HOME » NEWS » District » BAR DANCER MURDER IN RT NAGAR BENGALURU KMTV SNVS

Crime News - ಬೆಂಗಳೂರಿನಲ್ಲಿ ಬಾರ್ ಡ್ಯಾನ್ಸರ್ ಹತ್ಯೆ; ಪರಿಚಯಸ್ಥರಿಂದಲೇ ಕೊಲೆ ಶಂಕೆ

ಛತ್ತೀಸಗಡ ರಾಜ್ಯದಿಂದ ಉದ್ಯೋಗ ಹರಸಿ ಬಂದು ಬೆಂಗಳೂರಿನಲ್ಲಿ ಬಾರ್ ಡ್ಯಾನ್ಸರ್ ಆಗಿದ್ದ ಝಾರಾ ಎಂಬಾಕೆಯ ಕೊಲೆಯಾಗಿದೆ. ಬೆಂಗಳೂರಿನ ಆರ್ ಟಿ ನಗರದ ನೃಪತುಂಗ ಲೇಔಟ್​ನಲ್ಲಿ ಈ ಕೃತ್ಯವಾಗಿರುವುದು ಬೆಳಕಿಗೆ ಬಂದಿದೆ.

news18-kannada
Updated:March 28, 2021, 12:12 PM IST
Crime News - ಬೆಂಗಳೂರಿನಲ್ಲಿ ಬಾರ್ ಡ್ಯಾನ್ಸರ್ ಹತ್ಯೆ; ಪರಿಚಯಸ್ಥರಿಂದಲೇ ಕೊಲೆ ಶಂಕೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ. 28): ಬಾರ್ ಡಾನ್ಸರ್​ಳನ್ನ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಆರ್ ಟಿ ನಗರದಲ್ಲಿ ನಡೆದಿದೆ. ಇಲ್ಲಿನ ನೃಪತುಂಗ ಲೇಔಟ್ ನಿವಾಸಿ 28 ವರ್ಷದ ಜಾರಾ ಎಂಬ ಯುವತಿಯನ್ನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಮನೆಯಲ್ಲಿ ಒಂಟಿಯಾಗಿದ್ದ ಯುವತಿಯನ್ನ ಪರಿಚಿತ ವ್ಯಕ್ತಿಗಳು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು ಆರ್ ಟಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೃತ ಜಾರಾ ನಗರದ ರೆಸಿಡೆನ್ಸಿ ರಸ್ತೆಯ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಶುಕ್ರವಾರ ರಾತ್ರಿ 8 ರಿಂದ 12 ಗಂಟೆ ಸುಮಾರಿಗೆ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಬಳಿಕ ಶನಿವಾರ ಮಧ್ಯಾಹ್ನ ಯುವತಿ ಸಹೋದರ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಛತ್ತೀಸ್​ಗಡ ಮೂಲದ ಜಾರಾಗೆ ಇಬ್ಬರು ಸಹೋದರರು ಮತ್ತು ಓರ್ವ ತಂಗಿ ಇದ್ದಾರೆ. ತಂದೆ ತಾಯಿ ಕಳೆದುಕೊಂಡಿರುವ ಜಾರಾ 2016 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. ನಗರದಲ್ಲಿ ಉದ್ಯೋಗ ಹುಡುಕಿದ್ದ ಜಾರಾ ಬಾರ್ ನಲ್ಲಿ ಡಾನ್ಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಜಾರಾ ಆರ್ ಟಿ ನಗರದಲ್ಲಿ ನೆಲೆಸಿದ್ದು ಸಹೋದರರು ಜಾಲಹಳ್ಳಿಯಲ್ಲಿ ವಾಸವಾಗಿದ್ದರು. ಇನ್ನು, ಜಾರಾಗೆ ಇತ್ತೀಚೆಗೆ ಮದುವೆ ನಿಶ್ಚಿಯವಾಗಿದ್ದು ಶನಿವಾರ ಭಾವಿ ಪತಿ ಕರೆ ಮಾಡಿದ್ದನಂತೆ. ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸದೇ ಇದ್ದಾಗ ಜಾರಾಳ ಸಹೋದರನಿಗೆ ಕರೆ ಮಾಡಿದ್ದಾನೆ.

ಶನಿವಾರ ಜಾರಾ ಸಹೋದರ ಅಕ್ಕನ ಮನೆ ಬಳಿಗೆ ಬಂದು ನೋಡಿದಾಗ ಮನೆ ಡೋರ್ ಒಳಗಿನಿಂದ ಲಾಕ್ ಅಗಿತ್ತು. ಬಳಿಕ ಬಾಲ್ಕನಿಯಿಂದ ನೋಡಿದಾಗ ಹಾಲ್​ನಲ್ಲಿ ಜಾರಾ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಜಾರಾ ಸಹೋದರ ಮುಸ್ತಫಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರ್ ಟಿ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಮನೆ ಡೋರ್ ಒಡೆದು ಒಳಗೆ ಹೋಗಿ ನೋಡಿದಾಗ ಜಾರಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಈ ಕುರಿತು ಆರ್ ಟಿ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: 9291 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್ ಮಂಡನೆ; ಯಾವುದೇ ತೆರಿಗೆ ಹೆಚ್ಚಳ ಇಲ್ಲ, ಹೊಸ ಪ್ರಸ್ತಾಪವೂ ಇಲ್ಲ

ಇನ್ನು, ಜಾರಾ ಕೊಲೆ ಸಂಬಂಧ ಆರ್ ಟಿ ನಗರ ಪೊಲೀಸರು ಮಹತ್ವದ ಮಾಹಿತಿ ಕೆಲ ಹಾಕಿದ್ದು ಪರಿಚಯಸ್ಥ ವ್ಯಕ್ತಿಯೇ ಜಾರಾ ಹತ್ಯೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಓರ್ವ ವ್ಯಕ್ತಿಯನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.

ಪೋಷಕರನ್ನ ಕಳೆದುಕೊಂಡಿದ್ದ ಜಾರಾ ಉದ್ಯೋಗ ಹರಸಿ ಸಿಲಿಕಾನ್ ಸಿಟಿಗೆ ಅಗಮಿಸಿದ್ದರು. ಮನೆಯಲ್ಲಿ ಒಂಟಿಯಾಗಿದ್ದ ಯುವತಿಯನ್ನ ಪರಿಚಿತ ವ್ಯಕ್ತಿಗಳು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದ್ದು ಆರ್ ಟಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರ್ ಟಿ ನಗರ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.ವರದಿ: ಮುನಿರಾಜು ಹೊಸಕೋಟೆ
Published by: Vijayasarthy SN
First published: March 28, 2021, 12:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories