನೊದು ನಮ್ಮ ಆಶಯ
Published by:HR Ramesh
First published: