Yatnal - ಇಡೀ ಕರ್ನಾಟಕವೇ ನನ್ನ ಬೆನ್ನು ಹತ್ತಿ ಬರುತ್ತೆ: ಬಸನಗೌಡ ಪಾಟೀಲ ಯತ್ನಾಳ

ತಮ್ಮ 13 ದಿನದ ಸರ್ಕಾರ ಬಿದ್ದಾಗ ವಾಜಪೇಯಿ ಏಕಲಾ ಚಲೋ ಏಕಲಾ ಚಲೋ ಅಂದಿದ್ರು. ಹಾಗೆಯೇ ಯತ್ನಾಳ ಕೂಡ ಏಕಲಾ ಚಲೋ ಮಾಡ್ತಾರೆ. ಮುಂದೆ ಕರ್ನಾಟಕವೇ ಬೆನ್ನು ಬೀಳುತ್ತೆ ಎಂದು ಬಸನಗೌಡ ಯತ್ನಾಳ ಹೇಳಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ

ಬಸನಗೌಡ ಪಾಟೀಲ ಯತ್ನಾಳ

 • Share this:
  ಬಾಗಲಕೋಟೆ: ಮುಂದೆ ಇಡೀ ಕನಾ೯ಟಕವೇ ನನ್ನ ಬೆನ್ನು ಹತ್ತಿ ಬರುತ್ತೇ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ  ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಿಜೆಪಿಯಲ್ಲಿ ಯತ್ನಾಳ ಒಬ್ಬಂಟಿಗರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಈ ರೀತಿಯಾಗಿ ಮಾಮಿ೯ಕವಾಗಿ ಉತ್ತರಿಸಿದರು. ನಾನು ಏಕಲಾ ಚಲೋ, ಏಕಲಾ ಚಲೋ ಅಂತ ನಡೀತಿನಿ. ಮುಂದೆ ಇಡೀ ಕನಾ೯ಟಕವೇ ನನ್ನ ಬೆನ್ನು ಹತ್ತಿ ಬರುತ್ತೇ ನೋಡ್ತೀರಿ. ಈ ಹಿಂದೆ 13 ದಿನದ ಸಕಾ೯ರ ಬಿದ್ದಾಗ ವಾಜಪೇಯಿ ಅವರು ಇದನ್ನ ಹೇಳಿದ್ರು. ಸರ್ಕಾರ ಬಿದ್ದಾಗ ಎಲ್ಲ ವಿಪಕ್ಷಗಳು ವ್ಯಂಗ್ಯವಾಗಿ ಮಾತನಾಡಿದ್ವು. ಒಂದು ಪಕ್ಷವೂ ಸಪೋಟ್೯ ಮಾಡಿಲ್ಲ ಅಂತ ಲೇವಡಿ ಮಾಡಿದ್ವು. ಆಗ ಅಟಲ ಬಿಹಾರಿ ವಾಜಪೇಯಿ ಅವರು ರವೀಂದ್ರನಾಥ ಟ್ಯಾಗೋರ್ ಅವರ ವಿಚಾರ ಏಕಲಾ ಚಲೋ ಏಕಲಾ ಚಲೋ ಅಂತ ಹೇಳಿದ್ರು. ಹಾಗೆಯೇ ಯತ್ನಾಳ ಏಕಲಾ ಚಲೋ ಮಾಡ್ತಾರೆ, ಮುಂದೆ ಕನಾ೯ಟಕವೇ ಯತ್ನಾಳ ಬೆನ್ನು ಬೀಳುತ್ತೇ ನೋಡ್ತೀರಿ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

  ದಿಂಗಾಲೇಶ್ವರ ಸ್ವಾಮೀಜಿಗೆ ತಿರುಗೇಟು: ಇದೇ ವೇಳೆ ಯತ್ನಾಳ ಅವರನ್ನ ಮೆಂಟಲ್ ಆಸ್ಪತ್ರೆಗೆ ದಾಖಲಿಸಬೇಕು ಎಂದಿದ್ದ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಯತ್ನಾಳ ತಿರುಗೇಟು ನೀಡಿದರು. ಯಾರನ್ನು ಮೆಂಟಲ್ ಆಸ್ಪತ್ರೆಗೆ ಕಳಿಸಬೇಕಂತ ಜನಾ ತೀಮಾ೯ನ ಮಾಡ್ತಾರೆ. ಯಾರು ಯಾವ ಜಾಗೆಯಲ್ಲಿ ಇರಬೇಕೋ ಅಲ್ಲೇ ಇರಬೇಕು. ನಾನು ರಾಜಕಾರಣಿ ರಾಜಕಾರಣ ಮಾಡ್ತೀನಿ. ಅವರು ಧಮ೯ದ ಪೀಠದ ಕೆಲಸ ಮಾಡಬೇಕು. ಕಳ್ಳರನ್ನು, ಸುಳ್ಳರನ್ನ ಬೆಂಬಲಿಸಬಾರದು. ಲವ್ ಜಿಹಾದ್ ಬಂದಾಗ ಹಿಂದುತ್ವ, ಗೋಹತ್ಯೆ ನಡೆದಾಗ ಖಾವಿ ಹಾಕಿದವರು ಪ್ರತಿಭಟನೆ ಮಾಡಬೇಕು. ಮಠಾಧೀಶರು ಎಂದರೆ ಎಲ್ಲರಿಗೂ ಒಂದೇ. ಅದನ್ನು ಬಿಟ್ಟು ಯತ್ನಾಳ ಸೇರಿದಂತೆ ಯಾರೋ ಒಬ್ಬ ವ್ಯಕ್ತಿಯನ್ನು ಬೆಂಬಲಿಸಬಾರದು. ಈ ಸಮಾನತೆ ಬಿಟ್ಟು ಹೋದರೆ ಅವರು ಮೆಂಟಲ್ ಆಸ್ಪತ್ರೆಗೆ ಹೋಗಬೇಕಾಗುತ್ತೇ ಎಂದು ದಿಂಗಾಲೇಶ್ವರ ಶ್ರೀಗಳಿಗೇ ಯತ್ನಾಳ ಎಚ್ಚರಿಸಿದರು.

  ಶಿಸ್ತಿನ ಪಕ್ಷದಲ್ಲಿ ಡಿಸಿಎಂ ಹುದ್ದೆ ಅಗತ್ಯತೆ ಇದೆಯಾ ಎಂಬ ವಿಚಾರ:

  ಜಾತಿ ಸಮೀಕರಣದಲ್ಲಿ ಡಿಸಿಎಂ ಕೊಡುವಂತಹ ಅನಿವಾರ್ಯತೆ ಆಗಿದೆ. ಡಿಸಿಎಂ ಅವಶ್ಯಕತೆ ಇದೆಯೋ ಇಲ್ಲವೋ ಅಂತ ಹೈಕಮಾಂಡ್ ನಿಣ೯ಯ ಮಾಡುತ್ತೆ. ಬಹಳ ಕಡೆಗೆ ನಮ್ಮ ಬಿಜೆಪಿಯಲ್ಲಿ ಡಿಸಿಎಂ ಹುದ್ದೆ ತೆಗಿತಾ ಇದ್ದಾರೆ. ಡಿಸಿಎಂ ಹುದ್ದೆ ಬಗ್ಗೆ ನಮ್ಮ ಹೈಕಮಾಂಡ್ ಗುಟ್ಟು ಬಿಟ್ಟು ಕೊಟ್ಟಿಲ್ಲ. ಈ ಬಾರಿ ನಮ್ಮ ಹೈಕಮಾಂಡ್ ಬಿಗಿಯಾದ ಒಳ್ಳೆಯ ನಿಲುವು ತಳೆಯುತ್ತೇ ಅನ್ನೋ ವಿಶ್ವಾಸ ನಮ್ಮಲ್ಲಿದೆ  ಎಂದು ವಿಜಯಪುರ ಶಾಸಕರು ತಿಳಿಸಿದರು.

  ಇದನ್ನೂ ಓದಿ: ಕುಂದಾಪುರದ ಫೈನಾನ್ಷಿಯರ್ ಕೊಲೆ; ಯುವಕನ ಡ್ರೀಮ್ಸ್​ಗೆ ಕೊಳ್ಳಿ ಇಟ್ಟನೇ ಸ್ನೇಹಿತ?

  ಯತ್ನಾಳ ಹಿಂದುತ್ವವಾದಿ ಹೈಕಮಾಂಡ್ ಕೈ ಬಿಡಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪನವರೂ ಪಕ್ಷದ ಹಿರಿಯರು, ಬಿಎಸ್​ವೈ, ಅನಂತಕುಮಾರ್ ಮತ್ತು ನಾವು ಎಲ್ಲರೂ ಸಮಕಾಲೀನರು. ಈಶ್ವರಪ್ಪ ನವರು ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅದೆಲ್ಲ ಈಗ ಮುಗಿದು ಹೋದ ಅದ್ಯಾಯ. ನಿಮ್ಮದೆಲ್ಲ ಈಗ ಹಠ ಸಾಧಿಸಿಕೊಂಡಿದ್ದಿರಿ. ನಿಮ್ಮ ಹಠ ಏನಾಗಿತ್ತೋ ಅದು ಈಡೇರಿದೆ ಎನ್ನುವ ಅರ್ಥದಲ್ಲಿ ಈಶ್ವರಪ್ಪ ಹೇಳಿದರು.

  ಈ ಬಾರಿ ಸಚಿವ ಸಂಪುಟದಲ್ಲಿ ಯತ್ನಾಳಗೆ ಅವಕಾಶ ಸಿಗಬಹುದೇ ಎನ್ನುವ ವಿಚಾರಕ್ಕೆ ಉತ್ತರಿಸಿದ ಅವರು, ಪ್ರಾದೇಶಿಕವಾರು, ಜಿಲ್ಲಾವಾರು ಕೊಡಲೇಬೇಕು. ಈ ಸಲ ಕೇಂದ್ರ ಹೈಕಮಾಂಡ್ ಸರಿಪಡಿಸುವ ವಿಶ್ವಾಸ ಇದೆ. ನಾನು ಎಂದೂ ಆಕಾಂಕ್ಷಿ ಅಲ್ಲ. ಅಹ೯ತೆ ಆಧಾರದ ಮೇಲೆ ಕೊಟ್ಟರೆ ಮಾಡಬಹುದು. ವಾಜಪೇಯಿ, ಅನಂತಕುಮಾರ ಅವರ ಆಶೀವಾ೯ದಿಂದ ಈ ಹಿಂದೆ ಮಂತ್ರಿಯಾಗಿದ್ದೆವು‌. ಈಗಲೂ ನಮ್ಮ ಪಕ್ಷ ಜವಾಬ್ದಾರಿ ಕೊಟ್ಟರೆ ಮಾಡ್ತೀವಿ, ಇಲ್ಲವಾದರೆ ಕಾಯ೯ಕತ೯ರಾಗಿ ಇರುತ್ತೇನೆ. ಸಚಿವ ಸ್ಥಾನ ಸಿಗಬಹುದಾ ಅನ್ನೋದಕ್ಕೆ ನಾನೇನು ಜೋತಿಷಿ ಅಲ್ಲ, ಯಾರಾದ್ರೂ ಇದ್ದರೆ ಹೇಳಿ ಕೇಳುತ್ತೇನೆ ಎಂದರು.

  ವರದಿ: ಮಂಜುನಾಥ್ ತಳವಾರ
  Published by:Vijayasarthy SN
  First published: