• Home
 • »
 • News
 • »
 • district
 • »
 • Weekend Trip: ನಂದಿ ಬೆಟ್ಟದ ಬಳಿಯಲ್ಲೇ ಅದ್ಭುತವಾದ Waterfalls ಇದೆ ಗೊತ್ತಾ? ವೀಕೆಂಡ್ ಟ್ರಿಪ್​ಗೆ ಹೇಳಿ ಮಾಡಿಸಿದ ಸ್ಥಳ ಇದು!

Weekend Trip: ನಂದಿ ಬೆಟ್ಟದ ಬಳಿಯಲ್ಲೇ ಅದ್ಭುತವಾದ Waterfalls ಇದೆ ಗೊತ್ತಾ? ವೀಕೆಂಡ್ ಟ್ರಿಪ್​ಗೆ ಹೇಳಿ ಮಾಡಿಸಿದ ಸ್ಥಳ ಇದು!

ನಂದಿ ಗಿರಿಧಾಮದ ಬಳಿ ಇರುವ ಚನ್ನಗಿರಿ ಫಾಲ್ಸ್

ನಂದಿ ಗಿರಿಧಾಮದ ಬಳಿ ಇರುವ ಚನ್ನಗಿರಿ ಫಾಲ್ಸ್

Weekend Trip from Bengaluru: ಫಾಲ್ಸ್‌ ಮೆಂದುಂಬಿ ಹರಿಯುತ್ತಿರುವ ದೃಶ್ಯ ರಮಣೀಯವಾದ ಪ್ರಕೃತಿ ಸೌಂದರ್ಯದ ನಡುವೆ ಬಯಲು ಸೀಮೆಗೆ ಕಳಶ ಪ್ರಾಯವಾಗಿದ್ದು, ಮಲೆನಾಡನ್ನ ನಾಚಿಸುವಂತಿದೆ. ಇನ್ನೂ ನಂದಿಬೆಟ್ಟದ ಟಿಪ್ಪು ಡ್ರಾಪ್ ಬಳಿ ಮೂಲದಲ್ಲಿ ಹುಟ್ಟಿ ಗುಪ್ತಗಾಮಿನಿಯಾಗಿ, ಚನ್ನಗಿರಿ ಬೆಟ್ಟದ  ಪಾಲ್ಸ್ ನಿಂದ ಹರಿಯುವ ನೀರು ಕೊನೆಗೆ ಕಾವೇರಿ ನದಿಯನ್ನು ಸೇರುತ್ತದೆ.

ಮುಂದೆ ಓದಿ ...
 • Share this:

  ಕಳೆದೊಂದು ದಶಕದಿಂದ ಸರಿಯಾಗಿ ಮಳೆಯಾಗದೇ ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ‌ಹನಿ‌ ನೀರಿಗೂ ಸಮಸ್ಯೆ ಎದುರಾಗಿತ್ತು. ಇದರ ಮಧ್ಯೆ ಇತ್ತೀಚೆಗೆ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬರಪೀಡಿತ ಪ್ರದೇಶದಲ್ಲಿ ಜಲಪಾತಗಳ (Water Falls) ದೃಶ್ಯವೈಭವ ಧರೆಗಿಳಿದಿದ್ದು, ನೋಡುಗರ ಮನ ಸೆಳೆಯುತ್ತಿದೆ.ಬಯಲು ಸೀಮೆಯಲ್ಲಿ ಜೋಗ್ ಪಾಲ್ಸ್ (Jog Falls) ನಂತೆ ಹರಿಯುತ್ತಿರುವುದು ಚಿಕ್ಕಬಳ್ಳಾಪುರದ ಚನ್ನಗಿರಿ ಫಾಲ್ಸ್. ನಂದಿಬೆಟ್ಟದ ಪಕ್ಕದಲ್ಲಿರುವ ಚಿಕ್ಕರಾಯಪನಹಳ್ಳಿ ಬಳಿಯ ಬಯಲು ಸೀಮೆಯ ಜೋಗ್ ಫಾಲ್ಸ್. ಬೆಂಗಳೂರಿಗೆ ಸಮೀಪದಲ್ಲೇ ಇರೋ ಮಲೆನಾಡ ಮೈಸಿರಿ ಹೊತ್ತ ಚನ್ನಗಿರಿ ದೃಶ್ಯಕಾವ್ಯ (ಉತ್ತರ,ದಕ್ಷಿಣ,ಪಿನಾಕಿನಿ)ನಂದಿಗಿರಿ, ( ಅರ್ಕಾವತಿ, ಪಾಲಾರ್)ದಿಬ್ಬಗಿರಿ, (ಸಣ್ಣ ಕಾಲುವೆ ಅರ್ಕಾವತಿಗೆ)ವಿಷ್ಟುಗಿರಿ,(ಸಣ್ಣ ಕಾಲುವೆ ದ.ಪಿನಾಕಿನಿಗೆ) ಇದ್ದು ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿದ್ದು ಅರ್ಕಾವತಿ ನೋಡಲು ಸುಂದರವಾಗಿದೆ.


  ಸ್ಕಂದಗಿರಿಯಲ್ಲಿ ( ಪಾಪಾಗ್ನಿ) ಪಂಚನದಿಗಳು ಹುಟ್ಟಿ ಹರಿಯುತ್ತವೆ. ನಂದಿ ಕಣಿವೆಯ ಪಂಚಗಿರಿಗಳಲ್ಲಿ ಪಂಚನದಿಗಳು ಹುಟ್ಟಿ ಹರಿಯುವುದನ್ನು ಕಣ್ತುಂಬಿಕೊಂಡರೆ ನಾವೇ ಧನ್ಯರು, ಆ ಸೌಭಾಗ್ಯ ಇಲ್ಲಿದೆ. ಚನ್ನಗಿರಿ ಫಾಲ್ಸ್‌ ಮೆಂದುಂಬಿ ಹರಿಯುತ್ತಿರುವ ದೃಶ್ಯ ರಮಣೀಯವಾದ ಪ್ರಕೃತಿ ಸೌಂದರ್ಯದ ನಡುವೆ ಬಯಲು ಸೀಮೆಗೆ ಕಳಶ ಪ್ರಾಯವಾಗಿದ್ದು, ಮಲೆನಾಡನ್ನ ನಾಚಿಸುವಂತಿದೆ. ಇನ್ನೂ ನಂದಿಬೆಟ್ಟದ ಟಿಪ್ಪು ಡ್ರಾಪ್ ಬಳಿ ಮೂಲದಲ್ಲಿ ಹುಟ್ಟಿ ಗುಪ್ತಗಾಮಿನಿಯಾಗಿ, ಚನ್ನಗಿರಿ ಬೆಟ್ಟದ  ಪಾಲ್ಸ್ ನಿಂದ ಹರಿಯುವ ನೀರು ಏಳೆಮ್ಮೆ ದೊಣೆಯಲ್ಲಿ ಸೇರಿ ನಂತರ ಚಿಕ್ಕರಾಯಪನಹಳ್ಳಿಅರ್ಕಾವತಿ ನದಿಯ ಮೊದಲ ಕೆರೆ ಕೋಡಿ ಹರಿಯುತ್ತದೆ.


  ಇದನ್ನೂ ಓದಿ: Holiday Plan: ದಾಂಡೇಲಿಯಲ್ಲಿ ಸಾಹಸ ಕ್ರೀಡೆಗಳು ಮತ್ತೆ ಶುರು, ರಿವರ್ ರಾಫ್ಟಿಂಗ್ ಹೋಗೋಕೆ ಇದೇ ಬೆಸ್ಟ್ ಟೈಮ್ !


  ನಂದಿ ಕಣಿವೆಯಲ್ಲಿ ಹುಟ್ಟುವ ಎಲ್ಲಾ ನದಿಗಳು ಕೆರೆಯಿಂದ ಕೆರೆಗೆ ಕೋಡಿ ರೂಪದಲ್ಲಿ ಹರಿಯುವ ನದಿಗಳೆ. ಕೆರೆಯಿಂದ ಹರಿದು ಮುಂದೆ   ದೊಡ್ಡಬಳ್ಳಾಪುರ,ದೇವನಹಳ್ಳಿ, ಮಾಕಳಿ, ಸೊಂಡೆಕೊಪ್ಪ,  ತಿಪ್ಪಗೊಂಡನಹಳ್ಳಿ ಜಲಾಶಯ,ಮಂಚನಬೆಲೆ ಜಲಾಶಯದ ಮೂಲಕ ಮಂಡ್ಯ ಜಿಲ್ಲೆಯ ಸಂಗಮದಲ್ಲಿ ಅರ್ಕಾವತಿ ನದಿ ಕಾವೇರಿ ನದಿಯಲ್ಲಿ ಸಂಗಮವಾಗುತ್ತಾಳೆ.


  ಇಲ್ಲಿಗೆ ಹೋಗೋಕೆ ಪರ್ಮಿಶನ್ ಬೇಕು


  ಅನುಮತಿ ಕಡ್ಡಾಯ: ಜೋಗ ಜಲಪಾತದಂತೆ ಕಂಗೊಳಿಸುತ್ತಿರುವ ಜಲಪಾತ ವೀಕ್ಷಿಸಿಲು ಪ್ರವಾಸಿಗರು ಚಿಕ್ಕಬಳ್ಳಾಪುರ ಅರಣ್ಯ ಅಧಿಕಾರಿಗಳ ಪರವಾನಿಗೆ ತಂದು ಪ್ರವೇಶ ಮಾಡಬೇಕಿದೆ. ಪ್ರವಾಸಿಗರ ನಿರ್ಲಕ್ಷ್ಯದಿಂದ ಈ ಹಿಂದೆ ಅನೇಕ ಸಾವೂ ನೋವುಗಳು ಸಹ ಈ ಬೆಟ್ಟದಲ್ಲಿ ಸಂಭವಿಸಿದ್ದವು. ಈ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಅರಣ್ಯ ಕಾವಲುಗಾರರನ್ನು ಹಾಕಿದ್ದಾರೆ.


  ಹೆಚ್ಚು ಮಿನಿ ಜಲಪಾತ: ಕಳೆದ ಎರಡು ಮೂರೂ ವರ್ಷಗಳಿಂದ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿರಲಿಲ್ಲ. ಕುಡಿಯುವ ನೀರಿಗೂ ಅಲೆದಾಡುವಂತೆ ಆಗಿತ್ತು. ಆದರೆ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ಕೆರೆ ಕುಂಟೆಗಳು ತುಂಬುವುದರ ಜೊತೆಗೆ ಪ್ರವಾಸಿತಾಣಗಳು ಸಹ ಸಮೃದ್ದಿಯಿಂದ‌ ಕಾಣುತ್ತಿವೆ. ಸಣ್ಣ ಪುಟ್ಟ ಬೆಟ್ಟಗಳಲ್ಲಿಯೂ ಸಹ ಜಲಪಾತ ಸೃಷ್ಟಿಯಾಗಿವೆ.


  ಸುಂದರ ಉದ್ಯಾನವೂ ಇಲ್ಲಿದೆ


  ಕೈಬೀಸಿ ಕರಯುತ್ತಿವೆ ಹೂಗಳು.ಚನ್ನಗಿರಿ ಅರಣ್ಯ ಪ್ರದೇಶ ಜಲಪಾತ ಜೊತೆಗೆ ಅಲ್ಲಿನ ಕೆಲ ಅರಣ್ಯ ಹೂಗಳು ಪ್ರವಾಸಿಗರ ಮನಸ್ಸನ್ನು ಸೆಳೆಯುತ್ತಿವೆ. ಬಣ್ಣ ಬಣ್ಣದ ಹೂಗಳು ಹೆಚ್ಚು ಆಕರ್ಷಿತವಾಗಿವೆ. ಒಟ್ಟಾರೆ ನಂದಿಯಲ್ಲಿ‌ ಕಳೆದ ಕೆಲ ದಿನಗಳ ಹಿಂದೆ ನಡೆದ ಭೂ ಕುಸಿತದಿಂದಾಗಿ ಬಯಲು ಸೀಮೆ ಜನರಿಗೆ ಹೆಚ್ಚು ಬೇಸರವಾಗಿತ್ತು. ಆದರೆ ಉತ್ತಮ ಮಳೆಯಿಂದಾಗಿ ಪ್ರವಾಸಿಗರ ಮುಖದಲ್ಲಿ ಮಂದಹಾಸ ಮೂಡಿದೆ.


  (ವರದಿ: ಮನುಕುಮಾರ್ ಹೆಚ್ ಕೆ, ಚಿಕ್ಕಬಳ್ಳಾಪುರ)

  Published by:Soumya KN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು