ಉಪ್ಪು ತಿಂದವರು ನೀರು ಕುಡಿಯಲೇಬೇಕು; ರಾಗಿಣಿ ತಪ್ಪು ಮಾಡಿದ್ದರೆ ಶಿಕ್ಷೆ ನಿಶ್ಚಿತ: ಬಿ.ಸಿ. ಪಾಟೀಲ್

ಉಪ್ಪು ತಿಂದವರು ನೀರು ಕುಡಿಯಲೇಬೇಕು. ರಾಗಿಣಿ ಅಲ್ಲ, ಯಾರೇ ತಪ್ಪು ಮಾಡಿದರೂ ಅಷ್ಟೇ ಶಿಕ್ಷೆ ಅನುಭವಿಸಲೇಬೇಕು ಎಂದು ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟಿದ್ಧಾರೆ.

ಬಿ.ಸಿ. ಪಾಟೀಲ್

ಬಿ.ಸಿ. ಪಾಟೀಲ್

  • Share this:
ಕೋಲಾರ: ಡ್ರಗ್ಸ್ ಪ್ರಕರಣದಲ್ಲಿ ಸ್ಯಾಂಡಲ್​ವುಡ್​ನ ಸೆಲಬ್ರಿಟಿಗಳ ಹೆಸರು ಹೊರಬರುತ್ತಿರುವ ಬೆನ್ನಲ್ಲೇ ಸಚಿವ ಕೌರವ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ರಾಗಿಣಿ ತಪ್ಪು ಮಾಡಿದರೂ ಅಷ್ಟೇ, ಯಾರೇ ತಪ್ಪು ಮಾಡಿದರೂ ಅಷ್ಟೇ, ಉಪ್ಪು ತಿಂದವರು ನೀರು ಕುಡಿಯಲೇಬೇಉ. ರಾಗಿಣಿ ತಪ್ಪು ಮಾಡಿದ್ದರೆ ಅದನ್ನು ಅನುಭವಿಸುತ್ತಾರೆ. ಪೊಲೀಸರು ತನಿಖೆ ಮಾಡಿ ಬಳಿಕ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದ್ದಾರೆ. ಇದರಲ್ಲಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು.

ಸಮಾಜದಲ್ಲಿ ಸಾಕಷ್ಟು ಜನರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಈಗ ಚಿತ್ರರಂಗದಲ್ಲಿದ್ದವರ ಹೆಸರು ಬೇಗ ಹೊರಗೆ ಬಂದಿದೆ. ಸರ್ಕಾರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ ಅವರು ತಾನು ಗೌರವನಾಗಿದ್ದು ಡ್ರಗ್ಸ್ ಸೇವಿಸಲ್ಲ ಎಂದೂ ಹಾಸ್ಯಚಟಾಕಿ ಹಾರಿಸಿದರು. ಹಾಗೆಯೇ, ತಾವಿದ್ದ ಕಾಲಕ್ಕೂ ಈಗಿಗೂ ಚಿತ್ರರಂಗ ಬದಲಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ರಾಜ್ಯದಲ್ಲಿ ಡ್ರಗ್ಸ್​ ಮಾಫಿಯಾ: ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್​ ವರಿಷ್ಠರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ

ಕೃಷಿ ಸಚಿವರಾದ ನಂತರ ಎರಡನೇ ಬಾರಿ ಕೋಲಾರ ಜಿಲ್ಲೆಗೆ ನಿನ್ನೆ ಆಗಮಿಸಿದ್ದ ಬಿ.ಸಿ. ಪಾಟೀಲ್, ಈ ವೇಳೆ ಮಾಲೂರು ಕೈಗಾರಿಕಾ ಪ್ರದೇಶದ ಇನ್ನೋವಾ ಫೂಡ್ ಪಾರ್ಕ್​ಗೆ ಭೇಟಿ ನೀಡಿದರು. ರಾಜ್ಯದಲ್ಲೆ ಅತಿದೊಡ್ಡ ಪುಡ್ ಪಾರ್ಕ್‌ಗಳಲ್ಲಿ ಒಂದಾಗಿರುವ ಇನ್ನೋವಾ ಪುಡ್ ಪಾರ್ಕ್ ಅಂತರರಾಷ್ಟ್ರೀಯ ವ್ಯಾಪಾರದಲ್ಲೂ ತೊಡಗಿಸಿಕೊಂಡಿದೆ. ದೇಶದಲ್ಲಿ ಪುಡ್ ಪಾರ್ಕ್‍ಗಳನ್ನ ರೈತರ ಹಿತದೃಷ್ಟಿಯಿಂದ ಸ್ಥಾಪಿಸಲು ಪ್ರಧಾನ ಮಂತ್ರಿಗಳು ಅನುದಾನ ಮೀಸಲಿಟ್ಟಿದ್ದು, ಹೀಗಾಗಿ ರಾಜ್ಯದಲ್ಲಿ ಮತ್ತಷ್ಟು ಪುಡ್ ಪಾರ್ಕ್‍ಗಳನ್ನ ಸ್ಥಾಪಿಸುವ ಚಿಂತನೆಯಿದೆ ಎಂದು ಸಚಿವರು ತಿಳಿಸಿದರು.ಇದಕ್ಕಾಗಿ ಕೈಗಾರಿಕೆಯಲ್ಲಿ ಉಸ್ತುವಾರಿ ಸಚಿವ ಎಚ್ ನಾಗೇಶ್ ಜೊತೆಗೂಡಿ, ಕೈಗಾರಿಕೆಯ ಸಿಬ್ಬಂದಿ ಜೊತೆಗೆ ಮಾತುಕತೆ ನಡೆಸಿ, ಬಳಿಕ ಪುಡ್ ಪ್ರೊಸೆಸಿಂಗ್ ಯುನಿಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಸಚಿವ ಬಿ ಸಿ ಪಾಟೀಲ್, ಕೊರೋನಾ ಲಾಕ್‍ಡೌನ್ ವೇಳೆಯಲ್ಲಿ ಪುಡ್‍ಪಾರ್ಕ್‍ಗಳಿಂದ ಸಾಕಷ್ಟು ಅನುಕೂಲವಾಗಿದೆ. ಆಹಾರ ಪದಾರ್ಥಗಳು ಕೆಡದಂತೆ ಶೇಖರಿಸುವ ತಂತ್ರಜ್ಞಾನ ಇರೋದರಿಂದ ರೈತರಿಗೆ ಅನುಕೂಲ. ರಾಜ್ಯದಲ್ಲಿ ಸದ್ಯ ನಾಲ್ಕು ಪುಡ್ ಪ್ರೊಸೆಸಿಂಗ್ ಯುನಿಟ್ ಇದೆ. ಮುಂದೆ ಮತ್ತಷ್ಟು ಸ್ಥಾಪಿಸಲು ಅಭಿವೃದ್ದಿಪಡಿಸಲು ಇಲ್ಲಿಗೆ ಭೇಟಿ ನೀಡಿದ್ದಾಗಿ ಹೇಳಿದರು.
Published by:Vijayasarthy SN
First published: