ಯಡಿಯೂರಪ್ಪ ಮುಂದಿನ 3 ವರ್ಷ ಸಿಎಂ ಆಗಿರುತ್ತಾರೆ ಎಂದು ನಾನೇನೂ ಹೇಳೊಲ್ಲ : ಶಾಸಕ ಯತ್ನಾಳ

ತಾವು ಮಾತನಾಡಿದ್ದು ಪಕ್ಷ ವಿರೋಧಿಯಲ್ಲ. ಮೊದಲು ನಾನೊಬ್ಬ ಜನಪ್ರತಿನಿಧಿ. ನಮಗೆ ದೇಶ ಮೊದಲು. ನಂತರ ಪಕ್ಷ. ನಂತರ ನಾನು ಎಂದು ನನ್ನ ಪಕ್ಷ ಬಿಜೆಪಿ ಕಲಿಸಿಕೊಟ್ಟಿದೆ. ಇದರಲ್ಲಿ ಸ್ವಾರ್ಥವೇನಿದೆ? ಆಡಳಿತ ಪಕ್ಷದಲ್ಲಿದ್ದು ಪ್ರಶ್ನೆ ಮಾಡಬಾರದು ಎಂದು ಎಲ್ಲಿ ಹೇಳಲಾಗಿದೆ

news18-kannada
Updated:October 30, 2020, 8:12 PM IST
ಯಡಿಯೂರಪ್ಪ ಮುಂದಿನ 3 ವರ್ಷ ಸಿಎಂ ಆಗಿರುತ್ತಾರೆ ಎಂದು ನಾನೇನೂ ಹೇಳೊಲ್ಲ : ಶಾಸಕ ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ
  • Share this:
ವಿಜಯಪುರ(ಅಕ್ಟೋಬರ್​. 30): ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ನಾನು ಹೇಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಸಿಎಂಗೆ ತಿರುಗೇಟು ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಬೇರೆ ಸಚಿವರಂತೆ ಯಡಿಯೂರಪ್ಪ 3 ವರ್ಷ ಸಿಎಂ ಆಗಿರುತ್ತಾರೆ, ಸೂರ್ಯ ಚಂದ್ರರು ಇರುವ ತನಕ ಸಿಎಂ ಆಗಿರುತ್ತಾರೆ ಎಂದು ನಾನೇನೂ ಹೇಳುವುದಿಲ್ಲ ಎಂದರು. ಸರ್ಕಾರ ಬೆಂಗಳೂರಿಗೊಂದು ನ್ಯಾಯ, ಉತ್ತರ ಕರ್ನಾಟಕಕ್ಕೊಂದು ನ್ಯಾಯ ಎಂದು ವರ್ತಿಸುತ್ತಿದೆ. ಭೀಮಾ ಪ್ರವಾಹ ಪೀಡಿತರಿಗೆ 10 ಸಾವಿರ ರೂ ಪರಿಹಾರ ನೀಡಿದೆ. ಆದರೆ, ಬೆಂಗಳೂರು ಮಳೆ ಸಂತ್ರಸ್ತರಿಗೆ 25 ಸಾವಿರ ರೂ ಹಣವನ್ನು ಸಚಿವರು ಹಂಚಿದ್ದಾರೆ. ನಾನು ಅಭಿವೃದ್ಧಿ ಪರ ಧ್ವನಿ ಎತ್ತಿದ್ದಕ್ಕೆ ಇಂದು ವಿಜಯಪುರ ಮಹಾನಗರ ಪಾಲಿಕೆಗೆ ಸಿಎಂ 195 ಕೋಟಿ ರೂ ಹಣ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ 10 ಮಹಾನಗರ ಪಾಲಿಕೆಗಳಿಗೂ ಅನುದಾನ ಬಿಡುಗಡೆ ಮಾಡಿದ್ದಾರೆ.

ನಾನು ಈ ಹಿಂದೆ ಸಿಎಂ ಅವರನ್ನು ಹಲವಾರು ಬಾರಿ ಭೇಟಿಯಾಗಿದ್ದೆ. ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ಮಾಡಿರಲಿಲ್ಲ. ಆದರೆ, ಮೊನ್ನೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದರ ಫಲವಾಗಿ ಕೇವಲ 24 ಗಂಟೆಗಳಲ್ಲಿ ವಿಜಯಪುರ ಮಹಾನಗರ 125 ಕೋಟಿ ರೂ ಬಿಡುಗಡೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ತಾವು ಮಾತನಾಡಿದ್ದು ಪಕ್ಷ ವಿರೋಧಿಯಲ್ಲ. ಮೊದಲು ನಾನೊಬ್ಬ ಜನಪ್ರತಿನಿಧಿ. ನಮಗೆ ದೇಶ ಮೊದಲು. ನಂತರ ಪಕ್ಷ. ನಂತರ ನಾನು ಎಂದು ನನ್ನ ಪಕ್ಷ ಬಿಜೆಪಿ ಕಲಿಸಿಕೊಟ್ಟಿದೆ. ಇದರಲ್ಲಿ ಸ್ವಾರ್ಥವೇನಿದೆ? ಆಡಳಿತ ಪಕ್ಷದಲ್ಲಿದ್ದು ಪ್ರಶ್ನೆ ಮಾಡಬಾರದು ಎಂದು ಎಲ್ಲಿ ಹೇಳಲಾಗಿದೆ. ತಮ್ಮ ವಿರುದ್ಧ ಶಿಸ್ತುಕ್ರಮಕ್ಕೆ ಪತ್ರ ಬರೆಯುವರು ಬರೆಯಲಿ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ನಮ್ಮ ಪಕ್ಷದವರಿದ್ದಾರೆಂದು ಸುಮ್ಮನಿರಲು ಸಾಧ್ಯವಿಲ್ಲ. 10 ಸಲ ಸಿಎಂ ಭೇಟಿಯಾಗಿ ಅನುದಾನ ಕೇಳಿದ್ದೆ. ಆದರೆ, ನೀಡಲಿಲ್ಲ. ಹೀಗಾಗಿ ನ್ಯಾಯಪರ ಧ್ವನಿ ಎತ್ತಿದ್ದೇನೆ. ಇದು ಪಕ್ಷದ ಶಿಸ್ತಿನ ಪ್ರಶ್ನೆಯಲ್ಲ. ನಾನು ಕೇಳಿದ್ದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ : ಚಿಕ್ಕಬಳ್ಳಾಪುರ ನಗರಸಭೆ ಬಿಜೆಪಿ ತೆಕ್ಕೆಗೆ : ಬಹುಮತ ಇದ್ದರೂ ಸೋತು ಮುಖಭಂಗ ಅನುಭವಿಸಿದ ಕಾಂಗ್ರೆಸ್

ಶಾಸಕರ ಕೆಲಸವಾದರೆ ಸುಮ್ಮನಿರುತ್ತೇವೆ. ಇಲ್ಲದಿದ್ದರೆ ಹೇಗೆ ಸುಮ್ಮನಿರಬೇಕು? ಎಂದು ಪ್ರಶ್ನಿಸಿದ ಅವರು, ವಿಜಯಪುರ ನಗರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ನಾನು ಯಾವುದನ್ನೂ ಅಪೇಕ್ಷೆ ಪಟ್ಟಿಲ್ಲ. ಮಂತ್ರಿಗಾಗಿಯೇ ನಾನು ಪ್ರಯತ್ನಿಸಿಲ್ಲ. ಇನ್ನು ಸಿಎಂ ಹೇಗೆ ಆಗಲು ಸಾಧ್ಯ? ತಾವು ಸಿಎಂ ಆಗಲಿ ಎಂದು ಉತ್ತರ ಕರ್ನಾಟಕದ ಎಲ್ಲ ಪ್ರತಿನಿಧಿಗಳು ಹೇಳಿದ್ದಾರೆ. ಅಂದು ಮಾತನಾಡಿದ್ದಕ್ಕೆ ಇಂದು 200 ಕೋಟಿ ರೂ ಅನುದಾನ ಬಂದಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ವಿಜಯಪುರ ಜಿಲ್ಲಾಸ್ಪತ್ರೆಯ ಆವರಣದಲ್ಲಿ 27 ಲಕ್ಷ ರೂ ವೆಚ್ಚದ ಹೊರ ರೋಗಿಗಳ ನೊಂದಣಿ ವಿಭಾಗ, ಸ್ವಾಗತ ಕೊಠಡಿಯನ್ನು ಯತ್ನಾಳ ಉದ್ಘಾಟಿಸಿದರು. ಅಲ್ಲದೇ, 20 ಕೋಟಿ ರೂ ವೆಚ್ಚದ ಶ್ರೀ ಪುಟ್ಟರಾಜ ಗವಾಯಿ ಟ್ರಾಮಾ ಮತ್ತು ಅಸ್ಥಿ ಕೇಂದ್ರ ಕಟ್ಟದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
Published by: G Hareeshkumar
First published: October 30, 2020, 8:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading