ಡಿಕೆಶಿ ವಿರುದ್ಧ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಬಹಿರಂಗ ಅಸಮಾಧಾನ

ಬೀದರ್ ಜಿಲ್ಲೆಯ ಬಸವಕಲ್ಯಾಣ ಶಾಸಕ ಕ್ಷೇತ್ರದ ಶಾಸಕ ಬಿ. ನಾರಾಯಣರಾವ್, ಕೆಪಿಸಿಸಿ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯಲ್ಲೇ ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಂಡರು.

ಕಾಂಗ್ರೆಸ್ ಶಾಸಕ ಬಿ ನಾರಾಯಣರಾವ್

ಕಾಂಗ್ರೆಸ್ ಶಾಸಕ ಬಿ ನಾರಾಯಣರಾವ್

  • Share this:
ಬೀದರ್: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣಕ್ಕೂ ಮುನ್ನವೇ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಶೀತಲ ಸಮರವಿದೆ ಎಂದು ಬಿಜೆಪಿ ಸಚಿವ ಸಿ.ಟಿ. ರವಿ ಹೇಳಿರುವ ಬೆನ್ನಲ್ಲೇ, ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. 

ಬೀದರ್ ಜಿಲ್ಲೆಯ ಬಸವಕಲ್ಯಾಣ ಶಾಸಕ ಕ್ಷೇತ್ರದ ಶಾಸಕ ಬಿ. ನಾರಾಯಣರಾವ್, ಕೆಪಿಸಿಸಿ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯಲ್ಲೇ ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಂಡರು. ಆಗ ವೇದಿಕೆ ಮೇಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ್, ಬೀದರ್ ನಗರ ಶಾಸಕ ರಹೀಂ ಖಾನ್ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಕಾರವಾರದಲ್ಲಿ ಕಾರ್ಮಿಕರ ಕಿಟ್ ಪಡೆಯಲು ಮುಗಿಬಿದ್ದ ಸ್ಥಳೀಯರು; ಪೇಚಿಗೆ ಸಿಕ್ಕ ಕಾರ್ಯಕ್ರಮ ಆಯೋಜಕರು

'ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಮ್ಮ ಕೈಗೆ ಸಿಗಂಗಿಲ್ಲ. ಎದುರು ಹೋಗಿ ನಿಂತರೂ ನಮ್ಮನ್ನು ನೋಡಂಗಿಲ್ಲ' ಎಂದು ಬಹಿರಂಗವಾಗಿಯೇ ಡಿಕೆಶಿ ವರ್ತನೆ ಬಗ್ಗೆ ನಾರಾಯಣರಾವ್ ಆಕ್ಷೇಪ ವ್ಯಕ್ತಪಡಿಸಿದರು. ಮುಂದುವರೆದು ಮಾತನಾಡಿದ ಅವರು, “ನಾನಿದ್ದರೂ ಕಾಂಗ್ರೆಸ್​ನಲ್ಲೇ, ಸತ್ತರೂ ಕಾಂಗ್ರೆಸ್ ಪಕ್ಷದಲ್ಲೇ. ನನ್ನನ್ನು ಖರೀದಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅಂಥ ಗಂಡಸು ಯಾವುದೇ ಪಾರ್ಟಿಯಲ್ಲಿ ಇನ್ನೂ ಹುಟ್ಟಿಲ್ಲ. ನಾನು ಪಕ್ಷಕ್ಕೆ ದ್ರೋಹ ಬಗೆಯುವಂತಹ ಕೆಲಸ ಎಂದೂ ಮಾಡಿಲ್ಲ. ಮಾಡುವುದೂ ಇಲ್ಲ. ನೀವು ನಮಗೆ ಬಲ ನೀಡಿದರೆ ನಾವು ನಿಮಗೆ ಪ್ರತಿಯಾಗಿ ದೊಡ್ಡ ಬಲವಾಗಿರುತ್ತೇವೆ” ಎಂದು ಈಶ್ವರ್ ಖಂಡ್ರೆ ಅವರನ್ನು ಉದ್ದೇಶಿಸಿ ಮಾತನಾಡಿದರು. ಆಗ ಮುಗುಳ್ನಕ್ಕ ಖಂಡ್ರೆ, ಕಾಂಗ್ರೆಸ್ ನಮ್ಮ ಮನೆ. ಹೊಂದಿಕೊಂಡು ಹೋಗೋಣ ಎಂದು ಕರೆ ನೀಡಿದರು.

ವರದಿ: ಸಿದ್ದು ಸತ್ಯಣ್ಣನವರ್

First published: