HOME » NEWS » District » BASANAGOUDA PATIL YATNAL AGAIN CRITICISES CM AND HIS SON VIJAYENDRA MTH SNVS

ವಿಜಯೇಂದ್ರ ಬಳಿ ರೊಕ್ಕ ಇದೆ ಹೊರತು ನಾಯಕತ್ವವಲ್ಲ; ಸದ್ಯದಲ್ಲೇ ಹಗರಣ ಹೊರಬರುತ್ತೆ: ಯತ್ನಾಳ

ಮೇ 2ರ ಒಳಗೆಯೇ ಸಿಎಂ ಸ್ಥಾನ ಬದಲಾವಣೆ ಆಗುವುದು ನಿಶ್ಚಿತ ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಹಾಗೆಯೇ, ಸಿಎಂ ಪುತ್ರನ ಬಗ್ಗೆ ವಾಗ್ದಾಳಿ ನಡೆಸಿದ ಅವರು, ವಿಜಯೇಂದ್ರನ ಬಳಿ ರೊಕ್ಕ ಇದೆಯೇ ಹೊರತು ನಾಯಕತ್ವ ಇಲ್ಲ ಎಂದು ಟೀಕಿಸಿದ್ದಾರೆ.

news18-kannada
Updated:April 12, 2021, 12:19 PM IST
ವಿಜಯೇಂದ್ರ ಬಳಿ ರೊಕ್ಕ ಇದೆ ಹೊರತು ನಾಯಕತ್ವವಲ್ಲ; ಸದ್ಯದಲ್ಲೇ ಹಗರಣ ಹೊರಬರುತ್ತೆ: ಯತ್ನಾಳ
ಬಸನಗೌಡ ಪಾಟೀಲ್ ಯತ್ನಾಳ
  • Share this:
ಹಾವೇರಿ: ಪುತ್ರ ವ್ಯಾಮೋಹದಿಂದ ಯಡಿಯೂರಪ್ಪ ತುಂಬಿ ತುಳುಕುತ್ತಿದ್ದಾರೆ. ಮಗನನ್ನ ಮಸ್ಕಿಯಲ್ಲಿ ಬಿಟ್ಟಿದ್ದಾರೆ. ಆತ ರೊಕ್ಕ ಹಂಚುತ್ತಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಬಳಿ ಇರೋದು ರೊಕ್ಕ ಅಷ್ಟೇ ಹೊರತು ನಾಯಕತ್ವ ಇಲ್ಲ. ವಿಜಯೇಂದ್ರ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಈಗ ಫೆಡರಲ್ ಬ್ಯಾಂಕ್ ಹಗರಣ ಹೊರಗೆ ಬರುತ್ತೆ ನೋಡುವಿರಂತೆ. ವಿಜಯೇಂದ್ರ ವಿದೇಶದಲ್ಲಿ ಸಾವಿರಾರು ಕೋಟಿ ಇಟ್ಟಿದ್ದಾನೆ. ಈಗ ಅವನ ಹಗರಣ ಹೊರಗೆ ಬರುತ್ತೆ ಎಂದಿದ್ದಾರೆ. ಇದೇ ವೇಳೆ ಹಣ ಹಂಚಿ ಗೆಲ್ಲುವ ಅನಿವಾರ್ಯತೆ ಬಿಜೆಪಿ ಬಂತಾ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಯಡಿಯೂರಪ್ಪ ವಿರುದ್ಧವೇ ಉಪ ಚುನಾವಣೆಯಲ್ಲಿ ಹಣ ಹಂಚಿಕೆ ಆರೋಪ ಮಾಡಿದ್ದಾರೆ.

ಈಗ ಹಂಗೆ ನಡೆದುಬಿಟ್ಟಿದೆ ಯಡಿಯೂರಪ್ಪನವರ ಕಾಲದಲ್ಲಿ. ಯಡಿಯೂರಪ್ಪ ಬಿಜೆಪಿ ಕಟ್ಟುವಾಗ ಹಂಗ ಪರಿಸ್ಥಿತಿ ಇರಲಿಲ್ಲ. ಇವತ್ತು ಎಂಪಿ ಆಗಬೇಕಾದರೆ ನೂರಾರು ಕೋಟಿ ಖರ್ಚು ಮಾಡಬೇಕು. ನಾವೆಲ್ಲ 2 ಲಕ್ಷ 5 ಲಕ್ಷದಲ್ಲಿ ಎಂಎಲ್​ಎ ಎಂಪಿ ಆಗಿದಿವಿ. ಮೇ 2ರ ಒಳಗೇ ಸಿಎಂ ಬದಲಾವಣೆ ಆಗುತ್ತೆ. ನಾವು ಮತ್ತೆ ಮೇ2ರ ಒಳಗೇ ಬಂದಿದ್ದೀವಿ. ಅದರ ಒಳಗೇ ಬದಲಾವಣೆ ಆಗುತ್ತೆ. ಮತ್ಯಾಕೆ ಮೇ2ಕ್ಕೆ ಹೋಗ್ತೀರಿ. ಸಿಎಂ ಯತ್ನಾಳ ಆಗ್ತಾರೋ ಯಾರು ಆಗ್ತಾರೋ ಗೊತ್ತಿಲ್ಲ. ಆದರೆ, ಸಿಎಂ ಬದಲಾವಣೆ ಖಚಿತ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್​ನಂಥವರು ಕಾರ್ಮಿಕರನ್ನ ತಪ್ಪು ದಾರಿಗೆ ಎಳೆಯುತ್ತಾರೆ:

ಇದೇ ವೇಳೆ ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ನಂತವರು ಕಾರ್ಮಿಕರನ್ನ ತಪ್ಪು ದಾರಿಗೆ ಎಳೆಯುತ್ತಾರೆ. ನಮ್ಮ ಸರ್ಕಾರದಲ್ಲಿ ಇರುವವರು ಸರಿಯಾಗಿ ನಿಭಾಯಿಸುತ್ತಿಲ್ಲ. ಸಾರಿಗೆ ಸಂಸ್ಥೆ ಲಾಭದಲ್ಲಿ ಬಂದ್ರೆ 6ನೇ ವೇತನ ಮಾಡ್ತೇವೆ ಅಂತ ಮೂರು ತಿಂಗಳ ಹಿಂದೆಯೇ ಹೇಳಬೇಕಿತ್ತು. ಸಂಸ್ಥೆ ಲಾಭದಲ್ಲಿ ಬರಬೇಕಾದರೆ ಸರ್ಕಾರ ಏನಾದ್ರು ಮಾಡಬೇಕಲ್ಲ ಎಂದಿದ್ದಾರೆ.

ಇದನ್ನೂ ಓದಿ: HD Kumaraswamy: ಬಿಜೆಪಿ ಸರ್ಕಾರ ರೈತರ ಬಗ್ಗೆ ಮೃದು ಮಾತಾಡುತ್ತಲೇ ರೈತರ ಬೆನ್ನಿಗೆ ಚೂರಿ ಹಾಕುತ್ತಿದೆ; ಕುಮಾರಸ್ವಾಮಿ ಆರೋಪ

ಬಸ್ ಖರೀದಿಯಲ್ಲಿ ಹಗರಣ ಆಗ್ತಾವೆ. ಗುಜುರಿ ಲಿಲಾವ್ ನಲ್ಲಿ ದೊಡ್ಡ ಲಾಬಿ ಇದೆ. ಯಾರೋ ಬಂದು ಎಂ.ಡಿ ಆಗ್ತಾರೆ. ಅವನು ಬಂದು ಲೂಟಿ ಮಾಡ್ಕೊಂಡು ಹೋಗ್ತಾನೆ. ಸಂಸ್ಥೆ ಉಳಿಬೇಕು ಕಾರ್ಮಿಕರ ಭವಿಷ್ಯ ಉಳಿಬೇಕು. ಅದಕ್ಕೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮೊದಲು ಭ್ರಷ್ಟಾಚಾರ ನಿಲ್ಲಿಸಬೇಕು. ಸಾರಿಗೆ ಸಂಸ್ಥೆಯಲ್ಲಿ ಸಾವಿರಾರು ಬಸ್ ಖರೀದಿ ಮಾಡ್ತಾರೆ. ಒಂದು ಬಸ್​ನ ಹಿಂದೆ ಎಷ್ಟು ಕಮಿಷನ್ ತಿಂತಾರೆ ಅಂತ ಗೊತ್ತಿದೆ. ಹಿಂಗಾದ್ರೆ ಸಂಸ್ಥೆ ಹೇಗೆ ಉದ್ದಾರ ಆಗುತ್ತೆ. ಸಾರಿಗೆ ಸಂಸ್ಥೆ ಉದ್ದಾರ ಮಾಡಬೇಕಾದರೆ ಸಚಿವರು ಗಂಭೀರವಾಗಿ ಸೋರಿಕೆ ನಿಲ್ಲಿಸಬೇಕು. ಸಂಸ್ಥೆಗೆ ಲಾಭ ಆಗೋದು ಬೇಡ, ಅದರ ಖರ್ಚಾದರೂ ಅದಕ್ಕೆ ಆಗಬೇಕಲ್ಲ. ಖಾಸಗಿಯವರು ಲಾಭದಲ್ಲಿದ್ದಾರೆ. ಆದ್ರೆ ಸಾರಿಗೆ ಸಂಸ್ಥೆ ಯಾಕೆ ನಷ್ಟದಲ್ಲಿದೆ? ಅದಕ್ಕೆ ಸರ್ಕಾರನೂ ಜವಾಬ್ದಾರಿ ಇದೆ. ಕಾರ್ಮಿಕರಿಗೂ ಜವಾಬ್ದಾರಿ ಇದೆ, ಅಧಿಕಾರಿಗಳಿಗೂ ಜವಾಬ್ದಾರಿ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಿದ್ದರಾಮಯ್ಯನವರಿಗೆ ಈಗ ನೆನಪಾಗಿದೆ:ಸಾರಿಗೆ ಸಂಸ್ಥೆ ವಿಚಾರ ಸಿದ್ದರಾಮಯ್ಯನವರಿಗೆ ಈಗ ನೆನಪಾಗಿದೆ. ಇಲ್ಲಿ ನಾವು ವಿರೋಧ ಪಕ್ಷದ ಕೆಲಸ ನಾವು ಮಾಡ್ತಿದ್ದೇವೆ. ಆದ್ರೆ, ಸಿದ್ದರಾಮಯ್ಯ, ಡಿಕೆಶಿ ಅವರುಗಳು ಯಡಿಯೂರಪ್ಪ ಜೊತೆ ಹೊಂದಾಣಿಕೆ ಇದ್ದಾರೆ. ಮುಂಜಾನೆ ವಿರೋಧ ಪಕ್ಷ ಅಂತ ಮಾಡ್ತಾರೆ. ರಾತ್ರಿ ಆದರೆ ವಿಜಯೇಂದ್ರ ಹೋಗಿ ಏನು ಸಮಾಧಾನ ಮಾಡಬೇಕು, ಬಹುಮಾನ ಕೊಡಬೇಕು ಮಾಡ್ತಾನೆ ಎಂದು ಕುಟುಕಿದ ಬಸನಗೌಡ ಪಾಟೀಲ ಯತ್ನಾಳ, ಯಡಿಯೂರಪ್ಪ ಬದಲಾವಣೆ ಮಾಡೋದು ಅನಿವಾರ್ಯ ಆಗಿದೆ. ಮತ್ತೊಂದು ಪರ್ಯಾಯವೇ ಇಲ್ಲ. ಯಡಿಯೂರಪ್ಪನವರು ಸರ್ಕಾರ ನಡೆಸುತ್ತಿಲ್ಲ. ವಿಜಯೇಂದ್ರ ಮತ್ತು ಇಡೀ ಕುಟುಂಬ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಹಿನೂ ಯಡಿಯೂರಪ್ಪ ಮಾಡ್ತಾರೋ ಇಲ್ಲವೋ ಅನ್ನೋ  ಸಂಶಯ ಇದೆ:

ಇನ್ನು ಸಹಿಯನ್ನೂ ಯಡಿಯೂರಪ್ಪ ಮಾಡುತ್ತಾರೋ ಇಲ್ಲವೋ ಅನ್ನೋ  ಸಂಶಯ ಇದೆ ನನಗೆ. ಸಹಿ ಮಾಡೋದಕ್ಕೂ ನಮ್ಮ ಯಡಿಯೂರಪ್ಪನವರ ಕೈ ನಡುಗುತ್ತೆ. ಇನ್ನು ಸಹಿ ಏನ್ ಮಾಡ್ತಾರೆ ಸಾವಿರಾರು ಫೈಲ್ ಇವೆ. ವಿಜಯೇಂದ್ರ ಬಂಗಾರ ತೂಕ ಮಾಡಿದಂತೆ ಫೈಲ್​ಗಳನ್ನೂ ತೂಕ ಮಾಡ್ತಾನೆ. 10 ಕೋಟಿ ಫೈಲೋ, 2 ಕೋಟಿ ಫೈಲೋ, 100 ಕೋಟಿ ಫೈಲೋ ಅಂತ ತೂಕ ಮಾಡಿ ಅವರ ಅಪ್ಪನ ಮುಂದೆ ಫೈಲ್ ಇಡ್ತಾನೆ. ಅವಾ ವಿಜಯೇಂದ್ರನ ನೋಡಿ ಬಿ.ಎಸ್. ಯಡಿಯೂರಪ್ಪ ಅಂತ ಸಹಿ ಮಾಡ್ತಾನೆ ಎಂದು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಯತ್ನಾಳ ಟೀಕಾ ಪ್ರಹಾರ ಮಾಡಿದ್ದಾರೆ.

ವರದಿ: ಮಂಜುನಾಥ್ ತಳವಾರ
Published by: Vijayasarthy SN
First published: April 12, 2021, 12:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories