ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಸನಗೌಡ ತುರ್ವಿಹಾಳ
ಮುಂಬರುವ ಮಸ್ಕಿ ಉಪಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಖಚಿತ ಎನ್ನಲಾಗುತ್ತಿರುವಂತೆಯೇ ಬಸನಗೌಡ ತುರವಿಹಾಳ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ಧಾರೆ.
news18-kannada Updated:November 8, 2020, 12:32 PM IST

ಬಸನಗೌಡ ತುರವಿಹಾಳ
- News18 Kannada
- Last Updated: November 8, 2020, 12:32 PM IST
ರಾಯಚೂರು: ಮಸ್ಕಿಯ ಪ್ರತಾಪಗೌಡ ಶಾಸಕ ಸ್ಥಾನಕ್ಕೆ ರಾಜಿನಾಮೆ ಬಿಜೆಪಿ ಸೇರಿದಾಗಿನಿಂದಲೂ ಅವರ ಪ್ರತಿಸ್ಪರ್ಧಿ ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಇತ್ತು. ಆದರೆ ನಿನ್ನೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಅವರು ರಾಜಿನಾಮೆ ನೀಡಿದ್ದಾರೆ ಎನ್ನುವ ಪತ್ರ ಹರಿದಾಡುತ್ತಿದೆ. ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಪಕ್ಷಾಂತರ ಅನಿವಾರ್ಯವಾಗಿತ್ತು ಎನ್ನಲಾಗಿದೆ.
2018 ರಲ್ಲಿ ಮಸ್ಕಿಯಲ್ಲಿ ಕಾಂಗ್ರೆಸ್ನಿಂದ ಪ್ರತಾಪಗೌಡ, ಬಿಜೆಪಿಯಿಂದ ಬಸನಗೌಡ ತುರ್ವಿಹಾಳ ಸ್ಪರ್ಧಿಸಿದ್ದರು. ಕೇವಲ 213 ಮತಗಳ ಅಂತರದಲ್ಲಿ ಪ್ರತಾಪಗೌಡ ಗೆಲುವು ಸಾಧಿಸಿದ್ದರು. ಚುನಾವಣೆಯ ನಂತರ ಪ್ರತಾಪಗೌಡ ಅಕ್ರಮ ಮತದಾನ ಮಾಡಿಸಿದ್ದಾರೆ ಎಂದು ಬಸನಗೌಡ ತುರ್ವಿಹಾಳ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ. ವಜಾಗೊಳಿಸಿ ಎರಡು ತಿಂಗಳಾಗುತ್ತಾ ಬಂದರೂ ತೀರ್ಪಿನ ಪ್ರತಿ ಪ್ರತಾಪಗೌಡರ ಕೈಗೆ ಸೇರಿಲ್ಲ. ಈ ಮಧ್ಯೆ ಪ್ರತಾಪಗೌಡ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದರು. ಆಗಿನಿಂದಲೂ ಬಸನಗೌಡ ತುರ್ವಿಹಾಳರಿಗೆ ರಾಜಕೀಯ ಅತಂತ್ರ ಕಾಡುತ್ತಿತ್ತು. ಈ ಮಧ್ಯೆ ಪ್ರತಾಪಗೌಡರಿಗೆ ಬಿಜೆಪಿ ಟಿಕೆಟ್ ಕನ್ಫರ್ಮ್ ಆಗುತ್ತಿದ್ದಂತೆ ಬಸನಗೌಡರಿಗೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದರು. ಆಗಲೂ ಸಹ ಮೊದಲು ನಿರಾಕರಿಸಿ ನಂತರ ಬಿಜೆಪಿ ಮುಖಂಡರ ಒತ್ತಾಯದ ಮೇರೆಗೆ ಒಪ್ಪಿಕೊಂಡಿದ್ದರು. ಈ ಮಧ್ಯೆ ಪ್ರತಾಪಗೌಡರ ವಿರುದ್ದ ತೀರ್ಪು ವಜಾಗೊಳ್ಳುತ್ತಿದ್ದಂತೆ ಮಸ್ಕಿಯಲ್ಲಿ ಚುನಾವಣೆ ಸಿದ್ದತೆ ನಡೆದಿದೆ. ಉಪಚುನಾವಣೆಯಲ್ಲಿ ಪ್ರತಾಪಗೌಡರಿಗೆ ಟಿಕೆಟ್ ಕನ್ಫರ್ಮ ಆಗಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಾಪಗೌಡರಿಗೆ ಟಿಕೆಟ್ ನೀಡಬಹುದು. ಇದರಿಂದ ಬಿಜೆಪಿಯಲ್ಲಿದ್ದರೆ ಹಿಂಬಾಲಕರಾಗಿಯೇ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಉಪಚುನಾವಣೆ ಸೇರಿದಂತೆ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಬಸನಗೌಡರು ಪಕ್ಷ ಬದಲಿಸಲೇಬೇಕಾಗಿತ್ತು. ಈ ಕುರಿತು ಅವರ ಬೆಂಬಲಿಗರು ಸಹ ಒತ್ತಡ ಹಾಕುತ್ತಿದ್ದಾರೆ. ‘ಮುಂದಿನ ಶಾಸಕ’, ‘ಗಲ್ಲಿ ಗಲ್ಲಿ ತಿರುಗಿ ನೀರು ಹಾಕಿ ಬೆಳೆಸಿದ ಕಮಲ ಈಗ ಬೇರೆಯವರ ಪಾಲು’. ‘ನಿನಗೆ ಅಂತಿಮ ನಮನ’ ಎಂದು ಹಲವಾರು ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರ ಬೆನ್ನಲ್ಲೇ ದೆಹಲಿಗೆ ತೆರಳಿದ ಸಿ.ಟಿ. ರವಿ
ಕಾರ್ಯಕರ್ತರ ಒತ್ತಡದ ಹಿನ್ನೆಲೆಯಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ. ಮುಂದಿನ ಉಪಚುನಾವಣೆಯಲ್ಲಿ ಬಸನಗೌಡ ವರ್ಸಸ್ ಪ್ರತಾಪಗೌಡ ಆದರೆ ಕಳೆದ ಬಾರಿ ಇದ್ದ ಪಕ್ಷಗಳು ಮಾತ್ರ ಅದಲು ಬದಲಾಗುತ್ತಿವೆ. ಬಸನಗೌಡ ಹಾಗು ಪ್ರತಾಪಗೌಡರ ಮಧ್ಯೆ ಹೊಂದಾಣಿಕೆಗಾಗಿ ನಳಿನ್ ಕುಮಾರ ಕಟೀಲ್ ಒಮ್ಮೆ ಮಸ್ಕಿಯಲ್ಲಿ ಇನ್ನೊಮ್ಮೆ ಹುಬ್ಬಳ್ಳಿಯಲ್ಲಿ ನಡೆಸಿದ್ದ ಯತ್ನ ವಿಫಲವಾಗಿತ್ತು. ಇಂದು ಸಿಎಂ ಸಮ್ಮುಖದಲ್ಲಿ ಸಂಧಾನ ನಡೆಯಲಿತ್ತು. ಆದರೆ ಇಂದೇ ಡಿಕೆ ಶಿವಕುಮಾರ ಮನೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇದೇ ವೇಳೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನಕ್ಕೂ ರಾಜಿನಾಮೆ ನೀಡಿದ್ದಾರೆ ಎನ್ನುವ ರಾಜಿನಾಮೆ ಪತ್ರ ಹರಿದಾಡುತ್ತಿದೆ. ಆದರೆ ಅದರಲ್ಲಿ ದಿನಾಂಕವಿಲ್ಲ, ಈ ಪತ್ರ ಹಳೆಯದು ಎನ್ನುವ ಮಾಹಿತಿ ಇದೆ.
ವರದಿ: ಶರಣಪ್ಪ ಬಾಚಲಾಪುರ
2018 ರಲ್ಲಿ ಮಸ್ಕಿಯಲ್ಲಿ ಕಾಂಗ್ರೆಸ್ನಿಂದ ಪ್ರತಾಪಗೌಡ, ಬಿಜೆಪಿಯಿಂದ ಬಸನಗೌಡ ತುರ್ವಿಹಾಳ ಸ್ಪರ್ಧಿಸಿದ್ದರು. ಕೇವಲ 213 ಮತಗಳ ಅಂತರದಲ್ಲಿ ಪ್ರತಾಪಗೌಡ ಗೆಲುವು ಸಾಧಿಸಿದ್ದರು. ಚುನಾವಣೆಯ ನಂತರ ಪ್ರತಾಪಗೌಡ ಅಕ್ರಮ ಮತದಾನ ಮಾಡಿಸಿದ್ದಾರೆ ಎಂದು ಬಸನಗೌಡ ತುರ್ವಿಹಾಳ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ. ವಜಾಗೊಳಿಸಿ ಎರಡು ತಿಂಗಳಾಗುತ್ತಾ ಬಂದರೂ ತೀರ್ಪಿನ ಪ್ರತಿ ಪ್ರತಾಪಗೌಡರ ಕೈಗೆ ಸೇರಿಲ್ಲ. ಈ ಮಧ್ಯೆ ಪ್ರತಾಪಗೌಡ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದರು. ಆಗಿನಿಂದಲೂ ಬಸನಗೌಡ ತುರ್ವಿಹಾಳರಿಗೆ ರಾಜಕೀಯ ಅತಂತ್ರ ಕಾಡುತ್ತಿತ್ತು.