ಬಿಎಸ್​ವೈ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದ ಬಸವರಾಜ ಬೊಮ್ಮಾಯಿ: ಬುಧವಾರ 11 ಗಂಟೆಗೆ ಪ್ರಮಾಣ ವಚನ

ಬಡ ಜನರ ಪರವಾಗಿ, ನ್ಯಾಯಸಮ್ಮತ ಆಡಳಿತ ನೀಡುವ ಸಂಕಲ್ಪ ಇದ್ದು, ಅದೇ ರೀತಿ ನಡೆಯಬೇಕು ಎಂಬುದು ನನ್ನ ಸಿದ್ದಾಂತ ಮತ್ತು  ಪ್ರತಿ ವಿಚಾರದಲ್ಲೂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದು ತಮ್ಮ ರಾಜಕೀಯ ಗುರು ಬಿಎಸ್​ವೈ ಅವರ ಬಗ್ಗೆ ಪುನರುಚ್ಚರಿಸಿದರು. 

ಬಡ ಜನರ ಪರವಾಗಿ, ನ್ಯಾಯಸಮ್ಮತ ಆಡಳಿತ ನೀಡುವ ಸಂಕಲ್ಪ ಇದ್ದು, ಅದೇ ರೀತಿ ನಡೆಯಬೇಕು ಎಂಬುದು ನನ್ನ ಸಿದ್ದಾಂತ ಮತ್ತು  ಪ್ರತಿ ವಿಚಾರದಲ್ಲೂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದು ತಮ್ಮ ರಾಜಕೀಯ ಗುರು ಬಿಎಸ್​ವೈ ಅವರ ಬಗ್ಗೆ ಪುನರುಚ್ಚರಿಸಿದರು. 

ಬಡ ಜನರ ಪರವಾಗಿ, ನ್ಯಾಯಸಮ್ಮತ ಆಡಳಿತ ನೀಡುವ ಸಂಕಲ್ಪ ಇದ್ದು, ಅದೇ ರೀತಿ ನಡೆಯಬೇಕು ಎಂಬುದು ನನ್ನ ಸಿದ್ದಾಂತ ಮತ್ತು  ಪ್ರತಿ ವಿಚಾರದಲ್ಲೂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದು ತಮ್ಮ ರಾಜಕೀಯ ಗುರು ಬಿಎಸ್​ವೈ ಅವರ ಬಗ್ಗೆ ಪುನರುಚ್ಚರಿಸಿದರು. 

 • Share this:
  ಬಿಜೆಪಿಯ ಪರಮೋಚ್ಚ ನಾಯಕ ಯಡಿಯೂರಪ್ಪ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಬ್ರೇಕ್​ ಬಿದ್ದಾಗಿದೆ. ಯಡಿಯೂರಪ್ಪ ಅವರ ಆಪ್ತ ವಲಯದಲ್ಲೇ ಕಾಣಿಸಿಕೊಂಡಿದ್ದ ಹಾಗೂ  ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ 20 ನೇ ಮುಖ್ಯಮಂತ್ರಿಯಾಗಿ ಬುಧವಾರ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

  ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಸವರಾಜ ಬೊಮ್ಮಾಯಿ ಅವರು, ನನ್ನ ರಾಜಕೀಯ ಗುರು ಯಡಿಯೂರಪ್ಪ ಅವರ ಆಶೀರ್ವಾದದಿಂದ  ಮುಖ್ಯಮಂತ್ರಿಯಾಗಿದ್ದೇನೆ, ನಾಳೆ ಒಬ್ಬನೇ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ, ಹೈಕಮಾಂಡ್​ ಸೂಚನೆ ನೀಡಿದ ಮೇಲೆ ನೂತನ ಸಂಪುಟ ಅಸ್ತಿತ್ವಕ್ಕೆ ಬರಲಿದೆ ಎಂದು ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು.

  ಇದೇ ವೇಳೆ ಬಿಜೆಪಿಯ ಹಿರಿಯ ನಾಯಕರಿಗೆ ಧನ್ಯವಾದಗಳನ್ನು ತಿಳಿಸಿದ ಬೊಮ್ಮಾಯಿ, ನನ್ನ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್ ಶಾ ಮತ್ತು ಹಿರಿಯರಾದ ರಾಜ್‌ನಾಥ್​ ಸಿಂಗ್ ಅವರಿಗೆ ಅತ್ಯಂತ ಋಣಿಯಾಗಿದ್ದೇನೆ ಎಂದು ಇದೇ ವೇಳೆ ಹೇಳಿದರು.

  ಇಲ್ಲಿ ನನ್ನ ಪ್ರಯತ್ನ ಏನೂ ಇಲ್ಲ, ಏಕೆಂದರೆ ನಾನು ನನ್ನ ರಾಜಕೀಯ ಗುರುಗಳಾದ ಯಡಿಯೂರಪ್ಪ ಅವರ ನೆರಳಿನಲ್ಲಿ ಬೆಳೆದವನು ಹಾಗೂ ಅವರ ಆಶೀರ್ವಾದದಿಂದ ಈಗ ಮುಖ್ಯಮಂತ್ರಿಯಾಗಿ ಚುನಾಯಿತನಾಗಿದ್ದೇನೆ. ಆದರೆ ಈ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಶ್ರಮವಹಿಸಿ ಹಾಗೂ ಕಷ್ಟಪಟ್ಟು ಬೆವರು ಸುರಿಸಿ ಯಡಿಯೂರಪ್ಪ ಅವರು ಪಕ್ಷ ಕಟ್ಟಿದ್ದಾರೆ. ಆದ ಕಾರಣ ಈ ಸ್ಥಾನ ಅವರ ಕೊಡುಗೆ ಎಂದು ಕೃತಜ್ಞತೆ ಸಲ್ಲಿಸಿದರು.

  ಅವರ ಮುಖಾಂತರ ನಾನು ಈ ಅಧಿಕಾರಕ್ಕೆ ಬಂದಿರುವೆ, ಯಡಿಯೂರಪ್ಪ ಅವರ ತ್ಯಾಗದಿಂದ ನಾನು ಸಿಎಂ ಆಗುತ್ತಿದ್ದೇನೆ. ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತೇನೆ ಹಾಗೂ ಯಡಿಯೂರಪ್ಪ ಅವರ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು‌ ಹೋಗುತ್ತೇನೆ,  ಅವರು ರೂಪಿಸಿರುವ ಅನೇಕ ಜನಪ್ರಿಯ ಯೋಜನೆಗಳನ್ನು ಅನುಷ್ಟಾನಕ್ಕೆ ತರುತ್ತೇನೆ ಎಂದರು.

  ಅಲ್ಲದೇ, ಬಡ ಜನರ ಪರವಾಗಿ, ನ್ಯಾಯಸಮ್ಮತ ಆಡಳಿತ ನೀಡುವ ಸಂಕಲ್ಪ ಇದ್ದು, ಅದೇ ರೀತಿ ನಡೆಯಬೇಕು ಎಂಬುದು ನನ್ನ ಸಿದ್ದಾಂತ ಮತ್ತು  ಪ್ರತಿ ವಿಚಾರದಲ್ಲೂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದು ತಮ್ಮ ರಾಜಕೀಯ ಗುರುವಿನ ಬಗ್ಗೆ ಪುನರುಚ್ಚರಿಸಿದರು.

  ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದು, ನಾಳೆ 11ಗಂಟೆಗೆ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಬುಧವಾರದಿಂದ ಮೋದಿ ಹಾಗೂ ಯಡಿಯೂರಪ್ಪ ಅವರ ಆಶೀರ್ವಾದದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅತ್ಯಂತ ಶಕ್ತಿಯುತವಾಗಿ  ಕೆಲಸ ಮಾಡಲಿದೆ, ನಾಳೆ ನಾನೊಬ್ಬನೇ ಪ್ರಮಾಣವಚನ‌ ಸ್ವೀಕರಿಸುತ್ತೇನೆ ಎಂದರು.

  ಇದನ್ನೂಓದಿ: ತಂದೆಯೂ ಮುಖ್ಯಮಂತ್ರಿ; ಈಗ ಮಗನೂ ರಾಜ್ಯದ ಮುಖ್ಯಮಂತ್ರಿ- ಇಲ್ಲಿದೆ ನೂತನ ಸಿಎಂ ಬೊಮ್ಮಾಯಿ ಅವರ ಸಂಕ್ಷಿಪ್ತ ಪರಿಚಯ

  ಪ್ರತಿ ಮಾತಿನಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಉಲ್ಲೇಖಿಸುತ್ತಿದ್ದ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ’’ಯಡಿಯೂರಪ್ಪ ಅವರ ಕೆಲಸವೇ ನನ್ನ ಮೊದಲನೇ ಪ್ರಯಾರಿಟಿ’’ ಎಂದು ಪದೇ, ಪದೇ ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: