HOME » NEWS » District » BBMP PROPOSAL TO HIKE PARKING FEES FOR TWO WHEELERS TO 30 RS PER HOUR AMTV SNVS

ಬೆಂಗಳೂರಿನಲ್ಲಿ ಭಾರೀ ಪಾರ್ಕಿಂಗ್ ಫೀಸ್; ಎಂಟು ತಾಸಿಗೆ 1,500 ರೂವರೆಗೆ ಶುಲ್ಕ ನಿಗದಿ ಸಾಧ್ಯತೆ

ಬಿಬಿಎಂಪಿಯ ಹೊಸ ಪ್ರಸ್ತಾವಿತ ಪಾರ್ಕಿಂಗ್ ನೀತಿಯ ಪ್ರಕಾರ ವಾಹನ ಪಾರ್ಕಿಂಗ್ ಶುಲ್ಕ ಗಂಟೆಯಿಂದ ಗಂಟೆಗೆ ದ್ವಿಗುಣಗೊಳ್ಳುತ್ತದೆ. ಎಂಟು ತಾಸು ಪಾರ್ಕಿಂಗ್ ಮಾಡಿದರೆ 1,500 ರೂವರೆಗೆ ಶುಲ್ಕ ವಿಧಿಸಲು ಯೋಜಿಸಲಾಗಿದೆ.

news18-kannada
Updated:December 2, 2020, 4:24 PM IST
ಬೆಂಗಳೂರಿನಲ್ಲಿ ಭಾರೀ ಪಾರ್ಕಿಂಗ್ ಫೀಸ್; ಎಂಟು ತಾಸಿಗೆ 1,500 ರೂವರೆಗೆ ಶುಲ್ಕ ನಿಗದಿ ಸಾಧ್ಯತೆ
ಬಿಬಿಎಂಪಿ ಕಚೇರಿ
  • Share this:
ಬೆಂಗಳೂರು(ಡಿ. 02): ನಗರದಲ್ಲಿ ವಿವಿಧ ತೆರಿಗೆ, ಶುಲ್ಕಗಳು ಏರಿಕೆ ಆಗುತ್ತಿರುವ ಪಟ್ಟಿಗೆ ಪಾರ್ಕಿಂಗ್ ಕೂಡ ಸೇರಿದೆ. ಬಿಬಿಎಂಪಿ ಪಾರ್ಕಿಂಗ್ ಶುಲ್ಕದಲ್ಲಿ ಭಾರೀ ಹೆಚ್ಚಳ ಮಾಡಿದೆ. ಒಂದು ಗಂಟೆ ವಾಹನ ಪಾರ್ಕಿಂಗ್​ಗೆ 60 ರೂವರೆಗೆ ದರ ನಿಗದಿ ಮಾಡಿದೆ. ಒಂದು ಗಂಟೆ ಅವಧಿಯ ಪಾರ್ಕಿಂಗ್​ಗೆ ದ್ವಿಚಕ್ರ ವಾಹನಗಳಿಗೆ 30 ರೂ ಹಾಗೂ ನಾಲ್ಕು ಚಕ್ರ ವಾಹನಗಳಿಗೆ 60 ರೂ ನಿಗದಿ ಮಾಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರೇ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಗರ ವಿಪರೀತವಾಗಿ ಬೆಳೆಯುತ್ತಿದ್ದು ವಾಹನ ಸಂಚಾರ ಮುಂದಿನ ದಿನಗಳಲ್ಲಿ ಭಾರೀ ಅವಾಂತರ ಸೃಷ್ಟಿಸುವುದರಿಂದ ಈಗಿನಿಂದಲೇ ಕಡಿವಾಣ ಹಾಕುವ ಉದ್ದೇಶದಿಂದ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ ಎಂದು ಬಿಬಿಎಂಪಿ ಕಮಿನಷರ್ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಪಾರ್ಕಿಂಗ್ ಶುಲ್ಕ ಹೆಚ್ಚಳದ ಪ್ರಸ್ತಾವನೆಯನ್ನ ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಕೊಟ್ಟಿದೆ. ಸರ್ಕಾರ ನಿರ್ಧರಿಸಿದ ಮೇಲೆ ಅದರ ಅನುಷ್ಠಾನ ಆಗಲಿದೆ.

ಹೊಸ ಪಾರ್ಕಿಂಗ್ ನೀತಿಯ ಪ್ರಕಾರ ಒಂದು ಗಂಟೆಗೂ ಹೆಚ್ಚು ಅವಧಿಗೆ ವಾಹನ ಪಾರ್ಕಿಂಗ್ ಮಾಡಿದರೆ ದಂಡದ ಮೊತ್ತ ದುಪ್ಪಟ್ಟಾಗುತ್ತಾ ಹೋಗುತ್ತದೆ. ಗಂಟೆಯಿಂದ ಗಂಟೆಗೆ ಎರಡು ಪಟ್ಟು ಹೆಚ್ಚಳವಾಗುತ್ತದೆ. ಎಂಟು ತಾಸು ಪಾರ್ಕಿಂಗ್ ಮಾಡಿದರೆ ದ್ವಿಚಕ್ರ ವಾಹನಕ್ಕೆ 750 ರೂ ಹಾಗೂ ನಾಲ್ಕು ಚಕ್ರ ವಾಹನಕ್ಕೆ 1,500 ರೂ ಶುಲ್ಕ ವಿಧಿಸಲು ಯೋಜಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ರೈತರು, ಕನ್ನಡ ಹೋರಾಟಗಾರರ ಪ್ರತಿಭಟನೆ; ಕರ ಏರಿಕೆ ವಿರುದ್ಧ ಆಪ್ ಚಳವಳಿ

ಬೆಂಗಳೂರಿನಲ್ಲಿ 1.3 ಕೋಟಿ ಜನಸಂಖ್ಯೆ ಇದ್ದು ವಾಹನಗಳ ಸಂಖ್ಯೆಯೇ 95 ಲಕ್ಷ ಇದೆ. ಮುಂದಿನ ದಿನಗಳಲ್ಲಿ ಬದುಕು ಕಷ್ಟ ಆಗಬಹುದು. ಈ ನಿಟ್ಟಿನಲ್ಲಿ ಈಗಿನಿಂದಲೇ ಅದನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ. ಜನರು ತಮ್ಮ ಸ್ವಂತ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಬಳಕೆ ಮಾಡಲು ಪ್ರೋತ್ಸಾಹಿಸಲು ಹಾಗೂ ನಗರದಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಪಾರ್ಕಿಂಗ್ ಶುಲ್ಕ ಹೆಚ್ಚಳದ ಕ್ರಮ ಇದೆ ಎಂದು ಅಯುಕ್ತರು ತಿಳಿಸಿದ್ದಾರೆ.

ನಗರದ ವಸತಿ ಪ್ರದೇಶಗಳಲ್ಲೂ ಪಾರ್ಕಿಂಗ್ ಮಾಡುವ ಯೋಜನೆ ಬಿಬಿಎಂಪಿಗೆ ಇದೆ. ರೆಸಿಡೆನ್ಷಿಯಲ್ ಏರಿಯಾಗಳಲ್ಲಿ ಖಾಲಿ ಇರುವ ಬಿಡಿಎ ನಿವೇಶನಗಳನ್ನ ಗುರುತಿಸಿ ಅದನ್ನು ಪಾರ್ಕಿಂಗ್​ಗೆ ಬಳಕೆ ಮಾಡುವ ಐಡಿಯಾ ಇದು. ನಗರದ ವಿವಿಧೆಡೆ ರಸ್ತೆಗಳನ್ನೇ ಪಾರ್ಕಿಂಗ್ ಲಾಟ್ ಆಗಿ ಮಾಡಿಕೊಂಡಿರುವ ನಿದರ್ಶನಗಳಿದ್ದು, ಅದನ್ನೆಲ್ಲಾ ಮುಂದಿನ ದಿನಗಳಲ್ಲಿ ಹತೋಟಿಗೆ ತರಲಾಗುವುದು ಎಂದು ಬಿಬಿಎಂಪಿ ಹೇಳಿದೆ.

ವರದಿ: ಆಶಿಕ್ ಮುಲ್ಕಿ
Published by: Vijayasarthy SN
First published: December 2, 2020, 4:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories