• Home
  • »
  • News
  • »
  • district
  • »
  • ‘ದಯವಿಟ್ಟು ಮನೆ ಬಳಿ ಬರಬೇಡಿ, ಫೋನಲ್ಲೇ ಸಮಸ್ಯೆ ಹೇಳಿ’ – ಜನರಿಗೆ ಕಾರ್ಪೊರೇಟರ್​ಗಳ ಮನವಿ

‘ದಯವಿಟ್ಟು ಮನೆ ಬಳಿ ಬರಬೇಡಿ, ಫೋನಲ್ಲೇ ಸಮಸ್ಯೆ ಹೇಳಿ’ – ಜನರಿಗೆ ಕಾರ್ಪೊರೇಟರ್​ಗಳ ಮನವಿ

ಬಿಬಿಎಂಪಿ ಕಚೇರಿ

ಬಿಬಿಎಂಪಿ ಕಚೇರಿ

ನಮ್ಮ ಮೂವರು ಕಾರ್ಪೊರೇಟರ್ಸ್​ಗೆ ಕೊರೋನಾ ಸೋಂಕು ತಗುಲಿದೆ. ಇದು ನಮಗೆ ಜನರೊಂದಿಗೆ ಬೆರೆಯುವ ಧೈರ್ಯವನ್ನೇ ಕುಂದಿಸಿದೆ. ಹಾಗಾಗಿ ಜನರಲ್ಲೇ ಮನವಿ ಮಾಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಮನೆಗಳತ್ತ ಬರಬೇಡಿ. ಫೋನಾಯಿಸಿದರೆ ಸಾಕು ನಾವೇ ನೆರವಿಗೆ ಬರುತ್ತೇವೆ ಎಂದು ಕೆಲ ಕಾರ್ಪೊರೇಟರ್​ಗಳು ಮನವಿ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: “ನಮ್ಮ ಮನೆಗಳ ಹತ್ತಿರ ಯಾರೂ ಬರಬೇಡಿ, ಪರಿಸ್ಥಿತಿ ಚೆನ್ನಾಗಿಲ್ಲ, ನೀವೇ ಒಂದು ಕಾಲ್ ಮಾಡಿ. ನಾವೇ ನಿಮ್ಮ ಮನೆಗಳ ಬಳಿ ಖುದ್ದು ಬರುತ್ತೇವೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ. ದಯವಿಟ್ಟು ನಮ್ಮ ಅಸಹಾಯಕತೆ ಮತ್ತು ನೋವನ್ನು ಅರ್ಥಮಾಡಿಕೊಳ್ಳಿ….” – ಮತಬಾಂಧವರೆ, ಇಂತಹದೊಂದು ಕಳಕಳಿಯ ಮನವಿ ಮಾಡುತ್ತಿರುವುದು ಬೆಂಗಳೂರಿನ ಕಾರ್ಪೋರೇಟರ್ಸ್.


ಕೊರೋನಾ ವೈರಸ್ ಬೆಂಗಳೂರನ್ನು ಬೆಂಬಿಡದೆ ಬಾಧಿಸುತ್ತಿದ್ದರೂ ಕಾರ್ಪೊರೇಟರ್​ಗಳು ಸಹಕರಿಸುತ್ತಿಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರು ಹಾಗೂ ಆಕ್ಷೇಪದ ಮಾತುಗಳು ಸಹಜವಾಗಿ ಕೇಳಿಬರುತ್ತಿದೆ. ಆದರೆ ವಾಸ್ತವ ಆ ರೀತಿ ನಿಜಕ್ಕೂ ಇಲ್ಲ. ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿದೆ. ಕಾರ್ಪೊರೇಟರ್ಸ್ ಕೂಡ ಜನರೊಂದಿಗೆ ಬೆರೆಯುವ, ಅವರ ನಡುವಿದ್ದು ಕೆಲಸ ಮಾಡಲು ಸಾಧ್ಯವಾಗದಷ್ಟು ಪರಿಸ್ಥಿತಿ ಆತಂಕಪೂರ್ಣವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 198 ವಾರ್ಡ್​ಗಳಲ್ಲಿ ಈಗಾಗಲೇ 3 ಕಾರ್ಪೊರೇಟರ್​ಗಳಿಗೆ ಕೊರೋನಾ ಸೋಂಕು ತಗುಲಿದೆ. ಜನರ ನಡುವೆ ಇದ್ದು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅವರಿಗೆ ಕೊರೋನಾ ಬಂದಿರುವುದರಿಂದ, ಉಳಿದ ಕಾರ್ಪೊರೇಟರ್​ಗಳು ಕೂಡ ಆತಂಕಕ್ಕೆ ಈಡಾಗಿದ್ದಾರೆ. ಜನರ ನಡುವೆ ಹೇಗೆ ಹೋಗುವುದು ಎನ್ನುವ ಚಿಂತೆಗೆ ಸಿಲುಕಿದ್ದಾರೆ.


ಜನರು ನಮ್ಮನ್ನು ಆಯ್ಕೆ ಮಾಡಿರುವುದು ಅವರ ಸೇವೆ ಮಾಡಲಿಕ್ಕಾಗಿಯೇ. ಕಳೆದ ನಾಲ್ಕೂವರೆ ವರ್ಷಗಳಿಂದ ನಾವು ಮಾಡುತ್ತಾ ಬಂದಿರುವುದು ಕೂಡ ಅದನ್ನೇ. ಆದರೆ ಪರಿಸ್ಥಿತಿ ಈಗ ಸದ್ಯಕ್ಕಂತೂ ಸರಿಯಿಲ್ಲ. ಕೊರೋನಾದಿಂದ ಸಾವುಗಳ ಸಂಖ್ಯೆ ಮತ್ತು ಸಾಂಕ್ರಾಮಿಕತೆ ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ನಮಗೂ ಕೂಡ ಆತಂಕ ಇದೆ ಎನ್ನುವ ಮಾತನ್ನು ಹೇಳುತ್ತಾರೆ ಹೊಂಗಸಂದ್ರ ವಾರ್ಡ್​ನ ಕಾರ್ಪೊರೇಟರ್ ಭಾರತಿ ರಾಮಚಂದ್ರ.


ಇದನ್ನೂ ಓದಿ: ದಾವಣಗೆರೆಯಲ್ಲಿ ವರ್ಷಗಳಿಂದ ಇರುವ ರೈಲ್ವೆಗೇಟ್ ಸಮಸ್ಯೆಗೆ ಶೀಘ್ರ ಪರಿಹಾರ: ಕೇಂದ್ರ ಸಚಿವ ಸುರೇಶ್ ಅಂಗಡಿ


ಇನ್ನು, ಮಾರ್ನಿಂಗ್ ವಾಕಿಂಗ್ ಕಾರ್ಪೊರೇಟರ್ ಎನಿಸಿಕೊಂಡಿರುವ ದೊಮ್ಮಲೂರು ವಾರ್ಡ್​ನ ಲಕ್ಷ್ಮೀನಾರಾಯಣ್, "ನಮ್ಮ ಮೂವರು ಕಾರ್ಪೊರೇಟರ್ಸ್​ಗೆ ಕೊರೋನಾ ಸೋಂಕು ತಗುಲಿದೆ.ಇದು  ನಮಗೆ ಜನರೊಂದಿಗೆ ಬೆರೆಯುವ ಧೈರ್ಯವನ್ನೇ ಕುಂದಿಸಿದೆ. ಹಾಗಾಗಿ ಜನರಲ್ಲೇ ಮನವಿ ಮಾಡಿಕೊಳ್ಳುತ್ತಿದ್ದೇನೆ, ದಯವಿಟ್ಟು ಮನೆಗಳತ್ತ ಬರಬೇಡಿ. ಫೋನಾಯಿಸಿದರೆ ಸಾಕು ನಾವೇ ಅವರ ನೆರವಿಗೆ ಬರುತ್ತೇವೆ” ಎನ್ನುತ್ತಾರೆ ಎಂದರೆ ಕೊರೋನಾ ಅವರಲ್ಲಿ ಸೃಷ್ಟಿಸಿರುವ ಭಯ ಎಂತಹದ್ದೆಂದು ಗೊತ್ತಾಗುತ್ತೆ.


ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವ ಜನರ ನೋವಿಗೆ, ಸಮಸ್ಯೆಗೆ ಸ್ಪಂದಿಸುವುದು ನಮ್ಮ ಹೊಣೆ ಹಾಗೂ ಬಾಧ್ಯಸ್ಥಿಕೆ ಕೂಡ. ಅದರಲ್ಲೂ ಕೊರೋನಾದಂಥ ಸಂದರ್ಭದಲ್ಲಿ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದು ನಮಗೆ ಗೊತ್ತು. ಆದರೆ ಕೊರೋನಾ ಸಾಂಕ್ರಾಮಿಕತೆ ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಜನರು ಕೂಡ ನಮ್ಮ ಸಮಸ್ಯೆಯನ್ನ ಅರ್ಥ ಮಾಡಿಕೊಳ್ಳಬೇಕು. ಹಾಗೆಂದು ಅವರ ನೋವಿಗೆ ಸ್ಪಂದಿಸುತ್ತಿಲ್ಲ ಎಂದಲ್ಲ‌. ಈ ಸಂಕಷ್ಟದ ದಿ‌ನಗಳು ದೂರವಾದರೆ ಎಲ್ಲರೂ ಒಟ್ಟಾಗಿರಲು ಸಾಧ್ಯವಲ್ವೇ. ಜನತೆ ದಯವಿಟ್ಟು ಸಹಕರಿಸಬೇಕು ಎಂದು ಮನವಿ ಮಾಡುತ್ತಾರೆ ಉತ್ತರಹಳ್ಳಿ ವಾರ್ಡ್ ಕಾಪೋರೇಟರ್ ಹನುಮಂತಯ್ಯ.


ಇದನ್ನೂ ಓದಿ: ಸರ್ಕಾರ-ಖಾಸಗಿ ಆಸ್ಪತ್ರೆಗಳ ಮಾಲೀಕರ ಮಾತುಕತೆ ಫಲಪ್ರದ; ಕೆಲ ಬೇಡಿಕೆಯೊಂದಿಗೆ ಚಿಕಿತ್ಸೆ ನೀಡಲು ಒಪ್ಪಿಗೆ
ಹೀಗೆ ಒಬ್ಬೊಬ್ಬ ಕಾರ್ಪೊರೇಟರ್​ಗಳದು ಕೂಡ ಒಂದೊಂದು ಬವಣೆಯ ಕಥೆ, ಒಂದೊಂದು ನೋವಿನ ವ್ಯಥೆ. ಆದರೆ, ಜನರು ತಮ್ಮ ನೋವನ್ನ ಅರ್ಥೈಸಿಕೊಳ್ಳದೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎನ್ನುವ ಬೇಸರ ಕೂಡ ಅವರಲ್ಲಿದೆ. ಜನರೂ ಕೂಡ ಇಂಥ ಸಂದರ್ಭವನ್ನು‌ ಅರ್ಥಮಾಡಿಕೊಳ್ಳುವ ಅಗತ್ಯ ಇದೆ.

Published by:Vijayasarthy SN
First published: