• Home
  • »
  • News
  • »
  • district
  • »
  • ಸಿದ್ಧರಾಮಯ್ಯ ಹಾದಿ ಬಿಟ್ಟಿದ್ದಾರೆ, ರಾಹುಲ್ ಗಾಂಧಿ ಸಂಸತ್ತಿನ ಮುಂದೆ ಕಾರು ಕಾಯಲು ಲಾಯಕ್ಕಿಲ್ಲ; ಯತ್ನಾಳ

ಸಿದ್ಧರಾಮಯ್ಯ ಹಾದಿ ಬಿಟ್ಟಿದ್ದಾರೆ, ರಾಹುಲ್ ಗಾಂಧಿ ಸಂಸತ್ತಿನ ಮುಂದೆ ಕಾರು ಕಾಯಲು ಲಾಯಕ್ಕಿಲ್ಲ; ಯತ್ನಾಳ

ಶಾಸಕ ಬಸನಗೌಡ ಪಾಟೀಲ ಯತ್ನಾಳ

ಶಾಸಕ ಬಸನಗೌಡ ಪಾಟೀಲ ಯತ್ನಾಳ

ಸಿದ್ಧರಾಮಯ್ಯ ಯಾಕೋ ಹಾದಿ ಬಿಟ್ಟಿದ್ದಾರೆ. ನಾನು ಗೋಮಾಂಸ ತಿನ್ನುತ್ತೇನೆ. ನನ್ನನ್ನು‌ ಕೇಳುವವರು ಯಾರು ಎಂಬ ಮನಸ್ಥಿತಿ ಹೊಂದಿದ್ದಾರೆ. ಹಿಂದೂಗಳಿಗೆ ಅವಮಾನ‌ ಮಾಡಿದರೆ ನಿಮಗೆ ಓಟುಗಳು ಬರುತ್ತವಾ? ಆಯ್ತು, ಮುಂದಿನ ಚುನಾವಣೆಯಲ್ಲಿ ನೋಡೋಣ. ಹಿಂದೂಗಳ‌ ಮತವಿಲ್ಲದೇ ಹೇಗೆ ಆಯ್ಕೆಯಾಗ್ತೀರಿ ನೋಡೋಣ ಎಂದು ಚಾಟಿ ಬೀಸಿದ್ದಾರೆ.

ಮುಂದೆ ಓದಿ ...
  • Share this:

ವಿಜಯಪುರ (ಡಿ. 29); ಮುಂದಿನ ವರ್ಷ ಜ. 4 ಮತ್ತು 5 ರಂದು ಸಿಎಂ ಬಿಜೆಪಿ ಶಾಸಕರ ಸಭೆ ಕರೆದಿರುವುದಕ್ಕೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುದಲ್ಲಿ ಮಾತನಾಡಿದ ಅವರು, ತಾವು ಕೇಂದ್ರ ಸಚಿವರಾಗಿದ್ದಾಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಅನುಸರಿಸುತ್ತಿದ್ದ ಮಾರ್ಗವನ್ನು ರಾಜ್ಯದಲ್ಲಿಯೂ ಸಿಎಂ ಪಾಲಿಸಬೇಕು ಎಂದು ಆಗ್ರಹಿಸಿದ್ದಾರೆ.


ಅಧಿವೇಶನ ಸಂದರ್ಭದಲ್ಲಿ ಪಾರ್ಲಿಮೆಂಟ್ ಮಾದರಿಯಲ್ಲಿ ರಾಜ್ಯದಲ್ಲಿಯೂ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಇಂದು ಪತ್ರ ಬರೆಯುವುದಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.


ನಾನು ಕೇಂದ್ರ ಸಚಿವನಾಗಿದ್ದಾಗಿನಿಂದ ಕೇಂದ್ರದಲ್ಲಿ ಒಂದು ಪದ್ಧತಿ ಇದೆ.  ಪ್ರತಿ ಬಾರಿ ಅಧಿವೇಶನ ನಡೆಯುವಾಗ ಪ್ರತಿ ಮಂಗಳವಾರ ಬೆ. 9ಕ್ಕೆ ಸಂಸದರ ಸಭೆ ನಡೆಯುತ್ತದೆ.  ವಾಜಪೇಯಿ, ಅಡ್ವಾಣಿ ಕಾಲದಿಂದಲೂ ಈ ಪದ್ಧತಿ ಜಾರಿಯಲ್ಲಿದೆ. ರಾಜ್ಯದಲ್ಲಿಯೂ ವಿಧಾನ ಮಂಡಲ ಅಧಿವೇಶನ ನಡೆಯುವಾಗ ಪ್ರತಿ ಮಂಗಳವಾರ ಶಾಸಕರ ಸಭೆ ಕರೆಯಬೇಕು. ಶಾಸಕರ ಭಾವನೆಗಳನ್ನು ತಿಳಿದುಕೊಳ್ಳಬೇಕು. ವಿಭಾಗವಾರು ಶಾಸಕರ ಸಭೆ ಕರೆಯಬಾರದು. ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಡಿ. 4 ಮತ್ತು 5 ರಂದು ನಡೆಯುವ ಸಭೆಗೆ ನಾನೂ ಹಾಜರಾಗುತ್ತೇನೆ. ಶಾಸಕಾಂಗ ಪಕ್ಷದ ಸಭೆ ಕರೆದರೆ ಎಲ್ಲ 117 ಶಾಸಕರ ಸಮ್ಮುಖದಲ್ಲಿ ಮುಕ್ತ ಚರ್ಚೆ ನಡೆಸಲು ಸಾಧ್ಯವಾಗುತ್ತದೆ ಎಂದು ಯತ್ನಾಳ ತಿಳಿಸಿದರು.


ರಾಹುಲ್ ಗಾಂಧಿ ಅರೆಹುಚ್ಚ; ಯತ್ನಾಳ


ಇದೇ ವೇಳೆ ಇತ್ತೀಚೆಗೆ ವಿಧಾನ ಪರಿಷತನಲ್ಲಿ ಉಪಸಭಾಪತಿಯವರನ್ನು ಎಳೆದಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಕಾಂಗ್ರೆಸ್ ಸದಸ್ಯರ ವರ್ತನೆಯ ಪರ ತೋರಿದ ನಿಲುವಿಗೆ ಯತ್ನಾಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಇದನ್ನು ಓದಿ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಬ್ರೇಕ್; ಸೆಕ್ಷನ್ 144 ಜಾರಿ


ವಿಧಾನ ಪರಿಷತ್ ನಲ್ಲಿ ಧರ್ಮೇಗೌಡರನ್ಮು ಎಳೆದಾಡಿದ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರನ್ನು ಸಿದ್ಧರಾಮಯ್ಯ ಸಮರ್ಥಿಸಿದ ಬಗೆಯನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ಧರಾಮಯ್ಯ ಯಾಕೋ ಹಾದಿ ಬಿಟ್ಟಿದ್ದಾರೆ. ನಾನು ಗೋಮಾಂಸ ತಿನ್ನುತ್ತೇನೆ. ನನ್ನನ್ನು‌ ಕೇಳುವವರು ಯಾರು ಎಂಬ ಮನಸ್ಥಿತಿ ಹೊಂದಿದ್ದಾರೆ. ಹಿಂದೂಗಳಿಗೆ ಅವಮಾನ‌ ಮಾಡಿದರೆ ನಿಮಗೆ ಓಟುಗಳು ಬರುತ್ತವಾ? ಆಯ್ತು, ಮುಂದಿನ ಚುನಾವಣೆಯಲ್ಲಿ ನೋಡೋಣ. ಹಿಂದೂಗಳ‌ ಮತವಿಲ್ಲದೇ ಹೇಗೆ ಆಯ್ಕೆಯಾಗ್ತೀರಿ ನೋಡೋಣ ಎಂದು ಚಾಟಿ ಬೀಸಿದ್ದಾರೆ.


ದೆಹಲಿ ಗಡಿ ಬಳಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸುತ್ತಿರುವ ರಾಹುಲ್ ಏಕಾಏಕಿ ಇಟಲಿಗೆ ಪ್ರವಾಸ ಕೈಗೊಂಡಿದ್ದಾರೆ.  ರಾಹುಲ್ಲ ಗಾಂಧಿ ಒಬ್ಬ ಅರೆಹುಚ್ಚ, ಬಫೂನ್. ಆತ ರಾಜಕಾರಣಕ್ಕೆ ಅಲ್ಲ, ಪಾರ್ಲಿಮೆಂಟಿನ ಮುಂದೆ ನಿಂತಿರುವ ಕಾರು ಕಾಯಲೂ ಲಾಯಕ್ಕಿಲ್ಲ ಎಂದು ಯತ್ನಾಳ ವ್ಯಂಗ್ಯವಾಡಿದ್ದಾರೆ.

Published by:HR Ramesh
First published: