HOME » NEWS » District » BE CAREFUL IF YOU LEAVE THE HOUSE AT NIGHT MAK BDLTV

CoronaVirus; ಕೊರೋನಾ ಮಾರ್ಗಸೂಚಿ: ರಾತ್ರಿ‌ ಅನಗತ್ಯವಾಗಿ ಹೊರಬಂದರೆ ಎಚ್ಚರ...!!

ಆಸ್ಪತ್ರೆಗೆ ತೆರಳುವ ವ್ಯಕ್ತಿಗಳಿಗೆ ನಿರ್ಬಂಧದಿಂದ ವಿನಾಯ್ತಿ ಇದೆ. ಆದರೆ ಅದನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವುದು ಕೂಡ ಅತ್ಯವಶ್ಯಕ. ಕೆಲವರು ಕರ್ಫ್ಯೂ ಉಲ್ಲಂಘಿಸಿ ಅನಗತ್ಯ ಓಡಾಟ ನಡೆಸಿದ ಉದಾಹರಣೆಗಳು ಇವೆ.

news18-kannada
Updated:April 9, 2021, 7:22 PM IST
CoronaVirus; ಕೊರೋನಾ ಮಾರ್ಗಸೂಚಿ: ರಾತ್ರಿ‌ ಅನಗತ್ಯವಾಗಿ ಹೊರಬಂದರೆ ಎಚ್ಚರ...!!
ಕೊರೋನಾ ಜಾಗೃತಿಗೆ ಲಂಡನ್​ನಲ್ಲಿ ಹಾಕಿರುವ ಚಿತ್ರ.
  • Share this:
ಬೆಂಗಳೂರು: ಎಂಟು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದ್ದು, ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಗತ್ಯ ಹಾಗೂ  ತುರ್ತು ಸೇವೆಗಳಿಗೆ ವಿನಾಯ್ತಿ ನೀಡಿ, ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿದೆ. ಬೆಂಗಳೂರು ನಗರ, ಮೈಸೂರು, ಮಂಗಳೂರು, ಉಡುಪಿ-ಮಣಿಪಾಲ್, ಬೀದರ್, ಕಲಬುರಗಿ, ತುಮಕೂರು ನಗರಗಳಲ್ಲಿ ಕರ್ಫ್ಯೂ ನಾಳೆಯಿಂದ (ಶನಿವಾರ)ದಿಂದ ಜಾರಿಯಲ್ಲಿರಲಿದೆ. ಪ್ರಾಯೋಗಿಕವಾಗಿ 10 ದಿನಗಳು ಅಂದರೆ ಮಾರ್ಚ್ 10ರಿಂದ ಮಾರ್ಚ್ 20ವರೆಗೆ ಕೊರೋನಾ ನಿಷೇಧಾಜ್ಞೆ ಇರಲಿದೆ. 

ಯಾರಿಗೆಲ್ಲ ವಿನಾಯ್ತಿ:


  • ಆರೋಗ್ಯ ಸಮಸ್ಯೆ ಸಂಬಂಧಿತ ವ್ಯಕ್ತಿಗಳ ಓಡಾಟಕ್ಕೆ ನಿರ್ಬಂಧವಿಲ್ಲ.

  • ಅಗತ್ಯ‌ ಸರಕು ಸಾಗಾಟಕ್ಕೂ ಯಾವುದೇ ನಿರ್ಬಂಧವಿಲ್ಲ.

  • ರಾತ್ರಿ ಪಾಳೆಯದಲ್ಲಿ ಕೆಲಸ ಮಾಡುವವರಿಗೆ ಅನುಮತಿ. ಆದರೆ ಕೆಲಸದ ಅವಧಿಗೂ ಮೊದಲೇ ಕಚೇರಿ ತಲುಪುವುದು. ರಾತ್ರಿ 10ಗಂಟೆ ಒಳಗೆ ಕಾರ್ಖಾನೆ, ಕಚೇರಿಗೆ ತಲುಪಬೇಕು.

  • ವೈದ್ಯಕೀಯ ಸೇವೆಗಳು, ತುರ್ತು ಚಟುವಟಿಕೆಗಳಿಗೆ ಅವಕಾಶ ಇದೆ.
  • ರಾತ್ರಿ ವೇಳೆಯಲ್ಲಿ ಬಸ್, ರೈಲು ಹಾಗೂ ವಿಮಾನದ ಪ್ರಯಾಣಕ್ಕೆ ಅನುಮತಿ.

  • ರಾತ್ರಿ ವೇಳೆಯಲ್ಲಿ ಬಸ್, ರೈಲು ಹಾಗೂ ವಿಮಾನದ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಆದರೆ ಅಧಿಕೃತ ಟಿಕೆಟ್ ತೋರಿಸುವುದು ಕಡ್ಡಾಯ.


ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005 ಸೆಕ್ಷನ್ 51ರಿಂದ‌ 60ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.

ವಾಣಿಜ್ಯ ಚಟುವಟಿಕೆ ಬಂದ್:

ರಾತ್ರಿ 10 ನಂತರ ಯಾವುದೇ‌ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಹೋಟೆಲ್, ಬಾರ್, ಪಬ್, ಕ್ಲಬ್, ಅಂಗಡಿ, ಮಾರ್ಕೆಟ್ ಹೀಗೆ ಯಾವುದೇ ವಾಣಿಜ್ಯ ವಹಿವಾಟು ನಡೆಸುವಂತಿಲ್ಲ. ಸಿನಿಮಾ ಮಂದಿರಗಳು, ದೇವಸ್ಥಾನಗಳಿಗೂ ಇದುವೇ ಅನ್ವಯವಾಗಲಿದೆ.

ಇದನ್ನೂ ಓದಿ: 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ಯಾವುದೇ ಧರ್ಮವನ್ನು ಆಯ್ಕೆ ಮಾಡಲು ಮುಕ್ತನಾಗಿರುತ್ತಾನೆ: ಸುಪ್ರೀಂ ಕೋರ್ಟ್

ಗೊಂದಲ:

ಕೋವಿಡ್ ಎರಡನೇ ಅಲೆ ನಿಯಂತ್ರಣ ಮಾಡಲು ಕಟ್ಟುನಿಟ್ಟಿನ ಕ್ರಮ ಘೋಷಿಸಿದೆ. ಆದರೆ ಇದರಲ್ಲೂ ಕೆಲ ಗೊಂದಲಗಳಿವೆ. ರಾತ್ರಿ‌ ಬಸ್ ಸಂಚಾರ ಅಬಾಧಿತ ಹಾಗೂ ಪ್ರಯಾಣ ಮಾಡುವವರು ಟಿಕೆಟ್ ತೋರಿಸುವುದು ಕಡ್ಡಾಯ. ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿದವರು ಟಿಕೆಟ್ ತೋರಿಸಬಹುದು. ಆದರೆ ಬಸ್‌ನಲ್ಲೇ ಟಿಕೆಟ್ ಖರೀದಿಸಿ ಪ್ರಯಾಣ ಮಾಡುವವರು ಹೇಗೆ ಟಿಕೆಟ್ ತೋರಿಸಬೇಕು ಎಂಬ ಪ್ರಶ್ನೆ ಮೂಡಿದೆ. ಸರ್ಕಾರ ಕೆಲವಷ್ಟು ಮಾರ್ಪಾಟು ಮಾಡಿಕೊಳ್ಳುತ್ತಾ, ಗೊಂದಲ ಬಗೆಹರಿಸುತ್ತಾ ನೋಡಬೇಕಿದೆ.

ಆಸ್ಪತ್ರೆಗೆ ತೆರಳುವ ವ್ಯಕ್ತಿಗಳಿಗೆ ನಿರ್ಬಂಧದಿಂದ ವಿನಾಯ್ತಿ ಇದೆ. ಆದರೆ ಅದನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವುದು ಕೂಡ ಅತ್ಯವಶ್ಯಕ. ಕೆಲವರು ಕರ್ಫ್ಯೂ ಉಲ್ಲಂಘಿಸಿ ಅನಗತ್ಯ ಓಡಾಟ ನಡೆಸಿದ ಉದಾಹರಣೆಗಳು ಇವೆ. ಹೀಗಾಗಿ ಆಸ್ಪತ್ರೆ ನೆಪದಲ್ಲಿ ಕದ್ದು ಓಡಾಡುವುದನ್ನು ನಿಯಂತ್ರಿಸಬೇಕಿದೆ. ರಾಜ್ಯ ಸರ್ಕಾರ ಹೊರಡಿಸಿರು ಮಾರ್ಗಸೂಚಿಗಳನ್ನು ಅನುಷ್ಠಾನ ಮಾಡುವ ಸಂಪೂರ್ಣ ಜವಾಬ್ದಾರಿ ಪೊಲೀಸರದ್ದಾಗಿದೆ. ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ಫೀಲ್ಡಿಗಿಳಿಯಲಿದ್ದಾರೆ. ಬೇಕಾಬಿಟ್ಟಿ ಸುತ್ತಾಡಿದರೆ ಪೊಲೀಸರು ಬಿಸಿ ಮುಟ್ಟಿಸುವುದಂತೂ ಸತ್ಯ. ಯಾವುದಕ್ಕೂ ಎಚ್ಚರದಿಂದ ಇರಬೇಕು.

(ವರದಿ: ದಶರಥ್ ಸಾವೂರು)
Published by: MAshok Kumar
First published: April 9, 2021, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories