HOME » NEWS » District » BBMP COMMISSIONER CALLS MEETING TO SPEED UP TENDERSURE ROAD WORKS IN BENGALURU SNVS

ಬೆಂಗಳೂರಿನಲ್ಲಿ ಟೆಂಡರ್ ಶೂರ್ ರಸ್ತೆಗಳ ಕಾಮಗಾರಿ ಬೇಗ ಮುಗಿಸಲು ಬಿಬಿಎಂಪಿ ಆಯುಕ್ತ ಸೂಚನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ಅಡಿ ಟೆಂಡರ್ ಶ್ಯೂರ್ ಮಾದರಿಯಲ್ಲಿ 13 ಪ್ಯಾಕೇಜ್​ಗಳಲ್ಲಿ ಕೈಗೆತ್ತಿಕೊಂಡಿರುವ 36 ರಸ್ತೆ ಕಾಮಗಾರಿಗಳಿಗೆ ವೇಗ ನೀಡಿ ನಿಗದಿತ ಕಾಲಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಯುಕ್ತರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

news18-kannada
Updated:September 1, 2020, 11:48 AM IST
ಬೆಂಗಳೂರಿನಲ್ಲಿ ಟೆಂಡರ್ ಶೂರ್ ರಸ್ತೆಗಳ ಕಾಮಗಾರಿ ಬೇಗ ಮುಗಿಸಲು ಬಿಬಿಎಂಪಿ ಆಯುಕ್ತ ಸೂಚನೆ
ಟೆಂಡರ್ ಶೂರ್ ಕಾಮಗಾರಿ ಪರಿಶೀಲನೆಗೆ ಸಭೆ ನಡೆಸಿದ ಬಿಬಿಎಂಪಿ
  • Share this:
ಬೆಂಗಳೂರು: ಉದ್ಯಾನನಗರಿಯ ಜನರಿಗೆ ಕೊನೆಗೂ ಒಳ್ಳೆ ರಸ್ತೆ ಬಳಸುವ ದಿನ ಹತ್ತಿರ ಬಂದಂತೆ ಕಾಣುತ್ತಿದೆ. ಕೊರೋನಾ, ಲಾಕ್ ಡೌನ್ ಇದ್ದಾಗಲೇ ರಸ್ತೆ ಕಾಮಗಾರಿಗಳನ್ನು ಮಾಡಿ ಮುಗಿಸಬೇಕಿತ್ತು ಎಂದು ಬಿಬಿಎಂಪಿ ಯನ್ನು ಜನ ಮನಸಾರೆ ಬೈದುಕೊಳ್ಳುತ್ತಿದ್ದರು. ಕೊನೆಗೂ ಆ ಕಾಮಗಾರಿಗಳು ಕಾರ್ಯರೂಪಕ್ಕೆ ಬರುವ ಸಮಯ ಬಂದಂತೆ ಕಾಣುತ್ತಿದೆ. ಬೆಂಗಳೂರು ಸ್ಮಾರ್ಟ್ ಸಿಟಿ ಅಡಿ ಕೈಗೆತ್ತಿಕೊಂಡಿರುವ ಟೆಂಡರ್ ಶ್ಯೂರ್ ಕಾಮಗಾರಿಗಳ ಕುರಿತ ಸಭೆಯನ್ನು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನಡೆಸಿದರು. ಈ ವೇಳೆ ಅಪರ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಇಲಾಖೆ) ರಾಕೇಶ್ ಸಿಂಗ್, ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕರು ಶ್ರೀಮತಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಇಂಜಿನಿಯರ್​ಗಳು ಉಪಸ್ಥಿತರಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿ.‌ ಅಡಿ ಟೆಂಡರ್ ಶ್ಯೂರ್ ಮಾದರಿಯಲ್ಲಿ 13 ಪ್ಯಾಕೇಕ್​ಗಳಲ್ಲಿ  ಕೈಗೆತ್ತಿಕೊಂಡಿರುವ 36 ರಸ್ತೆ ಕಾಮಗಾರಿಗಳಿಗೆ ವೇಗ ನೀಡಿ ನಿಗದಿತ ಕಾಲಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಯುಕ್ತರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಇದನ್ನೂ ಓದಿ: ಫಿಂಗರ್ ಪ್ರಿಂಟ್ ಸುಳಿವು; ಕಳ್ಳನನ್ನು ಹಿಡಿದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು

ಸಭೆ ಪ್ರಾರಂಭವಾದ ಬಳಿಕ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದು, “ಕಾಮಗಾರಿಗೆ ವೇಗ ನೀಡಿ ತ್ವರಿತವಾಗಿ ಮುಗಿಸಬೇಕು. ಸಿಬ್ಬಂದಿ ಕೊರತೆಯಿದ್ದರೆ ಕೂಡಲೆ ಹಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಬೇಕು” ಎಂದು ಆಯುಕ್ತರು ಆದೇಶಿಸಿದರು.

ಇದನ್ನೂ ಓದಿ: ಯಾವ ನಾಯಕರಿಗೆ ಏನು ಸೇವೆ ಮಾಡಿ 15 ವರ್ಷದಲ್ಲಿ ಎರಡು ಬಾರಿ ಸಿಎಂ ಆದಿರಿ?; ಕುಮಾರಸ್ವಾಮಿಯನ್ನು ಕುಟುಕಿದ ಸುಧಾಕರ್‌

36 ರಸ್ತೆ ಕಾಮಗಾರಿ ಪೈಕಿ ಎರಡು ವಾರಕ್ಕೊಮ್ಮೆ ಪರಿಶೀಲನಾ ಸಭೆ ನಡೆಸಿ ಕಾಮಗಾರಿ ಪ್ರಗತಿಯ ಮಾಹಿತಿ ಪಡೆಯುವಂತೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಆಯುಕ್ತರು ತಿಳಿಸಿದರು. ಅಲ್ಲದೆ ಪ್ರತಿ ತಿಂಗಳು ಎಷ್ಟು ಕೆಲಸ ಮಾಡುತ್ತಾರೆ ಎಂದು ಮಾಹಿತಿಯನ್ನು ಪಡೆಯಬೇಕು. ಕಾಮಗಾರಿಗಳಿಗೆ ವೇಗ ನೀಡದಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು. ವಾಹನ ಸವಾರರಿಗೆ ಯಾವುದೇ ಸಮಸ್ಯೆ ಆಗದಂತೆ ಗುತ್ತಿಗೆದಾರರು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.
Published by: Vijayasarthy SN
First published: September 1, 2020, 11:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories